ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻರಿಷಭ್‌ ಪಂತ್‌ ಭಾರತ ವೈಟ್‌ಬಾಲ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡಬೇಕುʼ-ಯುವರಾಜ್‌ ಸಿಂಗ್‌!

ಭಾರತದ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌, ರಿಷಭ್‌ ಪಂತ್‌ ಅವರ ಫಾರ್ಮ್ ಮತ್ತು ಆತ್ಮವಿಶ್ವಾಸವನ್ನು ಮರಳಿ ಪಡೆಯುವ ಪ್ರಯತ್ನಗಳಿಗೆ ಬೆಂಬಲ ಸೂಚಿಸಿದ್ದಾರೆ. ಇತ್ತೀಚಿನ ಹಿನ್ನಡೆಯಿದ್ದರೂ, ಪಂತ್ ಮತ್ತೆ ಭಾರತದ ಸೀಮಿತ ಓವರ್‌ಗಳ ತಂಡಕ್ಕೆ ಮರಳಲು ಶ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ರಿಷಭ್‌ ಪಂತ್‌ಗೆ ಯುವರಾಜ್‌ ಸಿಂಗ್‌ ಬೆಂಬಲ.

ನವದೆಹಲಿ: ಭಾರತ ಸೀಮಿತ ಓವರ್‌ಗಳ ತಂಡಕ್ಕೆ ಮರಳಲು ಕಠಿಣ ಪರಿಶ್ರಮ ಹಾಕುತ್ತಿರುವ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ಗೆ (Rishabh Pant) ಟೀಮ್‌ ಇಂಡಿಯಾ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ (Yuvraj Singh) ಬೆಂಬಲ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿ ವಿಫಲರಾಗುತ್ತಿದ್ದರೂ ರಿಷಭ್‌ ಪಂತ್‌ ಐಪಿಎಲ್‌ ಟೂರ್ನಿಯ (IPL 2026) ನಿಮಿತ್ತ ಯುವರಾಜ್‌ ಸಿಂಗ್‌ ಅವರ ಬಳಿ ಮಾರ್ಗದರ್ಶನವನ್ನು ಪಡೆದಿದ್ದರು. ಆ ಮೂಲಕ ಅವರು ಉತ್ತಮ ಮಾನಸಿಕ ಸ್ಥಿತಿಯನ್ನು ಹೊಂದಿದ್ದಾರೆ.

ಭಾರತದ ವಿಶ್ವಕಪ್ ವಿಜೇತ ಮಾಜಿ ಆಲ್‌ರೌಂಡರ್ ಯುವರಾಜ್‌ ಸಿಂಗ್‌ ಅವರು, ತಮ್ಮ ಹೊಸ ಶಿಷ್ಯ ರಿಷಭ್‌ ಪಂತ್‌ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಸಮಸ್ಯೆಗಳನ್ನು ಸುಧಾರಿಸಲು ಮತ್ತು ಮತ್ತೆ ಭಾರತೀಯ ತಂಡಕ್ಕೆ ಮರಳಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದ್ದಾರೆ.

ರಿಷಭ್‌ ಪಂತ್‌ ಅವರು ಕೊನೆಯದಾಗಿ 2024ರ ಆಗಸ್ಟ್‌ನಲ್ಲಿ ಶ್ರೀಲಂಕಾ ಪ್ರವಾಸದ ವೇಳೆ ಭಾರತ ಪರ ವೈಟ್‌ಬಾಲ್ ಕ್ರಿಕೆಟ್ ಆಡಿದ್ದರು. ಆ ಪ್ರವಾಸದಲ್ಲಿ ನಡೆದ ಮೂರು ಪಂದ್ಯಗಳ ಒಡಿಐ ಮತ್ತು ಟಿ20 ಸರಣಿಯಲ್ಲಿ ಅವರು ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಅವಕಾಶ ಪಡೆದಿದ್ದು, ಒಟ್ಟು 57 ರನ್‌ಗಳನ್ನು ಗಳಿಸಿದ್ದರು. ಇದರಲ್ಲಿ 51 ರನ್‌ಗಳು ಟಿ20 ಸರಣಿಯಲ್ಲೇ ಬಂದಿದ್ದವು.

