ವಿಶಾಖಪಟ್ಟಣಂ: ಹಿರಿಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ(Rohit Sharma) ಸದ್ಯ ಭಾರತ ತಂಡದ ನಾಯಕನಲ್ಲ, ಆದರೂ ಅವರು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ (IND vs SA) ಏಕದಿನ ಸರಣಿಯ ಕೆಲ ನಿರ್ಣಾಯಕ ಸನ್ನಿವೇಶಗಳಲ್ಲಿ ನಾಯಕನ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅದರಂತೆ ಇಲ್ಲಿನ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೂರನೇ ಏಕದಿನ ಪಂದ್ಯದಲಿ ಡಿಆರ್‌ಎಸ್ ಪಡೆಯಲು ಮುಂದಾಗಿದ್ದ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ (Kuldeep Yadav) ಅವರನ್ನು ಹಾಸ್ಯಮಯ ರೀತಿಯಲ್ಲಿ ತಡೆದು ನಿಲ್ಲಿಸಿದ್ದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ ಎದುರಾಳಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಥಮ ಇನಿಂಗ್ಸ್‌ನಲ್ಲಿ 270 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಕುಲ್ದೀಪ್ ಯಾದವ್ ಮಹತ್ತರ ಪಾತ್ರವನ್ನು ನಿರ್ವಹಿಸಿದ್ದರು. ಅವರು ತಮ್ಮ ಸ್ಪಿನ್ ಮೋಡಿಯ ನೆರವಿನಿಂದ ಹರಿಣ ಪಡೆಯ 4 ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಸರಣಿಯಲ್ಲಿ ಇವರ ಪಾಲಿಗೆ ಎರಡನೇ 4 ವಿಕೆಟ್ ಸಾಧನೆಯಾಗಿದೆ. ಅಂದ ಹಾಗೆ ಅಂತಿಮ ಪಂದ್ಯದಲ್ಲಿ ಕುಲ್ದೀಪ್ ತಮ್ಮ ಸ್ಪಿನ್ ಮೋಡಿಯಿಂದ ಡೆವಾಲ್ಡ್ ಬ್ರೆವಿಸ್, ಮಾರ್ಕೊ ಯೆನ್ಸನ್, ಕಾರ್ಬಿನ್ ಬಾಷ್ ಹಾಗೂ ಲುಂಗಿ ಎನ್ಗಿಡಿ ಅವರನ್ನು ಔಟ್ ಮಾಡಿದರು.
IND vs SA: ಕೆಎಲ್ ರಾಹುಲ್ ಶತಕ ಸಿಡಿಸದೆ ಇರಲು ಬಲವಾದ ಕಾರಣ ತಿಳಿಸಿದ ಡೇಲ್ ಸ್ಟೇನ್!
