ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ICC T20I Rankings: ವೃತ್ತಿ ಜೀವನದ ಶ್ರೇಷ್ಠ ಸ್ಥಾನಕ್ಕೆ ಪ್ರವೇಶಿಸಿದ ಸಂಜು ಸ್ಯಾಮ್ಸನ್‌, ಅಭಿಷೇಕ್‌, ಇಶಾನ್‌ಗೂ ಜಾಕ್‌ಪಾಟ್‌!

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದ ಭಾರತ ತಂಡದ ಸಂಜು ಸ್ಯಾಮ್ಸನ್‌, ಇಶಾನ್‌ ಕಿಶನ್‌ ಹಾಗೂ ಅಭಿಷೇಕ್‌ ಶರ್ಮಾ ಅವರಿಗೆ ಐಸಿಸಿ ಟಿ20ಐ ಶ್ರೇಯಾಂಕದಲ್ಲಿ ಗಣನೀಯ ಏರಿಕೆ ಕಂಡಿದ್ದಾರೆ. ಅಭಿಷೇಕ್‌ ಶರ್ಮಾ ಅಗ್ರ ಸ್ಥಾನವನ್ನು ಉಳಿಸಿಕೊಂಡರೆ, ಇಶಾನ್‌ ಕಿಶನ್‌ ಎರಡನೇ ಸ್ಥಾನಕ್ಕೆ ಪ್ರವೇಶ ಮಾಡಿದ್ದಾರೆ.

ಟಿ20ಐ ಶ್ರೇಯಾಂಕದಲ್ಲಿ ಏರಿಕೆ ಕಂಡ ಸಂಜು, ಇಶಾನ್‌ ಕಿಶನ್‌.

ನವದೆಹಲಿ: ಇತ್ತೀಚೆಗೆ ಪ್ರಕಟವಾದ ಐಸಿಸಿ ಟಿ20ಐ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ(ICC T20 Rankings) ಭಾರತ ತಂಡದ ಇಶಾನ್ ಕಿಶನ್ (Ishak Kishan) ಮಹತ್ವದ ಏರಿಕೆ ಕಂಡಿದ್ದು, ಎರಡನೇ ಸ್ಥಾನಕ್ಕೆ ಏರಿದ್ದಾರೆ. ಅವರು ಈಗ ಅಗ್ರಸ್ಥಾನದಲ್ಲಿರುವ ತಮ್ಮ ಭಾರತದ ಸಹ ಆಟಗಾರ ಅಭಿಷೇಕ್ ಶರ್ಮಾ (Abhishek Sharma) ಅವರಿಗಿಂತ ಕೇವಲ ಒಂದು ಸ್ಥಾನ ಹಿಂದಿದ್ದಾರೆ. ಇದರಿಂದ ಇಶಾನ್ ಕಿಶನ್ ತಮ್ಮ ಟಿ20ಐ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವನ್ನು ಸಾಧಿಸಿದ್ದಾರೆ. ಟೂರ್ನಿಯಲ್ಲಿ ಭಾರತ ಪರವಾಗಿ ಇಶಾನ್ ಕಿಶನ್ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದರು. ಒಟ್ಟು ಒಂಬತ್ತು ಪಂದ್ಯಗಳಲ್ಲಿ ಅವರು 317 ರನ್ ಗಳಿಸಿದ್ದಾರೆ. ಪಾಕಿಸ್ತಾನ, ನಮೀಬಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಮಿಂಚಿನ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಫಲವಾಗಿ ಸಂಜು ಸ್ಯಾಮ್ಸನ್‌ ಅವರು ಟಿ20ಐ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಶ್ರೇಷ್ಠ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಅವರು 18 ಸ್ಥಾನಗಳನ್ನು ಏರಿಕೆ ಕಂಡು, 22ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಅವರು ಸ್ಯ 637 ರೇಟಿಂಗ್‌ ಪಾಯಿಂಟ್ಸ್‌ ಹೊಂದಿದ್ದಾರೆ. ಅವರು 321 ರನ್‌ಗಳನ್ನು ಸಿಡಿಸುವ ಮೂಲಕ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಟೂರ್ನಿಯ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್‌ ವಿರುದ್ಧದ ಟಿ20ಐ ಸರಣಿಯಲ್ಲಿ ಸಂಜು ಒಂದು ಅರ್ಧಶತಕವನ್ನೂ ಸಿಡಿಸಲು ಸಾಧ್ಯವಾಗಿರಲಿಲ್ಲ.

