ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಆಟಗಾರರಿಗೆ ನೀರು ಕೊಟ್ಟರೆ ತಪ್ಪೇನು?ʼ: ವೈಭವ್‌ ಬಗ್ಗೆ ನೀಡಿದ್ದ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಆರ್‌ ಅಶ್ವಿನ್‌!

ಸ್ಪಿನ್‌ ದಿಗ್ಗಜ ರವಿಚಂದ್ರನ್ ಅಶ್ವಿನ್ ಅವರು ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಉತ್ತಮ ಪ್ರದರ್ಶನ ನೀಡುವಂತೆ ಒತ್ತಡ ಹಾಕುವ ಬದಲು, ಕೆಲವೊಮ್ಮೆ ಹೊರಗಿನಿಂದ ಪಂದ್ಯಗಳನ್ನು ಗಮನಿಸಿ ಕಲಿಯುವುದು ಯುವ ಆಟಗಾರನ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದು ಅಶ್ವಿನ್ ಈ ಹಿಂದೆ ಹೇಳಿದ್ದರು. ಇದೀಗ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ವೈಭವ್‌ ಬಗ್ಗೆ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡ ಆರ್‌ ಅಶ್ವಿನ್‌.

ನವದೆಹಲಿ: ಯುವ ಬ್ಯಾಟ್ಸ್‌ಮನ್‌ ವೈಭವ್ ಸೂರ್ಯವಂಶಿ (Vaibhav Sooryavanshi) ಬಗ್ಗೆ ತಾವು ನೀಡಿದ್ದ ʼತಂಡದ ಆಟಗಾರರಿಗೆ ನೀರು ಕೊಡಬಹುದುʼ ಎಂಬ ಹೇಳಿಕೆ ಕುರಿತು ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ (R Ashwin) ಸ್ಪಷ್ಟನೆ ನೀಡಿದ್ದಾರೆ. ಅದು ಯಾವುದೇ ಅವಮಾನ ಮಾಡುವ ಉದ್ದೇಶದಿಂದ ಹೇಳಿದ ಮಾತಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. 15ರ ವಯಸ್ಸಿನ ವೈಭವ್ ಸೂರ್ಯವಂಶಿ ಭವಿಷ್ಯದಲ್ಲಿ "ಅತ್ಯಂತ ಅದ್ಭುತ ಬ್ಯಾಟರ್" ಆಗುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಅವರ ಬೆಳವಣಿಗೆಯ ಹಂತದಲ್ಲಿ ಕೆಲ ಪಂದ್ಯಗಳಲ್ಲಿ ಬೆಂಚ್ ಮೇಲೆ ಕುಳಿತು ಹಿರಿಯ ಆಟಗಾರರನ್ನು ಗಮನಿಸುವುದರಿಂದ ಅವರಿಗೆ ಹೆಚ್ಚಿನ ಅನುಭವ ಸಿಗುತ್ತಿತ್ತು ಎಂದು ಮಾಜಿ ಸ್ಪಿನ್ನರ್ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ತಿಂಗಳು ಸೂರ್ಯವಂಶಿ ಭಾರತ ತಂಡಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದರು. ಆದರೆ ಐರ್ಲೆಂಡ್ ವಿರುದ್ಧದ ಮೊದಲ ಎರಡು ಪಂದ್ಯಗಳು ಹಾಗೂ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ.

ಆ ಬಳಿಕ ಆಡಿದ ಮೂರು ಪಂದ್ಯಗಳಲ್ಲಿ 15 ರನ್‌ಗಳ ಗಡಿ ತಲುಪಲು ವಿಫಲರಾದ ಕಾರಣ ಮತ್ತೊಮ್ಮೆ ತಂಡದಿಂದ ಹೊರಗುಳಿಯಬೇಕಾಯಿತು. ಆದರೆ ಎಡಗೈ ಆರಂಭಿಕ ಆಟಗಾರ ಅದಕ್ಕೆ ತಕ್ಕ ಉತ್ತರ ನೀಡಿದ್ದು, ಜಿಂಬಾಬ್ವೆ ಎದುರು ಟಿ20ಐ ಸರಣಿಯಲ್ಲಿ. ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯು ಅವರ ಕ್ರಿಕೆಟ್ ವೃತ್ತಿಜೀವನದಲ್ಲಿ ಮಹತ್ವದ ತಿರುವನ್ನು ತಂದುಕೊಟ್ಟಿದೆ.

ಬಾಬರ್‌ ಆಝಮ್‌ ನಾಯಕನಾಗಿ ಮರಳಿದರೂ ಪಾಕಿಸ್ತಾನ ತಂಡದ ಹಣೆ ಬರಹ ಬದಲಾಗಲಿಲ್ಲ!

ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಅಶ್ವಿನ್‌

"ವೈಭವ್ ಸೂರ್ಯವಂಶಿ ಬಗ್ಗೆ ನಾನು ಈ ಹಿಂದೆ, ‘ಅವರು ಸಮಯ ಕಳೆಯಬಹುದು, ಯಾರಿಗಾದರೂ ನೀರು ಕೊಡಬಹುದು, ಹೊರಗೆ ಕುಳಿತುಕೊಳ್ಳಬಹುದು’ ಎಂದು ಹೇಳಿದ್ದೆ. ಅದು ಯಾವುದೇ ಅವಹೇಳನದ ಉದ್ದೇಶದಿಂದ ಹೇಳಿದ ಮಾತಲ್ಲ. ಅವನು ಕಲಿಯಲು ಸಾಕಷ್ಟು ಅವಕಾಶಗಳನ್ನು ಪಡೆಯುತ್ತಾರೆ ಎಂಬ ಅರ್ಥದಲ್ಲಿ ನಾನು ಹೇಳಿದ್ದೆ."

"ಹೊರಗೆ ಕುಳಿತು ಇತರ ಆಟಗಾರರನ್ನು ಗಮನಿಸಿದರೂ ಅವರಿಗೆ ಸಾಕಷ್ಟು ಅನುಭವ ಸಿಗುತ್ತದೆ. ಅವರ ಕಲಿಕೆಯ ಹಾದಿ ತುಂಬಾ ದೊಡ್ಡದಾಗಿದೆ ಮತ್ತು ಅದರಿಂದ ಅವರು ಇನ್ನಷ್ಟು ಉತ್ತಮ ಆಟಗಾರರಾಗಬಹುದು. ಅವರನ್ನು ಆಯ್ಕೆ ಮಾಡಬೇಕು ಅಥವಾ ಕೈಬಿಡಬೇಕು ಎಂಬ ಚರ್ಚೆ ಬೇಡ — ಅವರಿಗೆ ತನ್ನದೇ ಆದ ಸಮಯ ನೀಡಿ, ಅವರಿಗೆ ಬೆಳೆಯಲು ಅವಕಾಶ ಮಾಡಿಕೊಡಿ. ಭವಿಷ್ಯದಲ್ಲಿ ಅವರು ಅತ್ಯಂತ ಅದ್ಭುತ ಆಟಗಾರನಾಗಲಿದ್ದಾರೆ," ಎಂದು ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಭಾರತ ತಂಡವನ್ನು ತೊರೆದ ಬೆನ್ನಲ್ಲೆ ಕೆಕೆಆರ್‌ ತಂಡದಲ್ಲಿ ದೊಡ್ಡ ಹುದ್ದೆಯನ್ನು ಅಲಂಕರಿಸಿದ ರಯಾನ್‌ ಟೆನ್‌ ಡಶ್ಕಾಟೆ!

ಏಷ್ಯನ್ ಗೇಮ್ಸ್ ತಂಡದ ಭಾಗವಾಗಿರುವ ವೈಭವ್ ಸೂರ್ಯವಂಶಿ ಅವರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಲು ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರೊಂದಿಗೆ ಪೈಪೋಟಿ ಎದುರಾಗಲಿದೆ. ವೈಭವ್ ಅವರ ಪ್ರದರ್ಶನದಲ್ಲಿ ಇಂಗ್ಲೆಂಡ್ ಮತ್ತು ಜಿಂಬಾಬ್ವೆ ಸರಣಿಗಳ ನಡುವೆ ಪ್ರಮುಖ ವ್ಯತ್ಯಾಸ ಕಂಡುಬಂದಿದ್ದು, ಅದಕ್ಕೆ ಎದುರಾಳಿ ಬೌಲಿಂಗ್ ವೇಗ ಮತ್ತು ಪಿಚ್‌ಗಳ ಸ್ವಭಾವವೇ ಕಾರಣವಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರ ಶಾರ್ಟ್ ಬಾಲ್‌ಗಳು ವೈಭವ್ ಅವರನ್ನು ಹಲವು ಬಾರಿ ಸಂಕಷ್ಟಕ್ಕೆ ಸಿಲುಕಿಸಿದ್ದವು.

ಆದರೆ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಯುವ ಬ್ಯಾಟರ್ ಉತ್ತಮವಾಗಿ ಹೊಂದಿಕೊಂಡರು. ವಿಶೇಷವಾಗಿ ಪುಲ್ ಮತ್ತು ಹುಕ್ ಶಾಟ್‌ಗಳ ಮೂಲಕ ಅವರು ವೇಗದ ಬೌಲಿಂಗ್ ಎದುರಿಸುವ ಸಾಮರ್ಥ್ಯವನ್ನು ತೋರಿಸಿದರು. ಈ ಪ್ರದರ್ಶನವು ಅವರ ಬೆಳವಣಿಗೆಯ ಹಾದಿಯಲ್ಲಿ ಮಹತ್ವದ ಹೆಜ್ಜೆಯಾಗಿದೆ.