ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕ್ರಿಕೆಟಿಗ ಶಿಖರ್‌ ಧವನ್‌ ನಿಶ್ಚಿತಾರ್ಥ ಮಾಡಿಕೊಂಡ ಸೋಫಿಯಾ ಶೈನ್‌ ಯಾರು?

Who is Sophie Shine? ಕ್ರಿಕೆಟ್‌ ವೃತ್ತಿ ಜೀವನವನ್ನು ಮುಗಿಸಿರುವ ಭಾರತ ತಂಡದ ಮಾಜಿ ಆರಂಭಿಕ ಶಿಖರ್‌ ಧವನ್‌, ಇದೀಗ ತಮ್ಮ ವೈಯಕ್ತಿಕ ಜೀವನದ ಎರಡನೇ ಇನಿಂಗ್ಸ್‌ ಆರಂಭಿಸಲು ಎದುರು ನೋಡುತ್ತಿದ್ದಾರೆ. ಅದರಂತೆ ವಿದೇಶಿ ಬೆಡಗಿ ಸೋಫಿಯಾ ಶೈನ್‌ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರೇ ಸ್ವತಃ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಖಚಿತಪಡಿಸಿದ್ದಾರೆ.

ಶಿಖರ್‌ ಧವನ್‌-ಸೋಫಿಯಾ ಶೈನ್‌ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನವದೆಹಲಿ: ಭಾರತೀಯ ಕ್ರಿಕೆಟಿಗ ಶಿಖರ್‌ ಧವನ್‌ (Shikhar Dhawan) ಅವರು ತಮ್ಮ ಗೆಳತಿ ಸೋಫಿಯಾ ಶೈನ್‌ (Sophie Shine) ಅವರ ಜೊತೆಗೆ ಜನವರಿ 12 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ಧವನ್‌ ಹಾಗೂ ಸೋಫಿಯಾ ಡೇಟ್‌ ಮಾಡುತ್ತಿದ್ದರು ಹಾಗೂ 2025ರ ಮೇ 1 ರಂದು ಈ ವಿಷಯ ಅಧಿಕೃತವಾಗಿ ಬಹಿರಂಗವಾಗಿತ್ತು. ಇದೀಗ ಈ ಜೋಟಿ ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಮೂಲಕ ನಾವಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆಂದು ಮಾಜಿ ಟೀಮ್‌ ಇಂಡಿಯಾ ಓಪನರ್‌ ತಿಳಿಸಿದ್ದಾರೆ. ಧವನ್‌ ಹಾಗೂ ಸೋಫಿಯಾ ನಿಶ್ಚಿತಾರ್ಥಕ್ಕೆ ಕ್ರಿಕೆಟಿಗರು, ಬಾಲಿವುಡ್‌ ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ಸೋಫಿ ದಂಪತಿಗಳು ಒಟ್ಟಿಗೆ ಇರುವ ಚಿತ್ರವನ್ನು ಅಪ್‌ಲೋಡ್ ಮಾಡಿದ್ದಾರೆ, ಈ ಫೋಟೋ ಆನ್‌ಲೈನ್‌ನಲ್ಲಿ ಬೇಗನೆ ಎಲ್ಲರ ಗಮನವನ್ನು ಸೆಳೆದಿದೆ ಮತ್ತು ವೈರಲ್ ಆಗಿದೆ. ಸೋಫಿ ಫೋಟೋಗೆ "ನನ್ನ ಪ್ರೀತಿ" ಎಂಬ ಶೀರ್ಷಿಕೆಯೊಂದಿಗೆ ಹೃದಯದ ಎಮೋಜಿಯನ್ನು ಬರೆದರು, ಅದು ಆ ಸಮಯದಲ್ಲಿ ಅವರ ಸಂಬಂಧದ ಮೊದಲ ಸಾರ್ವಜನಿಕ ಒಪ್ಪಿಗೆಯಾಗಿತ್ತು. ಈ ಪೋಸ್ಟ್ ಧವನ್ ಅವರ ವೈಯಕ್ತಿಕ ಜೀವನದ ಸುತ್ತಲಿನ ತಿಂಗಳುಗಳ ಊಹಾಪೋಹಗಳಿಗೆ ಅಂತ್ಯ ಹಾಡಿತು.

Betting case: ಜಾರಿ ನಿರ್ದೇಶನಾಲಯದಿಂದ ಆಸ್ತಿ ಮುಟ್ಟುಗೋಲು, ಸುರೇಶ್‌ ರೈನಾ, ಶಿಖರ್‌ ಧವನ್‌ಗೆ ದೊಡ್ಡ ಸಂಕಷ್ಟ!

2025ರ ವರ್ಷದ ಆರಂಭದಲ್ಲಿ ದುಬೈನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಪಂದ್ಯದ ಸಮಯದಲ್ಲಿ ಧವನ್ ಮತ್ತು ಸೋಫಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಜೋಡಿ ಮಾಧ್ಯಮ ಸಮಾವೇಶದಲ್ಲಿಯೂ ಉಪಸ್ಥಿತರಿದ್ದರು, ಅಲ್ಲಿ ಭಾರತದ ಮಾಜಿ ಆರಂಭಿಕ ಆಟಗಾರ ಧವನ್ ಮತ್ತೊಮ್ಮೆ ಪ್ರೀತಿಯನ್ನು ಕಂಡುಕೊಂಡಿದ್ದಾರೆ ಎಂದು ಸುಳಿವು ನೀಡಿದ್ದರು.

