ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗಿಲ್‌ ಇನ್‌, ಪಂತ್‌ ಔಟ್‌; ನ್ಯೂಜಿಲೆಂಡ್‌ ಎದುರು ಮೊದಲನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

India's Probable Playing XI: ಭಾರತ ಹಾಗೂ ನೂಜಿಲೆಂಡ್‌ ತಂಡಗಳ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಕ್ಕೆ ಇನ್ನು ಕೇವಲ ಎರಡು ದಿನಗಳು ಮಾತ್ರ ಬಾಕಿ ಇವೆ. ಮೊದಲನೇ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XI ಹೇಗಿರಲಿದೆ ಎಂದು ಇಲ್ಲಿ ವಿವರಿಸಲಾಗಿದೆ.

ಮೊದಲನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ.

ನವದೆಹಲಿ: ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳ (IND vs NZ) ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಕ್ಕೆ ಇನ್ನು ಕೇವಲ ಎರಡು ದಿನಗಳು ಬಾಕಿ ಇವೆ. ಮೊದಲನೇ ಪಂದ್ಯ ಜನವರಿ 11 ರಂದು ಭಾನುವಾರ ವಡೋದರದ ಬಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ಸಲುವಾಗಿ ಉಭಯ ತಂಡಗಳು ಸಜ್ಜಾಗುತ್ತಿವೆ. ಶುಭಮನ್‌ ಗಿಲ್‌ (Shubman Gill) ನಾಯಕತ್ವದಲ್ಲಿ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಗೆದ್ದಿತ್ತು. ಇದೀಗ ಅದೇ ಲಯವನ್ನು ನ್ಯೂಜಿಲೆಂಡ್‌ ಏಕದಿನ ಸರಣಿಯಲ್ಲಿಯೂ ಮುಂದುವರಿಸಲು ಎದುರು ನೋಡುತ್ತಿದೆ. ಈ ಸರಣಿಯಲ್ಲಿಯೂ ಶುಭಮನ್‌ ಗಿಲ್‌ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗಿ ಫಿಟ್‌ ಆಗಿರುವ ಶ್ರೇಯಸ್‌ ಅಯ್ಯರ್‌, ಅವರು ಈ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ. ಇವರು ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಬಹುತೇಕ ಖಚಿತ. ಆದರೆ, ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಅವರಿಗೆ ಪ್ಲೇಯಿಂಗ್‌ XIನಲ್ಲಿ ಅವಕಾಶ ಸಿಗುವುದು ಅನುಮಾನ. ಜಸ್‌ಪ್ರೀತ್‌ ಬುಮ್ರಾ ಹಾಗೂ ಹಾರ್ದಿಕ್‌ ಪಾಂಡ್ಯ ಅವರಿಗೆ ವಿಶ್ರಾಂತಿಯನ್ನು ನೀಡಲಾಗಿದೆ. ಮತ್ತೊಮ್ಮೆ ಮೊಹಮ್ಮದ್‌ ಶಮಿ ಅವರನ್ನು ಕೈ ಬಿಡಲಾಗಿದೆ. ಅಂದ ಹಾಗೆ ಮೊಹಮ್ಮದ್‌ ಸಿರಾಜ್‌ ಏಕದಿನ ತಂಡಕ್ಕೆ ಮರಳಲಿದ್ದಾರೆ.‌

ಹೊಸ ವರ್ಷದ ಅಚ್ಚರಿ? 3 ವರ್ಷಗಳ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಅಭ್ಯಾಸದ ಫೋಟೋಗಳನ್ನು ಹಂಚಿಕೊಂಡ ವಿರಾಟ್ ಕೊಹ್ಲಿ

ಶುಭಮನ್‌ ಗಿಲ್‌-ರೋಹಿತ್‌ ಶರ್ಮಾ ಓಪನರ್ಸ್‌

ಭಾರತ ಏಕದಿನ ತಂಡದ ಪ್ಲೇಯಿಂಗ್‌ XIನಲ್ಲಿ ರೋಹಿತ್‌ ಶರ್ಮಾ ಜೊತೆ ಶುಭಮನ್‌ ಗಿಲ್‌ ಇನಿಂಗ್ಸ್‌ ಆರಂಭಿಸಲಿದ್ದಾರೆ. ಈ ಇಬ್ಬರೂ ಹಲವು ವರ್ಷಗಳಿಂದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಯಶಸ್ವಿಯಾಗಿದ್ದಾರೆ. ಶುಭಮನ್‌ ಗಿಲ್‌ ಸದ್ಯ ಕಳಪೆ ಫಾರ್ಮ್‌ನಿಂದ ಹೆಣಗಾಡುತ್ತಿದ್ದಾರೆ. ಆದರೆ, ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ರೋಹಿತ್‌ ಶರ್ಮಾ ಒಂದು ಶತಕ ಹಾಗೂ ಅರ್ಧಶತಕ ಬಾರಿಸಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇದಕ್ಕೂ ಮುನ್ನ ಅವರು ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿಯೂ ಮಿಂಚಿದ್ದರು.

