ಬೆಂಗಳೂರು: ಮುಂಬರುವ 2027ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಟೂರ್ನಿಯ ಮಿನಿ ಹರಾಜಿಗೂ ಮುನ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ತನ್ನ ಆಟಗಾರರ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಇಂಗ್ಲೆಂಡ್‌ನ ಯುವ ಬ್ಯಾಟರ್ ಜೇಕಬ್ ಬೆಥೆಲ್, ಯುವ ವೇಗಿ ಮಂಗೇಶ್ ಯಾದವ್ ಸೇರಿದಂತೆ ಒಟ್ಟು ಆರು ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದೆ.
ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಆರ್‌ಸಿಬಿ, ಮುಂಬರುವ ಆವೃತ್ತಿಯಲ್ಲೂ ತನ್ನ ಬಲಿಷ್ಠ ತಂಡವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ. ಅದರಲ್ಲೂ ಕಳೆದ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಖರೀದಿಸಿದ್ದ ಮಂಗೇಶ್ ಯಾದವ್ ಅವರನ್ನು ಬಿಡುಗಡೆ ಮಾಡಿರುವುದು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.
IPL 2027: 3 ಬಾರಿ ಆರ್‌ಸಿಬಿ ಬೌಲರ್‌ಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಎಂಎಸ್ ಧೋನಿ!
ಜೇಕಬ್ ಬೆಥೆಲ್‌ಗೆ ಆರ್‌ಸಿಬಿ ಗೇಟ್‌ಪಾಸ್
ಇಂಗ್ಲೆಂಡ್‌ನ ಪ್ರತಿಭಾವಂತ ಆಲ್‌ರೌಂಡರ್ ಜೇಕಬ್ ಬೆಥೆಲ್ ಅವರನ್ನು ಆರ್‌ಸಿಬಿ ತಂಡದಿಂದ ಕೈಬಿಟ್ಟಿದೆ. ಕಳೆದ ಹರಾಜಿನಲ್ಲಿ ಅವರನ್ನು 2.6 ಕೋಟಿ ರೂ. ನೀಡಿ ಖರೀದಿಸಲಾಗಿತ್ತು. 2026ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಆದ್ಯತೆ ನೀಡುವ ಅವರ ನಿರ್ಧಾರವೂ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ 2027ರ ಆವೃತ್ತಿಗೂ ಮುನ್ನ ಅವರನ್ನು ಬಿಡುಗಡೆ ಮಾಡಲು ಫ್ರಾಂಚೈಸಿ ನಿರ್ಧರಿಸಿದೆ.
5.2 ಕೋಟಿ ರು ಮಂಗೇಶ್ ಯಾದವ್ ಕೂಡ ಔಟ್
ಯುವ ವೇಗಿ ಮಂಗೇಶ್ ಯಾದವ್ ಅವರನ್ನು ಬಿಡುಗಡೆ ಮಾಡಿರುವುದು ಆರ್‌ಸಿಬಿಯ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಕಳೆದ ಹರಾಜಿನಲ್ಲಿ ಬರೋಬ್ಬರಿ 5.2 ಕೋಟಿ ರು ನೀಡಿ ಅವರನ್ನು ತಂಡಕ್ಕೆ ಖರೀದಿಸಲಾಗಿತ್ತು. ಅನ್‌ಕ್ಯಾಪ್ಡ್ ಆಟಗಾರನಾಗಿದ್ದ ಮಂಗೇಶ್ ಮೇಲೆ ಆರ್‌ಸಿಬಿ ದೊಡ್ಡ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಇದೀಗ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.
ಬಿಡುಗಡೆಗೊಂಡ ಐವರು ಆಟಗಾರರ ಸಂಪೂರ್ಣ ಪಟ್ಟಿ
ಆರ್‌ಸಿಬಿ ಬಿಡುಗಡೆ ಮಾಡಿರುವ ಐವರು ಆಟಗಾರರ ವಿವರ ಹಾಗೂ ಅವರ ಹಿಂದಿನ ಖರೀದಿ ಮೊತ್ತ ಈ ಕೆಳಗಿನಂತಿದೆ.
ಮಂಗೇಶ್ ಯಾದವ್: 5.2 ಕೋಟಿ ರು.
ಜೇಕಬ್ ಬೆಥೆಲ್: 2.6 ಕೋಟಿ ರು.
ರಿಚರ್ಡ್ ಗ್ಲೀಸನ್: 1.6 ಕೋಟಿ ರು.
ಸಾತ್ವಿಕ್ ದೇಸ್ವಾಲ್: 30 ಲಕ್ಷ ರು.
ವಿಹಾನ್ ಮಲ್ಹೋತ್ರಾ: 30 ಲಕ್ಷ ರು.
ಸ್ವಪ್ನಿಲ್ ಸಿಂಗ್: 50 ಲಕ್ಷ ರು.
