ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

20 ಎಸೆತಗಳಲ್ಲಿ 44 ರನ್‌ ಚಚ್ಚಿದ ರಿಂಕು ಸಿಂಗ್‌ ಬಗ್ಗೆ ಸೈಮನ್‌ ದೌಲ್‌ ಅಚ್ಚರಿ ಹೇಳಿಕೆ!

Simon Doull Praised Rinku Singh: ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳ ನಡುವೆ ಐದು ಪಂದ್ಯಗಳ ಟಿ20ಐ ಸರಣಿ ನಡೆಯುತ್ತಿದೆ. ಮೊದಲನೇ ಪಂದ್ಯದಲ್ಲಿ ಕೇವಲ 20 ಎಸೆತಗಳಲ್ಲಿ 44 ರನ್‌ ಸಿಡಿಸಿದ ರಿಂಕ ಸಿಂಗ್‌ ಅವರನ್ನು ಸೈಮನ್‌ ದೌಲ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ರಿಂಕು ಸಿಂಗ್‌ಗೆ ಬ್ಯಾಟಿಂಗ್‌ಗೆ ಸೈಮನ್‌ ದೌಲ್‌ ಮೆಚ್ಚುಗೆ.

ನವದೆಹಲಿ: ನ್ಯೂಜಿಲೆಂಡ್‌ ವಿರುದ್ಧದ ಮೊದಲನೇ ಟಿ20ಐ ಪಂದ್ಯದಲ್ಲಿ (IND vs NZ) ಕೇವಲ 20 ಎಸೆತಗಳಲ್ಲಿ 44 ರನ್‌ ಸಿಡಿಸಿದ ಭಾರತ ತಂಡದ ರಿಂಕು ಸಿಂಗ್‌ (Rinku Singh) ಅವರನ್ನು ನ್ಯೂಜಿಲೆಂಡ್‌ ಮಾಜಿ ವೇಗಿ ಸೈಮನ್‌ ದೌಲ್‌ (Simon Doull) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಬುಧವಾರ ನಾಗ್ಪರದ ವಿದರ್ಭ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡದ ಪರ 7ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ್ದ ರಿಂಕು, 220ರ ಸ್ಟ್ರೈಕ್‌ ರೇಟ್‌ನಲ್ಲಿ ಮೂರು ಸಿಕ್ಸರ್‌ ಹಾಗೂ ನಾಲ್ಕು ಬೌಂಡರಿಯೊಂದಿಗೆ ಅಜೇಯ 44 ರನ್‌ ಬಾರಿಸಿದ್ದರು. ಆ ಮೂಲಕ ಭಾರತ ತಂಡ 238 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು.

ಈ ಪಂದ್ಯದಲ್ಲಿ ಭಾರತ ತಂಡ 48 ರನ್‌ಗಳ ಗೆಲುವು ಪಡೆದ ಬಳಿಕ ನ್ಯೂಜಿಲೆಂಡ್‌ ಮಾಜಿ ವೇಗಿ ಸೈಮನ್‌ ದೌಲ್‌ ಅವರು, ರಿಂಕು ಸಿಂಗ್‌ ಅವರ ಸ್ಪೋಟಕ ಇನಿಂಗ್ಸ್‌ ಅನ್ನು ಶ್ಲಾಘಿಸಿದರು. ರಿಂಕು ಸಿಂಗ್‌ ಅವರು ಅತ್ಯುತ್ತಮ ಮ್ಯಾಚ್‌ ಫಿನಿಷರ್‌ ಎಂದ ಕ್ರಿಕೆಟ್‌ ನಿರೂಪಕ, ಅವರು ಈಗಾಗಲೇ ಭಾರತದ ಪರ 100ಕ್ಕೂ ಅಧಿಕ ಪಂದ್ಯಗಳನ್ನು ಆಡಬೇಕಾಗಿತ್ತು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

IND vs NZ: ಎರಡನೇ ಟಿ20ಐ ಪಂದ್ಯಕ್ಕೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ!

ಸ್ಟಾರ್‌ ಸ್ಪೋರ್ಟ್ಸ್‌ ಜತೆ ಮಾತನಾಡಿದ ಅವರು, "ರಿಂಕು ಸಿಂಗ್‌ ಅವರು ಅತ್ಯುತ್ತಮ ಫಿನಿಷರ್‌ಗಳಲ್ಲಿ ಒಬ್ಬರು. ಕಳೆದ 4-5 ವರ್ಷಗಳ ಹಿಂದೆಯೇ ನಾವು ಅವರ ಆಟವನ್ನು ನೋಡಿದ್ದೇವೆ. ಆದರೆ, ಅವರಿನ್ನೂ ಭಾರತ ಟಿ20 ತಂಡದ ಪರ ಹೆಚ್ಚಿನ ಪಂದ್ಯಗಳನ್ನು ಆಡಬೇಕಾಗಿತ್ತು ಎಂಬ ಭಾವನೆ ನಮಗೆ ಉಂಟಾಗುತ್ತಿದೆ. ಇಲ್ಲಿಯವರೆಗೂ ಅವರು ಟೀಮ್‌ ಇಂಡಿಯಾ ಪರ 100ಕ್ಕೂ ಅಧಿಕ ಪಂದ್ಯಗಳನ್ನು ಆಡಬೇಕಾಗಿತ್ತು," ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

