ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಮೇ 26 ರಂದು ನಡೆಯಲಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ (RCB vs GT) ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದ ನಿಮಿತ್ತ ಭಾರತ ತಂಡದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ (Virender Sehwag), ಆರ್‌ಸಿಬಿಗೆ ದೊಡ್ಡ ಎಚ್ಚರಿಕೆಯನ್ನು ನೀಡಿದ್ದಾರೆ. ಬೆಂಗಳೂರು ತಂಡಕ್ಕಿಂದ ಗುಜರಾತ್ ತಂಡದ ಬೌಲಿಂಗ್ ಲೈನ್ ಅಪ್ ಅತ್ಯಂತ ಬಲಿಷ್ಠವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆರ್‌ಸಿಬಿ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 55 ರನ್‌ಗಳ ಭಾರೀ ಸೋಲು ಅನುಭವಿಸಿದ್ದರೂ, ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಆರ್‌ಸಿಬಿಯ ಬೌಲಿಂಗ್ ವಿಭಾಗಕ್ಕೆ ಅತ್ಯಂತ ಕಠಿಣ ಪರೀಕ್ಷೆ ಎದುರಿಸಿತು.
ಪ್ಲೇಆಫಗ್ಸ್ ಪಂದ್ಯಕ್ಕೂ ಮುನ್ನ ಕ್ರಿಕ್‌ಬಝ್ ಜೊತೆ ಮಾತನಾಡಿದ ವೀರೇಂದ್ರ ಸೆಹ್ವಾಗ್, ಆರ್‌ಸಿಬಿ ಆ ಪ್ರದರ್ಶನವನ್ನು ಕೇವಲ ಒಂದು ಕೆಟ್ಟ ದಿನವೆಂದು ಪರಿಗಣಿಸಬೇಕು, ಅದು ದೊಡ್ಡ ಸಮಸ್ಯೆಯ ಆರಂಭವಾಗಬಾರದು ಎಂಬ ಆಶಯ ವ್ಯಕ್ತಪಡಿಸಿದರು.
RCB vs GT ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ಸಾಧ್ಯತೆ!
ಆರ್‌ಸಿಬಿ ಬಹಳ ಎಚ್ಚರಿಕೆಯಿಂದ ಆಡಬೇಕು: ಸೆಹ್ವಾಗ್
“ಅದು ಕೇವಲ ಅಪರೂಪದ ಒಂದು ಕೆಟ್ಟ ದಿನವಾಗಿರಬಹುದು. ಆದ್ದರಿಂದ ಆರ್‌ಸಿಬಿ ಅದನ್ನು ಕೆಟ್ಟ ದಿನ ಎಂದು ಒಪ್ಪಿಕೊಳ್ಳಬೇಕು. ಆ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಜಾಶ್ ಹೇಝಲ್‌ವುಡ್ ಇಬ್ಬರೂ ವಿಕೆಟ್ ಪಡೆಯಲು ವಿಫಲರಾದರು. ಆ ದಿನ ಯಾರೂ ಪರಿಣಾಮಕಾರಿ ಬೌಲಕ್ ಮಾಡಲಿಲ್ಲ,” ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
“ಆದ್ದರಿಂದ ಆ ಪಂದ್ಯವನ್ನು ಮರೆತು ಮುಂದಕ್ಕೆ ಸಾಗಬೇಕು. ಆದರೆ ಪ್ಲೇಆಫ್ಸ್‌ನಲ್ಲಿ ಮತ್ತೆ ಅದೇ ರೀತಿಯ ಪ್ರದರ್ಶನ ಮುಂದುವರಿದರೆ, ಅವರು 255 ರನ್‌ಗಿಂತಲೂ ಹೆಚ್ಚು ಬಿಟ್ಟುಕೊಡಬೇಕಾಗಬಹುದು. ಏಕೆಂದರೆ ಅಲ್ಲಿ ಬೌಂಡರಿಗಳು ತುಂಬಾ ಚಿಕ್ಕದಾಗಿವೆ. ಹೀಗಾಗಿ ಆರ್‌ಸಿಬಿಯ ಬೌಲಿಂಗ್ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಅತ್ಯಂತ ಮುಖ್ಯ. ಏಕೆಂದರೆ ಗುಜರಾತ್ ಟೈಟನ್ಸ್ ತಂಡದ ಬೌಲಿಂಗ್ ದಾಳಿ ಬಹಳ ಬಲಿಷ್ಠವಾಗಿದೆ. ಆರ್‌ಸಿಬಿ ಎಚ್ಚರಿಕೆಯಿಂದ ಆಡಬೇಕು,” ಎಂದು ಮಾಜಿ ಆರಂಭಿಕ ಎಚ್ಚರಿಕೆ ನೀಡಿದ್ದಾರೆ.
