ಮುಂಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಮನೆಯಲ್ಲಿ ಸದ್ಯ ಮದುವೆಯ ಸಂಭ್ರಮ. ಹೌದು, ಕ್ರಿಕೆಟ್ ದಂತೆ ಸಚಿನ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಅವರ ಮದುವೆ ಮಾರ್ಚ್ 5 ರಂದು ತನ್ನ ದೀರ್ಘಾವಧಿ ಗೆಳತಿ ಸಾನಿಯಾ ಚಾಂಡೋಕ್ (Saaniya Chandok) ಅವರೊಂದಿಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ದೇವರ ಮನೆಯಲ್ಲಿ ಸಂಭ್ರಮ ಮುಗಿಲೇರಿದೆ. ಅಲ್ಲದೆ ಮುಂಬೈನಲ್ಲಿರುವ ಸಚಿನ್ ಅವರ ನಿವಾಸ ಪುಷ್ಪಾಲಂಕಾರದಿಂದ ಕಂಗೋಳಿಸುತ್ತಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ತಮ್ಮ ಪುತ್ರ ಅರ್ಜುನ್ ತೆಂಡೂಲ್ಕರ್ ಅವರ ವಿವಾಹದ ನಿಮಿತ್ತ ಸಚಿನ್ ತೆಂಡೂಲ್ಕರ್ ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಪ್ರಮುಖ ಗಣ್ಯರಿಗೆ ಆಹ್ವಾನ ನೀಡಿದ್ದಾರೆ. ಈ ಸಮಾರಂಭವು 2026ರ ಮಾರ್ಚ್ 5ರಂದು ನಡೆಯುವ ನಿರೀಕ್ಷೆಯಿದೆ. ಐಪಿಎಲ್ ತಂಡ ಮುಂಬೈ ಇಂಡಿಯನ್ಸ್, ಅರ್ಜುನ್ ಮತ್ತು ಸಾನಿಯಾ ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು. ಈ ವಿಡಿಯೊ ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
T20 World Cup: ಅಭಿಷೇಕ್ ಶರ್ಮಾ ಔಟ್! ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
“ಮಗ ತನ್ನ ಜೀವನ ಸಂಗಾತಿಯನ್ನು ಪರಿಚಯಿಸಲು ಮನೆಗೆ ಕರೆತಂದಾಗ, ಅವನು ಈಗ ದೊಡ್ಡವನಾಗಿದ್ದಾನೆ ಎಂಬುದು ಅರ್ಥವಾಗುತ್ತದೆ. ಅವರಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದಾರೆ. ಅರ್ಜುನ್, ನಿನ್ನ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ. ನಿನ್ನನ್ನು ನೀನು ಎಷ್ಟು ಪ್ರೀತಿಸುತ್ತೀಯೋ, ಅಷ್ಟೇ ನಿನ್ನನ್ನು ಪ್ರೀತಿಸುವಂತಹ ವಿಶೇಷ ವ್ಯಕ್ತಿಯನ್ನು ಕಂಡುಕೊಂಡಿದ್ದೀಯ,” ಎಂದು ಮುಂಬೈ ಇಂಡಿಯನ್ಸ್ ಹಂಚಿಕೊಂಡಿರುವ ವಿಡಿಯೊದಲ್ಲಿ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಾಂದೋಕ್ ಅವರು 2025ರ ಆಗಸ್ಟ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2025ರ ಐಪಿಎಲ್ ಟೂರ್ನಿಯಲ್ಲಿ ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಅಂದ ಹಾಗೆ 2026ರ ಐಪಿಎಲ್ ಮಿನಿ ಹರಾಜಿನಲ್ಲಿ ಅರ್ಜುನ್, ಮುಂಬೈ ಇಂಡಿಯನ್ಸ್ ತಂಡದಿಂದ ಲಖನೌ ಸೂಪರ್ ಜಯಂಟ್ಸ್ ತಂಡಕ್ಕೆ ವರ್ಗಾವಣೆಯಾಗಿದ್ದಾರೆ.
ಅಂದ ಹಾಗೆ ಅರ್ಜುನ್ ದೇಶಿ ಕ್ರಿಕೆಟ್‌ನಲ್ಲಿ ಗೋವಾ ತಂಡದ ಪರ ಆಡುತ್ತಿದ್ದಾರೆ. ಇವರು ವಿವಾಹವಾಗುತ್ತಿರುವ ಸಾನಿಯಾ ಚಾಂದೋಕ್ ಅವರು ಖ್ಯಾತ ಮುಂಬೈನ ಉದ್ಯಮಿ ರವಿ ಘೈ ಅವರ ಮೊಮ್ಮಗಳು. ತೆಂಡೂಲ್ಕರ್ ಕುಟುಂಬದ ಆಪ್ತ ವಲಯದ ಭಾಗವಾಗಿ ಕೆಲಕಾಲದಿಂದ ಕಾಣಿಸಿಕೊಂಡಿದ್ದ ಸಾನಿಯಾ, ಈಗ ಶೀಘ್ರದಲ್ಲೇ ಅಧಿಕೃತವಾಗಿ ಕುಟುಂಬದ ಸದಸ್ಯೆಯಾಗಲಿದ್ದಾರೆ.