ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup 2026: ಆಸ್ಟ್ರೇಲಿಯಾ ತಂಡಕ್ಕೆ ಆಘಾತ! ಆರಂಭಿಕ 2 ಪಂದ್ಯಗಳಿಂದ ಪ್ಯಾಟ್‌ ಕಮಿನ್ಸ್‌ ಔಟ್‌!

ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಅವರು ಗಾಯದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಅವರು 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಆರಂಭಿಕ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಈ ಬಗ್ಗೆ ಆಸ್ಟ್ರೇಲಿಯಾ ಹೆಡ್‌ ಕೋಚ್‌ ಜಾರ್ಜ್‌ ಬೈಲಿ ಖಚಿತಪಡಿಸಿದ್ದಾರೆ. ಆ ಮೂಲಕ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ಆಸೀಸ್‌ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ.

ಟಿ20 ವಿಶ್ವಕಪ್‌ ಟೂರ್ನಿಯ ಆರಂಭಿಕ 2 ಪಂದ್ಯಗಳಿಂದ ಕಮಿನ್ಸ್‌ ಔಟ್‌.

ನವದೆಹಲಿ: ಮುಂಬರುವ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಗೂ ಮುನ್ನ ಆಸ್ಟ್ರೇಲಿಯಾ (Australia) ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಹಿರಿಯ ವೇಗದ ಬೌಲರ್‌ ಪ್ಯಾಟ್‌ ಕಮಿನ್ಸ್‌ (Pat Cummins) ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಅವರು ಚುಟುಕು ವಿಶ್ವಕಪ್‌ ಟೂರ್ನಿಯ ಆಸ್ಟ್ರೇಲಿಯಾ ತಂಡದ ಆರಂಭಿಕ ಎರಡು ಪಂದ್ಯಗಳಿಂದ ಪ್ಯಾಟ್‌ ಕಮಿನ್ಸ್‌ ಹೊರ ನಡೆದಿದ್ದಾರೆ. ಪ್ಯಾಟ್ ಕಮಿನ್ಸ್ ಸೊಂಟದ ಮೂಳೆ ಒತ್ತಡದ ಗಾಯದಿಂದ ಬಳಲುತ್ತಿದ್ದಾರೆ. ಇದರ ಪರಿಣಾಮ ಆಷಸ್ ಸರಣಿಯ ಸಮಯದಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳಿಗೆ ಹೊರಗುಳಿಯಬೇಕಾಯಿತು.

ಪ್ಯಾಟ್‌ ಕಮಿನ್ಸ್ ವಿಶ್ವಕಪ್‌ ಟೂರ್ನಿಗೆ ಫಿಟ್ ಆಗುತ್ತಾರೆ ಎಂಬ ಭರವಸೆಯ ಹೊರತಾಗಿಯೂ, ಆಸ್ಟ್ರೇಲಿಯಾದ ಆಯ್ಕೆ ಸಮಿತಿಯ ಮುಖ್ಯಸ್ಥ ಜಾರ್ಜ್ ಬೈಲಿ, ವಿಶ್ವಕಪ್‌ನ ಆರಂಭಿಕ ಹಂತದ ನಂತರವೇ ಪ್ರಮುಖ ಬೌಲರ್ ಸಿದ್ಧರಾಗುತ್ತಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದರಿಂದಾಗಿ ವಿಶ್ವಕಪ್‌ ಟೂರ್ನಿಯ ಆರಂಭದಲ್ಲಿ ಆಸ್ಟ್ರೇಲಿಯಾ ತನ್ನ ಪ್ರಮುಖ ಆಟಗಾರರಲ್ಲಿ ಒಬ್ಬರನ್ನೂ ಕಳೆದುಕೊಂಡಿದೆ.

IND vs NZ: ವಿರಾಟ್‌ ಕೊಹ್ಲಿ ಅಲ್ಲ, ನಾವು ಟಾರ್ಗೆಟ್‌ ಮಾಡಿದ್ದು ಈ ಆಟಗಾರನನ್ನು ಎಂದ ಡ್ಯಾರಿಲ್‌ ಮಿಚೆಲ್!

