ನವದೆಹಲಿ: ನ್ಯೂಜಿಲೆಂಡ್ ಪ್ರವಾಸವನ್ನು ಮುಗಿಸಿಕೊಂಡು ತವರಿಗೆ ಮರಳಿರುವ ಭಾರತ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer), ಇದೀಗ ಮುಂಬೈ ಪರ ದೇಶಿ ಕ್ರಿಕೆಟ್ ಆಡಲು ಸಜ್ಜಾಗುತ್ತಿದ್ದಾರೆ. 2026-27ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ (SMAT 2026-27) ಸೂಪರ್ ಲಿಂಗ್ಸ್ ಪಂದ್ಯಗಳನ್ನು ಆಡಲು ಅವರು ಮುಂಬೈ ತಂಡಕ್ಕೆ ಸೇರಲಿದ್ದಾರೆ. ನವೆಂಬರ್ 30 ರಂದು ನಾಗ್ಪುರ್ನಲ್ಲಿ ಸೂಪರ್ ಲೀಗ್ ಪಂದ್ಯಗಳು ಆರಂಭವಾಗಲಿವೆ. ಶ್ರೇಯಸ್ ಮುಂಬೈ ತಂಡಕ್ಕೆ ಮರಳಿದರೂ ನಾಯಕನಾಗಿ ಸೂರ್ಯಕುಮಾರ್ ಯಾದವ್ ಮುಂದುವರಿಯಲಿದ್ದಾರೆ.
ಎಲೈಟ್ ಡಿ ಗ್ರೂಪ್ನಲ್ಲಿ ಸ್ಥಾನವನ್ನು ಪಡದಿರುವ ಮುಂಬೈ ತಂಡ ಲೀಗ್ ಹಂತದಲ್ಲಿ ಆಡಿದ 7 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಪಡೆಯುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದು ಮುಂದಿನ ಸುತ್ತಿಗೆ ಪ್ರವೇಶ ಮಾಡಿದೆ. ಇದೇ ಗುಂಪಿನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿರುವ ವಿದರ್ಭ ತಂಡ ಕೂಡ ಸೂಪರ್ ಲೀಗ್ಗೆ ಅರ್ಹತೆಯನ್ನು ಪಡೆದಿದೆ.
ʻ20ನೇ ಆವೃತ್ತಿಗೆ ನಾನು ರೆಡಿʼ: ಮುಂಬೈ ಇಂಡಿಯನ್ಸ್ ನಾಯಕತ್ವಕ್ಕೆ ಮರಳಿದ ಬಳಿಕ ರೋಹಿತ್ ಶರ್ಮಾ ಹೇಳಿದ್ದಿದು!
ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿಯನ್ನು ಮುಗಿಸಿಕೊಂಡ ಬಳಿಕ ಶ್ರೇಯಸ್ ಅಯ್ಯರ್ ಇದೀಗ ಮುಂಬೈ ತಂಡಕ್ಕೆ ಮರಳುವ ಮೂಲಕ ಸೂರ್ಯಕುಮಾರ್ ಯಾದವ್ ಪಡೆಗೆ ಆನೆ ಬಲಬಂದಂತಾಗಿದೆ. ಶ್ರೇಯಸ್ ನಾಯಕತ್ವದಲ್ಲಿ ಟೀಮ್ ಇಂಡಿಯ, ಕಿವೀಸ್ ಎದುರು ಟಿ20ಐ ಸರಣಿಯನ್ನು 3-2 ಅಂತರದಲ್ಲಿ ಗೆದ್ದಿತ್ತು. ನಂತರ ಅಯ್ಯರ್ ಕೊನೆಯ ಎರಡು ಏಕದಿನ ಪಂದ್ಯಗಳಲ್ಲಿಯೂ ಭಾರತ ತಂಡವನ್ನು ಮುನ್ನಡೆಸಿದ್ದರು. ಆ ಮೂಲಕ ಭಾರತ 3-1 ಅಂತರದಲ್ಲಿ ಜಯಿಸಿತ್ತು.
