ಮುಂಬೈ: ಶುಕ್ರವಾರ ಆರಂಭವಾದ 2026ರ ಮಹಿಳಾ ಪ್ರೀಮಿಯರ್ ಲೀಗ್ (WPL 2026) ಟೂರ್ನಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಸ್ಟ್ರೇಲಿಯಾ ಆಲ್‌ರೌಂಡರ್ ಎಲಿಸ್ ಪೆರಿ (Ellyse Perry) ಆಡುತ್ತಿಲ್ಲ. 2024ರ ಸೀಸನ್‌ನಲ್ಲಿ ಚೊಚ್ಚಲ ಚಾಂಪಿಯನ್ ಆಗಿದ್ದ ಆರ್‌ಸಿಬಿಗೆ ಎಲಿಸ್ ಪೆರಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಕೊಡುಗೆಯನ್ನು ನೀಡಿದ್ದರು. ಇದರ ಫಲವಾಗಿ 2026ರ ಮೆಗ ಹರಾಜಿನಲ್ಲಿ ಆರ್‌ಸಿಬಿ ಉಳಿಸಿಕೊಂಡಿದ್ದ ಆಟಗಾರ್ತಿಯರ ಪೈಕಿ ಎಲಿಸ್ ಪೆರಿ ಕೂಡ ಇದ್ದರು. ಎಲಿಸ್ ಪೆರಿ ಅವರನ್ನು 2 ಕೋಟಿ ರು. ಗಳಿಗೆ ಬೆಂಗಳೂರು ತಂಡ ಉಳಿಸಿಕೊಂಡಿತ್ತು. ಆದರೆ, ನಾಲ್ಕನೇ ಆವೃತ್ತಿಯಲ್ಲಿ ಎಲಿಸ್ ಪೆರಿ ಆರ್‌ಸಿಬಿ ಪರ ಆಡುತ್ತಿಲ್ಲ. ಅವರೇ ಈ ಆವೃತ್ತಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ನವ ಮುಂಬೈನ ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಎಲಿಸ್ ಪೆರಿ ಅನುಪಸ್ಥಿತಿ ಆರ್‌ಸಿಬಿಗೆ ಬಲವಾಗಿ ಕಾಡಿತು. ಅಭಿಮಾನಿಗಳಿಗೂ ಕೂಡ ಎಲಿಸ್ ಪೆರಿ ಅವರನ್ನು ಮಿಸ್ ಮಾಡಿಕೊಂಡರು. ಅಂದ ಹಾಗೆ ಎಲಿಸ್ ಪೆರಿ ಏಕೆ ಈ ಸೀಸನ್‌ನಲ್ಲಿ ಆಡುತ್ತಿಲ್ಲ? ಎಂಬ ಪ್ರಶ್ನೆಗಳು ಕಾಡುವುದು ಸಹಜ. ಇದಕ್ಕೆ ಕಾರಣವೇನೆಂದು ಇಲ್ಲಿ ವಿವರಿಸಲಾಗಿದೆ.
WPL 2026: ಮೇಡಿನ್ ಓವರ್ ಬೌಲ್ ಮಾಡಿ ಆರ್‌ಸಿಬಿ ಫ್ಯಾನ್ಸ್ ದಿಲ್ ಗೆದ್ದ ಸುಂದರಿ ಲಾರೆನ್ ಬೆಲ್ ಯಾರು?
2026ರ ಡಬ್ಲ್ಯುಪಿಎಲ್‌ನಲ್ಲಿ ಎಲಿಸ್ ಪೆರಿ ಏಕೆ ಆಡುತ್ತಿಲ್ಲ?
ಟೂರ್ನಿಯ ಆರಂಭಕ್ಕೂ ಕೆಲ ದಿನಗಳ ಹಿಂದೆ ಎಲಿಸ್ ಪೆರಿ ಅವರು ವೈಯಕ್ತಿಕ ಕಾರಣಗಳಿಂದ 2026ರ ಡಬ್ಲ್ಯುಪಿಎಲ್ ಟೂರ್ನಿಯಿಂದ ವಿಥ್‌ಡ್ರಾ ಮಾಡಿಕೊಂಡಿದ್ದಾರೆಂದು ಆರ್‌ಸಿಬಿ ತಂಡ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿತ್ತು. ಆಸ್ಟ್ರೇಲಿಯಾ ತಂಡದ ಇವರ ಸಹ ಆಟಗಾರ್ತಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿದ್ದ ಅನ್ನಾಬೆಲ್ ಸುದರ್ಲೆಂಡ್ ಅವರು ಕೂಡ ಇದೇ ನಿರ್ಧಾರವನ್ನು ತೆಗೆದುಕೊಂಡಿದ್ದರು. ಅನ್ನಾಬೆಲ್ ಅವರ ಸ್ಥಾನಕ್ಕೆ ಸ್ಪಿನ್ನರ್ ಅಲಾನಾ ಕಿಂಗ್ ಡೆಲ್ಲಿಗೆ ಸೇರ್ಪಡೆಯಾಗಿದ್ದರು.
