ಕೊಲಂಬೊ: ಇಲ್ಲಿನ ಗಾಲೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದಲ್ಲಿ (SL vs BAN) ಬಾಂಗ್ಲಾದೇಶ ತಂಡದ ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್ (Mushfiqur Rahim) ಅವರು ತಮ್ಮ ಟೆಸ್ಟ್ ವೃತ್ತಿ ಜೀವನದ 12ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಈ ಇನಿಂಗ್ಸ್‌ನ ಮೂಲಕ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಅಂದ ಹಾಗೆ ಮುಷ್ಫಿಕರ್ ಅವರ ಶತಕದ ಬಲದಿಂದ ಬಾಂಗ್ಲಾದೇಶ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 500ರ ಸನಿಹ ಸಾಗುತ್ತಿದೆ. ಇದರಲ್ಲಿ ಅವರು ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಡಮ್ ಗಿಲ್‌ಕ್ರಿಸ್ಟ್ ದಾಖಲೆಯನ್ನು ಮುರಿದಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡದ ಪರ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಮುಷ್ಫಿಕರ್ ರಹೀಮ ಅವರು 350 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 163 ರನ್‌ಗಳನ್ನು ಗಳಿಸಿದರು. ಆ ಮೂಲಕ ತಮ್ಮ ಟಸ್ಟ್ ವೃತ್ತಿ ಜೀವನದ 12ನೇ ಶತಕವನ್ನು ಪೂರ್ಣಗೊಳಿಸಿದರು. ಇವರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೂ ಎಸೆತವನ್ನು ಹಾಕದೆ 15502 ರನ್‌ಗಳನ್ನು ಬಾರಿಸಿದ್ದಾರೆ. ಆ ಮೂಲಕ ಆಡಮ್ ಗಿಲ್‌ಕ್ರಿಸ್ಟ್ ಅವರ ವಿಶ್ವ ದಾಖಲೆಯನ್ನು ಮುರಿಯಲಿದ್ದಾರೆ.
IND vs ENG: ಮೊದಲನೇ ಟೆಸ್ಟ್‌ಗೆ ತಮ್ಮ ನೆಚ್ಚಿನ ಪ್ಲೇಯಿಂಗ್ XI ಆರಿಸಿದ ವಸೀಮ್ ಜಾಫರ್!
ಆಸ್ಟ್ರೇಲಿಯಾ ದಿಗ್ಗಜ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರೂ ಸ್ವರೂಪದಲ್ಲಿ ಒಂದೇ ಒಂದು ಎಸೆತವನ್ನು ಹಾಕದೆ 15461 ರನ್‌ಗಳನ್ನು ಕಲೆ ಹಾಕಿದ್ದರು. ಇದೀಗ ಮುಷ್ಫಿಕರ್ ರಹೀಮ್ ಇವರಿಗಿಂತ ಹೆಚ್ಚಿನ ರನ್‌ಗಳನ್ನು ಗಳಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೂ ಎಸೆತ ಬೌಲ್ ಮಾಡದೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು
ಮುಷ್ಫಿಕರ್ ರಹೀಮ್ (ಬಾಂಗ್ಲಾದೇಶ): 15,502
ಆಡಮ್ ಗಿಲ್‌ಕ್ರಿಸ್ಟ್ (ಆಸ್ಟ್ರೇಲಿಯಾ): 15,461
ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ): 12,654
ಜೋಸ್ ಬಟ್ಲರ್ (ಇಂಗ್ಲೆಂಡ್): 11,881
ಜಾನಿ ಬೈರ್‌ಸ್ಟೋವ್ (ಇಂಗ್ಲೆಂಡ್): 11,581
ಮತ್ತೊಂದು ದಾಖಲೆ ಮುರಿದ ಮುಷ್ಫಿಕರ್ ರಹೀಮ್
ಟೆಸ್ಟ್ ಕ್ರಿಕೆಟ್‌ನಲ್ಲಿ ಓಪನಿಂಗ್ ಬ್ಯಾಟ್ಸ್‌ಮನ್ ಅಲ್ಲದ ಶತಕ ಸಿಡಿಸಿದ ಅತ್ಯಂತ ಹಿರಿಯ ಬ್ಯಾಟ್ಸ್‌ಮನ್ ಎಂಬ ಮತ್ತೊಂದು ದಾಖಲೆಯನ್ನು ಮುಷ್ಫಿಕರ್ ರಹೀಮ್ ಬರೆದಿದ್ದಾರೆ. ಅವರು ಪಾಕಿಸ್ತಾನ ಮಾಜಿ ಬ್ಯಾಟ್ಸ್‌ಮನ್ ಯೂನಿಸ್ ಖಾನ್ ಅವರ ದಾಖಲೆಯನ್ನು ಬಾಂಗ್ಲಾ ಆಟಗಾರ ಮುರಿದಿದ್ದಾರೆ. ಇವರು 2015ರಲ್ಲಿ ಶ್ರೀಲಂಕಾದಲ್ಲಿ 37 ವರ್ಷ, 216 ದಿನಗಳ ವಯಸ್ಸಿದ್ದಾಗ ಶತಕವನ್ನು ಬಾರಿಸಿದ್ದರು.
IND vs ENG: ಇಂಗ್ಲೆಂಡ್ ಪ್ರವಾಸದ ಭಾರತ ಟೆಸ್ಟ್ ತಂಡಕ್ಕೆ ಸೇರ್ಪಡೆಯಾದ ಹರ್ಷಿತ್ ರಾಣಾ!
ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಅತ್ಯಂತ ಹಿರಿಯ ಆಟಗಾರರು
ಬಾಂಗ್ಲಾದೇಶ ತಂಡದ ಮುಷ್ಫಿಕರ್ ರಹೀಮ್ (38 ವರ್ಷ, 39 ದಿನಗಳು): ಶ್ರೀಲಂಕಾ ವಿರುದ್ಧ ಶತಕ (2025)
ಪಾಕಿಸ್ತಾನ ತಂಡದ ಯೂನಿಸ್ ಖಾನ್ (37 ವರ್ಷ, 216 ದಿನಗಳು: ಶ್ರೀಲಂಕಾ ವಿರುದ್ಧ ಶತಕ (2015)
ಭಾರತದ ಸಚಿನ್ ತೆಂಡೂಲ್ಕರ್ (37 ವರ್ಷ, 93 ದಿನಗಳು): ಶ್ರೀಲಂಕಾ ವಿರುದ್ಧ ಶತಕ (2010)
ಶ್ರೀಲಂಕಾದ ಮಹೇಲಾ ಜಯವರ್ಧನೆ (37 ವರ್ಷ, 58 ದಿನಗಳು): ದಕ್ಷಿಣ ಆಫ್ರಿಕಾ ವಿರುದ್ಧ ಶತಕ (2014)
ಆಸ್ಟ್ರೇಲಿಯಾದ ಅಲಾನ್ ಬಾರ್ಡರ್ (37 Years, 43 Days): ಶ್ರೀಲಂಕಾ ವಿರುದ್ಧ ಶತಕ (1992)