ನವದೆಹಲಿ: ಭಾರತ ಟಿ20 ತಂಡದಲ್ಲಿ ಸ್ಥಾನ ಕಳೆದುಕೊಂಡ ಬೆನ್ನಲ್ಲೆ ಮಾಜಿ ನಾಯಕ ಸೂರ್ಯಕುಮಾರ್ ಯಾದವ್(Suryakumar Yadav), ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ತಮ್ಮ ಬ್ಯಾಟ್‌ನಿಂದಲೇ ತಿರುಗೇಟು ನೀಡಿದ್ದಾರೆ. 2026ರ ಟಿ20 ಮುಂಬೈ ಲೀಗ್ ಪಂದ್ಯದಲ್ಲಿ (T20 Mumbai League 2026) ಅವರು ಭರ್ಜರಿ ಅರ್ಧಶತಕವನ್ನು ಸಿಡಿಸಿದ್ದಾರೆ. ಇದು ಈ ಸೀಸನ್‌ನಲ್ಲಿ ಬಲಗೈ ಬ್ಯಾಟರ್‌ನ ಮೊದಲ ಅರ್ಧಶತಕವಾಗಿದೆ. ಅವರು ತಮ್ಮ ಸ್ಪೋಟಕ ಅರ್ಧಶತಕದ ಬಲದಿಂದ ಟ್ರಯಾಂಫ್ ನೈಟ್ ನಾರ್ಥ್ ಈಸ್ಟ್ ಮುಂಬೈ ತಂಡದ ಗೆಲುವಿಗೆ ನೆರವು ನೀಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಅಜಿತ್ ಅಗರ್ಕರ್ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗಳಿಗೆ ಭಾರತ ತಂಡವನ್ನು ಪ್ರಕಟಿಸಿತ್ತು. ಆದರೆ, ಔಟ್ ಆಫ್ ಫಾರ್ಮ್ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವದಿಂದ ತೆಗೆದಿದ್ದು ಅಲ್ಲದೆ, ಆಟಗಾರನಾಗಿಯೂ ಅವರನ್ನು ತಂಡದಲ್ಲಿ ಉಳಿಸಿಕೊಂಡಿಲ್ಲ. ನೂತನ ಟಿ20ಐ ತಂಡಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕನ್ನಾಗಿ ನೇಮಿಸಲಾಗಿದೆ. ಆದರೆ, ಸೂರ್ಯ ಇದರ ಬಗ್ಗೆ ಇಲ್ಲಿಯೂ ಅಸಮಾಧಾನವನ್ನು ವ್ಯಕ್ತಪಡಿಸಲಿಲ್ಲ ಹಾಗೂ ಶ್ರೇಯಸ್‌ಗೆ ನಾಯಕತ್ವ ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದರು.
ಇದೆಲ್ಲಾ ಬೆಳವಣಿಗೆಗಳ ನಡುವೆ ಇದೀಗ ಸೂರ್ಯಕುಮಾರ್ ಯಾದವ್ ಅವರ ಬ್ಯಾಟ್ ಸಿಡಿದಿದೆ. ಜೂನ್ 8 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಮರಾಠ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಭಾರತದ ಮಿಸ್ಟರ್ 360 ಡಿಗ್ರಿ ಎಂದೇ ಖ್ಯಾತಿ ಗಳಿಸಿರುವ ಸೂರ್ಯಕುಮಾರ್ ಯಾದವ್, ಕೇವಲ 36 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 13 ಬೌಂಡರಿಗಳೊಂದಿಗೆ 72 ರನ್‌ಗಳನ್ನು ಚಚ್ಚಿದ್ದಾರೆ. ಆ ಮೂಲಕ ತಮ್ಮ ನಾಯಕತ್ವದ ಟ್ರಯಾಂಫ್ ನೈಟ್ ನಾರ್ಥ್ ಈಸ್ಟ್ ಮುಂಬೈ ತಂಡದ ಗೆಲುವಿಗೆ ನೆರವು ನೀಡಿದ್ದಾರೆ.
IPL 2027: ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಎಂಎಸ್ ಧೋನಿ ಸ್ಥಾನವನ್ನು ತುಂಬಬಲ್ಲ ಮೂವರು ಆಟಗಾರರು!
ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ಟ್ರಯಾಂಫ್ ನೈಟ್ ನಾರ್ಥ್ ಈಸ್ಟ್ ಮುಂಬೈ ತಂಡ, 153 ರನ್‌ಗಳ ಗುರಿಯನ್ನು ಇನ್ನೂ ನಾಲ್ಕು ಓವರ್‌ಗಳು ಬಾಕಿ ಇರುವಾಗಲೇ ಸುಲಭವಾಗಿ ಚೇಸ್ ಮಾಡಿ ಗೆದ್ದಿತು. ಇದು ಸೂರ್ಯಕುಮಾರ್ ನಾಯಕತ್ವದ ತಂಡಕ್ಕೆ ಈ ಸೀಸನ್‌ನಲ್ಲಿ ಮೊದಲ ಗೆಲುವಾಗಿದೆ. ಇದಕ್ಕೂ ಮುನ್ನ ಟ್ರಯಾಂಫ್ ನೈಟ್ ನಾರ್ಥ್ ಈಸ್ಟ್ ಮುಂಬೈ ತಂಡ ಸತತ ಮೂರು ಸೋಲುಗಳನ್ನು ಅನುಭವಿಸಿತ್ತು.
ಇದಕ್ಕೂ ಮುನ್ನ ಜೂನ್ 6 ರಂದು ಭಾರತ ತಂಡವನ್ನು ಪ್ರಕಟಿಸುವುದಕ್ಕೂ ಮುನ್ನ ಶ್ರೇಯಸ್ ಅಯ್ಯರ್ ನಾಯಕತ್ವದ ಸೊಬೊ ಮುಂಬೈ ಫಾಲ್ಕನ್ಸ್ ಎದುರು ಸೂರ್ಯಕುಮಾರ್ ಯಾದವ್ 24 ಎಸೆತಗಳಲ್ಲಿ 48 ರನ್‌ಗಳನ್ನು ಗಳಿಸಿದ್ದರು. ಆರಂಭಿಕ ಎರಡೂ ಪಂದ್ಯಗಳಲ್ಲಿ ಕ್ರಮವಾಗಿ 19 ರನ್ ಹಾಗೂ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.
ಸೂರ್ಯಕುಮಾರ್ ಯಾದವ್ ಫಾರ್ಮ್
ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದ ದಾಖಲೆ ಅತ್ಯುತ್ತಮವಾಗಿದ್ದರೂ, 2024ರ ಜುಲೈನಲ್ಲಿ ಭಾರತೀಯ ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ಬ್ಯಾಟಿಂಗ್‌ನಲ್ಲಿ ಅವರು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ.
IND vs AFG: 6 ವಿಕೆಟ್ ಸಾಧನೆ ಮಾಡಿದ ಮಾನವ್ ಸುತಾರ್ ಬಗ್ಗೆ ಸುನೀಲ್ ಗವಾಸ್ಕರ್ ದೊಡ್ಡ ಭವಿಷ್ಯ!
ಶ್ರೀಲಂಕಾ ಪ್ರವಾಸದ ಮೂಲಕ ಭಾರತದ ಪೂರ್ಣಾವಧಿ ಟಿ20 ನಾಯಕನಾಗಿ ಮೊದಲ ಸರಣಿಯನ್ನು ಆರಂಭಿಸಿದ ಬಳಿಕ, ಎರಡು ಬಾರಿ ಐಸಿಸಿ ಟಿ20ಐ ವರ್ಷದ ಆಟಗಾರ ಪ್ರಶಸ್ತಿ ಗೆದ್ದಿರುವ ಸೂರ್ಯಕುಮಾರ್, 45 ಪಂದ್ಯಗಳಲ್ಲಿ ಕಣಕ್ಕಿಳಿದು ಕೇವಲ 932 ರನ್‌ಗಳನ್ನು ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸರಾಸರಿ 25.88ಕ್ಕೆ ಕುಸಿದಿದೆ.
ಇದಲ್ಲದೆ, 2026ರ ಐಪಿಎಲ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರ ಅವರು ಬ್ಯಾಟಿಂಗ್‌ನಲ್ಲಿ ನಿರಾಶೆ ಅನುಭವಿಸಿದರು. 13 ಪಂದ್ಯಗಳಲ್ಲಿ ಕೇವಲ 270 ರನ್‌ಗಳನ್ನು ಗಳಿಸಿದ ಸೂರ್ಯಕುಮಾರ್, ಎರಡು ಅರ್ಧಶತಕಗಳನ್ನು ಮಾತ್ರ ದಾಖಲಿಸಲು ಸಾಧ್ಯವಾಯಿತು. ಈ ಅಂಕಿಅಂಶಗಳು ಅವರ ಇತ್ತೀಚಿನ ಬ್ಯಾಟಿಂಗ್ ಫಾರ್ಮ್ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.