ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ಪ್ರದರ್ಶನ ತೋರಿದ ಹೊರತಾಗಿಯೂ ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಅವರು ಏಕದಿನ ವಿಶ್ವಕಪ್ ಆಡುವುದರ ಕುರಿತು ಆಯ್ಕೆ ಸಮಿತಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದರ ನಡುವೆ, ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ (Shahid Afridi) 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಆಡಬೇಕು. ಈ ಟೂರ್ನಿಯಲ್ಲಿ ಅವರು ಭಾರತ ತಂಡದ ಪರ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಹಾಗಾಗಿ ಅವರು ಪ್ರಮುಖ ಸರಣಿಗಳಲ್ಲಿ ಆಡಬೇಕು ಮತ್ತು ಕೆಳ ಶ್ರೇಯಾಂಕದಲ್ಲಿರುವ ತಂಡಗಳ ವಿರುದ್ಧ ವಿಶ್ರಾಂತಿ ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ, "ವಿರಾಟ್ ಮತ್ತು ರೋಹಿತ್ ಭಾರತದ ಬ್ಯಾಟಿಂಗ್ ವಿಭಾಗದ ಬೆನ್ನೆಲುಬು ಎಂಬು ಸತ್ಯ. ಇತ್ತೀಚಿನ ಏಕದಿನ ಸರಣಿಯಲ್ಲಿ ಅವರು ಆಡಿದ ರೀತಿ ನೋಡಿದರೆ, ಅವರು 2027ರ ವಿಶ್ವಕಪ್ ಟೂರ್ನಿಯವರೆಗೆ ಆಡಬಲ್ಲರು ಎಂಬ ವಿಶ್ವಾಸವಿದೆ. ನೀವು ಈ ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳಬೇಕು. ಭಾರತ ದುರ್ಬಲ ತಂಡದ ವಿರುದ್ಧ ಆಡುವಾಗ, ಅವರು ಕೆಲವು ಹೊಸ ಆಟಗಾರರನ್ನು ಪ್ರಯತ್ನಿಸಬಹುದು ಮತ್ತು ವಿರಾಟ್ ಮತ್ತು ರೋಹಿತ್‌ಗೆ ವಿಶ್ರಾಂತಿ ನೀಡಬಹುದು," ಎಂದು ಅಭಿಪ್ರಾಯಪಟ್ಟಿದ್ದಾರೆ.
IND vs SA 2nd T20I: ಭಾರತದ ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್, ಮುಖಾಮುಖಿ ದಾಖಲೆ ವಿವರ!
ಗೌತಮ್ ಗಂಭೀರ್‌ರನ್ನು ಟೀಕಿಸಿದ ಅಫ್ರಿದಿ
ಇನ್ನು ಟೀಮ್ ಇಂಡಿಯಾ ಪ್ರದರ್ಶನದ ಕುರಿತು ಮಾತನಾಡಿದ ಅಫ್ರಿದಿ, ಗೌತಮ್ ಗಂಭೀರ್ ಅವರನ್ನು ಟೀಕಿಸಿದ್ದಾರೆ. ಗಂಭೀರ್ ಟೀಮ್ ಇಂಡಿಯಾದೊಂದಿಗೆ ಮಿಶ್ರ ಫಲಿತಾಂಶಗಳನ್ನು ಅನುಭವಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯಾ ಕಪ್ ಗೆದ್ದ ನಂತರ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತಂಡವು ಯಶಸ್ಸನ್ನು ಕಂಡಿದ್ದರೂ, ಟೆಸ್ಟ್ ಕ್ರಿಕೆಟ್‌ನಲ್ಲಿ ವಿಫಲರಾಗುತ್ತಿದ್ದಾರೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗಳಲ್ಲಿ ಸೋಲನುಭವಿಸಿದ್ದಾರೆ ಎಂದು ಹೇಳಿದರು.
"ಗೌತಮ್ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ರೀತಿ, ಅವರು ಯೋಚಿಸುವುದು ಮತ್ತು ಹೇಳುವುದು ಸರಿ ಎಂದು ಭಾವಿಸಿದಂತೆ ಕಾಣುತ್ತಿತ್ತು, ಆದರೆ ಸ್ವಲ್ಪ ಸಮಯದ ನಂತರ, ನೀವು ಯಾವಾಗಲೂ ಸರಿಯಾಗಿಲ್ಲ ಎಂದು ಸಾಬೀತಾಯಿತು," ಎಂದಿದ್ದಾರೆ.
IND vs SA: ಸೂರ್ಯಕುಮಾರ್ ಯಾದವ್‌ರ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣ ತಿಳಿಸಿದ ರಾಬಿನ್ ಉತ್ತಪ್ಪ!
ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ತಮ್ಮ ದಾಖಲೆಯನ್ನು ಮುರಿದ ರೋಹಿತ್ ಶರ್ಮಾ ಅವರನ್ನು ಅಫ್ರಿದಿ ಶ್ಲಾಘಿಸಿದರು. 2008ರ ಐಪಿಎಲ್ ಟೂರ್ನಿಯಲ್ಲಿ ಡೆಕ್ಕನ್ ಚಾರ್ಜಸ್ ಪರ ಅಡಿದ್ದಾಗ ರೋಹಿತ್ ಅವರೊಂದಿಗೆ ನಾನು ಕೂಡ ಆಡಿದ್ದೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆ ಮಾಡುತ್ತಾರೆ ಎಂದು ನನಗೆ ಅಂದೇ ತಿಳಿದಿತ್ತು ಎಂದು ಅವರು ಹೇಳಿದರು.
ಈ ಕುರಿತು ಮಾತನಾಡಿರುವ ಶಾಹಿದ್ ಅಫ್ರಿದಿ, "ದಾಖಲೆಗಳನ್ನು ಮುರಿಯಲೇಬೇಕು ಮತ್ತು ಇದು ಕೂಡ ಈಗ ಉತ್ತಮಗೊಂಡಿದೆ. ನಾನು ಯಾವಾಗಲೂ ಇಷ್ಟಪಡುವ ಆಟಗಾರ ಈ ದಾಖಲೆಯನ್ನು ಮುರಿದಿದ್ದಕ್ಕೆ ನನಗೆ ಸಂತೋಷವಾಗಿದೆ. ಅಭ್ಯಾಸ ಅವಧಿಯಲ್ಲಿ, ನಾನು ಅವರ ಬ್ಯಾಟಿಂಗ್ ನೋಡಿದ್ದೆ. ಒಂದು ದಿನ ರೋಹಿತ್ ಭಾರತ ಪರ ಆಡುತ್ತಾರೆ ಮತ್ತು ಅವರು ತಮ್ಮನ್ನು ತಾವು ಕ್ಲಾಸಿಕ್ ಬ್ಯಾಟರ್ ಎಂದು ಸಾಬೀತುಪಡಿಸಿದ್ದಾರೆಂದು ನನಗೆ ಅಂದೇ ತಿಳಿದಿತ್ತು," ಎಂದು ಶಾಹಿದ್ ಅಫ್ರಿದಿ ತಿಳಿಸಿದ್ದಾರೆ.