ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RR vs SRH: ಸೂರ್ಯವಂಶಿ ಶತಕ ವ್ಯರ್ಥ, ರಾಜಸ್ಥಾನ್‌ಗೆ ಆಘಾತ ನೀಡಿದ ಸನ್‌ರೈಸರ್ಸ್‌ ಹೈದರಾಬಾದ್‌!

RR vs SRH Match Highligts: ವೈಭವ್‌ ಸೂರ್ಯವಂಶಿ ಶತಕದ ಹೊರತಾಗಿಯೂ ರಾಜಸ್ಥಾನ್‌ ರಾಯಲ್ಸ್‌ ತಂಡ, ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಎರಡನೇ ಪಂದ್ಯದಲ್ಲಿಯೂ ಸೋಲು ಅನುಭವಿಸಿತು. ಆರ್‌ಆರ್‌ ನೀಡಿದ್ದ 229 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಸನ್‌ರೈಸರ್ಸ್‌, ಇಶಾನ್‌ ಕಿಶನ್‌ ಹಾಗೂ ಅಭಿಷೇಕ್‌ ಶರ್ಮಾರ ಸ್ಪೋಟಕ ಅರ್ಧಶತಕಗಳಿಂದ 5 ವಿಕೆಟ್‌ಗಳಿಂದ ಗೆದ್ದು ಬೀಗಿತು.

ರಾಜಸ್ಥಾನ್‌ ರಾಯಲ್ಸ್‌ ಎದುರು ಸನ್‌ರೈಸರ್ಸ್‌ಗೆ 5 ವಿಕೆಟ್‌ ಜಯ.

ಜೈಪುರ: ವೈಭವ್‌ ಸೂರ್ಯವಂಶಿ (Vaibhav Sooryavanshi) ಅವರ ದಾಖಲೆಯ ಶತಕದ ಹೊರತಾಗಿಯೂ ರಾಜಸ್ಥಾನ್‌ ರಾಯಲ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ36ನೇ ಪಂದ್ಯದಲ್ಲಿ (SRH vs RR) ಸನ್‌ರೈಸರ್ಸ್‌ ಹೈದರಾಬಾದ್‌ ಎದುರು 5 ವಿಕೆಟ್‌ಗಳ ಸೋಲು ಅನುಭವಿಸಿತು. ಆರ್‌ಆರ್‌ ನೀಡಿದ್ದ 229 ರನ್‌ಗಳ ಗುರಿಯನ್ನು ಸನ್‌ರೈಸರ್ಸ್‌, ಅಭಿಷೇಕ್‌ ಶರ್ಮಾ ಹಾಗೂ ಇಶಾನ್‌ ಕಿಶನ್‌ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ಗೆದ್ದು ಬೀಗಿತು. ಆ ಮೂಲಕ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎಸ್‌ಆರ್‌ಎಚ್‌ ತಂಡ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು.

ಶನಿವಾರ ಇಲ್ಲಿನ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಸೀಸನ್‌ನ ಮೊದಲ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡ, ತವರು ಅಭಿಮಾನಿಗಳ ಎದುರು ಗೆದ್ದು ಶುಭಾರಂಭ ಮಾಡಲು ಎದುರು ನೋಡುತ್ತಿತ್ತು. ಅದರಂತೆ ವೈಭವ್‌ ಸೂರ್ಯವಂಶಿ ( 103 ರನ್‌, 37 ಎಸೆತಗಳು) ಅವರ ಮೂರನೇ ವೇಗದ ಶತಕ ಹಾಗೂ ಧ್ರುವ್‌ ಜುರೆಲ್‌ (51 ರನ್‌) ಅರ್ಧಶತಕದ ಬಲದಿಂದ ರಾಜಸ್ಥಾನ್‌ ರಾಯಲ್ಸ್‌ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 228 ರನ್‌ಗಳನ್ನು ಕಲೆ ಹಾಕಿತ್ತು. ಆದರೆ, ಡೆತ್‌ ಓವರ್‌ಗಳಲ್ಲಿ ರಾಜಸ್ಥಾನ್‌ ಬ್ಯಾಟ್ಸ್‌ಮನ್‌ಗಳಿಂದ ಹೆಚ್ಚಿನ ರನ್‌ ಬರಲಿಲ್ಲ. ಇದರಿಂದಾಗಿ ಆರ್‌ಆರ್‌ 250ಕ್ಕೂ ಅಧಿಕ ಮೊತ್ತವನ್ನು ಗಳಿಸಲು ಸಾಧ್ಯವಾಗಲಿಲ್ಲ.

