ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Duleep Trophy Final: ಆರು ವಿಕೆಟ್‌ ಕಳೆದುಕೊಂಡ ದಕ್ಷಿಣ ವಲಯ ತಂಡಕ್ಕೆ ತಿಲಕ್‌ ವರ್ಮಾ ಆಸರೆ!

ಚೆನ್ನೈನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2026ರ ದುಲೀಪ್‌ ಟ್ರೋಫಿ ಟೂರ್ನಿಯ ಫೈನಲ್‌ ಪಂದ್ಯದ ಮೂರನೇ ದಿನವೂ ಪೂರ್ವ ವಲಯ ತಂಡ ಮೇಲುಗೈ ಸಾಧಿಸಿದೆ. ನಾಯಕ ತಿಲಕ್‌ ವರ್ಮ ಅಜೇಯ ಅರ್ಧಶತಕ ದಕ್ಷಿಣ ವಲಯ ತಂಡಕ್ಕೆ ಆಸರೆಯಾಗಿದೆ. ಮೂರನೇ ದಿನದಾಟದ ಅಂತ್ಯಕ್ಕೆ 242 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ದೊಡ್ಡ ಹಿನ್ನಡೆಯ ಭೀತಿಗೆ ಒಳಗಾಗಿದೆ.

ದಕ್ಷಿಣ ವಲಯ ತಂಡಕ್ಕೆ ತಿಲಕ್‌ ವರ್ಮಾ ಆಸರೆ.

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2026ರ ದುಲೀಪ್‌ ಟ್ರೋಫಿ (Duleep Trophy 2026) ಟೂರ್ನಿಯ ಫೈನಲ್‌ ಪಂದ್ಯದ (East Zone vs South Zone) ಮೂರನೇ ದಿನವೂ ಇಶಾನ್‌ ಕಿಶನ್‌ ನಾಯಕತ್ವದ ಪೂರ್ವ ವಲಯ ಎದುರಾಳಿ ದಕ್ಷಿಣ ವಲಯ ಎದುರು ಮೇಲುಗೈ ಸಾಧಿಸಿದೆ. ಇದಕ್ಕೆ ಬಹುಮುಖ್ಯ ಕಾರಣ ಟೀಮ್‌ ಇಂಡಿಯಾ ವೇಗಿಗಳಾದ ಮೊಹಮ್ಮದ್‌ ಶಮಿ (Mohammed Shami) ಹಾಗೂ ಮುಖೇಶ್‌ ಕುಮಾರ್‌. ಮೂರನೇ ದಿನ ಶಮಿ ಹಾಗೂ ಮುಖೇಶ್‌ ಮಾರಕ ದಾಳಿ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸುವ ಮೂಲಕ ದಕ್ಷಿಣ ವಲಯದ ಆರಂಭಿಕ ಹಿನ್ನಡೆಯನ್ನು ಅನುಭವಿಸುವಂತೆ ಮಾಡಿದರು.

ಪಂದ್ಯದ ಮೂರನೇ ದಿನವಾದ ಮಂಗಳವಾರ ಬೆಳಿಗ್ಗೆ ಪ್ರಥಮ ಇನಿಂಗ್ಸ್‌ ಆರಂಭಿಸಿದ ದಕ್ಷಿಣ ವಲಯ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ರಿಕಿ ಭುಯಿ ಅವರು ಬಹುಬೇಗ ವಿಕೆಟ್‌ ಒಪ್ಪಿಸಿದರು. ಆದರೆ, ದೇವದತ್‌ ಪಡಿಕ್ಕಲ್‌ ಹಾಗೂ ತಿಲಕ್‌ ವರ್ಮಾ ಅರ್ಧಶತಕಗಳ ಬಲದಿಂದ ದಕ್ಷಣ ವಲಯ ತಂಡ, ಮೂರನೇ ದಿನದಾಟದ ಅಂತ್ಯಕ್ಕೆ 80 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 242 ರನ್‌ಗಳನ್ನು ಕಲೆ ಹಾಕಿದ್ದು, ಇನ್ನೂ 466 ರನ್‌ಗಳ ಹಿನ್ನಡೆಯಲ್ಲಿದೆ. ತಿಲಕ್‌ ವರ್ಮಾ ಅವರು 133 ಎಸೆತಗಳಲ್ಲಿ ಅಜೇಯ 56 ರನ್‌ಗಳನ್ನು ಕಲೆ ಹಾಕಿ ದಕ್ಷಿಣ ವಲಯ ತಂಡಕ್ಕೆ ಆಸೆಯಾಗಿದ್ದಾರೆ.

ʻಇಶಾನ್‌ ಕಿಶನ್‌ ಬಳಿ ಕಲಿಯಿರಿʼ: ವೈಭವ್‌ ಸೂರ್ಯವಂಶಿಗೆ ವಿವೇಕ್‌ ರಾಝ್ದಾನ್‌ ಸಂದೇಶ!

