ನವದೆಹಲಿ: ಗೌತಮ್ ಗಂಭೀರ್ (Gautam Gambhir) ಅವರ ಹೆಡ್ ಕೋಚ್ ಅಡಿಯಲ್ಲಿ ಭಾರತ ತಂಡದ ಪ್ರದರ್ಶನದ ಬಗ್ಗೆ ಆಸ್ಟ್ರೇಲಿಯಾ ಮಾಜಿ ನಾಯಕ ಶೇನ್ ವಾಟ್ಸನ್ (Shane Watson) ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಭಾರತ ತಂಡದಲ್ಲಿ ಪದೇ-ಪದೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಹಾಗೂ ಸಂಯೋಜನೆಯಲ್ಲಿನ ಬದಲಾವಣೆಯಿಂದಲೇ ಸ್ಥಿರ ಪ್ರದರ್ಶನವನ್ನು ತೋರಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತ ತಂಡ, ಐರ್ಲೆಂಡ್ ವಿರುದ್ಧ ಒಂದೂ ಪಂದ್ಯವನ್ನು ಗೆಲ್ಲದೆ ಟಿ20ಐ ಸರಣಿಯಲ್ಲಿ ಕ್ಲೀನ್ ಸ್ವೀಪ್ ಆಘಾತವನ್ನು ಅನುಭವಿಸಿತ್ತು. ನಂತರ ಇಂಗ್ಲೆಂಡ್ ವಿರುದ್ಧವೂ ಕೂಡ ಟೀಮ್ ಇಂಡಿಯಾ ವೈಟ್‌ವಾಷ್ ಆಘಾತವನ್ನು ಅನುಭವಿಸಿತ್ತು. ಇದರಿಂದಾಗಿ ಭಾರತ ತಂಡ ಹಾಗೂ ಕೋಚಿಂಗ್ ವಿಭಾಗವನ್ನು ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು.
4 ವರ್ಷಗಳ ಬಳಿಕ ಭಾರತ ತಂಡದಲ್ಲಿ ಭುವನೇಶ್ವರ್ ಕುಮಾರ್‌ಗೆ ಚಾನ್ಸ್ ನೀಡಿದ್ದೇಕೆಂದು ತಿಳಿಸಿದ ಸಿತಾಂಶು ಕೊಟಕ್!
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಶೇನ್ ವಾಟ್ಸನ್, "ಹೆಡ್ ಕೋಚ್ ಗೌತಮ್ ಗಂಭೀರ್ ಅವರು ತಂಡದ ಬ್ಯಾಟಿಂಗ್ ಕ್ರಮಾಂಕವನ್ನು ಪದೇ ಪದೆ ಬದಲಾಯಿಸುತ್ತಾರೆ ಹಾಗೂ ತಂಡದ ಸಂಯೋಜನೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತಾ ಇರುತ್ತಾರೆ, ಈ ಕಾರಣದಿಂದಲೇ ಭಾರತ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನವನ್ನು ತೋರುಲು ಸಾಧ್ಯವಾಗುತ್ತಿಲ್ಲ. ಆಟಗಾರರು ನಿರಂತರವಾಗಿ ತಂಡಕ್ಕೆ ಸೇರುತ್ತಿರುವುದು ಮತ್ತು ಹೊರಹೋಗುತ್ತಿರುವುದು ತಂಡದ ಸ್ಥಿರತೆಯ ಮೇಲೆ ಪರಿಣಾಮ ಬೀರುತ್ತದೆ. ಬ್ಯಾಟಿಂಗ್ ಕ್ರಮದಲ್ಲಿ ಬದಲಾವಣೆಗಳಾಗಲಿ ಅಥವಾ ಆಟಗಾರರ ಆಯ್ಕೆ ನಿರಂತರವಾಗಿ ಬದಲಾಗುವುದಾಗಲಿ, ಇವೆಲ್ಲವೂ ತಂಡ ಸ್ಥಿರ ಪ್ರದರ್ಶನ ನೀಡುವುದನ್ನು ಕಷ್ಟಕರವಾಗಿಸುತ್ತವೆ. ಇದೇ ಕಾರಣಕ್ಕೆ ಭಾರತ ತಂಡ ಇತ್ತೀಚೆಗೆ ಸ್ಥಿರ ಪ್ರದರ್ಶನ ನೀಡಲು ವಿಫಲವಾಗುತ್ತಿದೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾಟ್ಸನ್ ಹೇಳಿದ್ದಾರೆ. ಅವರು ಪ್ರೈಮ್ ವಿಡಿಯೊದ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2024ರ ಮಧ್ಯಭಾಗದಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಗೌತಮ್ ಗಂಭೀರ್ ಹಲವು ಮಹತ್ವದ ಸಾಧನೆಗಳನ್ನು ಮಾಡಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವಾಟ್ಸನ್ ಹೇಳಿದ್ದಾರೆ. ಆಟಗಾರರ ಆಯ್ಕೆ ವಿಚಾರದಲ್ಲಿ ಟೀಕೆಗಳು ವ್ಯಕ್ತವಾಗಿದ್ದರೂ, ಗಂಭೀರ್ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಪ್ರಮುಖ ಟ್ರೋಫಿಗಳನ್ನು ಗೆದ್ದಿರುವುದನ್ನು ವಾಟ್ಸನ್ ಗುರುತಿಸಿದ್ದಾರೆ.