"ಫಿನಿಷಿಂಗ್‌ ಪಾತ್ರಕ್ಕೆ ರಿಂಕು ಸಿಂಗ್‌ ಅವರನ್ನು ಬೆಂಬಲಿಸಬೇಕು, ಏಕೆಂದರೆ ಅವರು ಅಸಾಧಾರಣ ಆಟಗಾರ. ಅವರು ಕಡಿಮೆ ಎತ್ತರವಿದ್ದರೂ ಅವರು ಅಸಾಧಾರಣ ಶಕ್ತಿಯನ್ನು ಹೊಂದಿದ್ದಾರೆ. ಡೆತ್‌ ಓವರ್‌ಗಳಲ್ಲಿ ಅವರಿಗೆ ಬೌಲ್‌ ಮಾಡುವುದು ತುಂಬಾ ಕಷ್ಟ. ಆ ರೀತಿಯ ಪ್ರತಿಭೆಯನ್ನು ಹೊಂದಿದ್ದಾರೆ," ಎಂದು ಕಿವೀಸ್‌ ಮಾಜಿ ವೇಗಿ ಹೇಳಿದ್ದಾರೆ.

20 ಎಸೆತಗಳಲ್ಲಿ 44 ರನ್‌ ಚಚ್ಚಿದ ರಿಂಕು ಸಿಂಗ್‌ ಬಗ್ಗೆ ಸೈಮನ್‌ ದೌಲ್‌ ಅಚ್ಚರಿ ಹೇಳಿಕೆ!

ಇತ್ತೀಚಿನ ವರ್ಷಗಳಲ್ಲಿ ರಿಂಕು ಸಂಗ್‌ ಭಾರತ ಟಿ20 ತಂಡದ ಒಳಗೆ ಮತ್ತು ಹೊರಗೆ ಇದ್ದಾರೆ. ಅವರು ತಂಡದ ಭಾಗವಾಗಿದ್ದರೂ ಸಹ, ಅವರು ಹೆಚ್ಚಾಗಿ ಬೆಂಚ್ ಅನ್ನು ಕಾದಿದ್ದಾರೆ. ಆದಾಗ್ಯೂ, ಬುಧವಾರ, ಅವರು ಡೆತ್ ಓವರ್‌ಗಳಲ್ಲಿ ಪವರ್-ಹಿಟ್ಟರ್ ಆಗಿ ತಮ್ಮ ಕೌಶಲವನ್ನು ಪ್ರದರ್ಶಿಸಿದರು. ಬುಧವಾರ ಟಾಸ್ ಗೆದ್ದು ಮೊದಲು ಬೌಲ್‌ ಮಾಡಲು ಕಿವೀಸ್ ಆಯ್ಕೆ ಮಾಡಿಕೊಂಡ ನಂತರ, ಅಭಿಷೇಕ್ ಕೇವಲ 35 ಎಸೆತಗಳಲ್ಲಿ 84 ರನ್ ಗಳಿಸಿ ಭಾರತವನ್ನು ಆರಂಭದಿಂದಲೇ ಉತ್ತಮ ಸ್ಥಿತಿಗೆ ತಂದರು. ರಿಂಕು ಅವರ ದಾಳಿಗೆ ಮುನ್ನ ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ಉಪಯುಕ್ತ ಕೊಡುಗೆ ನೀಡಿದರು.

ಎರಡನೇ ಇನಿಂಗ್ಸ್‌ನಲ್ಲಿ ಗ್ಲೆನ್ ಫಿಲಿಪ್ಸ್ 40 ಎಸೆತಗಳಲ್ಲಿ 78 ರನ್ ಗಳಿಸಿ ನ್ಯೂಜಿಲೆಂಡ್ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಆದಾಗ್ಯೂ, ಭಾರತ ದಾಖಲಿಸಿದ ಸವಾಲಿನ ಮೊತ್ತವನ್ನು ತಲುಪಲು ಪ್ರವಾಸಿಗರಿಂದ ಸಾಧ್ಯವಾಗಲಿಲ್ಲ. ಅಂತಿಮವಾಗಿ ನ್ಯೂಜಿಲೆಂಡ್‌ 190/7 ಕ್ಕೆ ಸೀಮಿತವಾಯಿತು.