ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶ್ರೀಲಂಕಾ ಎ ಎದುರು ಸೆಮಿಫೈನಲ್‌ ಸೋತ ಭಾರತ ಎ ತಂಡದ ರೈಸಿಂಗ್‌ ಸ್ಟಾರ್ಸ್‌ ಏಷ್ಯಾ ಕಪ್‌ ಕನಸು ಭಗ್ನ!

ಸಿನೆತ್‌ ಜಯವರ್ದನೆ ಹಾಗೂ ಕ್ರೂಸ್‌ಪುಲ್ಲೆ ಅವರ ಶತಕಗಳ ಬಲದಿಂದ ಶ್ರೀಲಂಕಾ ಎ ತಂಡ, ಭಾರತ ಎ ಎದುರು ಸೆಮಿಫೈನಲ್‌ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಆ ಮೂಲಕ 2026ರ ರೈಸಿಂಗ್‌ ಸ್ಟಾರ್ಸ್‌ ಏಷ್ಯಾ ಕಪ್‌ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿದೆ.

ರೈಸಿಂಗ್‌ ಸ್ಟಾರ್ಸ್‌ ಏಷ್ಯಾ ಕಪ್‌ ಸೆಮಿಫೈನಲ್‌ನಲ್ಲಿ ಸೋತ ಭಾರತ ಎ.

ದೋಹಾ: ಸಿನೆತ್‌ ಜಯವರ್ದನೆ ಹಾಗೂ ಕ್ರೂಸ್‌ಪುಲ್ಲೆ ಶತಕಗಳ ಬಲದಿಂದ ಶ್ರೀಲಂಕಾ ಎ ತಂಡ, ಭಾರತ ಎ ಎದುರು ಸೆಮಿಫೈನಲ್‌ ಪಂದ್ಯದಲ್ಲಿ (IND A vs SL A) 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 2026ರ ರೈಸಿಂಗ್‌ ಸ್ಟಾರ್ಸ್‌ ಏಷ್ಯಾ ಕಪ್‌ ಟೂರ್ನಿಯ (Rising Stars Asia Cup 2026) ಫೈನಲ್‌ಗೆ ಪ್ರವೇಶ ಮಾಡಿತು. ಇನ್ನು 318 ರನ್‌ಗಳ ಗುರಿ ನೀಡಿದ ಹೊರತಾಗಿಯೂ ಬೌಲಿಂಗ್‌ ವೈಫಲ್ಯಿದಿಂದಾಗಿ ಸೋಲು ಒಪ್ಪಿಕೊಂಡಿತು. ಆ ಮೂಲಕ ತಿಲಕ್‌ ವರ್ಮಾ ಬಳಗದ ಏಷ್ಯಾ ಕಪ್‌ ಗೆಲ್ಲುವ ಕನಸು ಭಗ್ನವಾಯಿತು.

ನವೆಂಬರ್‌ 26 ರಂದು ಗುರುವಾರ ವೆಸ್ಟ್‌ ಎಂಡ್‌ ಪಾರ್ಕ್‌ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಿಸಿಕೊಂಡ ಭಾರತ ತಂಡ, ತನ್ನ ಪಾಲಿನ 50 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 317 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಶ್ರೀಲಂಕಾ ಎ ತಂಡಕ್ಕೆ 318 ರನ್‌ಗಳ ಗುರಿಯನ್ನು ನೀಡಿತು.

ʻಹೋಲಿಕೆ ಮಾಡಬೇಡಿʼ: ವೈಭವ್‌ ಸೂರ್ಯವಂಶಿ ದ್ವಿಶತಕ ಬಾರಿಸಿದ ಬಳಿಕ ಸೌರವ್‌ ಗಂಗೂಲಿ ಎಚ್ಚರಿಕೆ!

ಬಳಿಕ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ಎ ತಂಡ, ಲಸಿತ್‌ ಕ್ರೂಸ್‌ಪುಲ್ಲೆ ಹಾಗೂ ಸಿನೆಥ್‌ ಜಯವರ್ದನೆ ಅವರ ಶತಕಗಳ ಬಲದಿಂದ 41.3 ಓವರ್‌ಗಳಿಗೆ ಎರಡು ವಿಕೆಟ್‌ಗಳ ನಷ್ಟಕ್ಕೆ 318 ರನ್‌ ಗಳಿಸಿ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಶ್ರೀಲಂಕಾ ತಂಡದ ಚೇಸಿಂಗ್‌ನಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ ಸಿನೆಥ್‌ ಜಯವರ್ದನೆ 70 ಎಸೆತಗಳಲ್ಲಿ 105 ರನ್‌ಗಳನ್ನು ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.