ಇನಿಂಗ್ಸ್‌ ಆರಂಭಿಸಿದ ರಿಕಿ ಭಯಿ ಕೇವಲ ಒಂದು ರನ್‌ಗೆ ಮುಖೇಶ ಕುಮಾರ್‌ಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಎನ್‌ ಜಗದೀಶನ್‌ ಹಗೂ ದೇವದತ್‌ ಪಡಿಕ್ಕಲ್‌ ಜೋಡಿಯು 60 ರನ್‌ಗಳ ಜೊತೆಯಾಟವನ್ನು ಆಡಿ ದಕ್ಷಿಣ ವಲಯಕ್ಕೆ ಭರವಸೆ ಮೂಡಿಸಿತ್ತು. ಆದರೆ, 32 ರನ್‌ ಗಳಿಸಿ ಆಡುತ್ತಿದ್ದ ಎನ್‌ ಜಗದೀಶನ್‌ ಅವರನ್ನು ಶಿಖರ್‌ ಮೋಹನ್‌ ಔಟ್‌ ಮಾಡಿದರು. ತಮ್ಮ ಅದ್ಭುತ ಫಾರ್ಮ್‌ ಮುಂದುವರಿಸಿದ ಕನ್ನಡಿಗ ದೇವದತ್‌ ಪಡಿಕ್ಕಲ್‌ 104 ಎಸೆತಗಳಲ್ಲಿ 62 ರನ್‌ಗಳನ್ನು ಕಲೆ ಹಾಕಿ ಉತ್ತಮ ಆರಂಭ ಪಡೆದಿದ್ದರು. ಆದರೆ, ಅವರನ್ನು ಮುಖೇಶ್‌ ಕುಮಾರ್‌ ಔಟ್‌ ಮಾಡಿದರು.

Duleep Trophy Fianl: ಕಳೆದ 4 ಪಂದ್ಯಗಳಲ್ಲಿ 3 ಶತಕ, 500 ರನ್‌ ಗಳಿಸಿರುವ ದೇವದತ್‌ ಪಡಿಕ್ಕಲ್‌!

ಶೇಖ್‌ ರಶೀದ್‌ 27 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಕನ್ನಡಿಗ ಸ್ಮರಣ್‌ ರವಿಚಂದ್ರನ್‌ 23 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಈ ಇಬ್ಬರನ್ನೂ ಮೊಹಮ್ಮದ್‌ ಶಮಿ ಔಟ್‌ ಮಾಡಿದರು. ಮತ್ತೊರ್ವ ಕನ್ನಡಿಗ ಶ್ರೇಯಸ್‌ ಗೋಪಾಲ್‌ ಅವರು 26 ರನ್‌ ಗಳಿಸಿ ಔಟ್‌ ಆದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ನಾಯಕ ತಿಲಕ್‌ ವರ್ಮಾ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಆಡಿದ 133 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ ಅಜೇಯ 56 ರನ್‌ ಗಳಿಸಿದರು. ಆ ಮೂಲಕ ದಕ್ಷಿಣ ವಲಯಕ್ಕೆ ಆಸರೆಯಾಗಿದ್ದಾರೆ. ನಾಲ್ಕನೇ ದಿನವಾದ ಬುಧವಾರ ಅವರು ಕ್ರೀಸ್‌ಗೆ ಆಗಮಿಸಲಿದ್ದಾರೆ. ಇವರ ಜೊತೆಗೆ ಚಾಮ ವಿ ಮಿಲಿಂದ್‌ ಕ್ರೀಸ್‌ನಲ್ಲಿದ್ದಾರೆ.

ಪೂರ್ವ ವಲಯ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ ಮೊಹಮ್ಮದ್‌ ಶಮಿ ಹಾಗೂ ಮುಖೇಶ್‌ ಕುಮಾರ್‌ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ದಕ್ಷಿಣ ವಲಯ ತಂಡದ ಆರಂಭಿಕ ಹಿನ್ನಡೆಗೆ ಕಾರಣರಾದರು.

Sher-E-Punjab T20 League: ಕೇವಲ 64 ಎಸೆತಗಳಲ್ಲಿ 173 ರನ್‌ ಸಿಡಿಸಿದ ನಮನ್‌ ಧೀರ್‌!

708 ರನ್‌ ಕಲೆ ಹಾಕಿದ್ದ ಪೂರ್ವ ವಲಯ

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಪೂರ್ವ ವಲಯ ತಂಡ, ರನ್‌ ಹೊಳೆಯನ್ನು ಹರಿಸಿತ್ತು. ಇಶಾನ್‌ ಕಿಶನ್‌ ದ್ವಿಶತಕ ಹಾಗೂ ಕುಮಾರ್‌ ಕುಶಾಗ್ರ ಅವರ ಶತಕಗಳ ಬಲದಿಂದ ಪ್ರಥಮ ಇನಿಂಗ್ಸ್‌ನಲ್ಲಿ 163 ಓವರ್‌ಗಳಿಗೆ 708 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಪಂದ್ಯದಲ್ಲಿ ಬಹುತೇಕ ಮೇಲುಗೈ ಸಾಧಿಸಿತ್ತು.