ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹರಿಯಾಣ ವಿರುದ್ಧ ಶತಕ ಬಾರಿಸಿ ಎಂಎಸ್‌ ಧೋನಿಯ ದಾಖಲೆ ಮುರಿದ ಇಶಾನ್‌ ಕಿಶನ್‌!

ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಹರಿಯಾಣ ತಂಡವನ್ನು ಮಣಿಸುವ ಮೂಲಕ ಇಶಾನ್‌ ಕಿಶನ್‌ ನೇತೃತ್ವದ ಜಾರ್ಖಂಡ್‌ ತಂಡ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇನ್ನು ಈ ಪಂದ್ಯದಲ್ಲಿ ಸ್ಪೋಟಕ ಶತಕ ಬಾರಿಸಿದ ಇಶಾನ್‌ ಕಿಶನ್‌, ಮಾಜಿ ನಾಯಕ ಎಂಎಸ್‌ ಧೋನಿಯ ವಿಶೇಷ ದಾಖಲೆಯನ್ನು ಮುರಿದಿದ್ದಾರೆ.

ಎಂಎಸ್‌ ಧೋನಿ ದಾಖಲೆ ಮುರಿದ ಇಶಾನ್‌ ಕಿಶನ್‌.

ಮುಂಬೈ: ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯ ಫೈನಲ್‌ (Syed Mushtaq Ali Trophy 2025-26) ಪಂದ್ಯದಲ್ಲಿ ಇಶಾನ್‌ ಕಿಶನ್‌ ನಾಯಕತ್ವದ ಜಾರ್ಖಂಡ್‌, ಹರಿಯಾಣವನ್ನು ಸೋಲಿಸಿ ಚೊಚ್ಚಲ ಚಾಂಪಿಯನ್ ಆಯಿತು. ಉಭಯ ತಂಡಗಳು ಮೊದಲ ಬಾರಿ ಟೂರ್ನಿಯ ಫೈನಲ್‌ ಪ್ರವೇಶಿಸಿದ್ದವು. ಅಬ್ಬರಿಸಿದ ನಾಯಕ ಇಶಾನ್‌ ಕಿಶನ್‌ (Ishan Kishan) 49 ಎಸೆತಗಳಲ್ಲಿ 6 ಬೌಂಡರಿ ಹಾಗೂ 10 ಸಿಕ್ಸರ್‌ಗಳೊಂದಿಗೆ ಬರೋಬ್ಬರಿ 101 ರನ್‌ ಚಚ್ಚಿದರು. ಅವರ ಸ್ಪೋಟಕ ಶತಕದ ಬಲದಿಂದ ಜಾರ್ಖಂಡ್‌ (Jharkhand) 69 ರನ್‌ಗಳ ಭರ್ಜರಿ ಜಯ ದಾಖಲಿಸಿತು. ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಇಶಾನ್‌ ಕಿಶನ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದರ ನಡುವೆ ಇಶಾನ್‌ ಕಿಶನ್‌ ಅವರು ಎಂಎಸ್‌ ಧೋನಿಯವರ ವಿಶೇಷ ದಾಖಲೆಯೊಂದನ್ನು ಮುರಿದಿದ್ದಾರೆ.

ಇಶಾನ್‌ ಕಿಶನ್‌ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯ 10 ಪಂದ್ಯಗಳಲ್ಲಿ 57.44ರ ಸರಾಸರಿ ಮತ್ತು 197.32ರ ಸ್ಟ್ರೈಕ್‌ ರೇಟ್‌ನೊಂದಿಗೆ 517 ರನ್‌ ಕಲೆಹಾಕಿದ್ದಾರೆ. ಇದರಲ್ಲಿ ಎರಡು ಶತಕ, 51 ಬೌಂಡರಿ ಹಾಗೂ 33 ಸಿಕ್ಸರ್‌ಗಳು ಒಳಗೊಂಡಿವೆ. ಈ ಮೂಲಕ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ವೊಬ್ಬರು ದೇಶಿ ಹಾಗೂ ಅಂತಾರಾಷ್ಟ್ರೀಯ ಟೂರ್ನಿ ಸೇರಿದಂತೆ ಯಾವುದೇ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ ದಾಖಲೆ ಬಾರಿಸಿದ ವಿಶ್ವದ ಏಕೈಕ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ಟೀಮ್‌ ಇಂಡಿಯಾ ಮಾಜಿ ನಾಯಕ ಎಂಎಸ್‌ ಧೋನಿ ಹಾಗೂ ವೆಸ್ಟ್‌ ಇಂಡೀಸ್‌ ಸ್ಪೋಟಕ ಬ್ಯಾಟರ್‌ ನಿಕೋಲಸ್‌ ಪೂರನ್‌ ಅವರ ಹೆಸರಿನಲ್ಲಿತ್ತು.