"ಅವರು ಬಹುಶಃ ಟೂರ್ನಿಯ ಸ್ವಲ್ಪ ಸಮಯದ ನಂತರ, ಮೂರು ಅಥವಾ ನಾಲ್ಕನೇ ಪಂದ್ಯದ ಆಸುಪಾಸಿನಲ್ಲಿ ಆ ವಿಶ್ವಕಪ್ ಟೂರ್ನಿಯ ತಂಡವನ್ನು ಸೇರುತ್ತಾರೆ," ಎಂದು ಆಸ್ಟ್ರೇಲಿಯಾ ಹೆಡ್‌ ಕೋಚ್‌ ಜಾರ್ಜ್‌ ಬೈಲಿ ಭರವಸೆಯನ್ನು ವ್ಯಕ್ತಪಡಿಸಿದರು.

ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು, ಪ್ಯಾಟ್‌ ಕಮಿನ್ಸ್‌ ಕೈ ಬಿಡಲಾಗಿದೆ. ಈ ಸರಣಿಯ ಮೂರು ಪಂದ್ಯಗಳು ಕ್ರಮವಾಗಿ 29 ರಿಂದ 31ರವರೆಗೆ ನಡೆಯಲಿದೆ. ಇದಾದ ಬಳಿಕ ಆಸ್ಟ್ರೇಲಿಯಾ ತಂಡ, ಶ್ರೀಲಂಕಾ ಪ್ರವಾಸವನ್ನು ಕೈಗೊಳ್ಳಲಿದೆ. ಫೆಬ್ರವರಿ 11 ರಂದು ಐರ್ಲೆಂಡ್‌ ವಿರುದ್ಧ ಆಸ್ಟ್ರೇಲಿಯಾ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಆರಂಭಿಕ ಪಂದ್ಯವನ್ನು ಆಡಲಿದೆ.

ವಿಶ್ವಕಪ್‌ ತಂಡದ 5 ಸ್ಟಾರ್‌ ಆಟಗಾರರಿಗೆ ವಿಶ್ರಾಂತಿ ನೀಡಿ ಪಾಕ್‌ ಸರಣಿಗೆ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ

ಗ್ಲೆನ್ ಮ್ಯಾಕ್ಸ್‌ವೆಲ್, ಜಾಶ್ ಹೇಝಲ್‌ವುಡ್, ಟಿಮ್ ಡೇವಿಡ್ ಮತ್ತು ನೇಥನ್ ಎಲ್ಲಿಸ್ ಸೇರಿದಂತೆ ಇತರ ಆಟಗಾರರು ಪಾಕಿಸ್ತಾನ ಪ್ರವಾಸವನ್ನು ಬಿಟ್ಟು ನೇರವಾಗಿ ವಿಶ್ವಕಪ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ಆಟಗಾರರ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ಶಾನ್ ಅಬಾಟ್, ಮಹ್ಲಿ ಬಿಯರ್ಡ್‌ಮನ್, ಬೆನ್ ದ್ವಾರ್ಶುಯಿಸ್, ಜ್ಯಾಕ್ ಎಡ್ವರ್ಡ್ಸ್, ಜಾಶ್ ಫಿಲಿಪ್, ಮಿಚ್ ಓವನ್ ಮತ್ತು ಮ್ಯಾಟ್ ರೆನ್‌ಶಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಪಾಕಿಸ್ತಾನ ವಿರುದ್ಧದ ಟಿ20ಐ ಸರಣಿಗೆ ಆಸ್ಟ್ರೇಲಿಯಾ ತಂಡ

ಮಿಚೆಲ್ ಮಾರ್ಷ್ (ನಾಯಕ), ಶಾನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ಮಹ್ಲಿ ಬಿಯರ್ಡ್‌ಮನ್, ಕೂಪರ್ ಕಾನೊಲಿ, ಬೆನ್ ದ್ವಾರ್ಶುಯಿಸ್, ಜ್ಯಾಕ್ ಎಡ್ವರ್ಡ್ಸ್, ಕ್ಯಾಮರೂನ್ ಗ್ರೀನ್, ಟ್ರಾವಿಸ್ ಹೆಡ್, ಜಾಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಮಿಚ್ ಓವನ್, ಜಾಶ್ ಫಿಲಿಪ್, ಮ್ಯಾಥ್ಯೂ ರೆನ್‌ಶಾ, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಆಡಮ್ ಝಂಪಾ ಸೇರಿದ್ದಾರೆ.