BAN vs PAK: ಬಾಬರ್‌ ಆಝಮ್‌ ಕ್ರಿಕೆಟ್‌ ಭವಿಷ್ಯ ಅಂತ್ಯ? ಸ್ಪಷ್ಟನೆ ನೀಡಿದ ನಾಯಕ ಶಾಹೀನ್‌ ಅಫ್ರಿದಿ!

ಹಾಗಾಗಿ ಅವರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗಿರಲಿಲ್ಲ. ಆದರೆ, ಅಭಿಷೇಕ್‌ ಶರ್ಮಾ ಅವರು ಅನಾರೋಗ್ಯಕ್ಕೆ ತುತ್ತಾದ ಕಾರಣ ಸಂಜುಗೆ ನಮೀಬಿಯಾ ಪಂದ್ಯದಲ್ಲಿ ಅವಕಾಶ ಸಿಕ್ಕಿತ್ತು. ಆದರೆ ಅವರು ಪ್ರಭಾವ ಬೀರುವಲ್ಲಿ ವಿಫಲರಾಗಿದ್ದರು. ಆದರೆ, ಜಿಂಬಾಬ್ವೆ ವಿರುದ್ಧ ಸ್ಪೋಟಕ ಬ್ಯಾಟಿಂಗ್‌ ಬಳಿಕ, ವೆಸ್ಟ್‌ ಇಂಡೀಸ್‌ ವಿರುದ್ಧ ಅಜೇಯ 97 ರನ್‌, ಇಂಗ್ಲೆಂಡ್‌ ವಿರುದ್ಧ ಸೆಮಿಫೈನಲ್‌ ಮತ್ತು ನ್ಯೂಜಿಲೆಂಡ್‌ ಎದುರು ಪೈನಲ್‌ನಲ್ಲಿ ತಲಾ 89 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಭಾರತ ತಂಡದ ಮೂರನೇ ಟಿ20 ವಿಶ್ವಕಪ್‌ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು.

T20I Rankings: ಬೌಲಿಂಗ್‌ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡ ವರುಣ್‌ ಚಕ್ರವರ್ತಿ!

ನಾಲ್ಕು ಸ್ಥಾನ ಏರಿಕೆ ಕಂಡ ಶಿವಂ ದುಬೇ

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಎಲೆಮರೆ ಕಾಯಿಯಂತೆ ಶ್ರೇಷ್ಠ ಪ್ರದರ್ಶನವನ್ನು ತೋರಿದ್ದ ಶಿವಂ ದುಬೇ ಅವರು ನಾಲ್ಕು ಸ್ಥಾನಗಳಲ್ಲಿ ಏರಿಕೆ ಕಂಡು, 27ನೇ ಸ್ಥಾನಕ್ಕೆ ಬಂದಿದ್ದಾರೆ. ಟಿ20 ವಿಶ್ವಕಪ್‌ ಟೂರ್ನಿಯಲ್ಲಿ 383 ರನ್‌ಗಳನ್ನು ಗಳಿಸಿದ ಹೊರತಾಗಿಯೂ ಸಾಹಿಬ್‌ಜಾದ ಫರ್ಹಾನ್‌ ಅವರು ಎರಡನೇ ಸ್ಥಾನದಿಂದ ಕುಸಿದಿದ್ದಾರೆ ಹಾಗೂ ಮೂರನೇ ಸ್ಥಾನಕ್ಕೆ ಬಂದಿದ್ದಾರೆ. ತಿಲಕ್‌ ವರ್ಮಾ ಹಾಗೂ ನಾಯಕ ಸೂರ್ಯಕುಮಾರ್‌ ಯಾದವ್‌ ಅವರು ಶ್ರೇಯಾಂಕದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

ಟಿ20ಐ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದ ಅಗ್ರ 10ರೊಳಗೆ ಇರುವ ಭಾರತೀಯರು

1.ಅಭಿಷೇಕ್‌ ಶರ್ಮಾ - 875 ಅಂಕಗಳು

2.ಇಶಾನ್‌ ಕಿಶನ್‌ - 871 ಅಂಕಗಳು

7.ತಿಲಕ್‌ ವರ್ಮಾ - 742 ಅಂಕಗಳು

9.ಸೂರ್ಯಕುಮಾರ್‌ ಯಾದವ್‌- 722 ಅಂಕಗಳು