ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಂಜು ಸ್ಯಾಮ್ಸನ್-ಅಭಿಷೇಕ್ ಶರ್ಮಾ ಜೋಡಿಯ ಆಟದ ಬಗ್ಗೆ ಶ್ರೇಯಸ್‌ ಅಯ್ಯರ್‌ ಮೆಚ್ಚುಗೆ!

ನ್ಯೂಜಿಲೆಂಡ್‌ ವಿರುದ್ಧ ಮೊದಲನೇ ಟಿ20ಐ ಪಂದ್ಯದಲ್ಲಿ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿ ಭರ್ಜರಿ ಅಡಿಪಾಯ ಹಾಕಿದ ಸಂಜು ಸ್ಯಾಮ್ಸನ್‌ ಹಾಗೂ ಅಭಿಷೇಕ್‌ ಶರ್ಮಾ ಅವರನ್ನು ನಾಯಕ ಶ್ರೇಯಸ್‌ ಅಯ್ಯರ್‌ ಶ್ಲಾಘಿಸಿದ್ದಾರೆ. ಸಂಜು ಹಾಗೂ ಅಭಿ ಅವರ ಜವಾಬ್ದಾರಿಯ ಬಗ್ಗೆ ನಾವು ಏನನ್ನೂ ಹೇಳುವ ಅಗತ್ಯವಿಲ್ಲ ಎಂದಿದ್ದಾರೆ.

ಸಂಜು-ಅಭಿ ಆಟಕ್ಕೆ ಶ್ರೇಯಸ್‌ ಅಯ್ಯರ್‌ ಮೆಚ್ಚುಗೆ.

ಕ್ರೈಸ್ಟ್‌ಚರ್ಚ್‌: ನ್ಯೂಜಿಲೆಂಡ್‌ ವಿರುದ್ಧದ ಮೊದಲನೇ ಟಿ20ಐ ಪಂದ್ಯದಲ್ಲಿ (IND vs NZ) ಭಾರತ ತಂಡದ ಪರ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಆರಂಭಿಕರಾದ ಸಂಜು ಸ್ಯಾಮ್ಸನ್‌ (Sanju Samson) ಮತ್ತು ಅಭಿಷೇಕ್‌ ಶರ್ಮಾ (Abhishek Sharma) ಅವರನ್ನು ನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer) ಶ್ಲಾಘಿಸಿದ್ದಾರೆ. ಈ ಇಬ್ಬರಿಗೆ ಅವರ ಜವಾಬ್ದಾರಿಯ ಬಗ್ಗೆ ಹೇಳುವ ಅಗತ್ಯವಿಲ್ಲ ಹಾಗೂ ಅವರು ಒಮ್ಮೆ ಲಯವನ್ನು ಕಂಡುಕೊಂಡರೆ, ಪಂದ್ಯದಲ್ಲಿ ತಂಡಕ್ಕೆ ಅಗತ್ಯವಿರುವುದನ್ನು ಮಾಡುತ್ತಾರೆ. ಇದರ ಬಗ್ಗೆ ನನಗೆ ಸಂತೋಷವಿದೆ ಎಂದು ಟೀಮ್‌ ಇಂಡಿಯಾ ಕಪ್ತಾನ ತಿಳಿಸಿದ್ದಾರೆ.

ಇಲ್ಲಿನ ಹ್ಯಾಗ್ಲಿ ಓವಲ್‌ ಕ್ರೀಡಾಂಗನದಲ್ಲಿ 226 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಸಂಜು ಹಾಗೂ ಅಭಿ ಮುರಿಯದ ಮೊದಲನೇ ವಿಕೆಟ್‌ಗೆ ಕೇವಲ 6 ಓವರ್ಗಳಲ್ಲಿಯೇ 93 ರನ್ ಸೇರಿಸಿದರು. ಆ ಮೂಲಕ ಪ್ರವಾಸಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು. ಸಂಜು ಸ್ಯಾಮ್ಸನ್ 33 ಎಸೆತಗಳಲ್ಲಿ 67 ರನ್ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ ಎಂಟು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳಿದ್ದವು. ಮತ್ತೊಂದೆಡೆ, ಅಭಿಷೇಕ್ ಶರ್ಮಾ ಕೇವಲ 12 ಎಸೆತಗಳಲ್ಲಿ 29 ರನ್ ಸಿಡಿಸಿದರು. ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಮೂಲಕ ಅವರು ನ್ಯೂಜಿಲೆಂಡ್ ಬೌಲರ್‌ಗಳ ಮೇಲೆ ಒತ್ತಡ ಹೇರಿದರು.

IND vs NZ: ಸಂಜು-ನಮನ್‌ ಸ್ಪೋಟಕ ಬ್ಯಾಟಿಂಗ್‌, ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ ರೋಚಕ ಜಯ!

ಈ ಆರಂಭಿಕ ಜೊತೆಯಾಟ ಭಾರತದ ಚೇಸ್‌ಗೆ ಭದ್ರ ಬುನಾದಿ ಹಾಕಿತು. ಆರಂಭಿಕರು ನೀಡಿದ ವೇಗದಿಂದಾಗಿ ನಂತರದ ಬ್ಯಾಟರ್‌ಗಳಿಗೆ ಅಗತ್ಯವಾದ ರನ್‌ರೇಟ್‌ನ್ನು ಕಾಯ್ದುಕೊಳ್ಳಲು ಸಾಧ್ಯವಾಯಿತು. ಆರಂಭಿಕರ ಆಟದ ಬಗ್ಗೆ ಮಾತನಾಡಿದ ಅಯ್ಯರ್, ಸ್ಯಾಮ್ಸನ್ ಮತ್ತು ಅಭಿಷೇಕ್ ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ ಎಂದು ಹೇಳಿದ್ದಾರೆ.