ಈ ಐವರನ್ನು ಬಿಡುಗಡೆ ಮಾಡುವ ಮೂಲಕ ಆರ್‌ಸಿಬಿ ತಂಡ ಹರಾಜಿನಲ್ಲಿ ಹೊಸ ಆಟಗಾರರನ್ನು ಖರೀದಿಸಲು ಅವಕಾಶ ಕಲ್ಪಿಸಿಕೊಂಡಿದೆ.
ಆರ್‌ಸಿಬಿ ಬಳಿ ಉಳಿದಿರುವ ಹಣವೆಷ್ಟು?
2027ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ತಂಡದ ಬಳಿ 14.15 ಕೋಟಿ ರು. ಹಣ ಉಳಿದಿದೆ. ತಂಡದಲ್ಲಿ ಇನ್ನೂ ಐದು ಆಟಗಾರರ ಸ್ಥಾನಗಳು ಖಾಲಿಯಿದ್ದು, ಈ ಪೈಕಿ ಒಬ್ಬ ವಿದೇಶಿ ಆಟಗಾರನನ್ನು ಖರೀದಿಸಬಹುದಾಗಿದೆ.
- ಉಳಿದಿರುವ ಹಣ: 14.15 ಕೋಟಿ ರು
- ಖಾಲಿ ಸ್ಥಾನಗಳು: 6
- ವಿದೇಶಿ ಆಟಗಾರರ ಸ್ಥಾನ: 1
ಹರಾಜಿನಲ್ಲಿ ಆರ್‌ಸಿಬಿ ಯೋಜನೆ ಏನಿರಬಹುದು?
ಕಳೆದ ಎರಡು ಆವೃತ್ತಿಗಳಲ್ಲಿ ಸತತವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಆರ್‌ಸಿಬಿ, ತನ್ನ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವ ಮೂಲಕ ತಂಡದ ಬಲವನ್ನು ಕಾಯ್ದುಕೊಳ್ಳಲು ಮುಂದಾಗಿದೆ. ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟೀದಾರ್ ಸೇರಿದಂತೆ ಪ್ರಮುಖ ಆಟಗಾರರ ಮೇಲೆ ತಂಡ ವಿಶ್ವಾಸ ಮುಂದುವರಿಸುವ ನಿರೀಕ್ಷೆಯಿದೆ.
ಮತ್ತೊಂದೆಡೆ, ಐವರು ಆಟಗಾರರನ್ನು ಬಿಡುಗಡೆ ಮಾಡಿರುವುದರಿಂದ ಹರಾಜಿನಲ್ಲಿ ತಂಡಕ್ಕೆ ಅಗತ್ಯವಿರುವ ಸ್ಥಾನಗಳನ್ನು ತುಂಬಿಕೊಳ್ಳಲು ಅವಕಾಶ ಸಿಕ್ಕಿದೆ. ವಿಶೇಷವಾಗಿ ಬೌಲಿಂಗ್ ವಿಭಾಗ ಹಾಗೂ ಬೆಂಚ್ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಆರ್‌ಸಿಬಿ ಗಮನ ಹರಿಸಬಹುದು.
IPL 2027: ಯಾರಿಂದಲೂ ಮುರಿಯಲಾಗದ ಎಂಎಸ್ ಧೋನಿಯ ಸಿಎಸ್‌ಕೆ ನಾಯಕತ್ವದ ದಾಖಲೆಗಳು!
ಆಟಗಾರರ ರಿಲೀಸ್ ಬಳಿಕ ಆರ್‌ಸಿಬಿ ತಂಡ: ರಜತ್ ಪಾಟೀದರ್ (ನಾಯಕ), ವಿರಾಟ್ ಕೊಹ್ಲಿ, ಜಿತೇಶ್ ಶರ್ಮಾ, ಭುವನೇಶ್ವರ್ ಕುಮಾರ್, ಕೃಣಾಲ್ ಪಾಂಡ್ಯ, ಜಾಶ್ ಹೇಝಲ್‌ವುಡ್, ಟಿಮ್ ಡೇವಿಡ್, ದೇವದತ್ ಪಡಿಕ್ಕಲ್,ಫಿಲ್ ಸಾಲ್ಟ್, ರೊಮ್ಯಾರಿಯೊ ಶೆಫರ್ಡ್, ನುವಾನ್ ತುಷಾರ, ವೆಂಕಟೇಶ್ ಅಯ್ಯರ್, ಜೇಕಬ್ ಡಫಿ, ಜೋರ್ಡನ್ ಕಾಕ್ಸ್, ರಸಿಖ್ ದಾರ್ ಸಲಾಮ್, ಸುಯಾಶ್ ಶರ್ಮಾ, ವಿಕ್ಕಿ ಒಸ್ತ್ವಾಲ್, ಅಭಿನಂದನ್ ಸಿಂಗ್, ಕಾನಿಷ್ಕ್ ಚೌವ್ಹಾಣ್, ಯಶ್ ದಯಾಳ್