ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RCB vs PBKS: ʻಪವರ್‌ಪ್ಲೇನಲ್ಲಿಯೇ ನಾವು ಸೋತೆವುʼ-ಸೋಲಿನ ಬಳಿಕ ಶ್ರೇಯಸ್‌ ಅಯ್ಯರ್‌ ಬೇಸರ!

RCB vs PBKS: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಪಂಜಾಬ್‌ ಕಿಂಗ್ಸ್‌ ಸೋಲು ಅನುಭವಿಸಿತು. ಆ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪಂಜಾಬ್‌ ಸತತ ಆರನೇ ಸೊಲು ಅನುಭವಿಸುವ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪ್ಲೇಆಫ್ಸ್‌ಗೆ ಹಾದಿಯನ್ನು ಕಠಿಣವಾಗಿಸಿಕೊಂಡಿದೆ. ಪಂದ್ಯದ ಬಳಿಕ ಶ್ರೇಯಸ್‌ ಅಯ್ಯರ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಪಂಜಾಬ್‌ ಸೋಲಿನ ಬಳಿಕ ಶ್ರೇಯಸ್‌ ಅಯ್ಯರ್‌ ಹೇಳಿಕೆ.

ಧರ್ಮಶಾಲಾ: ರಾಯಲ್‌ ಚಾಲೆಂಜರ್ಸ್‌ (RCB) ಬೆಂಗಳೂರು ವಿರುದ್ಧ 23 ರನ್‌ ಸೋಲಿನ ಬಳಿಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ(IPL 2026) ಪಂಜಾಬ್‌ ಕಿಂಗ್ಸ್‌ (PBKS) ಸತತ ಆರನೇ ಪರಾಭವ ಅನುಭವಿಸಿದಂತಾಯಿತು. ಆ ಮೂಲಕ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ತಂಡಕ್ಕೆ ಪ್ಲೇಆಫ್ಸ್‌ ಹಾದಿ ಅತ್ಯಂತ ಕಠಿಣವಾಗಿದೆ. ಮುಂದಿನ ಪಂದ್ಯವನ್ನು ಗೆದ್ದರೂ ಪಂಜಾಬ್‌ ಪ್ಲೇಆಫ್ಸ್‌ ಅರ್ಹತೆ ಇತರೆ ತಂಡಗಳ ಫಲಿತಾಂಶವನ್ನು ಅವಲಂಬಿಸಿದೆ. ಪಂದ್ಯದ ಬಳಿಕ ನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer) ಬೇಸರ ವ್ಯಕ್ತಪಡಿಸಿದ್ದಾರೆ ಹಾಗೂ ಈ ಪಂದ್ಯದಲ್ಲಿ ಪಂಜಾಬ್‌ಗೆ ಹಿನ್ನಡೆಯಾಗಿದ್ದು ಎಲ್ಲಿ ಎಂದು ಅವರು ವಿವರಿಸಿದ್ದಾರೆ.

ಭಾನುವಾರ ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯ ಪಂಜಾಬ್‌ ಕಿಂಗ್ಸ್‌ಗೆ ಪ್ಲೇಆಫ್ಸ್‌ ದೃಷ್ಟಿಯಲ್ಲಿ ನಿರ್ಣಾಯಕವಾಗಿತ್ತು. ಆದರೆ, ಬೌಲಿಂಗ್‌ ವೈಫಲ್ಯ ಹಾಗೂ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಫಲ್ಯದಿಂದಾಗಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌, 23 ರನ್‌ಗಳಿಂದ ಸೋಲು ಅನುಭವಿಸಿತು. ಪಂದ್ಯದ ಬಳಿಕ ಮಾತನಾಡಿದ ಶ್ರೇಯಸ್‌ ಅಯ್ಯರ್‌, ಹಲವು ಸಗತಿಗಳನ್ನು ಹಂಚಿಕೊಂಡರು. ಸತತ ಆರನೇ ಸೋಲು ಅನುಭವಿಸಿದರೂ ಸಕಾರಾತ್ಮಕವಾಗಿ ಉಳಿದು ಮುಂದಿನ ಪಂದ್ಯವನ್ನು ಎದುರಿಸುತ್ತೇವೆ ಎಂದು ಹೇಳಿದ್ದಾರೆ.