“ಅವರು ಏನು ಮಾಡಬೇಕು ಎಂಬುದನ್ನು ನಿಖರವಾಗಿ ತಿಳಿದಿದ್ದಾರೆ. ಅವರ ಆಟದ ಬಗ್ಗೆ ಪ್ರತ್ಯೇಕವಾಗಿ ಹೇಳಿಕೊಡುವ ಅಗತ್ಯವಿಲ್ಲ. ಅವರು ಒಮ್ಮೆ ಲಯ ಕಂಡುಕೊಂಡರೆ, ಆ ವೇಗವನ್ನು ಮುಂದುವರಿಸುತ್ತಾರೆ. ಇಂದು ಅವರ ಆಟ ಅದಕ್ಕೆ ಉತ್ತಮ ಉದಾಹರಣೆಯಾಗಿದೆ. ಅವರು ಉತ್ತಮವಾಗಿ ಆಡಿದಾಗ ತಂಡಕ್ಕೆ ಗೆಲುವಿನ ವೇದಿಕೆ ಸಿದ್ಧವಾಗುತ್ತದೆ. ಉಳಿದ ಆಟಗಾರರು ಬಂದು ಇನ್ನಿಂಗ್ಸ್‌ಗೆ ಸ್ಥಿರತೆ ಒದಗಿಸಿ ಪಂದ್ಯವನ್ನು ಮುಗಿಸಬೇಕು,” ಎಂದು ಅಯ್ಯರ್ ವಿವರಿಸಿದ್ದಾರೆ.



ನ್ಯೂಜಿಲೆಂಡ್ ಪರ ಗ್ಲೆನ್ ಫಿಲಿಪ್ಸ್ ಸ್ಫೋಟಕ ಬ್ಯಾಟಿಂಗ್

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟ್‌ ಮಾಡುವಂತಾಗಿದ್ದ ನ್ಯೂಜಿಲೆಂಡ್ ತಂಡ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿತ್ತು. ಇದು ಭಾರತದ ವಿರುದ್ಧ ತವರಿನಲ್ಲಿ ನ್ಯೂಜಿಲೆಂಡ್ ದಾಖಲಿಸಿದ ಗರಿಷ್ಠ ಟಿ20 ಅಂತಾರಾಷ್ಟ್ರೀಯ ಮೊತ್ತವಾಗಿತ್ತು. ಗ್ಲೆನ್ ಫಿಲಿಪ್ಸ್ 40 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿ ಭಾರತೀಯ ಬೌಲರ್‌ಗಳನ್ನು ಕಾಡಿದರು. ಅವರ ಇನಿಂಗ್ಸ್‌ನಲ್ಲಿ ಎಂಟು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳಿದ್ದವು. ಫಿನ್ ಅಲೆನ್ 24 ಎಸೆತಗಳಲ್ಲಿ 45 ರನ್ ಗಳಿಸಿದರೆ, ಬೆವನ್ ಜೇಕಬ್ಸ್ 16 ಎಸೆತಗಳಲ್ಲಿ 31 ರನ್ ಸಿಡಿಸಿದರು. ಆರಂಭಿಕ ಹಂತದಲ್ಲೇ ನ್ಯೂಜಿಲೆಂಡ್ ವೇಗವಾಗಿ ರನ್ ಗಳಿಸಿ ಭಾರತಕ್ಕೆ ಕಠಿಣ ಗುರಿ ನೀಡಿತು.

ಭಾರತದ ಪರ ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು. ನಾಲ್ಕು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ಭುವನೇಶ್ವರ್ ಕುಮಾರ್ ನಾಲ್ಕು ಓವರ್‌ಗಳಲ್ಲಿ 49 ರನ್ ಬಿಟ್ಟುಕೊಟ್ಟರು. ಭಾರತದ ಬೌಲರ್‌ಗಳು ಪ್ರತಿ ಓವರ್‌ಗೆ 10ಕ್ಕೂ ಹೆಚ್ಚು ರನ್ ನೀಡಿದ್ದು, ತಂಡಕ್ಕೆ ಸವಾಲಾಗಿತ್ತು.

ದಾಖಲೆಯ ಮೊತ್ತವನ್ನು ಚೇಸ್‌ ಮಾಡಿ ಹ್ಯಾಗ್ಲಿ ಓವಲ್‌ನಲ್ಲಿ ಇತಿಹಾಸ ಬರೆದ ಭಾರತ ತಂಡ!

ಪಿಚ್‌ ಬಗ್ಗೆ ಅಯ್ಯರ್‌ ಹೇಳಿದ್ದೇನು?

ಪಿಚ್ ಮತ್ತು ಹವಾಮಾನ ಪರಿಸ್ಥಿತಿಗಳ ಬಗ್ಗೆ ಮಾತನಾಡಿದ ಅಯ್ಯರ್, "ಆರಂಭದಲ್ಲಿ ಚೆಂಡು ನಿಧಾನವಾಗಿ ಬರುತ್ತಿತ್ತು ಮತ್ತು ಪಿಚ್‌ನಲ್ಲಿ ಸ್ವಲ್ಪ ಹಿಡಿತವಿತ್ತು, ಆದರೆ ಪಂದ್ಯ ಮುಂದುವರಿದಂತೆ ಇಬ್ಬನಿ ಕಾಣಿಸಿಕೊಂಡು ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರಲಾರಂಭಿಸಿತು. ಇದರಿಂದ ನ್ಯೂಜಿಲೆಂಡ್ ಬ್ಯಾಟರ್‌ಗಳಿಗೆ ವೇಗವಾಗಿ ರನ್ ಗಳಿಸಲು ಅನುಕೂಲವಾಯಿತು," ಎಂದು ಅವರು ವಿವರಿಸಿದ್ದಾರೆ.