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾರ 2027ರ ಏಕದಿನ ವಿಶ್ವಕಪ್‌ ಭವಿಷ್ಯ ನುಡಿದ ಯುವರಾಜ್‌ ಸಿಂಗ್‌!

ಪಾಕಿಸ್ತಾನ ಹಾಗೂ ಯುನೈಟೆಡ್‌ ಜಂಟಿ ಆತಿಥ್ಯದಲ್ಲಿ ನಡೆದಿದ್ದ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಿದ್ದ ಭಾರತ ತಂಡದಲ್ಲಿಯೂ ರಿಷಭ್‌ ಪಂತ್‌ ಇದ್ದರು. ಆದರೆ, ಕೆಎಲ್‌ ರಾಹುಲ್‌ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗಿ ಆಡಿದ್ದರಿಂದ ರಿಷಭ್‌ ಪಂತ್‌ಗೆ ಅವಕಾಶ ಸಿಕ್ಕಿರಲಿಲ್ಲ, ಹಾಗಾಗಿ ಅವರು ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಕ್ಕಿರಲಿಲ್ಲ.

“ಅವರು ತಮ್ಮ ಕ್ರಿಕೆಟ್‌ನಲ್ಲಿ ಮುಂದಕ್ಕೆ ಸಾಗಲು ಮತ್ತು ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಬಯಸುವ ಆಟಗಾರ. ಅವರು ಉತ್ತಮವಾಗಿ ಆಡಿ ಮತ್ತೆ ವೈಟ್‌ಬಾಲ್ ಕ್ರಿಕೆಟ್‌ಗೆ ಮರಳಲು ಉತ್ಸುಕರಾಗಿದ್ದಾರೆ,” ಎಂದು ಯುವರಾಜ್‌ ಸಿಂಗ್‌ ಸ್ಪೋರ್ಟ್ಸ್‌ ತಕ್‌ ಜೊತೆಗಿನ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.

IPL 2026: ಮುಂಬೈ ಇಂಡಿಯನ್ಸ್ ತಂಡ ಸೇರಿದ ಮಿಚೆಲ್ ಸ್ಯಾಂಟ್ನರ್; ಡೆಲ್ಲಿ ವಿರುದ್ಧ ಆಡುವ ಸಾಧ್ಯತೆ

ರಿಷಭ್‌ ಪಂತ್‌ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ. ಪಂತ್‌ ಮಾರ್ಚ್‌ ತಿಂಗಳಲ್ಲಿ ಮುಂಬೈನಲ್ಲಿ ಯುವರಾಜ್‌ ಸಿಂಗ್‌ ಅವರೊಂದಿಗೆ ಅಭ್ಯಾಸ ನಡೆಸುತ್ತಿರುವುದು ಕಂಡುಬಂದಿತು. ತಮ್ಮ ಬ್ಯಾಟಿಂಗ್ ಮತ್ತು ಮನೋಸ್ಥೈರ್ಯವನ್ನು ಹೆಚ್ಚಿಸಲು ಅವರು ಶ್ರಮಿಸುತ್ತಿದ್ದಾರೆ.

“ನಾನು ಅವರನ್ನು ಮಾನಸಿಕವಾಗಿ ಪ್ರೇರೇಪಿಸಬಲ್ಲೆ ಎಂದಾದರೆ, ಅವರು ಇನ್ನಷ್ಟು ಉತ್ತಮ ಸ್ಥಿತಿಯಲ್ಲಿ ಇರುತ್ತಾರೆ ಎಂಬ ನಂಬಿಕೆ ನನಗಿದೆ. ಈಗಾಗಲೇ ಅವರು ಉತ್ತಮ ಮನಸ್ಥಿತಿಯಲ್ಲಿ ಇದ್ದಾರೆ ಎಂದು ನಾನು ಭಾವಿಸುತ್ತೇನೆ. ಈ ಐಪಿಎಲ್‌ ಟೂರ್ನಿಯಲ್ಲಿ ನೀವು ಖಂಡಿತವಾಗಿ ವಿಭಿನ್ನ ರಿಷಭ್‌ ಪಂತ್‌ ಅವರನ್ನು ನೋಡುತ್ತೀರಿ,” ಎಂದು ಮಾಜಿ ಆಲ್‌ರೌಂಡರ್‌ ಹೇಳಿದ್ದಾರೆ.