ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಾಂಗ್ಲಾದೇಶ ವಿರುದ್ಧದ ವೈಟ್‌ಬಾಲ್‌ ಸರಣಿಗಳಿಗೂ ಮುನ್ನ ದಕ್ಷಿಣ ಆಫ್ರಿಕಾ ತಂಡಕ್ಕೆ ಡಬಲ್‌ ಆಘಾತ!

ಬಾಂಗ್ಲಾದೇಶ ವಿರುದ್ಧದ ತವರಿನ ವೈಟ್‌ಬಾಲ್ ಸರಣಿಗಳಿಗೂ ಮುನ್ನ ದಕ್ಷಿಣ ಆಫ್ರಿಕಾಗೆ ಗಾಯದ ಸಮಸ್ಯೆ ಎದುರಾಗಿದೆ. ಜೆರಾಲ್ಡ್ ಕೊಯೆಟ್ಜಿ ಮತ್ತು ಕ್ವೆನಾಎಂಫಾಕಾ ಸರಣಿಯಿಂದ ಹೊರಬಿದ್ದಿದ್ದು, ಅವರ ಬದಲಿಗೆ ಟಿಯಾನ್ ವ್ಯಾನ್ ವುರೆನ್, ಜೆಜೆ ಬಾಸನ್ ಮತ್ತು ಈಥನ್ ಬೋಷ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಇಬ್ಬರು ಮೊದಲ ಬಾರಿ ರಾಷ್ಟ್ರೀಯ ತಂಡದ ಕರೆ ಪಡೆದಿದ್ದಾರೆ.

ಬಾಂಗ್ಲಾ ವೈಟ್‌ಬಾಲ್‌ ಸರಣಿಗಳಿಂದ ಜೆರಾಲ್ಡ್‌ ಕೊಯೆಟ್ಜಿ, ಎಂಫಾಕಾ ಔಟ್‌.

ನವದೆಹಲಿ: ಬಾಂಗ್ಲಾದೇಶ ವಿರುದ್ಧದ ತವರಿನ ವೈಟ್‌ಬಾಲ್ ಸರಣಿಗಳಿಗೂ (BAN vs SA) ಮುನ್ನ ದಕ್ಷಿಣ ಆಫ್ರಿಕಾ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿದೆ. ಪ್ರಮುಖ ವೇಗದ ಬೌಲರ್‌ಗಳಾದ ಜೆರಾಲ್ಡ್ ಕೊಯೆಟ್ಜಿ (Gerald Coetzee) ಮತ್ತು ಕ್ವೆನಾ ಎಂಫಾಕಾ ( Kwena Maphaka) ಗಾಯದ ಕಾರಣ ತಂಡದಿಂದ ಹೊರಬಿದ್ದಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ಮೂವರು ಹೊಸ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಲಾಗಿದ್ದು, ಇಬ್ಬರು ಆಟಗಾರರು ಮೊದಲ ಬಾರಿ ರಾಷ್ಟ್ರೀಯ ತಂಡದಲ್ಲಿ ಚೊಚ್ಚಲ ಸ್ಥಾನ ಪಡೆದಿದ್ದಾರೆ.

ಜೆರಾಲ್ಡ್ ಕೊಯೆಟ್ಜಿ ಗಾಯದ ಕಾರಣ ಏಕದಿನ ಹಾಗೂ ಟಿ20ಐ ತಂಡಗಳೆರಡರಿಂದಲೂ ಹೊರಬಿದ್ದಿದ್ದಾರೆ. ಮತ್ತೊಂದೆಡೆ, ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಕ್ವೆನಾ ಎಂಫಾಕಾ ಅಭ್ಯಾಸದ ವೇಳೆ ಮತ್ತೆ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಹೀಗಾಗಿ ಅವರನ್ನು ಟಿ20ಐ ತಂಡದಿಂದ ಕೈಬಿಡಲಾಗಿದೆ.

2034ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಮತ್ತೊಮ್ಮೆ ಯುಎಸ್‌ಎ, ವೆಸ್ಟ್‌ ಇಂಡೀಸ್‌ಗೆ ಜಂಟಿ ಆತಿಥ್ಯ?

