ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಜಿತ್‌ ಅಗರ್ಕರ್‌ಗೆ ಕೌಂಟರ್‌ ಕೊಟ್ರಾ ರೋಹಿತ್‌ ಶರ್ಮಾ? ಟೀ-ಶರ್ಟ್‌ ಮೇಲಿನ ಬರಹದ ರಹಸ್ಯವೇನು?

ಟೀಮ್‌ ಇಂಡಿಯಾದ ಸ್ಟಾರ್ ಕ್ರಿಕೆಟಿಗ ರೋಹಿತ್ ಶರ್ಮಾ ಇದೀಗ ಕಿರುತೆರೆಯಲ್ಲಿ ಹೊಸ ಪಾತ್ರಕ್ಕೆ ಕಾಲಿಟ್ಟಿದ್ದಾರೆ. ಗೇಮ್ ಶೋ ‘ಫ್ಯಾಮಿಲಿ ಫುಲ್ ಹೌಸ್’ ಮೂಲಕ ಅವರು ಟಿವಿ ನಿರೂಪಕರಾಗಿ ತಮ್ಮ ಚೊಚ್ಚಲ ಪ್ರವೇಶ ಮಾಡುತ್ತಿದ್ದಾರೆ. ಶೋ ಸೆಟ್‌ನಲ್ಲಿ ರೋಹಿತ್ ಶರ್ಮಾ ‘Non-Committal?’ ಎಂದು ಬರೆಯಲಾಗಿದ್ದ ಟಿ-ಶರ್ಟ್ ಧರಿಸಿ ಕಾಣಿಸಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಟೀ ಶರ್ಟ್‌ ಮೂಲಕ ಅಜಿತ್‌ ಅಗರ್ಕರ್‌ಗೆ ಕೌಂಟರ್‌ ಕೊಟ್ರಾ ರೋಹಿತ್‌ ಶರ್ಮಾ?

ಮುಂಬೈ: ಭಾರತ ಕ್ರಿಕೆಟ್ ತಂಡದ (Indian Cricket Team) ಸ್ಟಾರ್ ಬ್ಯಾಟರ್ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಇದೀಗ ಕ್ರಿಕೆಟ್ ಮೈದಾನದಿಂದ ಹೊರಬಂದು ಮನರಂಜನಾ ಕ್ಷೇತ್ರದಲ್ಲಿ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ‘ಹಿಟ್‌ಮ್ಯಾನ್’ ಖ್ಯಾತಿಯ ರೋಹಿತ್ ಶರ್ಮಾ ‘ಫ್ಯಾಮಿಲಿ ಫುಲ್ ಹೌಸ್’ ಎಂಬ ಟಿವಿ ಗೇಮ್ ಶೋ ಮೂಲಕ ನಿರೂಪಕರಾಗಿ (Host) ತಮ್ಮ ಚೊಚ್ಚಲ ಪ್ರವೇಶ ಮಾಡುತ್ತಿದ್ದಾರೆ. ಈ ನಡುವೆ ಶೋ ಶೂಟಿಂಗ್ ಸೆಟ್‌ನಿಂದ ಹೊರಬಂದಿರುವ ಅವರ ಫೋಟೋ ಹಾಗೂ ಟಿ-ಶರ್ಟ್ ಮೇಲಿನ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಶೂಟಿಂಗ್ ಸೆಟ್‌ನಿಂದ ವೈರಲ್ ಆಗಿರುವ ವಿಡಿಯೊದಲ್ಲಿ ರೋಹಿತ್ ಶರ್ಮಾ ಬಿಳಿ ಬಣ್ಣದ ಟಿ-ಶರ್ಟ್ ಧರಿಸಿರುವುದು ಕಂಡುಬಂದಿದೆ. ಅದರ ಮೇಲೆ ಇಂಗ್ಲಿಷ್‌ನಲ್ಲಿ ‘non-committal?’ ಎಂದು ಬರೆಯಲಾಗಿದೆ. ಈ ಟಿ-ಶರ್ಟ್ ಕಾಣಿಸಿಕೊಂಡ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಅಭಿಮಾನಿಗಳ ವಲಯದಲ್ಲಿ ಹಲವು ಊಹಾಪೋಹಗಳು ಆರಂಭವಾಗಿವೆ.

IND vs WI: ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಸರಣಿಗೆ ತಯಾರಿ ಆರಂಭಿಸಿದ ರೋಹಿತ್‌ ಶರ್ಮಾ!

