ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದಕ್ಷಿಣ ಭಾರತದ ಪ್ರಖ್ಯಾತ ಸಂಗೀತ ನಿರ್ದೇಶಕನ ಜೊತೆ ಕಾವ್ಯಾ ಮಾರನ್‌ ಮದುವೆ?

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ತಂಡವಾದ ಸನ್‌ರೈಸರ್ಸ್ ಹೈದರಾಬಾದ್‌ನ ಒಡತಿ ಕಾವ್ಯಾ ಮಾರನ್, ದಕ್ಷಿಣ ಭಾರತದ ಖ್ಯಾತ ಸಂಗೀತಗಾರನೊಂದಿಗೆ ಡೇಟಿಂಗ್‌ ನಡೆಸುತ್ತಿದ್ದಾರೆಂಬ ವದಂತಿಗಳಿವೆ. ಅಲ್ಲದೆ ಈ ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

ಸಂಗೀತ ನಿರ್ದೇಶಕನ ಜೊತೆ ಕಾವ್ಯಾ ಮಾರನ್‌ ಮದುವೆ?

ಕಾವ್ಯಾ ಮಾರನ್‌, ಅನಿರುಧ್‌

Profile Ramesh Kote Jun 14, 2025 7:24 PM

ನವದೆಹಲಿ: ಕಲಾನಿಧಿ ಮಾರನ್ ಅವರ ಪುತ್ರಿ ಹಾಗೂ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಟೂರ್ನಿಯ ಸನ್‌ರೈಸರ್ಸ್‌ ಹೈದರಾಬಾದ್‌ ಒಡತಿ ಕಾವ್ಯಾ ಮಾರನ್ (Kavya Maran), ದಕ್ಷಿಣ ಭಾರತದ ಪ್ರಖ್ಯಾತ ಸಂಗೀತಗಾರನೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆಂದು ವೆದಿಯಾಗಿದೆ. ಕಾವ್ಯಾ ಮಾರನ್‌ ಐಪಿಎಲ್ ತಂಡವಾದ ಸನ್‌ರೈಸರ್ಸ್ ಹೈದರಾಬಾದ್‌ನ ಒಡತಿ. ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಬಗ್ಗೆಯೂ ವರದಿಯಾಗಿದೆ. ಈ ಇಬ್ಬರೂ ಒಂದು ವರ್ಷದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ರೆಡ್ಡಿಟ್ ಪೋಸ್ಟ್ ಹಾಕಿದಾಗ ಈ ವದಂತಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈಗ ಇಬ್ಬರೂ ತಮ್ಮ ಸಂಬಂಧವನ್ನು ಮುಂದುವರಿಸಲು ಬಯಸುತ್ತಾರೆಂದು ಹೇಳಲಾಗುತ್ತಿದೆ. ಆದಾಗ್ಯೂ, ಈ ವಿಷಯದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಆದರೆ, ಈ ಊಹಾಪೋಹವು ಜನರ ಕುತೂಹಲವನ್ನು ಹೆಚ್ಚಿಸಿದೆ.

ಇತ್ತೀಚೆಗೆ, ಕೆಲವು ಅಭಿಮಾನಿಗಳು ಪ್ರಸಿದ್ಧ ಸಂಗೀತಗಾರ ಅನಿರುದ್ಧ್ ರವಿಚಂದರ್ ಮತ್ತು ಕಾವ್ಯ ಮಾರನ್ ಅವರನ್ನು ಖಾಸಗಿ ಭೋಜನಕೂಟದಲ್ಲಿ ಒಟ್ಟಿಗೆ ಇರುವುದನ್ನು ನೋಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ರೆಡ್ಡಿಟ್ ಬಳಕೆದಾರರೊಬ್ಬರು ತಮ್ಮ ಲಾಸ್ ವೇಗಾಸ್ ಟ್ರಿಪ್ ಹೋಟೆಲ್‌ನಿಂದ ಈ ಇಬ್ಬರೂ ನಡೆದುಕೊಂಡು ಹೋಗುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ರೆಡ್ಡಿಟ್ ಬಳಕೆದಾರ, "ನಾನು ಅವರನ್ನು ಒಂದು ವರ್ಷದ ಹಿಂದೆ ವೇಗಾಸ್‌ನಲ್ಲಿ ನೋಡಿದೆ. ಅವರು ಪರಸ್ಪರ ತುಂಬಾ ಆರಾಮವಾಗಿದ್ದರು," ಎಂದು ಹೇಳಿಕೊಂಡಿದ್ದಾರೆ. ಅನೇಕ ಜನರು ಅವರ ಹಳೆಯ ಸಂದರ್ಶನವನ್ನು ನೋಡಿದ್ದಾರೆ. ಅನಿರುದ್ಧ್ ಟೆಲಿಕಾಂ ಅಥವಾ ಮಾಧ್ಯಮ ಉದ್ಯಮದ ಮಹಿಳೆಯನ್ನು ಮದುವೆಯಾಗುತ್ತಾರೆ ಎಂದು ಅದು ಭವಿಷ್ಯ ನುಡಿದಿದೆ.

