ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು vs ರಾಜಸ್ಥಾನ್‌ ರಾಯಲ್ಸ್‌ ಪಂದ್ಯಕ್ಕೆ ಮಳೆ ಕಾಟ, ಟಾಸ್‌ ವಿಳಂಬ!

RCB vs RR, IPL 2026: ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ಇದೀಗ ಆರಂಭವಾಗಬೇಕಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡಗಳ ನಡುವಣ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ 16ನೇ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿದೆ. ಹಾಗಾಗಿ ಟಾಸ್‌ ವಿಳಂಬವಾಗಲಿದೆ.

ಆರ್‌ಸಿಬಿ vs ಆರ್‌ಆರ್‌ ಪಂದ್ಯಕ್ಕೆ ಮಳೆ ಕಾಟ.

ಗುವಾಹಟಿ: ಇಲ್ಲಿನ ಬರ್ಸಪರ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಇದೀಗ ನಡೆಯಬೇಕಾಗಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ರಾಜಸ್ಥಾನ್‌ ರಾಯಲ್ಸ್‌ (RCB vs RR) ನಡುವಣ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ 16ನೇ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಪಂದ್ಯದ ಟಾಸ್‌ ಅನ್ನು ಮುಂದೂಡಲಾಗಿದೆ. ಮಳೆ ಬೀಳುತ್ತಿರುವ ಕಾರಣ ಕ್ರೀಡಾಂಗಣದ ಸಿಬ್ಬಂದಿ, ಮೈದಾನದ ಪಿಚ್‌ ಸೇರಿದಂತೆ ಹಲವು ಕಡೆಗಳಲ್ಲಿ ಪ್ಲಾಸ್ಟಿಕ್‌ ಕವರ್‌ಗಳನ್ನು ಹಾಕಿದ್ದಾರೆ. ಹಾಗಾಗಿ ಮಲೆ ನಿಂತರೆ ಪಂದ್ಯವನ್ನು ಆರಂಭಿಸಬಹುದು.

ಅಂದ ಹಾಗೆ ಆರ್‌ಸಿಬಿ ಹಾಗೂ ಆರ್‌ಆರ್‌ ಎರಡೂ ತಂಡಗಳು 19ನೇ ಆವೃತ್ತಿಯಲ್ಲಿ ಶುಭಾರಂಭ ಕಂಡಿವೆ. ರಜತ್‌ ಪಾಟಿದಾರ್‌ ನಾಯಕತ್ವದ ಬೆಂಗಳೂರು ತಂಡ ಎರಡು ಪಂದ್ಯಗಳಲ್ಲಿ ಗೆಲುವು ಪಡೆದಿದ್ದರೆ, ರಿಯಾನ್‌ ಪರಾಗ್‌ ನಾಯಕತ್ವದ ರಾಜಸ್ಥಾನ್‌ ತಂಡ, ಆಡಿದ ಮೂರೂ ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆ ಮೂಲಕ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಹಾಗಾಗಿ ರಾಜಸ್ಥಾನ್‌ ಹಗೂ ಬೆಂಗಳೂರು ನಡುವೆ ತೀವ್ರ ಪೈಪೋಟಿಯನ್ನು ನಿರೀಕ್ಷೆ ಮಾಡಬಹುದು.

RR vs RCB: ಇಂದಿನ ಆರ್‌ಸಿಬಿ vs ರಾಜಸ್ಥಾನ್‌ ಪಂದ್ಯಕ್ಕೆ ಮಳೆ ಭೀತಿ ಇದೆಯೇ?

ರಾಜಸ್ಥಾನ್‌ ರಾಯಲ್ಸ್‌ ಪರ ಆರಂಭಿಕರಾದ ಯಶಸ್ವಿ ಜೈಸ್ವಾಲ್‌ ಹಾಗೂ ವೈಭವ್‌ ಸೂರ್ಯವಂಶಿ ಅವರು ಅಪಾಯಕಾರಿ ಫಾರ್ಮ್‌ನಲ್ಲಿದ್ದಾರೆ. ಮುಂಬೈ ಇಂಡಿಯನ್ಸ್‌ ವಿರುದ್ಧ ಕಳೆದ ಮಳೆ ಬಾದಿತ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಇದೀಗ ಅದೇ ಲಯವನ್ನು ಮುಂದುವರಿಸಲು ಆರ್‌ಆರ್‌ ಎದುರು ನೋಡುತ್ತಿದೆ. ಇನ್ನು ಆರ್‌ಸಿಬಿ ತಂಡ ಕೂಡ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಬಲಿಷ್ಠ ಆಟಗಾರರನ್ನು ಹೊಂದಿದೆ. ಹಾಗಾಗಿ ರಾಜಸ್ಥಾನ್‌ ವಿರುದ್ಧದ ಪಂದ್ಯವನ್ನು ಗೆಲ್ಲುವ ವಿಶ್ವಾಸವನ್ನು ಹೊಂದಿದೆ.



ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ಕೊನೆಯ ಬಾರಿ ಮುಂಬೈಇಂಡಿಯನ್ಸ್‌ ಎದುರು ರಾಜಸ್ಥಾನ್‌ ರಾಯಲ್ಸ್‌ ಗೆದ್ದು ಬೀಗಿತ್ತು. ಈ ಪಂದ್ಯಕ್ಕೂ ಮಳೆ ಕಾಟ ನೀಡಿದ್ದರಿಂದ ಓವರ್‌ಗಳನ್ನು 11ಕ್ಕೆ ಇಳಿಸಲಾಗಿತ್ತು. ಮೊದಲು ಬ್ಯಾಟ್‌ ಮಾಡಿದ್ದ ರಾಜಸ್ಥಾನ್‌, ಯಶಸ್ವಿ ಜೈಸ್ವಾಲ್‌ ಹಾಗೂ ವೈಭವ್‌ ಸೂರ್ಯವಂಶಿ ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ 150 ರನ್‌ ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಮುಂಬೈ 123 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು.

ತಂಡಗಳು

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್‌ ಕೀಪರ್‌), ಟಿಮ್ ಡೇವಿಡ್, ರೊಮ್ಯಾರಿಯೊ ಶೆಫರ್ಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಅಭಿನಂದನ್ ಸಿಂಗ್, ಜೇಕಬ್ ಡಫಿ, ಸುಯಶ್ ಶರ್ಮಾ, ಜಾಕೋಬ್ ಬೆಥೆಲ್, ರಾಸಿಖ್ ಸಲಾಮ್ ದಾರ್, ಕನಿಷ್ಕ್ ಚೌವ್ಹಾಣ್‌, ವೆಂಕಟೇಶ್ ಅಯ್ಯರ್‌, ಜಾಶ್ ಹೇಝಲ್‌ವುಡ್‌, ಮಂಗೇಶ್ ಯಾದವ್, ಸ್ವಪ್ನಿಲ್‌ ಸಿಂಗ್‌, ಜಾರ್ಡನ್‌ ಕಾಕ್ಸ್‌, ವಿಕಿ ಒತ್ಸ್ವಾಲ್‌, ವಿಹಾನ್‌ ಮಲ್ಹಾತ್ರಾ, ಸಾತ್ವಿಕ್‌ ದೇಶ್ವಾಲ್‌

IPL 2026: ʻಆರ್‌ಸಿಬಿಗೆ ಮರಳಿದ್ದು ನನ್ನ ಪಾಲಿಗೆ ಟರ್ನಿಂಗ್‌ ಪಾಯಿಂಟ್‌ʼ-ದೇವದತ್‌ ಪಡಿಕ್ಕಲ್‌!

ರಾಜಸ್ಥಾನ್‌ ರಾಯಲ್ಸ್:‌ ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ (ವಿ.ಕೀ), ರಿಯಾನ್ ಪರಾಗ್ (ನಾಯಕ), ಶಿಮ್ರಾನ್ ಹೆಟ್ಮಾಯೆರ್, ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂರೆ ಬರ್ಗರ್, ತುಷಾರ್ ದೇಶಪಾಂಡೆ, ಸಂದೀಪ್ ಶರ್ಮಾ, ರವಿ ಬಿಷ್ಣೋಯ್, ಶುಭಂ ದುಬೆ, ಲುವಾನ್-ಡ್ರೆ ಪ್ರಿಟೋರಿಯಸ್, ಬ್ರಿಜೇಶ್ ಶರ್ಮಾ, ರವಿ ಸಿಂಗ್, ಆಡಮ್ ಮಿಲ್ನೆ, ದಸೂನ್ ಶಣಕ, ಕುಲ್ದೀಪ್ ಸೇನ್, ಸುಶಾಂತ್ ಮಿಶ್ರಾ, ಕ್ವೇನಾ ಎಂಫಾಕ, ಯುದ್ವೀರ್ ಸಿಂಗ್ ಚರಕ್, ವಿಘ್ನೇಶ್ ಪುತ್ತೂರು, ಅಮನ್ ರಾವ್ ಪೇರಾಲ