ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತ ಟಿ20ಐ ತಂಡದ ನಾಯಕತ್ವದ ರೇಸ್‌ನಲ್ಲಿ ಮೂವರು ಆಟಗಾರರು, ಜೂ 4ಕ್ಕೆ ಬಿಸಿಸಿಐ ಮೀಟಿಂಗ್‌!

ಮುಂಬರುವ ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಯ ಭಾರತ ತಂಡಕ್ಕೆ ನೂತನ ನಾಯಕನನ್ನು ನೇಮಿಸಲು ಬಿಸಿಸಿಐ ಪ್ರಯತ್ನ ನಡೆಸುತ್ತಿದೆ. ಜೂನ್‌ 4 ರಂದು ಬಿಸಿಸಿಐ ಮೀಟಿಂಗ್‌ ಹಮ್ಮಿಕೊಂಡಿದ್ದು, ಅಲ್ಲಿ ನೂತನ ನಾಯಕನನ್ನು ನೇಮಿಸುವ ಸಾಧ್ಯತೆ ಇದೆ. ನಾಯಕತ್ವದ ರೇಸ್‌ನಲ್ಲಿ ಶ್ರೇಯಸ್‌ ಅಯ್ಯರ್‌, ತಿಲಕ್‌ ವರ್ಮಾ ಹಾಗೂ ಇಶಾನ್‌ ಕಿಶನ್‌ ಇದ್ದಾರೆಂದು ವರದಿಯಾಗಿದೆ.

ಭಾರತ ಟಿ20 ತಂಡದ ರೇಸ್‌ನಲ್ಲಿ ಶ್ರೇಯಸ್‌ ಅಯ್ಯರ್‌.

ನವದೆಹಲಿ: ಟಿ20 ವಿಶ್ವಕಪ್‌ ಗೆದ್ದುಕೊಟ್ಟ ಹೊರತಾಗಿಯೂ ಸೂರ್ಯಕುಮಾರ್‌ ಯಾದವ್‌ (Suryakumar Yadav) ಅವರು ಭಾರತ ಟಿ20 ತಂಡದ(India) ನಾಯಕತ್ವ ಕಳೆದುಕೊಳ್ಳುವ ಸನಿಹದಲ್ಲಿದ್ದಾರೆ. ಮುಂಬರುವ ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಯ ನಿಮಿತ್ತ ಭಾರತ ಟಿ20 ತಂಡಕ್ಕೆ ನೂತನ ನಾಯಕನನ್ನು ನೇಮಿಸಲು ಬಿಸಿಸಿಐ ಎದುರು ನೋಡುತ್ತಿದೆ. ಜೂನ್‌ 4 ರಂದು ಬಿಸಿಸಿಐ ಮೀಟಿಂಗ್‌ ಇಟ್ಟುಕೊಂಡಿದ್ದು, ಇಲ್ಲಿ ನಾಯಕನನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಐರ್ಲೆಂಡ್‌ ವಿರುದ್ಧ ಜೂನ್‌ 26 ರಿಂದ 28ರವರೆಗೆ ಎರಡು ಪಂದ್ಯಗಳ ಟಿ20ಐ ಸರಣಿ ಹಾಗೂ ಜುಲೈ 1 ರಿಂದ 11 ರವರೆಗೆ ಇಂಗ್ಲೆಂಡ್‌ ವಿರುದ್ಧ ಟಿ20ಐ ಸರಣಿಯಲ್ಲಿ ಆಡಲಿದೆ.

ಬಿಸಿಸಿಐ ಅಪೆಕ್ಸ್‌ ಕಮಿಟಿಯು ಜೂನ್‌ 4ರಂದು ಸಭೆಯನ್ನು ನಡೆಸಲಿದ್ದು, ಈ ವೇಳೆ ಭಾರತ ಟಿ20ಐ ತಂಡದ ನಾಯಕತ್ವದ ಬಗ್ಗೆ ಚರ್ಚೆಯನ್ನು ನಡೆಸಬಹುದು. ಟಿ20ಐ ತಂಡದ ನಾಯಕತ್ವದ ರೇಸ್‌ನಲ್ಲಿ ಶ್ರೇಯಸ್‌ ಅಯ್ಯರ್‌, ತಿಲಕ್‌ ವರ್ಮಾ ಹಾಗೂ ಇಶಾನ್‌ ಕಿಶನ್‌ ಇದ್ದಾರೆಂದು ಮೂಲಗಳು ಹೇಳಿರುವುದನ್ನು ಟೈಮ್ಸ್‌ ನೌ ವರದಿ ಮಾಡಿದೆ.

2027ರ ಐಪಿಎಲ್‌ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ಗೆ ಇಶಾನ್‌ ಕಿಶನ್‌ ನಾಯಕ!

ಸೂರ್ಯಕುಮಾರ್ ಯಾದವ್ ಯುಗ ಅಂತ್ಯವಾಗುತ್ತಿದೆಯೇ?

ಭಾರತದ ಟಿ20 ತಂಡದ ನಾಯಕನಾಗಿ ಯಶಸ್ವಿ ಅವಧಿಯನ್ನು ಹೊಂದಿದ್ದರೂ, ಸೂರ್ಯಕುಮಾರ್‌ ಯಾದವ್‌ ತಮ್ಮ ನಾಯಕತ್ವ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ಎದುರಿಸುತ್ತಿದ್ದಾರೆ ಎಂಬ ವರದಿಗಳು ಕೇಳಿಬರುತ್ತಿವೆ. 35ನೇ ವಯಸ್ಸಿನ ಸೂರ್ಯಕುಮಾರ್ ಯಾದವ್ 2024ರ ಟಿ20 ವಿಶ್ವಕಪ್ ಗೆಲುವಿನ ಬಳಿಕ ರೋಹಿತ್‌ ಶರ್ಮಾ ನಿವೃತ್ತಿ ಘೋಷಿಸಿದ ನಂತರ ಭಾರತದ ಟಿ20 ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು.

