BBK 12: ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಬೆಂಕಿ: ಧನುಷ್ ಟಾರ್ಗೆಟ್?
ಸ್ಪರ್ಧಿಗಳು ಪೈಪೋಟಿಗೆ ಬಿದ್ದಂತೆ ಸೇವ್ ಆಗಲು ಆಡುತ್ತಿದ್ದಾರೆ. ಸದ್ಯ ಮಲ್ಲಮ್ಮ, ಧನುಷ್ ಗೌಡ, ಕಾಕ್ರೋಚ್ ಸುಧಿ ಹಾಗೂ ಚಂದ್ರಪ್ರಭ-ಸತೀಶ್ ಫೀನಾಲೆ ಕಂಟೆಂಡರ್ ಆಗಿದ್ದಾರೆ. ಇದರ ಮಧ್ಯೆ ಮನೆಯಲ್ಲಿ ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿದೆ.

BBK 12 Nomination -

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಮೊದಲ ವಾರದಲ್ಲೇ ಕಾವೇರಿದೆ. ಬಿಗ್ ಬಾಸ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತ ಸ್ಪರ್ಧಿಗಳಿಗೆ ಪ್ರತಿದಿನ ನಡುಕ ಹುಟ್ಟಿಸುತ್ತಿದ್ದಾರೆ. ಈಗಾಗಲೇ ಮೂರನೇ ವಾರದಲ್ಲೇ ಮೊದಲ ಫಿನಾಲೆ ನಡೆಯಲಿದೆ ಎಂದು ಹೇಳಿದ್ದಾರೆ. ಹೀಗಾಗಿ ಸ್ಪರ್ಧಿಗಳು ಪೈಪೋಟಿಗೆ ಬಿದ್ದಂತೆ ಸೇವ್ ಆಗಲು ಆಡುತ್ತಿದ್ದಾರೆ. ಸದ್ಯ ಮಲ್ಲಮ್ಮ, ಧನುಷ್, ಕಾಕ್ರೋಚ್ ಸುಧಿ ಹಾಗೂ ಚಂದ್ರಪ್ರಭ-ಸತೀಶ್ ಫೀನಾಲೆ ಕಂಟೆಂಡರ್ ಆಗಿದ್ದಾರೆ. ಇದರ ಮಧ್ಯೆ ಮನೆಯಲ್ಲಿ ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿದೆ.
ನಾಮಿನೇಷನ್ನಲ್ಲಿ ಈ ವಾರದ ಟಾರ್ಗೆಟ್ ಧನುಷ್ ಎಂಬಂತೆ ಪ್ರೋಮೋದಲ್ಲಿ ತೋರಿಸಲಾಗಿದೆ. ನಾನು ಧನು ಅವರ ಹೆಸರು ತೆಗೆದುಕೊಳ್ಳುತ್ತೇನೆ ಎಂದು ಚಂದ್ರಪ್ರಭ ಹೇಳಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿರುವ ಅವರು, ಅವರಿಗೆ ಅವರೇ ಹೀರೋ ಅಂತ ಅಂದುಕೊಂಡುಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಇವರಿಬ್ಬರ ಮಧ್ಯೆ ನಾಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕ ಜಗಳ ನಡೆದಿದೆ. ಬೆರಳು ಎಲ್ಲ ತೋರಿಸಕೊಂಡು ಮಾತಾಡೋದು ಬೇಡ ಎಂದು ಚಂದ್ರಪ್ರಭ ಹೇಳಿದ್ದಾರೆ.
ಇನ್ನು ಜಾನ್ವಿ ಅವರು ಕಾಕ್ರೋಚ್ ಸುಧಿ ಅವರನ್ನು ನಾಮಿನೇಟ್ ಮಾಡಿದ್ದಾರೆ. ಅವರು ತಮ್ಮ ನಿರ್ಧಾರಕ್ಕೆ ಸ್ಟಿಕ್-ಆನ್ ಆಗಿರಲ್ಲ ಎಂಬ ಕಾರಣ ನೀಡಿದ್ದಾರೆ. ಎಲ್ಲರೂ ಸೇರಿ ತಪ್ಪು ಮಾಡಿ ಒಬ್ಬರನ್ನ ಹಳ್ಳಕ್ಕೆ ತಳ್ಳೋಕೆ ಅವರು ರೆಡಿ ಇದ್ದಾರೆ ಎಂದು ಧನುಷ್ ಹೇಳಿದ್ದಾರೆ. ಅತ್ತ ಮಲ್ಲಮ್ಮ ಗಿಲ್ಲಿ ಅವರನ್ನು ನಾಮನೇಟ್ ಮಾಡಿದ್ದಾರೆ. ಸದ್ಯ ಈ ವಾರ ಮನೆಯಿಂದ ಹೊರಹೋಗಲು ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎಂಬುದು ಇಂದು ರಾತ್ರಿ 9.30ಕ್ಕೆ ಪ್ರಸಾರ ಕಾಣಲಿರುವ ಎಪಿಸೋಡ್ನಲ್ಲಿ ಗೊತ್ತಾಗಲಿದೆ.
Kannada Serial TRP: ಅಮೃತಧಾರೆ ಟ್ವಿಸ್ಟ್ಗೆ ಮನಸೋತ ವೀಕ್ಷಕರು: ನಂ. 1 ಧಾರಾವಾಹಿ