ಸಿಎಸ್‌ಎ 4-ಡೇ ಸರಣಿಯಲ್ಲಿ ಕೊಯೆಟ್ಜಿಗೆ ಗಾಯ

ನವೆಂಬರ್ 22ರಂದು ಸಿಎಸ್‌ಎ 4-ಡೇ ಸರಣಿಯ ಡಿವಿಷನ್ 1 ಪಂದ್ಯದಲ್ಲಿ ಲಯನ್ಸ್ ತಂಡದ ಪರ ಆಡುತ್ತಿದ್ದಾಗ ಕೊಯೆಟ್ಜಿ ಗಾಯಗೊಂಡಿದ್ದರು. ನಾರ್ತ್ ವೆಸ್ಟ್ ವಿರುದ್ಧದ ಈ ಪಂದ್ಯದಲ್ಲಿ ಅವರು ಬ್ಯಾಟಿಂಗ್‌ನಲ್ಲಿ 57 ರನ್ ಗಳಿಸಿದ್ದರು. ಅಲ್ಲದೆ, 47 ಎಸೆತಗಳನ್ನು ಬೌಲ್‌ ಮಾಡಿ ಎರಡು ವಿಕೆಟ್ ಪಡೆದಿದ್ದರು. ಆದರೆ ಮುಂದಿನ ಇನಿಂಗ್ಸ್‌ನಲ್ಲಿ ಬೌಲ್‌ ಮಾಡಲು ಸಾಧ್ಯವಾಗಿರಲಿಲ್ಲ.

ಇತ್ತ 18ರ ವಯಸ್ಸಿನ ಎಂಫಾಕಾ ಬಲಗಾಲಿನ ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅಭ್ಯಾಸದ ವೇಳೆ ಮತ್ತೊಮ್ಮೆ ಹಿನ್ನಡೆ ಅನುಭವಿಸಿದ್ದಾರೆ. ಈ ಬಗ್ಗೆ ಕ್ರಿಕೆಟ್ ದಕ್ಷಿಣ ಆಫ್ರಿಕಾ (CSA) ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

"ಬಲಗಾಲಿನ ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಆಟಗಾರ ಅಭ್ಯಾಸದ ವೇಳೆ ಮತ್ತೆ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ತಂಡದಿಂದ ಹಿಂಪಡೆಯಲಾಗಿದೆ," ಎಂದು ಸಿಎಸ್‌ಎ ತಿಳಿಸಿದೆ. ಡಿಸೆಂಬರ್ 1ರಿಂದ ಆರಂಭವಾಗಲಿರುವ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾ ಎ ತಂಡದಲ್ಲೂ ಎಂಫಾಕಾ ಸ್ಥಾನ ಪಡೆದಿದ್ದರು.

‘ನಾನು ಇದು ಟಿ20 ಪಂದ್ಯ ಅಂದುಕೊಂಡಿದ್ದೆ’: ವೈಭವ್‌ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್‌ ಬಗ್ಗೆ ಕ್ರಿಸ್‌ ಗೇಲ್‌ ಹೇಳಿದ್ದಿದು!

ಏಕದಿನ, ಟಿ20 ತಂಡಗಳಲ್ಲಿ ಬದಲಾವಣೆ

ಕೊಯೆಟ್ಜಿ ಅನುಪಸ್ಥಿತಿಯಲ್ಲಿ ಏಕದಿನ ತಂಡಕ್ಕೆ ಎಡಗೈ ವೇಗದ ಬೌಲಿಂಗ್ ಆಲ್‌ರೌಂಡರ್ ಟಿಯಾನ್ ವ್ಯಾನ್ ವುರೆನ್ ಮೊದಲ ಬಾರಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅವರು ಈವರೆಗೆ 26 ಲಿಸ್ಟ್ ಎ ಪಂದ್ಯಗಳನ್ನಾಡಿದ್ದು, 25.57ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.

ಇನ್ನು ಟಿ20 ತಂಡಕ್ಕೆ ಜೆಜೆ ಬಾಸನ್ ಮತ್ತು ಈಥನ್ ಬೋಷ್ ಸೇರ್ಪಡೆಯಾಗಿದ್ದಾರೆ. 18ರ ವಯಸ್ಸಿನ ಲಯನ್ಸ್ ತಂಡದ ಆಟಗಾರ ಜೆಜೆ ಬಾಸನ್ ಎಡಗೈ ಮಧ್ಯಮ ವೇಗದ ಬೌಲಿಂಗ್ ಮಾಡಬಲ್ಲ ಬ್ಯಾಟರ್ ಆಗಿದ್ದಾರೆ. ಕೇವಲ ಆರು ಟಿ20 ಪಂದ್ಯಗಳನ್ನಾಡಿರುವ ಅವರು ಐದು ವಿಕೆಟ್ ಪಡೆದಿದ್ದು, 7.08ರ ಎಕಾನಮಿ ರೇಟ್ ಹೊಂದಿದ್ದಾರೆ. ಅವರಿಗೆ ಇದೇ ಮೊದಲ ಬಾರಿ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡದಲ್ಲಿ ಅವಕಾಶ ದೊರೆತಿದೆ.