ಕುಲ್ದೀಪ್ ಯಾದವ್ ಅವರು ತಮ್ಮ ಮೂರು ಹಾಗೂ ನಾಲ್ಕನೇ ವಿಕೆಟ್‌ಗಳ ನಡುವೆ ಹಲವು ಬಾರಿ ಬ್ಯಾಟ್ಸ್‌ಮನ್‌ಗಳ ಪ್ಯಾಡ್‌ಗೆ ಹಾಕಿದ್ದರು. ಅದರಂತೆ ಅಂಪೈರ್ ನಾಟ್‌ಔಟ್ ಕೊಟ್ಟಿದ್ದರು. ಆದರೂ ಚೈನಾಮನ್ ಸ್ಪಿನ್ನರ್, ಡಿಆರ್‌ಎಸ್ ತೆಗೆದುಕೊಳ್ಳುವಂತೆ ತಮ್ಮ ನಾಯಕ ಕೆಎಲ್ ರಾಹುಲ್‌ಗೆ ಮೊರೆ ಹೋಗಿದ್ದರು. ಆದರೆ, ರಾಹುಲ್ ಇದರ ಬಗ್ಗೆ ಆಸಕ್ತಿ ತೋರಲಿಲ್ಲ. ಈ ವೇಳೆ ರೋಹಿತ್ ಶರ್ಮಾ ತೋರಿದ್ದ ಪ್ರತಿಕ್ರಿಯೆ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಕುಲ್ದೀಪ್ ಯಾದವ್ ಡಿಆರ್‌ಎಸ್ ತೆಗೆದುಕೊಳ್ಳಿ ಎಂದು ಹೇಳುತ್ತಾ ಪಿಚ್ ಬಳಿ ನಿಂತಿದ್ದರು. ಈ ವೇಲೆ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಹಾಸ್ಯಮಯ ರೀತಿಯಲ್ಲಿ ಹಿಂದಕ್ಕೆ ಹೋಗಿ ಬೌಲ್ ಮಾಡಿ ಎಂದು ಹೇಳುತ್ತಾ ನಗುತ್ತಿದ್ದರು. ಈ ವೇಳೆ ಪಕ್ಕದಲ್ಲಿ ಫೀಲ್ಡಿಂಗ್ ನಿಂತಿದ್ದ ವಿರಾಟ್ ಕೊಹ್ಲಿ ಕೂಡ ನಗುತ್ತಿದ್ದರು. ಈ ವೇಳೆ ಅಸಹಾಯಕನಾಗಿ ಬೌಲ್ ಮಾಡಲು ಹಿಂತಿರುಗಿದರು.
ಶತಕ ಸಿಡಿಸಿ ಹಲವು ದಾಖಲೆ ಬರೆದ ಡಿ ಕಾಕ್; ದಾಖಲೆ ಪಟ್ಟಿ ಇಲ್ಲಿದೆ
ಇದಾದ ಬಳಿಕ ಕುಲ್ದೀಪ್ ಯಾದವ್ ಅವರು ತಮ್ಮ ಬೌಲಿಂಗ್‌ನಲ್ಲಿ ಲುಂಗಿ ಎನ್ಗಿಡಿ ಅವರ ಪ್ಯಾಡ್‌ಗೆ ಚೆಂಡನ್ನು ಹೊಡೆಯುವಲ್ಲಿ ಸಫಲರಾದರು. ಈ ವೇಳೆ ಫೀಲ್ಡ್ ಅಂಪೈರ್ ಕೈ ಮೇಲಕ್ಕೆ ಎತ್ತಿ ಔಟ್ ಕೊಟ್ಟರು. ಈ ವೇಳೆ ಪ್ರವಾಸಿ ತಂಡದ ಟೈಲೆಂಡರ್ ಡಿಆರ್‌ಎಸ್ ತೆಗೆದುಕೊಂಡರು. ಆದರೆ, ಇದು ಅಂಪೈರ್ ಕರೆಯಾಗಿದ್ದ ಕಾರಣ ಎನ್ಗಿಡಿ ಔಟ್ ಆಗಿ ಪೆವಿಲಿಯನ್‌ಗೆ ಮರಳಬೇಕಾಯಿತು. ಮೊದಲ ಎರಡು ವಿಕೆಟ್‌ಗಳು ಕ್ಯಾಚ್ ಹಾಗೂ ಮೂರನೇ ವಿಕೆಟ್ ಕಾಟ್ ಬಿಹೈಂಡ್ ಆಗಿತ್ತು.
ಕ್ವಿಂಟನ್ ಡಿ ಕಾಕ್ ಶತಕ
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್ ಶತಕ ಸಿಡಿಸಿದ್ದರು. ಆ ಮೂಲಕ ಹರಿಣ ಪಡೆ 270 ರನ್‌ಗಳನ್ನು ಕಲೆ ಹಾಕಿತ್ತು. ಕುಲ್ದೀಪ್ ಯಾದವ್ ಜೊತೆಗೆ ಪ್ರಸಿಧ್ ಕೃಷ್ಣ ಕೂಡ 66 ರನ್ ನೀಡಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು. ರವೀಂದ್ರ ಜಡೇಜಾ ಮತ್ತು ಅರ್ಷದೀಪ್ ಸಿಂಗ್ ತಲಾ ಒಂದೊಂದು ವಿಕೆಟ್ ಕಿತ್ತಿದ್ದಾರೆ.