ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಫೋನ್‌ ಸಂಪರ್ಕಕ್ಕೆ ಸಿಗದ 4 ಕೋಟಿ ರು ಬೆಲೆಯ ಆರ್‌ಸಿಬಿ ವೇಗಿ ಯಶ್‌ ದಯಾಳ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನಿಮಿತ್ತ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮಾರ್ಚ್‌ 20 ರಂದು ತನ್ನ ಅಭ್ಯಾಸವನ್ನು ಆರಂಭಿಸಿದ ಬಹುತೇಕ ಆಟಗಾರರು ಆಗಮಿಸಿದ್ದಾರೆ.ಆದರೆ, 4 ಕೋಟಿ ರು ಬೆಲೆಯ ಯಶ್‌ ದಯಾಳ್‌ ಮಾತ್ರ ಇನೂ ಆರ್‌ಸಿಬಿ ಟೀಮ್‌ ಮ್ಯಾನೇಜ್‌ಮೆಂಟ್‌ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರು ಈ ಸೀಸನ್‌ ಆಡುತ್ತಾರಾ? ಅಥವಾ ಇಲ್ಲವಾ? ಎಂಬ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಲಭಿಸಿಲ್ಲ.

ಯಶ್‌ ದಯಾಳ್‌ ಆರ್‌ಸಿಬಿಯ ಫೋನ್‌ ಸಂಪರ್ಕಕ್ಕೆ ಸಿಗುತ್ತಿಲ್ಲ.

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ (IPL 2026) 19ನೇ ಆವೃತ್ತಿಯ ಆರಂಭಕ್ಕೆ ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಇದೆ. ಮಾರ್ಚ್‌ 28 ರಂದು ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು (RCB vs SRH) ಕಾದಾಟ ನಡೆಸಲಿವೆ. ಅದರಂತೆ ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ ಮಾರ್ಚ್‌ 20 ರಂದು ತನ್ನ ಅಭ್ಯಾಸವನ್ನು ಆರಂಭಿಸಿದೆ. ವಿರಾಟ್‌ ಕೊಹ್ಲಿ, ಕೃಣಾಲ್‌ ಪಾಂಡ್ಯ ಸೇರಿದಂತೆ ಎಲ್ಲಾ ಆಟಗಾರರು ಸೇರ್ಪಡೆಯಾಗಿದ್ದಾರೆ. ಆದರೆ, ವೇಗದ ಬೌಲರ್‌ ಬೌಲರ್‌ ಯಶ್‌ ದಯಾಳ್‌ (Yash Dayal) ಅವರು ಇನ್ನೂ ತಂಡಕ್ಕೆ ಸೇರ್ಪಡೆಯಾಗಿಲ್ಲ. ಕಳೆದ ವರ್ಷ ಅವರ ಮೇಲೆ ಅತ್ಯಾಚಾರದ ಆರೋಪ ಕೇಳಿಬಂದಿತ್ತು.

ಪಂಜಾಬ್‌ ಕಿಂಗ್ಸ್‌ ಎದುರು 2025ರ ಐಪಿಎಲ್‌ ಟೂರ್ನಿಯ ಫೈನಲ್‌ನಲ್ಲಿ ಯಶ್‌ ದಯಾಳ್‌ ಕೊನೆಯ ಬಾರಿ ಪಂದ್ಯವನ್ನು ಆಡಿದ್ದರು ಅಂದಿನಿಂದ ಇಲ್ಲಿಯವರೆಗೂ ಅವರು ಒಂದೇ ಒಂದು ಸ್ಪರ್ಧಾತ್ಮಕ ಪಂದ್ಯವನ್ನು ಆಡಿಲ್ಲ. ಏಕೆಂದರೆ, ಅವರ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಇದರ ಪರಿಣಾಮ ಅವರನ್ನು ದೇಶಿ ಕ್ರಿಕೆಟ್‌ ಉತ್ತರ ಪ್ರದೇಶ ತಂಡ ಕೂಡ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಅಂದಿನಿಂದ ಇಲ್ಲಿಯವರೆಗೂ ಅವರು ತಮ್ಮ ಫೋನ್‌ ಅನ್ನು ಆಫ್‌ ಮಾಡಿಕೊಂಡಿದ್ದಾರೆ. ಈ ಕಾರಣದಿಂದ ಉತ್ತರ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌, ಬಿಸಿಸಿಐ ಸೆಂಟರ್‌ ಆಫ್‌ ಎಕ್ಸಲೆನ್ಸ್‌, ಬಾಲ್ಯದ ಕೋಚ್‌ ಅವರಿಂದಲೂ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.