ಮತ್ತೊಂದೆಡೆ ಈಥನ್ ಬೋಷ್ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನುಭವ ಹೊಂದಿದ್ದಾರೆ. ದಕ್ಷಿಣ ಆಫ್ರಿಕಾ ಪರ ಮೂರು ಏಕದಿನ ಹಾಗೂ ನಾಲ್ಕು ಟಿ20 ಪಂದ್ಯಗಳನ್ನಾಡಿದ್ದಾರೆ. ಅವರ ಕೊನೆಯ ಟಿ20 ಅಂತರರಾಷ್ಟ್ರೀಯ ಪಂದ್ಯ ಸೆಪ್ಟೆಂಬರ್‌ನಲ್ಲಿ ನಡೆದಿತ್ತು.



ಬಾಂಗ್ಲಾದೇಶ ವಿರುದ್ಧದ ಒಡಿಐ ಸರಣಿಗೆ ಪರಿಷ್ಕೃತ ದಕ್ಷಿಣ ಆಫ್ರಿಕಾ ತಂಡ: ಕೇಶವ್‌ ಮಹಾರಾಜ್‌ (ನಾಯಕ), ಡೆವಾಲ್ಡ್‌ ಬ್ರೆವಿಸ್‌, ಕಾರ್ಬಿನ್‌ ಬಾಷ್‌, ಟಿಯಾನ್‌ ವಾನ್‌ ವುರೆನ್‌, ಕ್ವಿಂಟನ್‌ ಡಿ ಕಾಕ್‌, ಟೋನಿ ಡಿ ಝಾರ್ಝಿ, ಬಿಜೋರ್ನ್‌ ಫಾರ್ಚ್ಯೂನ್‌, ಜೋರ್ಡನ್‌ ಹರ್ಮನ್‌, ಡ್ಯೂನ್‌ ಯೆನ್ಸನ್‌,ಎನ್‌ಕೋಬಾನಿ ಮೊಕೋಯಿನಾ, ಲ್ಯೂನ್‌ ಡ್ರೆ ಪ್ರೆಟೋರಿಯಸ್‌, ಎರ್ನಿಕ್‌ ನೊರ್ಕಿಯಾ, ಲುಂಗಿ ಎನ್ಗಿಡಿ, ಸಿನೆತೆಂಬಾ ಕ್ವಿಷಿಲ್‌, ಟ್ರಿಸ್ಟನ್‌ ಸ್ಟಬ್ಸ್‌

ಬಾಂಗ್ಲಾದೇಶ ಟಿ20ಐ ಸರಣಿಗೆ ಪರಿಷ್ಕೃತ ದಕ್ಷಿಣ ಆಫ್ರಿಕಾ ತಂಡ: ಬಿಜೋರ್ನ್‌ ಫಾರ್ಚ್ಯೂನ್‌ (ನಾಯಕ),ಡೆವಾಲ್ಡ್‌ ಬ್ರೆವಿಸ್‌, ಈಥನ್ ಬೋಷ್, ಕಾನರ್ ಎಸ್ಟರ್‌ಹುಯಿಜೆನ್, ಡೊನೊವನ್ ಫೆರೇರಾ, ಜೋರ್ಡನ್ ಹರ್ಮನ್, ಡುವಾನ್ ಜಾನ್ಸನ್, ಜೆಜೆ ಬಾಸನ್, ನ್ಕೊಬಾನಿ ಮೊಕೊಯೆನಾ, ನ್ಕಾಬಾ ಪೀಟರ್, ಲುವಾನ್-ಡ್ರೆ ಪ್ರಿಟೋರಿಯಸ್, ಸಿನೆಥೆಂಬಾ ಕೆಶಿಲೆ, ಟ್ರಿಸ್ಟನ್ ಸ್ಟಬ್ಸ್, ಪ್ರೆನೆಲನ್ ಸುಬ್ರಯನ್