ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

PAK vs NAM: ಹೆಡ್‌ ಕೋಚ್‌ ಮೈಕ್‌ ಹೇಸನ್‌ ಜೊತೆಗೆ ಸಲ್ಮಾನ್‌ ಆಘಾ ಮಾತಿನ ಚಕಮಕಿ!

ನಮೀಬಿಯಾ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಎ ಗುಂಪಿನ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಹಾಗೂ ಹೆಡ್‌ ಕೋಚ್‌ ಮೈಕ್‌ ಹೇಸನ್‌ ಅವರ ನಡುವೆ ಮಾತಿನ ಚಕಮಕಿಯಾಯಿತು. ಡಕ್‌ಔಟ್‌ನಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸಲ್ಮಾನ್‌ ಆಘಾ-ಮೈಕ್‌ ಹೇಸನ್‌ ನಡುವೆ ಮಾತಿನ ಚಕಮಕಿ.

ಕೊಲಂಬೊ: ನಮೀಬಿಯಾ ವಿರುದ್ಧ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಎ ಗುಂಪಿನ ಕೊಎಯ ಪಂದ್ಯದ (PAK vs NAM) ವೇಳೆ ಪಾಕಿಸ್ತಾನ ಕ್ರಿಕೆಟ್ ತಂಡದೊಳಗೆ ಉದ್ವಿಗ್ನತೆ ಉಂಟಾಗಿದೆ ಎಂಬ ವರದಿಗಳು ಬರುತ್ತಿವೆ. ಪಂದ್ಯದ ವೇಳೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ (Salman Ali Agha) 23 ಎಸೆತಗಳಲ್ಲಿ 38 ರನ್ ಗಳಿಸಿ ಹೋರಾಟದ ಇನಿಂಗ್ಸ್‌ ಆಡಿದರು, ಆದರೆ ಅವರ ಔಟ್‌ ಆದ ಹಾದಿಯು ಕ್ರೀಡಾ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ. ಸಲ್ಮಾನ್ ಆಘಾ ಔಟ್ ಆದ ನಂತರ ಡಗೌಟ್‌ಗೆ ಹಿಂತಿರುಗಿದ ತಕ್ಷಣ, ಅವರು ತಂಡದ ಮುಖ್ಯ ತರಬೇತುದಾರ ಮೈಕ್ ಹೆಸನ್ ಅವರೊಂದಿಗೆ ತೀವ್ರ ವಾಗ್ವಾದ ನಡೆಸಿದರು. ಈ ವೇಳೆ ಈ ಇಬ್ಬರೂ ಅಸಮಾಧಾನದಿಂದ ಕಂಡು ಬಂದಿದ್ದಾರೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಬುಧವಾರ ಇಲ್ಲಿನ ಕ್ಯಾಮೆರಾಗಳಿಂದ ಸೆರೆಹಿಡಿಯಲಾದ ದೃಶ್ಯಗಳ ಪ್ರಕಾರ, ಸಲ್ಮಾನ್ ಮತ್ತು ಮೈಕ್ ಹೇಸನ್ ನಡುವಿನ ಸಂಭಾಷಣೆ ಸಾಕಷ್ಟು ಗಂಭೀರವಾಗಿ ಕಂಡುಬಂದಿದೆ. ನಾಯಕನ ಶಾಟ್ ಆಯ್ಕೆ ಅಥವಾ ಪರಿಸ್ಥಿತಿಯ ಬಗ್ಗೆ ಕೋಚ್ ಅತೃಪ್ತರಾಗಿದ್ದರು ಎಂದು ತೋರುತ್ತದೆ. ಡಗೌಟ್‌ನಲ್ಲಿ ಮೌನ ಆವರಿಸುವ ಹಂತಕ್ಕೆ ವಾದವು ಏರಿತು ಮತ್ತು ಇತರ ಆಟಗಾರರು ಆತಂಕಕ್ಕೊಳಗಾದರು. ಕೋಚ್ ಹೇಳಿಕೆಗಳಿಗೆ ಸಲ್ಮಾನ್ ಆಘಾ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿದಂತೆ ಕಂಡುಬಂದಿದೆ.

T20 World Cup: ಸೂಪರ್‌-8ಕ್ಕೂ ಮುನ್ನ ಶ್ರೀಲಂಕಾ ತಂಡಕ್ಕೆ ಆಘಾತ, ಮತೀಶ ಪತಿರಣ ಟೂರ್ನಿಯಿಂದ ಔಟ್‌!