RCB vs PBKS: ಪಂಜಾಬ್‌ ಕಿಂಗ್ಸ್‌ ಸೋಲುಣಿಸಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು!

ಸೋಲಿನ ಬಳಿಕ ಶ್ರೇಯಸ್‌ ಅಯ್ಯರ್‌ ಹೇಳಿದ್ದೇನೆ?

“ಫಲಿತಾಂಶಗಳು ಹೇಗೇ ಇರಲಿ, ನಾನು ಸದಾ ಧನಾತ್ಮಕ ಮನೋಭಾವದಲ್ಲೇ ಇರುತ್ತೇನೆ. ಅವು ನನ್ನ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ. ನಾನು ಯಾವಾಗಲೂ ದೃಢ ಮನಸ್ಥಿತಿಯೊಂದಿಗೆ ಮುಂದುವರೆಯುತ್ತೇನೆ,” ಎಂದು ಶ್ರೇಯಸ್‌ ಅಯ್ಯರ್‌ ಸೋಲಿನ ಬಳಿಕ ಹೇಳಿದರು.

“ನಾನು ಹಳೆಯದರ ಬಗ್ಗೆ ಹೆಚ್ಚು ಕಾಲ ತಲೆಕೆಡಿಸಿಕೊಳ್ಳುವ ವ್ಯಕ್ತಿಯಲ್ಲ. ಇದು ಮುಗಿದಿದೆ, ಇದು ಕಳೆದಿದೆ. ನಾಳೆ ಮತ್ತೆ ಸೂರ್ಯೋದಯವಾಗುತ್ತದೆ. ಸುರಂಗದ ಕೊನೆಯಲ್ಲಿ ಯಾವಾಗಲೂ ಬೆಳಕು ಇರುತ್ತದೆ,” ಎಂದು ಅವರು ತಿಳಿಸಿದ್ದಾರೆ.

ಆರಂಭಿಕ ಆಘಾತಗಳಿಂದ ಚೇತರಿಸಿಕೊಂಡ ಬಳಿಕ ಪಂಜಾಬ್‌ ಕಿಂಗ್ಸ್‌ ತಂಡ ತನ್ನ ಪಾಲಿನ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 199 ರನ್‌ಗಳಿಗೆ ಸೀಮಿತವಾಯಿತು.ಆದರೆ ಬ್ಯಾಟಿಂಗ್‌ನಲ್ಲಿ ಆರಂಭದಲ್ಲೇ ಎದುರಿಸಿದ ಸಮಸ್ಯೆಗಳು ಪಂದ್ಯವನ್ನು ಕಷ್ಟಕರವಾಗಿಸಿತು ಎಂದು ಅಯ್ಯರ್ ಅಭಿಪ್ರಾಯಪಟ್ಟರು. “222 ರನ್‌ಗಳವರೆಗೆ ತಲುಪಿದ್ದು ಶ್ಲಾಘನೀಯ ಪ್ರದರ್ಶನವಾಗಿತ್ತು. ಆದರೆ ಬೌಲಿಂಗ್‌ನಲ್ಲಿ ನಾವು ಅಗತ್ಯ ಸಂದರ್ಭಗಳಲ್ಲಿ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ನನ್ನ ಅನಿಸಿಕೆಯಲ್ಲಿ, ಪಂದ್ಯ ಪವರ್‌ಪ್ಲೇಯಲ್ಲೇ ನಮ್ಮ ಕೈತಪ್ಪಿತು,” ಎಂದು ಅವರು ಹೇಳಿದ್ದಾರೆ.