IPL 2026: ಕರನ್‌ ಬದಲಿಗೆ ಮೂವರು ಆಟಗಾರರ ಮೇಲೆ ಕಣ್ಣಿಟ್ಟ ರಾಜಸ್ಥಾನ್‌ ರಾಯಲ್ಸ್‌

ಯಶ್‌ ದಯಾಳ್‌ ಸಂಪರ್ಕಕ್ಕೆ ಸಿಗುತ್ತಿಲ್ಲ

“ಅವರ ವಿರುದ್ಧ ಪ್ರಕರಣ ನಡೆಯುತ್ತಿತ್ತು, ಆದ್ದರಿಂದ ಅವರನ್ನು ಆಯ್ಕೆಗಾಗಿ ಪರಿಗಣಿಸಲಿಲ್ಲ. ಸೆಪ್ಟೆಂಬರ್‌ ತಿಂಗಳಲ್ಲಿ ಬಿಸಿಸಿಐ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ನಿಂದ ಅವರ ಬಗ್ಗೆ ವಿಚಾರಿಸಲು ಕರೆ ಬಂದಿತ್ತು. ಆದರೆ ನಾವು ಯಶ್ ದಯಾಳ್ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಅವರು ತಮ್ಮ ಫೋನ್ ಸಂಖ್ಯೆಯನ್ನೂ ಬದಲಿಸಿದ್ದಾರೆ. ಅವರ ಬಾಲ್ಯದ ಕೋಚ್‌ಗೂ ಅವರ ಇರುವ ಸ್ಥಳದ ಬಗ್ಗೆ ಮಾಹಿತಿ ಇಲ್ಲ,” ಎಂದು ಉತ್ತರ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಶ್‌ ದಯಾಳ್‌ ಅವರು ಇತ್ತೀಚೆಗೆ ವಿವಾಹವಾಗಿದ್ದಾರೆ ಹಾಗೂ ಅವರು ನೆಟ್ಸ್‌ನಲ್ಲಿ ಕ್ರಿಕೆಟ್‌ ಅಭ್ಯಾಸ ನಡೆಸುತ್ತಿರುವ ಫೋಟೋವನ್ನು ತನ್ನ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಅವರ ಪತ್ನಿ ಶ್ವೇತಾ ಪುಂಡಿರ್‌ ಹಂಚಿಕೊಂಡಿದ್ದರು. ಆದರೆ, ಅವರು ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿಲ್ಲ ಎಂಬುದಂತೂ ಖಚಿತವಾಗಿದೆ.

IPL 2026: ಆರ್‌ಸಿಬಿಗೆ ಪಂದ್ಯ ಗೆದ್ದುಕೊಡಬಲ್ಲ ಐವರು ಸ್ಟಾರ್‌ ಆಟಗಾರರು!

ಯಶ್‌ ದಯಾಳ್‌ ಮೇಳೆ ಯಾವ ಕೇಸ್‌ ಇದೆ?

ಪೋಸ್ಕೋ ಸೇರಿದಂತೆ ಯಶ್‌ ದಯಾಳ್‌ ಅವರ ಮೇಲೆ ಒಟ್ಟು ಎರಡು ಪ್ರಕರಣಗಳಿವೆ. ಜೈಪುರದ ಯುವತಿಯೊಬ್ಬರು ಸಂಗಾನೇರ್ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಯಶ್‌ ದಯಾಳ್‌ ತಮ್ಮ ಕ್ರಿಕೆಟ್ ವೃತ್ತಿಗೆ ಸಹಾಯ ಮಾಡುವುದಾಗಿ ಭರವಸೆ ನೀಡುತ್ತಾ ದೀರ್ಘಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ದೂರಿನಲ್ಲಿ ದಯಾಳ್ ಅವರು ತಮ್ಮನ್ನು ಪ್ರಭಾವಶಾಲಿ ಕ್ರಿಕೆಟ್ ಆಟಗಾರನಾಗಿ ಪರಿಚಯಿಸಿಕೊಂಡು, ಭಾವನಾತ್ಮಕವಾಗಿ ಆಕೆಯನ್ನು ಪ್ರಭಾವಿತಗೊಳಿಸಿ, ಭವಿಷ್ಯದಲ್ಲಿ ಕ್ರಿಕೆಟ್ ಅವಕಾಶಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾಗಿ ಹೇಳಲಾಗಿದೆ.

IPL 2026: ಈ ಸಲವೂ ಆರ್‌ಸಿಬಿಗೆ ಕಪ್‌ ಗೆದ್ದುಕೊಡಬಲ್ಲ ಬಲಿಷ್ಠ ಪ್ಲೇಯಿಂಗ್ 11 ಹೀಗಿದೆ!

ಇದಲ್ಲದೆ, ಈ ಘಟನೆಗಳು ಆಕೆ ಅಪ್ರಾಪ್ತ ವಯಸ್ಸಿನಲ್ಲಿದ್ದಾಗ ನಡೆದವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ, ಆಕೆಯನ್ನು ಬೆದರಿಕೆ ಹಾಕಲಾಗಿದ್ದು, ಆಕೆಯೊಂದಿಗೆ ಸಂಪರ್ಕವನ್ನು ಕಡಿತಗೊಳಿಸಲು ಪ್ರಯತ್ನಗಳು ನಡೆದಿವೆ ಎಂಬ ಆರೋಪವೂ ಮಾಡಲಾಗಿದೆ. ಇದೆಲ್ಲವೂ ಆರೋಪವಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಇನ್ನೂ ಅಂತಿಮ ತೀರ್ಪು ಬಂದಿಲ್ಲ.