ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಲಖನೌ ಎದುರು 4 ವಿಕೆಟ್‌ ಕಿತ್ತ ರಸಿಖ್‌ ಸಲಾಮ್‌ ಸಕ್ಸಸ್‌ಗೆ ಕಾರಣ ತಿಳಿಸಿದ ಜಿತೇಶ್ ಶರ್ಮಾ!

Jitesh sharma Praised Rasikh salam: ಲಖನೌ ಸೂಪರ್‌ ಜಯಂಟ್ಸ್‌ ಎದುರು 4 ವಿಕೆಟ್‌ ಸಾಧನೆ ಮಾಡಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ 5 ವಿಕೆಟ್‌ ಗೆಲುವಿಗೆ ನೆರವು ನೀಡಿದ್ದ ಯುವ ವೇಗಿ ರಸಿಕ್‌ ದಾರ್‌ ಸಲಾಮ್‌ ಕೂಡ ನೆರವು ನೀಡಿದ್ದರು. ಪಂದ್ಯದ ಬಳಿಕ ಮಾತನಾಡಿದ ಆರ್‌ಸಿಬಿ ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾ ಅವರು ರಸಿಖ್‌ ದಾರ್‌ ಸಲಾಮ್‌ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ರಸಿಖ್‌ ದಾರ್‌ ಸಲಾಮ್‌ಗೆ ಜಿತೇಶ ಶರ್ಮಾ ಮೆಚ್ಚುಗೆ.

ಬೆಂಗಳೂರು: ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ(RCB vs LSG) 4 ವಿಕೆಟ್‌ ಕಬಳಿಸಿದ ಯುವ ವೇಗಿ ರಸಿಖ್‌ ದಾರ್‌ ಸಲಾಮ್‌ (Rasikh dar Salam) ಅವರನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾ (Jitesh sharma) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ತಮ್ಮ ನಿಜವಾದ ಸಾಮರ್ಥ್ಯವನ್ನು ಪಂದ್ಯದಲ್ಲಿ ಬಳಸಿಕೊಳ್ಳಲು ಅತ್ಯುತ್ತಮ ಅನುಭವ ಹಾಗೂ ಮಾರ್ಗದರ್ಶನವನ್ನು ಯುವ ವೇಗಿ ಚೆನ್ನಾಗಿ ಬಳಸಿಕೊಂಡಿದ್ದಾರೆ ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ.

ಆರ್‌ಸಿಬಿ ತಂಡದ 5 ವಿಕೆಟ್‌ ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿತೇಶ್‌ ಶರ್ಮಾ, "ಅವರಲ್ಲಿ ಈಗಾಗಲೇ ಕೌಶಲಗಳು ಇವೆ ಹಾಗೂ ನೀವು ಅದನ್ನು ನೋಡುತ್ತಿದ್ದೀರಿ, ಆದರೆ ಇತ್ತೀಚೆಗೆ ಅವುಗಳನ್ನು ಅವರು ಹೇಗೆ ಬಳಸಿಕೊಳ್ಳುತ್ತಿದ್ದಾರೆಂದು ನೀವು ಗಮನಿಸಿದ್ದೀರಿ," ಎಂದು ಹೇಳಿದ್ದಾರೆ.

"ಯಾವಾಗ ನಿಮಗೆ ಒಳ್ಳೆಯ ಮೆಂಟರ್‌ ಸಿಗುತ್ತಾರೆ, ಒಳ್ಳೆಯ ಕೋಚ್‌ ಸಿಗುತ್ತಾರೆ ಹಾಗೂ ಒಳ್ಳೆಯ ವಾತಾವರಣ ಸಿಗುತ್ತದೆ, ಆಗ ನೀವು ನಿಮ್ಮ ಬಳಿ ಅಸ್ತ್ರಗಳನ್ನು ಹೇಗೆ ಬಳಸಿಕೊಳ್ಳಬೇಕೆಂದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಅವುಗಳನ್ನು ಯಾವಾಗ ಬಳಸಬೇಕು, ಎಲ್ಲಿ ಬಳಸಬೇಕು ಮತ್ತು ಅವು ಅಗತ್ಯವಿದೆಯೇ ಎಂಬುದು ನಿಮಗೆ ಅರ್ಥವಾಗುತ್ತದೆ," ಎಂದು ತಿಳಿಸಿದ್ದಾರೆ.