ಶ್ರೇಯಸ್ ಅಯ್ಯರ್ ಆಗಮನದಿಂದ ಈಗಾಗಲೇ ಭರ್ಜರಿಯಾಗಿ ಬ್ಯಾಟ್ ಮಾಡುತ್ತಿರುವ ಬ್ಯಾಟಿಂಗ್ ವಿಭಾಗ ಇನ್ನಷ್ಟು ಬಲಶಾಲಿಯಾಗಲಿದೆ. ನಾಯಕ ಸೂರ್ಯಕುಮಾರ್ ಯಾದವ್, ಶಿವಂ ದುಬೇ, ಸರ್ಫರಾಝ್ ಖಾನ್, ಮುಶೀರ್ ಖಾನ್ ಹಾಗೂ ಅಂಗ್ಕ್ರಿಷ್ ರಘುವಂಶಿ ಮುಂಬೈ ತಂಡದಲ್ಲಿದ್ದಾರೆ.
IND vs NZ: ಮೊಹಮ್ಮದ್ ಸಿರಾಜ್ಗೆ ಕೊಕ್ ನೀಡಿದ ಗಂಭೀರ್ ವಿರುದ್ಧ ಆರ್ ಅಶ್ವಿನ್ ಗುಡುಗು!
ಬ್ಯಾಟಿಂಗ್ ಕ್ರಮಾಂಕದಲ್ಲೂ ಬದಲಾವಣೆ ಸಾಧ್ಯತೆ
ಶ್ರೇಯಸ್ ಅಯ್ಯರ್ ತಂಡಕ್ಕೆ ಸೇರ್ಪಡೆಯಾಗುವುದರಿಂದ ಮುಂಬೈ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲೂ ಬದಲಾವಣೆಗಳಾಗುವ ಸಾಧ್ಯತೆಯಿದೆ. ಟೂರ್ನಿಯ ಹಿಂದಿನ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ಹಾರ್ದಿಕ್ ತಮೋರ್ ಅವರನ್ನು ಕೆಳ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆಯಿದೆ. ಅಯ್ಯರ್ ಅವರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಬದಲಾವಣೆ ಮಾಡಬಹುದು.
ʻ20ನೇ ಆವೃತ್ತಿಗೆ ನಾನು ರೆಡಿʼ: ಮುಂಬೈ ಇಂಡಿಯನ್ಸ್ ನಾಯಕತ್ವಕ್ಕೆ ಮರಳಿದ ಬಳಿಕ ರೋಹಿತ್ ಶರ್ಮಾ ಹೇಳಿದ್ದಿದು!
ಭಾನುವಾರ ತಂಡವನ್ನು ಸೇರಿಕೊಳ್ಳಲಿರುವ ಅಯ್ಯರ್
ಕಳೆದ ಕೆಲವು ದಿನಗಳಿಂದ ಶ್ರೇಯಸ್ ಅಯ್ಯರ್ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಕ್ರಿಕ್ಇನ್ಫೋ ವರದಿಯ ಪ್ರಕಾರ, ಭಾನುವಾರ ತಮ್ಮ ಮುಂಬೈ ತಂಡದ ಸಹ ಆಟಗಾರರೊಂದಿಗೆ ನಾಗ್ಪುರಕ್ಕೆ ಪ್ರಯಾಣಿಸಿ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.
ಇದೇ ವೇಳೆ, ಹಾಲಿ ಚಾಂಪಿಯನ್ ಮುಂಬೈ ತಂಡಕ್ಕೆ ಸೂಪರ್ ಲೀಗ್ನ ಬಿ ಗುಂಪಿನಲ್ಲಿ ಇನ್ನೂ ಮೂರು ಪ್ರಮುಖ ಪಂದ್ಯಗಳು ಬಾಕಿ ಇವೆ. ನವೆಂಬರ್ 30ರಂದು ಆಂಧ್ರ ವಿರುದ್ಧ ಸೆಣಸುವ ಮೂಲಕ ಮುಂಬೈ ತನ್ನ ಅಭಿಯಾನ ಆರಂಭಿಸಲಿದೆ. ಬಳಿಕ ಡಿಸೆಂಬರ್ 2ರಂದು ಪಂಜಾಬ್ ಹಾಗೂ ಡಿಸೆಂಬರ್ 4ರಂದು ರಾಜಸ್ಥಾನ ತಂಡಗಳನ್ನು ಎದುರಿಸಲಿದೆ.