ಇಶಾನ್‌ ಕಿಶನ್‌ ಭರ್ಜರಿ ಶತಕ; ಚೊಚ್ಚಲ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಗೆದ್ದ ಜಾರ್ಖಂಡ್!

ಟಿ20 ಕ್ರಿಕೆಟ್‌ ಟೂರ್ನಿಯೊಂದರಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಟಾಪ್‌-5 ವಿಕೆಟ್‌ ಕೀಪರ್‌ಗಳು

ಇಶಾನ್‌ ಕಿಶನ್-‌ 33 ಸಿಕ್ಸರ್‌ಗಳು, ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ 2026 (ಜಾರ್ಖಂಡ್‌)

ಎಂಎಸ್‌ ಧೋನಿ- 30 ಸಿಕ್ಸರ್‌ಗಳು, ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2018 (ಚೆನ್ನೈ ಸೂಪರ್‌ ಕಿಂಗ್ಸ್‌)

ನಿಕೋಲಸ್‌ ಪೂರನ್‌- 30 ಸಿಕ್ಸರ್‌ಗಳು, ಇಂಟರ್‌ನ್ಯಾಷನಲ್‌ ಟಿ20 ಲೀಗ್‌ 2023-24 (ಎಂಐ ಎಮಿರೇಟ್ಸ್‌)

ಆಡಮ್‌ ಗಿಲ್‌ಕ್ರಿಸ್ಟ್‌- 29 ಸಿಕ್ಸರ್‌ಗಳು, ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2019 (ಡೆಕನ್‌ ಚಾರ್ಜಸ್‌)

ನಿಕೋಲಸ್‌ ಪೂರನ್‌- 28 ಸಿಕ್ಸರ್‌ಗಳು, ಕೆರಬಿಯನ್‌ ಪ್ರೀಮಿಯರ್‌ ಲೀಗ್‌ 2025 (ಟ್ರಿನ್‌ಬ್ಯಾಗೊ ನೈಟ್‌ ರೈಡರ್ಸ್)‌

SMAT final: ಹರಿಯಾಣ ವಿರುದ್ಧ ಶತಕ ಸಿಡಿಸಿ ಇತಿಹಾಸ ಬರೆದ ಇಶಾನ್‌ ಕಿಶನ್‌!

ಇಶಾನ್‌ ಕಿಶನ್‌ ಟಿ20 ಮಾದರಿಯಲ್ಲಿ ಆರು ಶತಕಗಳನ್ನು ಬಾರಿಸಿದ್ದಾರೆ. ಕಳೆದ ಐಪಿಎಲ್‌ ಟೂರ್ನಿಯಲ್ಲಿ ಅವರು ಸನ್‌ರೈಸರ್ಸ್‌ ಹೈದರಾಬಾದ್‌ ಪರ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಶತಕ ಸಿಡಿಸಿ ಸಂಭ್ರಮಿಸಿದ್ದರು. ಅವರು ಸೈಯದ್‌ ಮುಷ್ತಾಕ್‌ ಅಲಿ ಟೂರ್ನಿಯ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೆ ಇದೇ ಟೂರ್ನಿಯಲ್ಲಿ ಎರಡು ಶತಕಗಳನ್ನು ಬಾರಿಸಿದ ಏಕೈಕ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಅವರು ಈ ಹಿಂದೆ 2018-19ರ ಆವೃತ್ತಿಯಲ್ಲಿ ಇದೇ ಟೂರ್ನಿಯಲ್ಲಿ ಈ ದಾಖಲೆಯನ್ನು ಬರೆದಿದ್ದರು.