ಶಿಖರ್ ಧವನ್‌ ಐಪಿಎಲ್‌ ಟೂರ್ನಿಯಲ್ಲಿ ಆಡುತ್ತಿದ್ದಾಗ ಸೋಫಿಯಾ ಶೈನ್‌ ಪಂಜಾಬ್ ಕಿಂಗ್ಸ್‌ ತಂಡದ ಜೊತೆ ಇದ್ದರು ಹಾಗೂ ನಿರಂತರ ಬೆಂಬಲಿಗರಾಗಿದ್ದರು. ಇದೀಗ ಶಿಖರ್‌ ಧವನ್‌ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ನಿಶ್ಚಿತಾರ್ಥದ ಫೋಟೋವನ್ನು ಹಂಚಿಕೊಂಡು ಭಾವನಾತ್ಮಕ ಶೀರ್ಷಿಕೆಯನ್ನು ಬರೆದಿದ್ದಾರೆ.



"ಹಂಚಿಕೊಂಡ ಮುಗುಳ್ನಗೆಗಳಿಂದ ಹಂಚಿಕೊಂಡ ಕನಸುಗಳವರೆಗೆ. ನಾವು ಶಾಶ್ವತವಾಗಿ ಒಗ್ಗಟ್ಟನ್ನು ಆರಿಸಿಕೊಳ್ಳುತ್ತಿರುವಾಗ ನಮ್ಮ ನಿಶ್ಚಿತಾರ್ಥಕ್ಕಾಗಿ ಪ್ರೀತಿ, ಆಶೀರ್ವಾದ ಮತ್ತು ಪ್ರತಿಯೊಂದು ಶುಭ ಹಾರೈಕೆಗೆ ಕೃತಜ್ಞರಾಗಿರುತ್ತೇವೆ," ಎಂದು ಶಿಖರ್ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡ ಫೋಟೋ ಈ ರೀತಿಯ ಶೀರ್ಷಿಕೆ ನೀಡಿದ್ದಾರೆ.

ಸೋಫಿಯಾ ಶೈನ್‌ ಯಾರು?

ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಸೋಫಿ ಐರಿಶ್ ಉತ್ಪನ್ನ ಸಲಹೆಗಾರರಾಗಿದ್ದು, ಪ್ರಸ್ತುತ ಯುಎಸ್ ಮೂಲದ ಹಣಕಾಸು ಸೇವಾ ಸಂಸ್ಥೆಯಾದ ನಾರ್ಥರ್ನ್‌ ಟ್ರಸ್ಟ್ ಕಾರ್ಪೊರೇಷನ್‌ನಲ್ಲಿ ಎರಡನೇ ಉಪಾಧ್ಯಕ್ಷೆ - ಉತ್ಪನ್ನ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಮತ್ತು ಶಿಖರ್ ಧವನ್ ಯುಎಇಯಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು ಎಂದು ವರದಿಗಳು ಸೂಚಿಸುತ್ತವೆ. ಸೋಫಿಯಾ ಪ್ರಸ್ತುತ ಯುಎಇಯಲ್ಲಿ ನೆಲೆಸಿದ್ದಾರೆ.

VHT 2025-26: ಇತಿಹಾಸ ಬರೆದ ದೇವದತ್‌ ಪಡಿಕ್ಕಲ್‌; ಮುಂಬೈ ವಿರುದ್ಧ ಗೆದ್ದು ಸೆಮಿಫೈನಲ್‌ಗೇರಿದ ಕರ್ನಾಟಕ!

ಸೋಫಿಯಾ ಶೈನ್‌ ಅವರು ಲಿಮೆರಿಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮಾರ್ಕೆಟಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ ಮತ್ತು ಐರ್ಲೆಂಡ್‌ನ ಕ್ಯಾಸಲ್‌ರಾಯ್ ಕಾಲೇಜಿನಲ್ಲಿ ತನ್ನ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಶಿಖರ್ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಪೋಸ್ಟ್ ಮಾಡುವ ಹಾಸ್ಯಮಯ ವೀಡಿಯೊಗಳಲ್ಲಿ ಅವರು ನಿರಂತರವಾಗಿ ಭಾಗವಹಿಸುತ್ತಾರೆ.

ಹಿಂದೂಸ್ಥಾನ್‌ ಟೈಮ್ಸ್‌ ವರದಿಯ ಪ್ರಕಾರ ಶಿಖರ್‌ ಧವನ್‌ ಹಾಗೂ ಸೋಫಿಯಾ ಶೈನ್‌ ಅವರು ಫೆಬ್ರವರಿ ತಿಂಗಳಲ್ಲಿ ಮದವೆಯಾಗಲಿದ್ದಾರೆಂದು ಹೇಳಲಾಗುತ್ತಿದೆ.