ಭುವನೇಶ್ವರ್ ಕುಮಾರ್ ರೀತಿ ಭಾರತ ತಂಡಕ್ಕೆ ಮರಳಬಲ್ಲ 3 ಭಾರತೀಯ ಆಟಗಾರರು!
2025ರ ಚಾಂಪಿಯನ್ಸ್ ಟ್ರೋಫಿ, 2025ರ ಏಷ್ಯಾ ಕಪ್ ಹಾಗೂ 2026ರ ಟಿ20 ವಿಶ್ವಕಪ್ ಗೆಲುವುಗಳು ಗಂಭೀರ್ ಅವರ ಕೋಚಿಂಗ್ ಅವಧಿಯ ಪ್ರಮುಖ ಸಾಧನೆಗಳಾಗಿವೆ ಎಂದು ಅವರು ಹೇಳಿದ್ದಾರೆ.
“ಗೌತಮ್ ಗಂಭೀರ್ ಭಾರತ ತಂಡಕ್ಕೆ ಹಲವು ಅದ್ಭುತ ಸಂಗತಿಗಳನ್ನು ನೀಡಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಸಂಜು ಸ್ಯಾಮ್ಸನ್ ಅವರಂತಹ ಆಟಗಾರರಿಗೆ ಗಂಭೀರ್ ನೀಡಿದ ಬೆಂಬಲದಿಂದ ಉತ್ತಮ ಫಲಿತಾಂಶ ದೊರೆತಿದೆ. ಸ್ಯಾಮ್ಸನ್‌ಗೆ ಗಂಭೀರ್ ಸಾಕಷ್ಟು ನೆರವಾಗಿದ್ದಾರೆ. ಟಿ20 ವಿಶ್ವಕಪ್‌ನ ಕೊನೆಯ ಹಂತದಲ್ಲಿ ಸ್ಯಾಮ್ಸನ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಅದಕ್ಕೆ ಪ್ರತಿಫಲ ನೀಡಿದ್ದಾರೆ. ಹೀಗಾಗಿ ಗಂಭೀರ್ ಭಾರತ ತಂಡಕ್ಕೆ ಸಾಕಷ್ಟು ಒಳ್ಳೆಯ ಕೊಡುಗೆಗಳನ್ನು ನೀಡಿದ್ದಾರೆ,” ಎಂದು ವಾಟ್ಸನ್ ಪ್ರೈಮ್ ವಿಡಿಯೊದ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಗಂಭೀರ್ ಅವರ ತಂಡದ ಆಯ್ಕೆ ಹಾಗೂ ಆಟಗಾರರ ಬದಲಾವಣೆಗಳ ಕುರಿತು ಚರ್ಚೆಗಳು ನಡೆಯುತ್ತಿದ್ದರೂ, ಪ್ರಮುಖ ಟೂರ್ನಿಗಳಲ್ಲಿ ಭಾರತ ಸಾಧಿಸಿರುವ ಯಶಸ್ಸನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂಬುದು ವಾಟ್ಸನ್ ಅವರ ಮಾತಿನ ಸಾರವಾಗಿದೆ.