ನವದೆಹಲಿ: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ (AUS vs ENG) ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ (AUS vs ENG) ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಇಂಗ್ಲೆಂಡ್ ನಾಲ್ಕು ವಿಕೆಟ್‌ಗಳಿಂದ ಈ ಪಂದ್ಯವನ್ನು ಗೆದ್ದುಕೊಂಡಿತು. ಈ ಪಂದ್ಯದಲ್ಲಿ, ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ (Steven Smith) ಮಹತ್ವದ ದಾಖಲೆಯನ್ನು ಬರೆದಿದ್ದಾರೆ. ಬಾಕ್ಸಿಂಗ್ ಡೇ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ ಸ್ಮಿತ್ ಒಂಬತ್ತು ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ 24 ರನ್ ಗಳಿಸಿ ಅಜೇಯರಾಗಿ ಉಳಿದರು. ಇದರೊಂದಿಗೆ, ಅವರು ಈಗ ಮಹತ್ವದ ದಾಖಲೆಯನ್ನು ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಸ್ಟ್ರೇಲಿಯಾದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಅನುಭವಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಮೂಲಕ ದಂತಕಥೆಯ ಅಲಾನ್ ಬಾರ್ಡರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಇದೀಗ ಅವರು ಡಾನ್ ಬ್ರಾಡ್‌ಮನ್‌ಗಿಂತ ಹಿಂದಿಕ್ಕಿದ್ದಾರೆ. ಸ್ಮಿತ್ 40 ಪಂದ್ಯಗಳ 72 ಇನಿಂಗ್ಸ್‌ಗಳಲ್ಲಿ 3553 ರನ್ ಗಳಿಸಿದ್ದಾರೆ. ಆಷಸ್‌ನಲ್ಲಿ ಸ್ಮಿತ್ 12 ಶತಕಗಳು ಮತ್ತು 14 ಅರ್ಧಶತಕಗಳನ್ನು ಹೊಂದಿದ್ದಾರೆ.
AUS vs ENG: 15 ವರ್ಷಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದ ಇಂಗ್ಲೆಂಡ್!
ಇಂಗ್ಲೆಂಡ್ ವಿರುದ್ಧದ 47 ಟೆಸ್ಟ್ ಪಂದ್ಯಗಳಲ್ಲಿ ಅಲಾನ್ ಬಾರ್ಡರ್ 82 ಇನಿಂಗ್ಸ್‌ಗಳಿಂದ 8 ಶತಕಗಳು ಮತ್ತು 21 ಅರ್ಧಶತಕಗಳು ಸೇರಿ 3548 ರನ್ ಗಳಿಸಿದ್ದಾರೆ. ಡಾನ್ ಬ್ರಾಡ್ಮನ್ ಇಂಗ್ಲೆಂಡ್ ವಿರುದ್ಧದ 37 ಟೆಸ್ಟ್ ಪಂದ್ಯಗಳಲ್ಲಿ 19 ಶತಕಗಳು ಮತ್ತು 12 ಅರ್ಧಶತಕಗಳು ಸೇರಿದಂತೆ 5028 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಅವರು ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಸ್ಟೀವ್ ಸ್ಮಿತ್ ಅವರ ಕ್ರಿಕೆಟ್ ವೃತ್ತಿಜೀವನ
36ನೇ ವಯಸ್ಸಿನ ಸ್ಟೀವ್ ಸ್ಮಿತ್ 2010ರಲ್ಲಿ ಆಸ್ಟ್ರೇಲಿಯಾ ಪರ ಮೂರು ಸ್ವರೂಪಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅವರು ಆಸ್ಟ್ರೇಲಿಯಾ ಪರ 122 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 36 ಶತಕಗಳು ಮತ್ತು 44 ಅರ್ಧಶತಕಗಳೊಂದಿಗೆ 10613 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅವರು 170 ಪಂದ್ಯಗಳಲ್ಲಿ 12 ಶತಕಗಳು ಮತ್ತು 35 ಅರ್ಧಶತಕಗಳು ಸೇರಿದಂತೆ 5800 ರನ್ ಗಳಿಸಿದ್ದಾರೆ. ಟಿ20ಐಗಳಲ್ಲಿ ಅವರು 67 ಪಂದ್ಯಗಳಲ್ಲಿ 5 ಅರ್ಧಶತಕಗಳು ಸೇರಿದಂತೆ 1094 ರನ್ ಗಳಿಸಿದ್ದಾರೆ.
ʻಕೇವಲ ಎರಡೇ ದಿನದಲ್ಲಿ ನಾಲ್ಕನೇ ಟೆಸ್ಟ್ ಅಂತ್ಯʼ: ಎಂಸಿಜಿ ಪಿಚ್ ಅನ್ನು ಟೀಕಿಸಿದ ದಿನೇಶ್ ಕಾರ್ತಿಕ್!
ಇಂಗ್ಲೆಂಡ್ ಎದುರು ಸೋತ ಆಸ್ಟ್ರೇಲಿಯಾ
ಇಂಗ್ಲೆಂಡ್ ಟೆಸ್ಟ್ ಸರಣಿಯ ಆರಂಭಿಕ ಮೂರು ಪಂದ್ಯಗಳನ್ನು ಗೆದ್ದಿದ್ದ ಆಸ್ಟ್ರೇಲಿಯಾ ತಂಡ, ನಾಲ್ಕನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಎರಡನೇ ದಿನವಾದ ಶನಿವಾರ ಇಂಗ್ಲೆಂಡ್ ತಂಡಕ್ಕೆ ಆಸ್ಟ್ರೇಲಿಯಾ 175 ರನ್‌ಗಳ ಗುರಿಯನ್ನು ನೀಡಿತ್ತು. ಬಳಿಕ ಇಂಗ್ಲೆಂಡ್ 6 ವಿಕೆಟ್ ಕಳೆದುಕೊಂಡು ಪಂದ್ಯವನ್ನು ಗೆದ್ದುಕೊಂಡಿತು.