ಪಂಜಾಬ್‌ ಕಿಂಗ್ಸ್‌ ಆರಂಭದಲ್ಲೇ 19/3 ಸ್ಥಿತಿಗೆ ಕುಸಿದಿತ್ತು. ಈ ಸೀಸನ್‌ನಲ್ಲಿ ತಂಡಕ್ಕೆ ಭರ್ಜರಿ ಆರಂಭ ಒದಗಿಸುತ್ತಿದ್ದ ಟಾಪ್ ಆರ್ಡರ್ ಬ್ಯಾಟರ್‌ಗಳು ಈ ಬಾರಿ ಅದರಲ್ಲಿ ವಿಫಲರಾದರು. “ನಾವು ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡೆವು. ಸಾಮಾನ್ಯವಾಗಿ ನಮಗೆ ಪವರ್‌ಪ್ಲೇಯಲ್ಲಿ ಉತ್ತಮ ಆರಂಭ ನೀಡುತ್ತಿದ್ದ ಪ್ರಮುಖ ರನ್ ಸ್ಕೋರರ್‌ಗಳು ಪ್ರಭ್‌ಸಿಮ್ರನ್ ಮತ್ತು ಪ್ರಿಯಾಂಶ್. ಆದರೆ ಈ ಬಾರಿ ಆ ರೀತಿಯ ಆರಂಭ ಸಿಗಲಿಲ್ಲ. ಜೊತೆಗೆ ನಾನು ಕೂಡ ಬೇಗ ಔಟಾದೆ,” ಎಂದು ಅಯ್ಯರ್‌ ಒಪ್ಪಿಕೊಂಡರು.

IPL 2026: ನಾಯಕನಾಗಿ 100 ಪಂದ್ಯಗಳನ್ನು ಆಡಿ ದಿಗ್ಗಜರನ್ನೊಳಗೊಂಡ ಎಲೈಟ್‌ ಲಿಸ್ಟ್‌ಗೆ ಸೇರಿದ ಶ್ರೇಯಸ್‌ ಅಯ್ಯರ್!

ಶಶಾಂಕ್‌-ಸ್ಟೋಯ್ನಿಸ್‌ಗೆ ಅಯ್ಯರ್‌ ಮೆಚ್ಚುಗೆ

ಸೋಲು ಎದುರಾದರೂ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಹೋರಾಟವನ್ನು ಪಂಜಾಬ್ ನಾಯಕ ಶ್ಲಾಘಿಸಿದರು. ವಿಶೇಷವಾಗಿ ಮಾರ್ಕಸ್‌ ಸ್ಟೋಯ್ನಿಸ್‌ ಮತ್ತು ಶಶಾಂಕ್‌ ಸಿಂಗ್‌ ತಂಡವನ್ನು ಸಂಕಷ್ಟದಿಂದ ಹೊರತೆಗೆದ ರೀತಿಯನ್ನು ಅವರು ಮೆಚ್ಚಿದರು.

“ಖಂಡಿತವಾಗಿಯೂ ತುಂಬಾ ನಿರಾಶೆಯಾಗಿದೆ. ಆದರೆ ಶಶಾಂಕ್, ಸ್ಟೋಯ್ನಿಸ್‌ ಮತ್ತು ಮಧ್ಯಮ ಕ್ರಮಾಂಕದ ಇನ್ನೂ ಕೆಲವು ಆಟಗಾರರು ತೋರಿದ ಹೋರಾಟ ಶ್ಲಾಘನೀಯ. ನಾವು ಸುಮಾರು ಓವರ್‌ಗೆ 10 ರನ್ ವೇಗದಲ್ಲಿ ಸಾಗುತ್ತಿದ್ದೆವು. ಆದರೆ ಕೊನೆಯಲ್ಲಿ ಗುರಿ ತಲುಪಲು ಸಾಧ್ಯವಾಗಲಿಲ್ಲ,” ಎಂದು ಅವರು ಹೇಳಿದರು.