ನಾಲ್ಕನೇ ಕ್ರಮಾಂಕಕ್ಕೆ ಶ್ರೇಯಸ್‌ ಅಯ್ಯರ್‌ ಕಮ್‌ಬ್ಯಾಕ್

ವಿರಾಟ್‌ ಕೊಹ್ಲಿ ಅವರು ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ವಿರಾಟ್‌ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಎರಡು ಶತಕಗಳನ್ನು ಬಾರಿಸಿದ್ದರು. ಆ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾನರಾಗಿದ್ದರು. ಇನ್ನು ನಾಲ್ಕನೇ ಕ್ರಮಾಂಕಕ್ಕೆ ಶ್ರೇಯಸ್‌ ಅಯ್ಯರ್‌ ಮರಳಲಿದ್ದಾರೆ. ಅವರು ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗಿ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಮುಂಬೈ ತಂಡದ ಪರ ಆಡುತ್ತಿದ್ದಾರೆ.

IND vs NZ: ನ್ಯೂಜಿಲೆಂಡ್‌ ವಿರುದ್ಧ ಟಿ20ಐ ಸರಣಿಯ ಆರಂಭಿಕ 3 ಪಂದ್ಯಗಳಿಂದ ತಿಲಕ್‌ ವರ್ಮಾ ಔಟ್‌!

ಐದನೇ ಕ್ರಮಾಂಕದಲ್ಲಿ ಕೆಎಲ್‌ ಆಡಲಿದ್ದು, ಮೊದಲನೇ ವಿಕೆಟ್‌ ಕೀಪರ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ನಂತರ ಸ್ಪಿನ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್‌ ಸುಂದರ್‌ ಆಡಲಿದ್ದಾರೆ. ಇನ್ನು ವೇಗದ ಬೌಲಿಂಗ್‌ ವಿಭಾಗದಲ್ಲಿ ಅರ್ಷದೀಪ್‌ ಸಿಂಗ್‌, ಮೊಹಮ್ಮದ್‌ ಸಿರಾಜ್‌ ಹಾಗೂ ಹರ್ಷಿತ್‌ ರಾಣಾ ಕಣಕ್ಕೆ ಇಳಿಯಲಿದ್ದಾರೆ. ಪೂರ್ಣ ಪ್ರಮಾಣದ ಸ್ಪಿನ್ನರ್‌ ಆಗ ಕುಲ್ದೀಪ್‌ ಯಾದವ್‌ ಆಡಲಿದ್ದಾರೆ.

ಮೊದಲನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

1.ರೋಹಿತ್‌ ಶರ್ಮಾ (ಓಪನರ್‌)

2.ಶುಭಮನ್‌ ಗಿಲ್‌ (ನಾಯಕ, ಓಪನರ್‌)

3.ವಿರಾಟ್‌ ಕೊಹ್ಲಿ (ಬ್ಯಾಟ್ಸ್‌ಮನ್‌)

4.ಶ್ರೇಯಸ್‌ ಅಯ್ಯರ್‌ (ಬ್ಯಾಟ್ಸ್‌ಮನ್)‌

5.ಕೆಎಲ್‌ ರಾಹುಲ್‌ (ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌)

6.ರವೀಂದ್ರ ಜಡೇಜಾ (ಆಲ್‌ರೌಂಡರ್‌)

7.ವಾಷಿಂಗ್ಟನ್‌ ಸುಂದರ್‌ (ಆಲ್‌ರೌಂಡರ್‌)

8.ಹರ್ಷಿತ್‌ ರಾಣಾ (ವೇಗದ ಬೌಲರ್‌)

9.ಮೊಹಮ್ಮದ್‌ ಸಿರಾಜ್‌ (ವೇಗದ ಬೌಲರ್‌)

10.ಅರ್ಷದೀಪ್‌ ಸಿಂಗ್‌ (ವೇಗದ ಬೌಲರ್‌)

11.ಕುಲ್ದೀಪ್‌ ಯಾದವ್‌ (ಸ್ಪಿನ್ನರ್‌)