RCB vs GT: ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮೊದಲನೇ ಕ್ವಾಲಿಫೈಯರ್ ದಾಖಲೆಗಳು!
ಆರ್‌ಸಿಬಿಗೆ ಸಿರಾಜ್, ರಬಾಡ ಭೀತಿ
ಗುಜರಾತ್ ಟೈಟನ್ಸ್ ಈ ಸೀಸನ್‌ನ ಯಶಸ್ಸಿಗೆ ಮೊಹಮ್ಮದ್ ಸಿರಾಜ್ ಹಾಗೂ ಕಗಿಸೊ ರಬಾಡ ಅವರ ಬೌಲಿಂಗ್ ಪ್ರದರ್ಶನ ಕೂಡ ಪ್ರಮುಖ ಕಾರಣವಾಗಿದೆ. ರಬಾಡಾ 14 ಪಂದ್ಯಗಳಲ್ಲಿ 24 ವಿಕೆಟ್‌ಗಳನ್ನು 9.19 ಎಕಾನಮಿಯೊಂದಿಗೆ ಪಡೆದು ಪ್ಲೇಆಫ್ಸ್‌ಗೆ ಕಾಲಿಡುತ್ತಿದ್ದಾರೆ. ಇನ್ನೊಂದೆಡೆ ಸಿರಾಜ್ 14 ಪಂದ್ಯಗಳಲ್ಲಿ 17 ವಿಕೆಟ್‌ಗಳನ್ನು 8.59 ಎಕಾನಮಿಯೊಂದಿಗೆ ಕಬಳಿಸಿದ್ದಾರೆ.
ಪವರ್‌ಪ್ಲೇ ಅವಧಿಯಲ್ಲಿ ರಬಾಡಾ ಭರ್ಜರಿ ಬೌಲಿಂಗ್ ಪ್ರದರ್ಶಿಸಿ 2026ರ ಐಪಿಎಲ್ ಟೂರ್ನಿಯಲ್ಲಿ ಮೊದಲ ಆರು ಓವರ್‌ಗಳಲ್ಲೇ 17 ವಿಕೆಟ್ ಪಡೆದಿದ್ದಾರೆ. ಸಿರಾಜ್ ಕೂಡ ಪವರ್‌ಪ್ಲೇನಲ್ಲಿ 13 ಬ್ಯಾಟರ್‌ಗಳನ್ನು ಔಟ್ ಮಾಡಿದ್ದಾರೆ. ಜೊತೆಗೆ ಈ ಸೀಸನ್‌ನಲ್ಲಿ ಕೇವಲ 306 ಎಸೆತಗಳಲ್ಲಿ ಅಚ್ಚರಿಯ 148 ಡಾಟ್ ಬಾಲ್‌ಗಳನ್ನು ಎಸೆದಿದ್ದಾರೆ.
RCB vs GT ಪಂದ್ಯದಲ್ಲಿ ಫಿಲ್ ಸಾಲ್ಟ್ ಆಡ್ತಾರಾ? ಓಪನರ್ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ರಜತ್ ಪಾಟಿದಾರ್!
ಇವರಿಬ್ಬರೂ ಮಧ್ಯಮ ಓವರ್‌ಗಳು ಆರಂಭವಾಗುವ ಮುನ್ನವೇ ಎದುರಾಳಿ ಬ್ಯಾಟಿಂಗ್ ಕ್ರಮವನ್ನು ಒತ್ತಡಕ್ಕೆ ಸಿಲುಕಿಸಿ, ಆರಂಭದಲ್ಲೇ ಪಂದ್ಯವನ್ನು ಗುಜರಾತ್ ಪರವಾಗಿ ತಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 89 ರನ್‌ಗಳ ಭರ್ಜರಿ ಗೆಲುವನ್ನು ಉಲ್ಲೇಖಿಸಬಹುದು. ಆ ಪಂದ್ಯದಲ್ಲಿ ಸಿರಾಜ್ ಪವರ್‌ಪ್ಲೇಯಲ್ಲೇ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಮೇಲೆ ಹಾಕಿದ್ದರು.