ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಆರಂಭಿಕ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ (sanju Samson) ಶತಕ ಬಾರಿಸಿದರು. ಒಂದು ತುದಿಯಲ್ಲಿ ವಿಕೆಟ್‌ಗಳು ನಿರಂತರವಾಗಿ ಉರುಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಸಂಜು ಸ್ಯಾಮ್ಸನ್ ಕೊನೆಯವರೆಗೂ ಬ್ಯಾಟ್ ಮಾಡಿ ಅಜೇಯರಾಗಿ ಉಳಿದರು. ಅವರು 54 ಎಸೆತಗಳಲ್ಲಿ ಅಜೇಯ 101 ರನ್ ಗಳಿಸಿದರು. ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಶತಕ ಸಿಡಿಸಲು ಮೂರು ರನ್ ಅಗತ್ಯವಿದ್ದಾಗ ಅವರು ಕೃಷ್ಣ ಭಗತ್‌ಗೆ ಬೌಂಡರಿ ಬಾರಿಸಿದರು.
ಏಪ್ರಿಲ್ 23 ರಂದು ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಸಂಜು ಸ್ಯಾಮ್ಸನ್ ಅವರ ಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 207 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಐದು ಬಾರಿ ಚಾಂಪಿಯನ್ಸ್‌ಗೆ 208 ರನ್‌ಗಳ ಗುರಿಯನ್ನು ನೀಡುವಲ್ಲಿ ಯಶಸ್ವಿಯಾಯಿತು. ಋತುರಾಜ್ ಗಾಯಕ್ವಾಡ್ 22 ರನ್ ಹಾಗೂ ಡೆವಾಲ್ಡ್ ಬ್ರೆವಿಸ್ 21 ರನ್ ಗಳಿಸಿದ್ದು ಬಿಟ್ಟರೆ ಇನ್ನುಳಿದ ಬ್ಯಾಟರ್ಸ್ ವಿಫಲರಾದರು.
IPL 2026: ಆಯುಷ್ ಮ್ಹಾತ್ರೆ ಸ್ಥಾನಕ್ಕೆ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೇರಿದ ಆಕಾಶ ಮಧ್ವಾಲ್!
ರೋಹಿತ್ ಶರ್ಮಾ ದಾಖಲೆ ಸರಿಗಟ್ಟಿದ ಸಂಜು
2026ರ ಸಾಲಿನ ಐಪಿಎಲ್ ಟೂರ್ನಿಯಲ್ಲಿ ತಮ್ಮ ಎರಡನೇ ಶತಕದ ಮೂಲಕ ಸಂಜು ಸ್ಯಾಮ್ಸನ್, ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಸಂಜು ಸ್ಯಾಮ್ಸನ್ ಹಾಗೂ ರೋಹಿತ್ ಶರ್ಮಾ 7 ಶತಕಗಳ ಮೂಲಕ ಮೂರನೇ ಸ್ಥಾನವನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ. 9 ಶತಕಗಳ ಮೂಲಕ ಅಭಿಷೇಕ್ ಶರ್ಮಾ ಅಗ್ರ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 8 ಶತಕಗಳ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
2026ರಲ್ಲಿ ಸಂಜು ಪಾಲಿಗೆ ಎರಡನೇ ಶತಕ
ಸಂಜು ಸ್ಯಾಮ್ಸನ್ ಅವರ ಕಳೆದ ನಾಲ್ಕು ಪಂದ್ಯಗಳಲ್ಲಿ ಎರಡನೇ ಶತಕವಾಗಿದೆ. ಟಿ20 ವಿಶ್ವಕಪ್ ನಂತರ ಅವರು ಈ ಸೀಸನ್ ಅನ್ನು ನಿಧಾನವಾಗಿ ಆರಂಭಿಸಿದ್ದರೂ, 31ರ ವಯಸ್ಸಿನ ಈ ಆಟಗಾರ ಶೀಘ್ರದಲ್ಲೇ ಲಯಕ್ಕೆ ಬಂದರು. ಕೆಲವು ವಾರಗಳ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶತಕ ಬಾರಿಸಿದ ಅವರು, ಇದೀಗ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅದ್ಭುತ ಇನಿಂಗ್ಸ್ ಆಡಿದರು.
ʻನನ್ನನ್ನು ಕ್ಷಮಿಸಿ ಬಾಸ್ʼ: ರೋಹಿತ್ ಶರ್ಮಾ ಬಳಿ ಕ್ಷಮೆ ಕೇಳಿದ ಕೃಷ್ಣಮಾಚಾರಿ ಶ್ರೀಕಾಂತ್!
207 ರನ್ ಕಲೆ ಹಾಕಿದ ಸಿಎಸ್‌ಕೆ
ಇನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದರು. ಇವರ ಆರಂಭಿಕ ಜೊತೆಗಾರ ಋತುರಾಜ್ ಗಾಯಕ್ವಾಡ್ 14 ಎಸೆತಗಳಲ್ಲಿ 22 ರನ್ ಗಳಿಸಿದ ವಿಕೆಟ್ ಒಪ್ಪಿಸಿದರು. ಸರ್ಫರಾಝ್ ಖಾನ್ ಹಾಗೂ ಶಿವಂ ದುಬೇ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ, ಡೆವಾಲ್ಡ್ ಬ್ರೆವಿಸ್ 11 ಎಸೆತಗಳಲ್ಲಿ 21 ರನ್ ಗಳಿಸಿ ಭರವಸೆ ಮೂಡಿಸಿದ್ದರು. ಆದರೆ ಅವರನ್ನು ಅಶ್ವಿನಿ ಕುಮಾರ್ ಔಟ್ ಮಾಡುವಲ್ಲಿ ಸಫಲರಾದರು. ಕಾರ್ತಿಕ್ ಶರ್ಮಾ ಹಾಗೂ ಜೇಮಿ ಓವರ್ಟನ್ ಕ್ರಮವಾಗಿ 18 ರನ್ ಹಾಗೂ 15 ರನ್ ಗಳಿಸಿದರು. ಆದರೆ, ಸಂಜು 101 ರನ್ ಗಳಿಸಿದರು. ಇವರು ತಮ್ಮ ಇನಿಂಗ್ಸ್‌ನಲ್ಲಿ 6 ಸಿಕ್ಸರ್ ಹಾಗೂ 10 ಬೌಂಡರಿಗಳನ್ನು ಗಳಿಸಿದ್ದರು. ಸಿಎಸ್‌ಕೆ 207 ರನ್‌ಗಳನ್ನು ಕಲೆ ಹಾಕಿತು.