ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RCB vs PBKS ಪಂದ್ಯದಲ್ಲಿ ರಜತ್‌ ಪಾಟಿದಾರ್‌ ಏಕೆ ಆಡುತ್ತಿಲ್ಲ? ಇದಕ್ಕೆ ಕಾರಣ ಇಲ್ಲಿದೆ!

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಪಂಜಾಬ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ರಜತ್‌ ಪಾಟಿದಾರ್‌ ಆಡದೇ ಇರಲು ಕಾರಣ ತಿಳಿಸಿದ ಜಿತೇಶ್‌ ಶರ್ಮಾ.

ಧರ್ಮಶಾಲಾ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು (RCB vs PBKS) ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯದಲ್ಲಿ ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್‌ ನಾಯಕ ಶ್ರೇಯಸ್‌ ಅಯ್ಯರ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಎದುರಾಳಿ ಆರ್‌ಸಿಬಿಗೆ ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ. ಅಂದ ಹಾಗೆ ಈ ಪಂದ್ಯದಲ್ಲಿ ಟಾಸ್‌ಗೆ ರಜತ್‌ ಪಾಟಿದಾರ್‌ (Rajat Patidar) ಬದಲು ಜಿತೇಶ್‌ ಶರ್ಮಾ ಬಂದಿದ್ದರು. ಇದಕ್ಕೆ ಕಾರಣವೇನೆಂದು ಜಿತೇಶ್‌ ವಿವರಿಸಿದ್ದಾರೆ.

ರಜತ್‌ ಪಾಟಿದಾರ್‌ ಅವರು ಗಾಯಕ್ಕೆ ತುತ್ತಾಗಿದ್ದಾರೆ ಹಾಗೂ ಅವರು ಧರ್ಮಶಾಲಾಗೆ ಪ್ರಯಾಣ ಬೆಳೆಸಿಲ್ಲ ಹಾಗೂ ಅವರು ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದ ವೇಳೆ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿಕೆಟ್‌ ಕೀಪರ್‌ ಹಾಗೂ ಉಪ ನಾಯಕ ಜಿತೇಶ್‌ ಶರ್ಮಾ ಅವರು ತಂಡವನ್ನು ಮುನ್ನಡೆಸುತ್ತಿದ್ದಾರೆ. ಎಸಆರ್‌ಎಸ್‌ ಎದುರಿನ ಪಂದ್ಯ ಮೇ 22 ರಂದು ಹೈದರಾಬಾದ್‌ನ ರಾಜೀವ್‌ ಗಾಂಧಿ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಆರ್‌ಸಿಬಿಗೆ ಇದು ಕೊನೆಯ ಲೀಗ್‌ ಪಂದ್ಯವಾಗಿದೆ.

PBKS vs RCB Live: ಟಾಸ್‌ ಸೋತ ಆರ್‌ಸಿಬಿ ಬ್ಯಾಟಿಂಗ್‌

ಟಾಸ್‌ ವೇಳೆ ಮಾತನಾಡಿದ ಜಿತೇಶ್‌ ಶರ್ಮಾ, "ರಜತ್‌ ಪಾಟಿದಾರ್‌ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿದ್ದಾರೆ ಹಾಗೂ ಅವರು ಹೈದರಾಬಾದ್‌ನಲ್ಲಿ ನಾವು ಅವರನ್ನು ನೋಡಲಿದ್ದೇವೆ," ಎಂದು ಹೇಳಿದ್ದಾರೆ ಆರ್‌ಸಿಬಿ ತಂಡದ ಪ್ಲೇಯಿಂಗ್‌ XIನಲ್ಲಿ ಎರಡು ಬದಲಾವಣೆಯನ್ನು ತರಲಾಗಿದೆ. ರಜತ್‌ ಪಾಟಿದಾರ್‌ ಹಾಗೂ ಜೇಕಬ್‌ ಡಫಿ ಅವರ ಸ್ಥಾನಕ್ಕೆ ಕ್ರಮವಾಗಿ ಸುಯಾಶ ಶರ್ಮಾ ಹಾಗೂ ರೊಮ್ಯಾರಿಯೊ ಶೆಫರ್ಡ್‌ ಬಂದಿದ್ದಾರೆ.