ಅವರ ನಾಯಕತ್ವದಲ್ಲಿ ಭಾರತ ತಂಡ ಉತ್ತಮ ದಾಖಲೆಯನ್ನು ಹೊಂದಿದೆ. ಭಾರತ ಆಡಿದ ಪ್ರತಿಯೊಂದು ದ್ವಿಪಕ್ಷೀಯ ಸರಣಿ ಮತ್ತು ಟೂರ್ನಿಯಲ್ಲಿ ಜಯ ಸಾಧಿಸಿದ್ದು, ಇದರಲ್ಲಿ 2025ರ ಏಷ್ಯಾ ಕಪ್‌ ಹಾಗೂ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲುವುಗಳು ಸೇರಿವೆ.

ಭುವನೇಶ್ವರ್‌ಗೆ ಎರಡನೇ ಸ್ಥಾನ: 2026ರ ಐಪಿಎಲ್‌ ಟೂರ್ನಿಯಲ್ಲಿ ಟಾಪ್‌ 5 ವಿಕೆಟ್‌ ಟೇಕರ್ಸ್!

ಸೂರ್ಯಕುಮಾರ್ ಇದುವರೆಗೆ 52 ಟಿ20ಐ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದು, ಅದರಲ್ಲಿ 42 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. 84ರಷ್ಟು ಶೇಕಡಾ ಗೆಲುವಿನ ಪ್ರಮಾಣದೊಂದಿಗೆ ಅವರು ಭಾರತದ ಅತ್ಯಂತ ಯಶಸ್ವಿ ಟಿ20 ನಾಯಕರಲ್ಲಿ ಒಬ್ಬರಾಗಿದ್ದಾರೆ. ಆದಾಗ್ಯೂ, ನಾಯಕತ್ವ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆ, ಸೂರ್ಯಕುಮಾರ್ ಅವರ ಭವಿಷ್ಯದ ಬಗ್ಗೆ ಅನಿಶ್ಚಿತತೆ ಮೂಡಿದ್ದು, ಮುಂದಿನ ದಿನಗಳಲ್ಲಿ ಬಿಸಿಸಿಐ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರತ್ತ ಎಲ್ಲರ ಗಮನ ನೆಟ್ಟಿದೆ.

ಸೂರ್ಯಕುಮಾರ್‌ ಯಾದವ್‌ ಅವರಿಗೆ 2026ರ ಐಪಿಎಲ್‌ ಸೀಸನ್ ನಿರೀಕ್ಷಿತ ಮಟ್ಟದಲ್ಲಿ ಸಾಗಲಿಲ್ಲ. ಹಲವು ವರ್ಷಗಳಿಂದ ಮುಂಬೈ ಇಂಡಿಯನ್ಸ್‌ ತಂಡದ ಪರ ರನ್‌ಗಳ ಸುರಿಮಳೆಗೈಯುತ್ತಿದ್ದ ಸೂರ್ಯಕುಮಾರ್, ಈ ಬಾರಿ 13 ಇನಿಂಗ್ಸ್‌ಗಳಲ್ಲಿ ಕೇವಲ 270 ರನ್‌ಗಳನ್ನು ಮಾತ್ರ ಗಳಿಸಿದರು. ಇದರ ನಡುವೆಯೇ, ಭಾರತದ ಮುಂದಿನ ಟಿ20 ನಾಯಕನಿಗೆ 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ ತಂಡವನ್ನು ಮುನ್ನಡೆಸುವ ಜವಾಬ್ದಾರಿಯೂ ಸಿಗುವ ಸಾಧ್ಯತೆ ಇದೆ.

ವೈಭವ್‌ ಸೂರ್ಯವಂಶಿಗೆ ಅಗ್ರ ಸ್ಥಾನ: 2026ರ ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಟಾಪ್ 5‌ ಬ್ಯಾಟರ್ಸ್‌!

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ಗೆಲುವಿನ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸೂರ್ಯಕುಮಾರ್, ಒಲಿಂಪಿಕ್ಸ್ ಚಿನ್ನದ ಪದಕ ಗೆಲ್ಲುವುದು ತಮ್ಮ ಮುಂದಿನ ದೊಡ್ಡ ಗುರಿಯಾಗಿದೆ ಎಂದು ಹೇಳಿದ್ದರು.

ಟಿ20 ವಿಶ್ವಕಪ್‌ ಗೆಲುವಿನ ಬಳಿಕ ಹೊಸ ಗುರಿಗಳತ್ತ ಗಮನ ಹರಿಸಿರುವ ಸೂರ್ಯಕುಮಾರ್, ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಡುವ ಕನಸನ್ನು ವ್ಯಕ್ತಪಡಿಸಿದ್ದರು. ಆದರೆ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳ ನಡುವೆ, ಆ ಕನಸನ್ನು ಅವರು ನಾಯಕನಾಗಿ ಸಾಕಾರಗೊಳಿಸುತ್ತಾರೆಯೇ ಎಂಬ ಪ್ರಶ್ನೆ ಇದೀಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.