ನವದೆಹಲಿ: ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್ (ICC ODI World Cup 2026) ಟೂರ್ನಿಗೆ ಇನ್ನು ಕೇವಲ ಒಂದು ವರ್ಷ ಮಾತ್ರ ಬಾಕಿ ಇದೆ. ಹಾಗಾಗಿ ಬಿಸಿಸಿಐ ಸೆಲೆಕ್ಟರ್‌ಗಳು ಅತ್ಯಂತ ಬಲಿಷ್ಠ ತಂಡವನ್ನು ಕಟ್ಟಲು ಯೋಜನೆಯನ್ನು ಹಾಕಿಕೊಂಡಿದ್ದಾರೆ. ಇದರ ನಡುವ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ (R Ashwin) ಅವರು, ತಮ್ಮ ನೆಚ್ಚಿನ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಅವರು ಸ್ಥಾನ ಪಡೆಯಬಲ್ಲ, ಸ್ಥಾನ ಕಳೆದುಕೊಳ್ಳಬಲ್ಲ ಆಟಗಾರರನ್ನು ವಿಂಗಡಿಸಿದ್ದಾರೆ. ಅಶ್ವಿನ್ ಅವರ ಆಯ್ಕೆಯಲ್ಲಿ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್, ಯುವ ಪ್ರತಿಭೆ ವೈಭವ್ ಸೂರ್ಯವಂಶಿ, ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಸೇರಿದಂತೆ ಹಲವು ಸ್ಟಾರ್ ಆಟಗಾರರನ್ನು ಕಡೆಗಣಿಸಿದ್ದಾರೆ.
ಅಚ್ಚರಿಯ ರೀತಿಯಲ್ಲಿ ರವಿಚಂದ್ರನ್ ಅಶ್ವಿನ್ ತಮ್ಮ ಸಂಭಾವ್ಯ ಭಾರತ ತಂಡದಲ್ಲಿ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರಿಗೆ ಸ್ಥಾನ ನೀಡಿದ್ದಾರೆ. ಆದರೆ ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ಅವರ ಆಯ್ಕೆ ಕುರಿತು ಅಂತಿಮ ನಿರ್ಧಾರ ಯಾವುದೇ ದಿಕ್ಕಿನಲ್ಲಿ ಬೇಕಾದರೂ ಸಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಎಎಸ್‌ಪಿಎನ್ ಕ್ರಿಕ್‌ಇನ್ಫೋ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾದ ವಿಡಿಯೊದಲ್ಲಿ ಮಾತನಾಡಿದ ಅಶ್ವಿನ್, "ಭುವನೇಶ್ವರ್ ಕುಮಾರ್‌ಗೆ ನಾನು ಖಚಿತವಾಗಿ ಅವಕಾಶ ನೀಡುತ್ತೇನೆ. ಅವರನ್ನು ಸಂಪರ್ಕಿಸಿ, ಎಲ್ಲಾ ಟೂರ್ನಿಗಳಲ್ಲಿ, ಪ್ರಥಮ ದರ್ಜೆ ಕ್ರಿಕೆಟ್ ಹಾಗೂ ವಿಜಯ್ ಹಝಾರೆ ಟ್ರೋಫಿಯಲ್ಲಿ ಆಡಿಸಿ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಂಪೂರ್ಣ ಸಜ್ಜುಗೊಳಿಸಬೇಕು. ಅಲ್ಲಿ ಅವರ ಅನುಭವ ತಂಡಕ್ಕೆ ಅಗತ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ," ಎಂದು ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಸೇರಲಿದ್ದಾರಾ ಕೆ.ಎಲ್. ರಾಹುಲ್?; ಇನ್‌ಸ್ಟಾ ಪೋಸ್ಟ್ ವೈರಲ್
ಆರ್ ಅಶ್ವಿನ್ ಅವರ ಸಂಭಾವ್ಯ ಪಟ್ಟಿ ಹೀಗಿದೆ
ತಂಡದಲ್ಲಿ ಸ್ಥಾನ ಪಡೆಯುವ ಖಚಿತ ಆಟಗಾರರು : ಶುಭ್‌ಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಭುವನೇಶ್ವರ್ ಕುಮಾರ್
ಅನುಮಾನ : ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ವರುಣ್ ಚಕ್ರವರ್ತಿ, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಪ್ರಸಿಧ್ ಕೃಷ್ಣ
ಸ್ಥಾನ ಪಡೆಯದ ಆಟಗಾರರು: ರಿಷಭ್ ಪಂತ್, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್, ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ರವಿ ಬಿಷ್ಣೋಯ್, ಶಿವಂ ದುಬೆ, ಪ್ರಿನ್ಸ್ ಯಾದವ್ ಮತ್ತು ಗುರ್ನೂರ್ ಬ್ರಾರ್
ನಾನು ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸುತ್ತೇನೆ, ಡೆರೆನ್ ಸಾಮಿಯನ್ನು ಅಲ್ಲ: ಆಲ್ಝಾರಿ ಜೋಸೆಫ್ ತಿರುಗೇಟು!
ದಕ್ಷಿಣ ಆಫ್ರಿಕಾದಲ್ಲಿ ಭುವನೇಶ್ವರ್‌ರ ಅನುಭವಕ್ಕೆ ಅಶ್ವಿನ್ ಮನ್ನಣೆ
ದಕ್ಷಿಣ ಆಫ್ರಿಕಾದಲ್ಲಿ ಭುವನೇಶ್ವರ್ ಕುಮಾರ್ ಉತ್ತಮ ಅನುಭವ ಹೊಂದಿದ್ದಾರೆ. ಆ ದೇಶದಲ್ಲಿ ಅವರು ಆಡಿರುವ 13 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 35.26ರ ಸರಾಸರಿಯಲ್ಲಿ 19 ವಿಕೆಟ್‌ಗಳನ್ನು ಪಡೆದಿದ್ದು, 5/24 ಅವರ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ. ಆದರೆ ಈ 19 ವಿಕೆಟ್‌ಗಳಲ್ಲಿ ಕೇವಲ ಎರಡು ವಿಕೆಟ್‌ಗಳು ಮಾತ್ರ ಏಕದಿನ ಕ್ರಿಕೆಟ್‌ನಲ್ಲಿ, ಅದು ಕೂಡ ಎಂಟು ಪಂದ್ಯಗಳಿಂದ ಬಂದಿವೆ.
ಇತ್ತೀಚಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಭುವನೇಶ್ವರ್ ಕುಮಾರ್ ತೋರಿದ ಅದ್ಭುತ ಪ್ರದರ್ಶನ ಗಮನಾರ್ಹವಾಗಿದೆ. ಹೆಚ್ಚಿನ ರನ್‌ಗಳು ಹರಿದುಬಂದ ಪಂದ್ಯಗಳಲ್ಲಿಯೂ ತಮ್ಮ ಸಾಂಪ್ರದಾಯಿಕ ಟೆಸ್ಟ್ ಶೈಲಿಯ ಬೌಲಿಂಗ್, ನಿಖರ ಯಾರ್ಕರ್‌ಗಳು ಹಾಗೂ ಸ್ವಿಂಗ್ ಮೂಲಕ ಎದುರಾಳಿಗಳನ್ನು ಕಾಡಿದ ಅವರು 16 ಪಂದ್ಯಗಳಲ್ಲಿ 28 ವಿಕೆಟ್‌ಗಳನ್ನು ಕಬಳಿಸಿದರು. 17.89ರ ಸರಾಸರಿ ಮತ್ತು 7.95ರ ಎಕಾನಮಿ ದರದೊಂದಿಗೆ ಟೂರ್ನಿಯ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.