ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ಪ್ರಯಾಣವು ನಾಕೌಟ್ ಹಂತವನ್ನು ತಲುಪುವ ಮೊದಲೇ ಸೂಪರ್-8 ಹಂತದಲ್ಲಿ ಹೊರಬಿದ್ದರು. ಆ ಮೂಲಕ ದೀರ್ಘಾವಧಿ ಬಳಿಕ ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶ ಮಾಡುವಲ್ಲಿ ಪಾಕ್ ಮತ್ತೊಮ್ಮೆ ವಿಫಲವಾಯಿತು. ಈ ಟೂರ್ನಿಯಲ್ಲಿನ ವೈಫಲ್ಯದಿಂದಾಗಿ ಪಾಕಿಸ್ತಾನ ತಂಡದ ಪ್ರಕ್ರಿಯೆಗಳ ಬಗ್ಗೆ ಹಲವಾರು ಪ್ರಶ್ನೆಗಳನ್ನು ಮತ್ತು ಹಲವು ಬೇಡಿಕೆಗಳನ್ನು ಹುಟ್ಟುಹಾಕಿವೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಳಗೆ ಇದೀಗ ರಾಜೀನಾಮೆಗಳ ಅಲೆ ಆರಂಭವಾಗಿದೆ. ಇದೀಗ ಅಲೀಮ್ ದಾರ್ (Aleem Dar) ಅವರು ಪಾಕಿಸ್ತಾನ ತಂಡದ ಆಯ್ಕೆ ಸಮಿತಿಗೆ ರಾಜೀನಾಮೆ ನೀಡಿದ್ದಾರೆ.
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನದ ನಂತರ ಆಯ್ಕೆ ಸಮಿತಿ ಸದಸ್ಯ ಅಲೀಮ್ ದಾರ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಪಿಸಿಬಿಯೊಂದಿಗೆ ಪರಿಚಿತ ಮೂಲಗಳು, "ಮಾಜಿ ಐಸಿಸಿ ಎಲೈಟ್ ಪ್ಯಾನಲ್ ಅಂಪೈರ್ ಅಲೀಮ್ ದಾರ್ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ, ಅದನ್ನು ಇನ್ನೂ ಅಂಗೀಕರಿಸಲಾಗಿಲ್ಲ," ಎಂದು ತಿಳಿಸಿವೆ.
ಇಂದಿನ ನ್ಯೂಜಿಲ್ಯಾಂಡ್ vs ದ. ಆಫ್ರಿಕಾ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದ ಮಳೆ ನಿಮಯ ಹೇಗಿದೆ?
ಮೇಕ್ ಹೇಸನ್ ಅವರೊಂದಿಗೆ ಅಸಮಾಧಾನ
ಮಾಜಿ ಟೆಸ್ಟ್ ಆಟಗಾರರಾದ ಅಸಾದ್ ಶಫೀಕ್ ಮತ್ತು ಆಕಿಬ್ ಜಾವೇದ್ ಅವರೊಂದಿಗೆ ಅಲೀಮ್ ದಾರ್ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಆಯ್ಕೆ ವಿಷಯಗಳಲ್ಲಿ ಮುಖ್ಯ ಕೋಚ್ ಮೈಕ್ ಹೇಸನ್ ಅವರ ಅನಧಿಕೃತ ಹಸ್ತಕ್ಷೇಪದಿಂದ ಅಸಮಾಧಾನಗೊಂಡು ದಾರ್ ರಾಜೀನಾಮೆ ನೀಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
"2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಬರ್ ಆಝಮ್ ಮತ್ತು ಶದಾಬ್ ಖಾನ್ ಅವರ ಕಳಪೆ ಪ್ರದರ್ಶನದಿಂದಾಗಿ ಅವರನ್ನು ಸೇರಿಸಿಕೊಳ್ಳುವುದನ್ನು ವಿರೋಧಿಸಿದ್ದಕ್ಕೆ ಆಲೀಮ್ ದಾರ್ ತುಂಬಾ ಅಸಮಾಧಾನಗೊಂಡಿದ್ದರು, ಆದರೆ ಹೇಸನ್ ಅವರನ್ನು ಸೇರಿಸಿಕೊಳ್ಳಲು ಒತ್ತಾಯಿಸಿದ್ದರು," ಎಂದು ಮೂಲಗಳು ಮಾಹಿತಿ ನೀಡಿವೆ.