ಇನ್ನು ಎದುರಾಳಿ ಪಂಜಾಬ್‌ ಕಿಂಗ್ಸ್‌ ಪ್ಲೇಯಿಂಗ್‌ XIನಲ್ಲಿಯೂ ಎರಡು ಬದಲಾವಣೆಯನ್ನು ತರಲಾಗಿದ. ವಿಷ್ಣು ವಿನೋದ್‌ ಹಾಗೂ ಮಾರ್ಕೊ ಯೆನ್ಸನ್‌ ಅವರ ಸ್ಥಾನಗಳಿಗೆ ಕ್ರಮವಾಗಿ ಹರಪ್ರೀತ್‌ ಬ್ರಾರ್‌ ಹಾಗೂ ಲಾಕಿ ಫರ್ಗ್ಯೂಸನ್‌ ಬಂದಿದ್ದಾರೆ.



ಕಳೆದ ವರ್ಷ ಐಪಿಎಲ್‌ ಟೂರ್ನಿಯ ಫೈನಲ್‌ ಬಳಿಕ ಇದೇ ಮೊದಲ ಬಾರಿ ಆರ್‌ಸಿಬಿ ಹಾಗೂ ಪಿಬಿಕೆಎಸ್‌ ತಂಡಗಳು ಕಾದಟ ನಡೆಸುತ್ತಿವೆ. ಆರ್‌ಸಿಬಿ ತಂಡ ಈಗಾಗಲೇ ಪ್ಲೇಆಫ್ಸ್‌ಗೆ ಬಹುತೇಕ ಅರ್ಹತೆ ಪಡೆದಿದೆ. ಆದರೆ, ಪಂಜಾಬ್‌ ತಂಡ ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆಯಬೇಕಾದ ಅಗತ್ಯವಿದೆ.



ಆರ್‌ಸಿಬಿ ತಂಡ ಆಡಿದ 12 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಪಡೆಯುವ ಮೂಲಕ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಇದೀಗ ಪಂಜಾಬ್‌ ಎದುರು ಗೆದ್ದರೆ ಆರ್‌ಸಿಬಿ ಪ್ಲೇಆಪ್ಸ್‌ಗೆ ಅಧಿಕೃತವಾಗಿ ಅರ್ಹತೆ ಪಡೆಯಲಿದೆ. ಅಂಕಿ ಅಂಶಗಳ ಪ್ರಕಾರ ನಾಕ್‌ಔಟ್‌ಗೆ ಅರ್ಹತೆ ಪಡೆದ ಮೊದಲ ತಂಡ ಎನನಿಸಿಕೊಳ್ಳಲಿದೆ.

ಉಭಯ ತಂಡಗಳ ಪ್ಲೇಯಿಂಗ್‌ XI

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ಜೇಕಬ್ ಬೆಥೆಲ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ವೆಂಕಟೇಶ್ ಅಯ್ಯರ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್‌, ಬ್ಯಾಟರ್‌), ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಾಶ್ ಹೇಝಲ್‌ವುಡ್, ಸುಯಾಶ್ ಶರ್ಮಾ



ಪಂಜಾಬ್‌ ಕಿಂಗ್ಸ್‌: ಪ್ರಿಯಾಂಶ್ ಆರ್ಯ, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್‌ ಕೀಪರ್‌), ಕೂಪರ್ ಕನೊಲಿ, ಶ್ರೇಯಸ್ ಅಯ್ಯರ್ (ನಾಯಕ), ಸೂರ್ಯಾಂಶ್ ಶೆಡ್ಗೆ, ಶಶಾಂಕ್ ಸಿಂಗ್, ಅಝಮತ್‌ವುಲ್ಲಾ ಒಮರ್ಜಾಯ್, ಹರ್‌ಪ್ರೀತ್ ಬ್ರಾರ್, ಲಾಕಿ ಫರ್ಗ್ಯೂಸನ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್