IPL 2025: ಆರ್‌ಸಿಬಿಗೆ ಕಪ್‌ ಗೆದ್ದುಕೊಡಬಲ್ಲ ನಾಲ್ವರು ಸ್ಟಾರ್‌ಗಳನ್ನು ಆರಿಸಿದ ವಿಜಯ್ ಮಲ್ಯ!

ರಜನಿಕಾಂತ್ ಜೊತೆ ಸಂಪರ್ಕವಿದೆ

ರೆಡಿಟ್ ಪೋಸ್ಟ್‌ನಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಈ ಸಂಬಂಧದ ಬಗ್ಗೆ ಕಲಾನಿಧಿ ಮಾರನ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಅನಿರುದ್ಧ್ ರವಿಚಂದರ್, ರಜನಿಕಾಂತ್ ಅವರಿಗೆ ಆಪ್ತರು ಎಂದು ಹೇಳಲಾಗಿದೆ. ಆದಾಗ್ಯೂ, ಅಧಿಕೃತ ಘೋಷಣೆ ಬರುವವರೆಗೂ ಈ ವಿಷಯದ ಬಗ್ಗೆ ಏನನ್ನೂ ಹೇಳಲಾಗುವುದಿಲ್ಲ ಎಂದು ಬಳಕೆದಾರರು ಹೇಳಿದ್ದಾರೆ. ಮದುವೆಯ ಸಿದ್ಧತೆಗಳು ಮುಚ್ಚಿದ ಬಾಗಿಲುಗಳ ಹಿಂದೆ ಪ್ರಾರಂಭವಾಗಿವೆ ಎಂದು ಕೆಲವರು ಹೇಳಿಕೊಳ್ಳುತ್ತಾರೆ.

ಅನಿರುಧ್‌ ಮತ್ತು ಕಾವ್ಯಾ ಮಾರನ್ ಶ್ರೀಮಂತ ಕುಟುಂಬದವರು

34ರ ವರ್ಷದ ಅನಿರುದ್ಧ್ ರವಿಚಂದರ್ ಶ್ರೀಮಂತ ಕುಟುಂಬದಿಂದ ಬಂದವರು ಎಂದು ಎಲ್ಲರಿಗೂ ತಿಳಿದಿದೆ. ಅವರು ನಟ ರವಿ ರಾಘವೇಂದ್ರ ಮತ್ತು ನರ್ತಕಿ ಲಕ್ಷ್ಮಿ ಅವರ ಮಗ. ಅವರ ಮುತ್ತಜ್ಜ 1930 ರ ದಶಕದಲ್ಲಿ ಚಲನಚಿತ್ರ ನಿರ್ಮಾಪಕರಾಗಿದ್ದರು. 32 ವರ್ಷದ ಕಾವ್ಯಾ ಮಾರನ್ ಸನ್ ಟೆಲಿವಿಷನ್ ಅಧ್ಯಕ್ಷರ ಮಗಳು. ಅವರು ಐಪಿಎಲ್ ತಂಡದ ಸನ್‌ರೈಸರ್ಸ್ ಹೈದರಾಬಾದ್‌ನ ಮಾಲೀಕರಾಗಿದ್ದಾರೆ.