ರೋಹಿತ್ ಶರ್ಮಾರ 264 ರನ್ ದಾಖಲೆ ಮುರಿಯುವ ಧಮ್ ಈ ಆಟಗಾರನಿಗೆ ಇದೆ: ಸಂಜಯ್ ಬಾಂಗರ್!
ರೋಹಿತ್ ಶರ್ಮಾ ಅವರ 264 ರನ್‌ಗಳ ಏಕದಿನ ಕ್ರಿಕೆಟ್‌ನ ದಾಖಲೆಯನ್ನು ಭಾರತ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಮುರಿಯಬಹುದು ಎಂದು ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್ ಭವಿಷ್ಯ ನುಡಿದಿದ್ದಾರೆ. 45 ಅಥವಾ 46 ಓವರ್‌ಗಳವರೆಗೆ ಬ್ಯಾಟ್ ಮಾಡಿದರೆ ಗಿಲ್ ಈ ಸಾಧನೆಯನ್ನು ಮಾಡಬಹುದು ಎಂದಿದ್ದಾರೆ.

ಶುಭಮನ್ ಗಿಲ್ ಬಗ್ಗೆ ದೊಡ್ಡ ಭವಿಷ್ಯ ನುಡಿದ ಸಂಜಯ್ ಬಾಂಗರ್. -

ನವದೆಹಲಿ: ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit sharma) ಅವರ 264 ರನ್‌ಗಳ ಒಡಿಐ ವೈಯಕ್ತಿಕ ರನ್‌ಗಳ ದಾಖಲೆಯನ್ನು ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ (Shubman Gill) ಮುರಿಯಬಹುದು ಎಂದು ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್ (Sanjay bangar) ಭವಿಷ್ಯ ನುಡಿದಿದ್ದಾರೆ. ಒಡಿಐ ಪಂದ್ಯದಲ್ಲಿ ಶುಭಮನ್ ಗಿಲ್ ಅವರು 45-46ರ ಓವರ್‌ಗಳವರೆಗೆ ಬ್ಯಾಟ್ ಮಾಡಿದರೆ ರೋಹಿತ್ ಶರ್ಮಾ ಅವರ ಒಡಿಐ ಪಂದ್ಯದ ಅತಿ ಹೆಚ್ಚು ರನ್‌ಗಳ ದಾಖಲೆಯನ್ನು ಮುರಿಯಬಹುದು ಎಂದಿದ್ದಾರೆ. ಸದ್ಯ ರೋಹಿತ್ ಶರ್ಮಾ ಟಿ20ಐ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, 2027ರ ಐಸಿಸಿ ಏಕದಿನ ವಿಶ್ವಕಪ್ ನಿಮಿತ್ತ ಕೇವಲ 50 ಓವರ್‌ಗಳ ಸ್ವರೂಪದಲ್ಲಿ ಮಾತ್ರ ಮುಂದುವರಿಯುತ್ತಿದ್ದಾರೆ.
ದೂರದರ್ಶನದ ʻದಿ ಗ್ರೇಟ್ ಇಂಡಿಯನ್ ಕ್ರಿಕೆಟ್ ಶೋʼನಲ್ಲಿ ಭಾಗವಹಿಸಿದ್ದ ಸಂಜಯ್ ಬಾಂಗರ್‌ಗೆ ರೋಹಿತ್ ಶರ್ಮಾ ಅವರ ವೈಯಕ್ತಿಕ 264 ರನ್‌ಗಳ ಒಡಿಐ ದಾಖಲೆಯನ್ನು ಯಾರು ಮುರಿಯಬಹುದು ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಸಂಜಯ್ ಬಾಂಗರ್, ಶುಭಮನ್ ಗಿಲ್ ಅವರ ಹೆಸರನ್ನು ಉಲ್ಲೇಖಿಸಿದರು. "ಗಿಲ್ ಅವರು ಏಕದಿನ ಕ್ರಿಕೆಟ್‌ನಲ್ಲಿ 200 ರನ್‌ಗಳ ಇನಿಂಗ್ಸ್ ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು 45-46 ಓವರ್‌ಗಳವರೆಗೆ ಬ್ಯಾಟ್ ಮಾಡಿದರೆ, ರೋಹಿತ್ ಶರ್ಮಾರ ದಾಖಲೆಯನ್ನು ಮುರಿಯಬಹುದು," ಎಂದು ಭವಿಷ್ಯ ನುಡಿದಿದ್ದಾರೆ.
ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗೂ ಮುನ್ನ ಬೇಡಿಕೆಯೊಂದನ್ನು ಮುಂದಿಟ್ಟ ಶುಭಮನ್ ಗಿಲ್!