SRH vs RR: 36 ಎಸೆತಗಳಲ್ಲಿ ಶತಕ ಬಾರಿಸಿ ಇತಿಹಾಸ ಬರೆದ ವೈಭವ್‌ ಸೂರ್ಯವಂಶಿ!

ವೈಭವ್‌ ಸೂರ್ಯವಂಶಿ 36 ಎಸೆತಗಳಲ್ಲಿ ಶತಕ

ರಾಜಸ್ಥಾನ್‌ ರಾಯಲ್ಸ್‌ ತಂಡದ ಪರ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದು 15ರ ವಯಸ್ಸಿನ ವೈಭವ್‌ ಸೂರ್ಯವಂಶಿ. ಅವರು ಮೊದಲನೇ ಎಸೆತದಿಂದಲೂ ಸ್ಪೋಟಕ ಆಟವನ್ನು ಆಡಿದರು. ಎಡಗೈ ಬ್ಯಾಟ್ಸ್‌ಮನ್‌ 36 ಎಸತಗಳಲ್ಲಿ ಐಪಿಎಲ್‌ ಇತಿಹಾಸದಲ್ಲಿ ಮೂರನೇ ವೇಗದ ಶತಕ ಸಿಡಿಸಿದರು.ಒಟ್ಟಾರೆ ಅವರು 37 ಎಸೆತಗಳಲ್ಲಿ ಬರೋಬ್ಬರಿ 12 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 103 ರನ್‌ ಚಚ್ಚಿದರು.



ಇಶಾನ್ ಕಿಶನ್-ಅಭಿಷೇಕ್ ಶರ್ಮಾ ಜುಗಲ್‌ಬಂದಿ

ಸನ್‌ರೈಸರ್ಸ್ ಹೈದರಾಬಾದ್ ತಂಡ 18.3 ಓವರ್‌ಗಳಲ್ಲಿ 229 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ನಡುವಿನ ಪಾಲುದಾರಿಕೆ ಈ ರನ್ ಚೇಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿತು. ಈ ಜೋಡಿ 132 ರನ್‌ಗಳ ಮ್ಯಾಚ್‌ ವಿನ್ನಿಂಗ್‌ ಜೊತೆಯಾಟವನ್ನು ಹಂಚಿಕೊಂಡಿತು. ಅಭಿಷೇಕ್ ಶರ್ಮಾ 29 ಎಸೆತಗಳಲ್ಲಿ 57 ರನ್ ಗಳಿಸಿ ಔಟಾದರು, ಆದರೆ ಇಶಾನ್ ಕಿಶನ್ 31 ಎಸೆತಗಳಲ್ಲಿ 74 ರನ್ ಗಳಿಸಿ ಅಬ್ಬರದ ಇನಿಂಗ್ಸ್ ಆಡಿದರು. ಟ್ರಾವಿಸ್ ಹೆಡ್ ಕೇವಲ 6 ರನ್ ಗಳಿಸಿ ಔಟಾಗಿದ್ದರು.



ನಿತೀಶ್ ಕುಮಾರ್ ರೆಡ್ಡಿ 36 ರನ್‌ಗಳ ಬಿರುಸಿನ ಇನಿಂಗ್ಸ್ ಆಡಿದ ನಂತರ ಔಟಾದರು, ಆದರೆ ಹೆನ್ರಿಕ್ ಕ್ಲಾಸೆನ್ 29 ರನ್ ಗಳಿಸಿ ನಿರ್ಗಮಿಸಿದರು. ಹೈದರಾಬಾದ್ ಪರ ಗೆಲುವಿನ ಸಿಕ್ಸ್ ಬಾರಿಸಿದ್ದು ಸಲೀಲ್ ಅರೋರಾ. ಗಮನಾರ್ಹವಾಗಿ, ಇದು ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಎರಡನೇ ಅತ್ಯಧಿಕ ಯಶಸ್ವಿ ರನ್ ಚೇಸ್ ಆಗಿದೆ. ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್ ಮತ್ತು ಬ್ರಿಜೇಶ್ ಶರ್ಮಾ ತಲಾ ಎರಡು ವಿಕೆಟ್‌ಗಳನ್ನು ಪಡೆದರೆ, ಡೊನೊವನ್ ಫೆರೇರಾ ಕೂಡ ಒಂದು ವಿಕೆಟ್ ಪಡೆದರು.