ಸೂಪರ್-8ರಿಂದ ಹೊರಬಿದ್ದಿದ್ದ ಪಾಕಿಸ್ತಾನ
ನಾಯಕ ಸಲ್ಮಾನ್ ಆಘಾ ಅಥವಾ ಯಾವುದೇ ಆಯ್ಕೆದಾರರರು ಆಕ್ಷೇಪ ವ್ಯಕ್ತಪಡಿಸದಿರುವುದು ಆಲೀಮ್ ದಾರ್ ಅವರನ್ನು ಆಶ್ಚರ್ಯಗೊಳಿಸಿದೆ ಎಂದು ಅವರು ಹೇಳಿದ್ದಾರೆ. ಸೂಪರ್-8ರಲ್ಲಿ ನ್ಯೂಜಿಲೆಂಡ್ ತಂಡದಷ್ಟೇ ಪಾಕಿಸ್ತಾನ ಕೂಡ 3 ಅಂಕಗಳನ್ನು ಕಲೆ ಹಾಕಿತ್ತು. ಆದರೆ, ಕಿವೀಸ್ ತಂಡದ ರನ್‌ರೇಟ್ ಉತ್ತಮವಾಗಿದ್ದ ಕಾರಣ ಪಾಕಿಸ್ತಾನ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ನ್ಯೂಜಿಲೆಂಡ್ ತಂಡ ಸೂಪರ್-8ರಲ್ಲಿ 1.390 ರನ್ ರೇಟ್ ಹೊಂದಿದ್ದರೆ, ಪಾಕಿಸ್ತಾನ 0.123ರ ರನ್ ರೇಟ್ ಹೊಂದಿದೆ.
T20 World Cup 2026: ʻಭಾರತ ತಂಡ ಫೈನಲ್‌ಗೆ ತಲುಪಲ್ಲʼ-ಪಾಕ್ ಮಾಜಿ ವೇಗಿಯ ಭವಿಷ್ಯ ನಿಜವಾಗುತ್ತಾ?
ಪಾಕಿಸ್ತಾನ ಕ್ರಿಕೆಟಿಗರಿಗೆ ದಂಡ ಹಾಕಿದ ಪಿಸಿಬಿ
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರುವ ಜೊತೆಗೆ ಬಹುಬೇಗ ತನ್ನ ಅಭಿಯಾನವನ್ನು ಮುಗಿಸಿದ ಕಾರಣ ಪಾಕಿಸ್ತಾನ ತಂಡದ ಆಟಗಾರರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ 16 ಲಕ್ಷ ರು ದಂಡವನ್ನು ಹಾಕಿದೆ. ನಿರೀಕ್ಷಿತ ಪ್ರದರ್ಶನವನ್ನು ತೋರದ ಕಾರಣ ಪಿಸಿಬಿ, ಆಟಗಾರರಿಗೆ ಬಿಸಿ ಮುಟ್ಟಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರೇ ಮುಖ್ಯವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಗುಂಪು ಹಂತದಲ್ಲಿಯೇ ಪಾಕ್ ಆಟಗಾರರಿಗೆ ದಂಡ ವಿಧಿಸಬೇಕೆಂಬ ನಿರ್ಧಾರ ಅಂತಿಮವಾಗಿತ್ತು ಎಂದು ವರದಿಯಾಗಿದೆ. ವಿಶೇಷವಾಗಿ ಕೊಲಂಬೊದಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ಎದುರು ಪಾಕಿಸ್ತಾನ ಅನುಭವಿಸಿದ ಹೀನಾಯಕ ಸೋಲಿನ ನಂತರ ಮೊಹ್ಸಿನ್ ನಖ್ವಿ ಸ್ಪಷ್ಟವಾಗಿ ಅಸಮಾಧಾನಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.