RCB vs LSG: ಆರ್‌ಸಿಬಿ ಬೌಲರ್‌ಗಳ ಪ್ರದರ್ಶನದ ಬಗ್ಗೆ ದೊಡ್ಡ ಹೇಳಿಕೆ ನೀಡಿದ ರಜತ್‌ ಪಾಟಿದಾರ್‌!

"ಇದರ ನಂತರ ನೀವು ನಿಮ್ಮ ಶಸ್ತ್ರಗಳನ್ನು ಅರಿತವಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಅವರು ಬರೋಡ ತಂಡದ ಪರ ಆಡುವಾಗ, ಅವರು ಯಾರ್ಕರ್‌ ಹಾಗೂ ಸ್ಲೋ ಬಾಲ್‌ಗಳ ಮೇಲೆ ಹೆಚ್ಚಿನ ಕೆಲಸವನ್ನು ಮಾಡಿದ್ದಾರೆ. ಆ ಹಂತದಲ್ಲಿ ತಪ್ಪುಗಳು ಆಗುತ್ತವೆ ಹಾಗೂ ಇದು ಸಹಜ ಆದರೆ, ಇದನ್ನು ನೀವು ಹೆಚ್ಚು ಅಭ್ಯಾಸ ಮಾಡುತ್ತಿದ್ದರೆ ಇದು ನಿಮಗೆ ಮಸಲ್‌ ಮೆಮೋರಿಯಾಗುತ್ತದೆ. ಆಗ ಪಂದ್ಯಗಳ ಸಮಯದಲ್ಲಿ ಇದು ನಿಮಗೆ ಸ್ವಾಭವಿಕವಾಗಿ ಮೂಡಿ ಬರುತ್ತವೆ," ಜಿತೇಶ ಶರ್ಮಾ ಹೇಳಿದ್ದಾರೆ.

IPL 2026 Points table: ಲಖನೌ ಎದುರು ದೊಡ್ಡ ಗೆಲುವಿನ ಬಳಿಕ ಅಗ್ರ ಸ್ಥಾನಕ್ಕೆ ಮರಳಿದ ಆರ್‌ಸಿಬಿ!

ಬುಧವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳು ಪರಿಣಕಾರಿಯಾಗಿ ಬೌಲ್‌ ಮಾಡಿ ಎಲ್‌ಎಸ್‌ಜಿ ತಂಡವನ್ನು 146 ರನ್‌ಗಳಿಗೆ ಕಟ್ಟಿ ಹಾಕಿದ್ದರು. ರಸಿಕ್‌ ಸಲಾಮ್‌ 4 ವಿಕೆಟ್‌ ಕಿತ್ತರೆ, ಭುವನೇಶ್ವರ್‌ ಕುಮಾರ್‌ 3 ವಿಕೆಟ್‌ ಪಡೆದರು. ಪವರ್‌ಪ್ಲೇನಲ್ಲಿ 3 ಓವರ್‌ಗಳಿಗೆ ಕೇವಲ 10 ರನ್‌ ನೀಡಿ ಒಂದು ವಿಕೆಟ್‌ ಕಿತ್ತಿದ್ದ ಜಾಶ್‌ ಹೇಝಲ್‌ವುಡ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಅಗ್ರ ಸ್ಥಾನಕ್ಕೆ ಮರಳಿದ ಆರ್‌ಸಿಬಿ

ಇನ್ನು ಆರ್‌ಸಿಬಿ ತಂಡ ಎಲ್‌ಎಸ್‌ಜಿ ವಿರುದ್ಧ ಗೆಲುವು ಪಡೆಯುವ ಮೂಲಕ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೆ ಮರಳಿದೆ. ಇಲ್ಲಿಯವರೆಗೂ ಆಡಿದ ಐದು ಪಂದ್ಯಗಳಲ್ಲಿ ಆರ್‌ಸಿಬಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಒಂದು ಪಂದ್ಯದಲ್ಲಿ ಮಾತ್ರ ಸೋಲು ಅನುಭವಿಸಿತ್ತು. ಆದರೆ, ಇನ್ನುಳಿದ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಪಡೆಯುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸುವ ಮೂಲಕಜ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಹಿಂದಿಕ್ಕಿದೆ. ಆರ್‌ಆರ್‌ ಹಾಗೂ ಆರ್‌ಸಿಬಿ ಅಂಕಗಳ ಸಮನಾಗಿವೆ. ಆದರೆ, ಆರ್‌ಸಿಬಿ (+1.503) ರನ್‌ ರೇಟ್‌ ಆರ್‌ಆರ್‌ಗಿಂತ (+0.889) ಜಾಸ್ತಿ ಇದೆ.