ಮೈದಾನಕ್ಕೆ ಬಾಟಲ್‌ ಎಸೆದ ಸಲ್ಮಾನ್ ಆಘಾ

ಸಲ್ಮಾನ್ ಅಲಿ ಆಘಾ ಕೋಪದಿಂದ ತಮ್ಮ ಕೈಯಲ್ಲಿದ್ದ ನೀರಿನ ಬಾಟಲ್‌ ಅನ್ನು ಮೈದಾನಕ್ಕೆ ಎಸೆದಾಗ ವಿವಾದ ತಾರಕಕ್ಕೇರಿತು. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳಿಂದ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

199 ರನ್‌ಗಳನ್ನು ಕಲೆ ಹಾಕಿದ ಪಾಕಿಸ್ತಾನ

ಸಲ್ಮಾನ್‌ ಅಲಿ ಆಘಾ ಅವರು ಬಹುಬೇಗ ವಿಕೆಟ್‌ ಒಪ್ಪಿಸಿದರೂ ಆರಂಭಿಕ ಬ್ಯಾಟ್ಸ್‌ಮನ್‌ ಸಹಿಬ್‌ಝಾದ ಫರ್ಹಾನ್‌ ಅವರು ಶತಕದ ಬಲದಿಂದ ಪಾಕಿಸ್ತಾನ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ ಮೂರು ವಿಕೆಟ್‌ ನಷ್ಟಕ್ಕೆ 199 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ನಮೀಬಿಯಾ ತಂಡಕ್ಕೆ 200 ರನ್‌ಗಳ ಕಠಿಣ ಗುರಿಯನ್ನು ನೀಡುವಲ್ಲಿ ಪಾಕಿಸ್ತಾನ ಯಶಸ್ವಿಯಾಯಿತು.



ಸಹಿಬ್‌ಝಾದ ಫರ್ಹಾನ್‌ ಭರ್ಜರಿ ಶತಕ

ಪಾಕಿಸ್ತಾನ ತಂಡದ ಪರ ಬ್ಯಾಟಿಂಗ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಸಹಿಬ್‌ಝಾದ ಫರ್ಹನ್‌ ಗಮನ ಸೆಳೆದರು. ಅವರು ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಕೊನೆಯವರೆಗೂ ಬ್ಯಾಟ್‌ ಬೀಸಿದರು. ಅವರು ಆಡಿದ 58 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 11 ಬೌಂಡರಿಗಳೊಂದಿಗೆ ಅಜೇಯ 100 ರನ್‌ಗಳನ್ನು ಸಿಡಿಸಿದರು. ಶದಾಬ್‌ ಖಾನ್‌ 22 ಎಸೆತಗಳಲ್ಲಿ 36 ರನ್‌ ಗಳಿಸಿದರು.

SA vs UAE: ಯುಎಇ ಎದುರು ಸುಲಭ ಗೆಲುವು ದಾಖಲಿಸಿದ ದಕ್ಷಿಣ ಆಫ್ರಿಕಾ ತಂಡ!

ಭಾರತ ತಂಡದ ವಿರುದ್ಧ ಸೋಲು

ಇದಕ್ಕೂ ಮುನ್ನ ಪಾಕಿಸ್ತಾನ ತಂಡ, ಸಾಂಪ್ರದಾಯಿಕ ಎದುರಾಳಿ ಭಾರತ ತಂಡದ ವಿರುದ್ಧ 61ರನ್‌ಗಳಿಂದ ಸೋಲು ಅನುಭವಿಸಿತ್ತು. ಇದೀಗ ನಮೀಬಿಯಾ ವಿರುದ್ಧ ಗೆಲುವು ಪಡೆಯುವ ಮೂಲಕ ಸಲ್ಮಾನ್‌ ಅಲಿ ಆಘಾ ಅವರ ನಾಯಕತ್ವದ ಪಾಕಿಸ್ತಾನ ತಂಡ, ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌-8ಕ್ಕೆ ಪ್ರವೇಶ ಮಾಡಿದೆ. ಇದರ ಪರಿಣಾಮ ಯುಎಸ್‌ಎ ತಂಡದ ಸೂಪರ್‌-8ರ ಕನಸು ಭಗ್ನವಾಯಿತು.