ಅಭಿಮಾನಿಗಳ ಒಂದು ವರ್ಗ, ಈ ಟಿ-ಶರ್ಟ್ ಅನ್ನು ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಹಳೆಯ ಹೇಳಿಕೆಗೆ ರೋಹಿತ್ ನೀಡಿದ ತಿರುಗೇಟು ಎಂದು ವ್ಯಾಖ್ಯಾನಿಸುತ್ತಿದೆ. 2025ರ ಅಕ್ಟೋಬರ್‌ನಲ್ಲಿ 2027ರ ಏಕದಿನ ವಿಶ್ವಕಪ್ ಯೋಜನೆಗಳ ಕುರಿತು ಮಾತನಾಡಿದ್ದ ಅಗರ್ಕರ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಭವಿಷ್ಯದ ಬಗ್ಗೆ ‘non-committal’ ಎಂಬ ಪದವನ್ನು ಬಳಸಿದ್ದರು ಎನ್ನಲಾಗಿದೆ.

ಆದರೆ, ರೋಹಿತ್ ಶರ್ಮಾ ಈ ಟಿ-ಶರ್ಟ್ ಮೂಲಕ ಅಗರ್ಕರ್ ಅವರನ್ನು ಉದ್ದೇಶಿಸಿ ಸಂದೇಶ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಅಧಿಕೃತ ದೃಢೀಕರಣ ಇಲ್ಲ. ಹೀಗಾಗಿ ಸದ್ಯಕ್ಕೆ ಇದು ಅಭಿಮಾನಿಗಳ ಊಹಾಪೋಹವಾಗಿಯೇ ಉಳಿದಿದೆ. ಆದರೂ, ‘Non-committal?’ ಎಂಬ ಸಂದೇಶವಿರುವ ಟಿ-ಶರ್ಟ್ ಧರಿಸಿರುವ ರೋಹಿತ್ ಅವರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನ ಸೆಳೆಯುತ್ತಿದೆ.



ರೋಹಿತ್ ಶರ್ಮಾ ಅವರ ಹೊಸ ಗೇಮ್ ಶೋ ‘ಫ್ಯಾಮಿಲಿ ಫುಲ್ ಹೌಸ್’ 2026ರ ಸೆಪ್ಟೆಂಬರ್ 19ರಿಂದ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್ ಹಾಗೂ OTT ವೇದಿಕೆ ಸೋನಿ ಲಿವ್‌ನಲ್ಲಿ ಪ್ರಸಾರವಾಗಲಿದೆ. 39 ವರ್ಷದ ರೋಹಿತ್ ಶರ್ಮಾ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಒತ್ತಡದ ವಾತಾವರಣದಿಂದ ಹೊರಬಂದು ಟಿವಿ ಸ್ಟುಡಿಯೋದಲ್ಲಿ ಹೊಸ ಪಾತ್ರ ನಿರ್ವಹಿಸುವುದು ವಿಭಿನ್ನ ಅನುಭವವಾಗಲಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ರೋಹಿತ್ ತಮ್ಮ ಹೊಸ ಕೆಲಸದ ಸ್ಥಳ ಹಾಗೂ ಶೋ ಸೆಟ್ ಅನ್ನು ಪರಿಶೀಲಿಸುತ್ತಿರುವುದು ಕಂಡುಬಂದಿದೆ.

ಮೈದಾನದಲ್ಲಿ ನಾಯಕತ್ವ ವಹಿಸಿದ್ದ ರೋಹಿತ್ ಇದೀಗ ಮನರಂಜಕರಾಗಿ ತಮ್ಮ ಟೈಮಿಂಗ್, ಹಾಸ್ಯಪ್ರಜ್ಞೆ ಹಾಗೂ ಸಹಜ ವ್ಯಕ್ತಿತ್ವದ ಮೂಲಕ ಪ್ರೇಕ್ಷಕರು ಮತ್ತು ಶೋಗೆ ಆಗಮಿಸುವ ಅತಿಥಿಗಳ ಮನ ಗೆಲ್ಲಬೇಕಿದೆ.



ರೋಹಿತ್ ಶರ್ಮಾ ಕಣಕ್ಕೆ ಇಳಿಯುವುದು ಯಾವಾಗ?

ರೋಹಿತ್ ಶರ್ಮಾ ಅವರನ್ನು ಮತ್ತೆ ಮೈದಾನದಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಶೀಘ್ರದಲ್ಲೇ ಹಿಟ್‌ಮ್ಯಾನ್ ಮತ್ತೆ ಕ್ರಿಕೆಟ್ ಆಡುವುದನ್ನು ನೋಡಲು ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಮತ್ತೆ ಮೈದಾನಕ್ಕಿಳಿಯಲಿದ್ದಾರೆ. ಈ ಸರಣಿಯಲ್ಲಿ ಒಟ್ಟು ಮೂರು ಏಕದಿನ ಪಂದ್ಯಗಳು ನಡೆಯಲಿದ್ದು, ವಿರಾಟ್ ಕೊಹ್ಲಿ ಕೂಡ ಭಾರತ ತಂಡದ ಪರ ಆಡಲಿದ್ದಾರೆ.