ಶುಭಮನ್ ಗಿಲ್ ಅವರು ಇಲ್ಲಿಯವರೆಗೂ ಆಡಿದ 55 ಏಕದಿನ ಪಂದ್ಯಗಳಿಂದ 59.04ರ ಸರಾಸರಿಯಲ್ಲಿ 2,755 ರನ್‌ಗಳನ್ನು ದಾಖಲಿಸಿದ್ದಾರೆ. ಅವರು ಇದರಲ್ಲಿ 8 ಶತಕಗಳು ಹಾಗೂ 15 ಅರ್ಧಶತಕಗಳನ್ನು ಗಳಿಸಿದ್ದಾರೆ. 208 ರನ್‌ಗಳು ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 2023ರ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಅವರು ಈ ಮೊತ್ತವನ್ನು ಗಳಿಸಿದ್ದರು. ಅವರು ಅಂದು ಕೇವಲ 149 ಎಸೆತಗಳಲ್ಲಿ ದ್ವಿಶತಕವನ್ನು ಬಾರಿಸಿದ್ದರು. ಈ ಇನಿಂಗ್ಸ್‌ನಲ್ಲಿ ಅವರು 9 ಸಿಕ್ಸರ್ ಹಾಗೂ 19 ಬೌಂಡರಿಗಳನ್ನು ಬಾರಿಸಿದ್ದರು. ಆ ಮೂಲಕ ಅವರು 48.3 ಓವರ್‌ಗಳಲ್ಲಿ ಈ ಮೈಲುಗಲ್ಲು ತಲುಪಿದ್ದರು. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಅವರು ಒಡಿಐ ಕ್ರಿಕೆಟ್‌ನಲ್ಲಿ ದ್ವಿಶತಕವನ್ನು ಬಾರಿಸಿದ್ದಾರೆ.
IND vs WI: ಎಂಎಸ್ ಧೋನಿಯ ಟೆಸ್ಟ್ ಸಿಕ್ಸರ್‌ಗಳ ದಾಖಲೆ ಮುರಿದ ರವೀಂದ್ರ ಜಡೇಜಾ!
ಯುವರಾಜ್ ಸಿಂಗ್ ವೇಗದ ಅರ್ಧಶತಕದ ದಾಖಲೆಯನ್ನು ಅಭಿಷೇಕ್ ಶರ್ಮಾ ಮುರಿಯಬಹುದು: ಬಾಂಗರ್
ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ಟಿ20ಐ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಅರ್ಧಶತಕದ ದಾಖಲೆಯನ್ನು ಅಭಿಷೇಕ್ ಶರ್ಮಾ ಮುರಿಯಬಹುದು ಎಂದು ಸಂಜಯ್ ಬಾಂಗರ್ ಭವಿಷ್ಯವನ್ನು ನುಡಿದಿದ್ದಾರೆ. 2007ರ ಟಿ20 ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವಿ ಕೇವಲ 12 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದ್ದರು. "ಅಭಿಷೇಕ್ ಶರ್ಮಾ ಇನ್ನೂ ವಿದ್ಯಾರ್ಥಿಯಾಗಿದ್ದಾರೆ. ಯುವರಾಜ್ ಸಿಂಗ್ ಅವರ ಹಾದಿಯಲ್ಲಿಯೇ ಸಿಕ್ಸರ್ ಬಾರಿಸುತ್ತಾರೆ," ಎಂದು ತಿಳಿಸಿದ್ದಾರೆ.
ಯುವರಾಜ್ ಸಿಂಗ್ ಗರಡಿಯಲ್ಲಿ ಪಳಗುತ್ತಿರುವ ಅಭಿಷೇಕ್ ಶರ್ಮಾ ಇಲ್ಲಿಯವರೆಗೂ ಆಡಿದ 24 ಟಿ20ಐ ಪಂದ್ಯಗಳಿಂದ 36.91ರ ಸರಾಸರಿ ಹಾಗೂ 196.07ರ ಸ್ಟ್ರೈಕ್ ರೇಟ್‌ನಲ್ಲಿ 849 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಹಾಗೂ ಐದು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇದರಲ್ಲಿ 54 ಎಸೆತಗಳಲ್ಲಿ 135 ರನ್‌ಗಳು ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಈ ವರ್ಷ ವಾಂಖೆಡೆಯಲ್ಲಿ ಇಂಗ್ಲೆಂಡ್ ವಿರುದ್ಧ ಅವರಿಂದ ಈ ಇನಿಂಗ್ಸ್ ಮೂಡಿ ಬಂದಿತ್ತು.