ಆರ್‌ಸಿಬಿ ಬಿಡುಗಡೆ ಮಾಡಿದ ವೀಡಿಯೊ ಪೆರಿಯ ನಿರ್ಧಾರದ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲುತ್ತದೆ. ಈ ಕ್ಲಿಪ್‌ನಲ್ಲಿ ಆರ್‌ಸಿಬಿ ಮೆಗಾ ಹರಾಜಿಗೆ ಯೋಜಿಸಿರುವುದನ್ನು ತೋರಿಸಲಾಗಿದೆ ಮತ್ತು ಆಕೆ ಹರಾಜಿಗೂ ಮುನ್ನ ಫ್ರಾಂಚೈಸಿಗೆ ತಾನು ಆಡುವುದಿಲ್ಲ ಎಂದು ತಿಳಿಸಿದ್ದರು ಎಂದು ಬಹಿರಂಗಪಡಿಸಲಾಗಿದೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಆರ್‌ಸಿಬಿ ಮುಖ್ಯಸ್ಥ ಮಲೋಲನ್ ರಂಗರಾಜನ್ ಅವರು ನಾಯಕಿ ಮಂಧಾನ ಅವರಿಗೆ ಫೋನ್ ಕರೆಯಲ್ಲಿ ಪೆರ್ರಿ ಆರು ತಿಂಗಳ ಕ್ರಿಕೆಟ್ ಪಯಣದ ನಂತರ ವಿರಾಮ ಬಯಸುತ್ತಿದ್ದಾರೆ ಎಂದು ಹೇಳುತ್ತಿರುವುದು ಕಂಡುಬಂದಿದೆ.
RCBW vs MIW: ಮುಂಬೈ ಎದುರು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆರ್‌ಸಿಬಿ!
ಎಲಿಸ್ ಪರಿ ಅವರು ಪ್ರಸ್ತುತ ವೆಲ್ಲಿಂಗ್ಟನ್ ಪರ ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಮಹಿಳಾ ಸೂಪರ್ ಸ್ಮ್ಯಾಶ್‌ನಲ್ಲಿ ಆಡುತ್ತಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಮಹಿಳಾ ಕ್ರಿಕೆಟರ್, ಲೀಗ್‌ನ ಮೊದಲ ಮೂರು ಋತುಗಳಲ್ಲಿ ಆರ್‌ಸಿಬಿಯ ಅತ್ಯುತ್ತಮ ಆಟಗಾರ್ತಿಯಾಗಿದ್ದಾರೆ. ಅವರು ಇಲ್ಲಿಯವರೆಗೆ 25 ಪಂದ್ಯಗಳಲ್ಲಿ ಆಡಿದ್ದು, 972 ರನ್ ಗಳಿಸಿದ್ದಾರೆ. ಅವರು ಸ್ಪರ್ಧೆಯ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ. 35ರ ವಯಸ್ಸಿನ ಅವರು 14 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.
ಎಲಿಸ್ ಪೆರಿ ಸ್ಥಾನಕ್ಕೆ ಸಯಾಲಿ ಸಾತ್ಘಾರೆ
2026ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಎಲಿಸ್ ಪೆರಿ ವಿಥ್‌ಡ್ರಾ ಮಾಡಿಕೊಂಡ ಬೆನ್ನಲ್ಲೆ, ಆರ್‌ಸಿಬಿ ಟೀಮ್ ಮ್ಯಾನೇಜ್‌ಮೆಂಟ್, ಆಸೀಸ್ ಆಲ್‌ರೌಂಡರ್ ಸ್ಥಾನಕ್ಕೆ ಸಯಾಲಿ ಸಾತ್ಘಾರೆ ಅವರನ್ನು ಆಯ್ಕೆ ಮಾಡಿಕೊಂಡಿತ್ತು. ಅವರನ್ನು ಮೂಲ ಬೆಲೆ 30 ಲಕ್ಷ ರು. ಗಳಿಗೆ ಬೆಂಗಳೂರು ತಂಡಕ್ಕೆ ಸೇರಿಸಿಕೊಂಡಿತು.