ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup: ಸಂಜು ಸ್ಯಾಮ್ಸನ್‌ ಬಗ್ಗೆ ಬಿಸಿಸಿಐಗೆ ಎಚ್ಚರಿಕೆ ನೀಡಿದ ಸೌರವ್‌ ಗಂಗೂಲಿ!

ಸಂಜು ಸ್ಯಾಮ್ಸನ್ ಅವರ 97 ರನ್‌ಗಳ ಇನ್ನಿಂಗ್ಸ್ ಅನ್ನು ಸೌರವ್ ಗಂಗೂಲಿ ಶ್ಲಾಘಿಸಿದರು ಮತ್ತು ಅವರನ್ನು ನಿಯಮಿತವಾಗಿ ತಂಡಕ್ಕೆ ಸೇರಿಸಿಕೊಳ್ಳುವಂತೆ ಶಿಫಾರಸು ಮಾಡಿದರು. ಮಾರ್ಚ್ 5 ರಂದು ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯವನ್ನು ವೆಸ್ಟ್ ಇಂಡೀಸ್ ಪಂದ್ಯಕ್ಕಿಂತ ಹೆಚ್ಚು ಕಠಿಣ ಸವಾಲು ಎಂದು ಅವರು ಬಣ್ಣಿಸಿದರು.

ಸಂಜು ಸ್ಯಾಮ್ಸನ್‌ಗೆ ನಿಯಮಿತವಾಗಿ ಅವಕಾಶ ನೀಡಬೇಕೆಂದ ದಾದಾ.

ಕೋಲ್ಕತ್ತಾ: ಈಡನ್ ಗಾರ್ಡನ್ಸ್‌ನಲ್ಲಿ ಸಂಜು ಸ್ಯಾಮ್ಸನ್ (Sanju Samson) ಅವರ ಸ್ಪೋಟಕ 97 ರನ್‌ಗಳ ಇನಿಂಗ್ಸ್‌ನ ಸಹಾಯದಿಂದ ಭಾರತ ತಂಡ ವೆಸ್ಟ್‌ ಇಂಡೀಸ್‌ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ಕೊನೆಯ ಸೂಪರ್-‌8ರ ಪಂದ್ಯದಲ್ಲಿ (IND vs WI) 5 ವಿಕೆಟ್‌ ಗೆಲುವು ಪಡೆದಿತ್ತು. ಈ ಅದ್ಭುತ ಗೆಲುವಿನೊಂದಿಗೆ ಭಾರತ ಸೆಮಿಫೈನಲ್ ತಲುಪಿದೆ. ಇದೀಗ ಭಾರತದ ಮಾಜಿ ನಾಯಕ ಮತ್ತು ಬಂಗಾಳ ಟೈಗರ್ ಸೌರವ್ ಗಂಗೂಲಿ ಅವರು, ಮ್ಯಾಚ್‌ವಿನ್ನರ್‌ ಸಂಜು ಸ್ಯಾಮ್ಸನ್‌ ಅವರ ಇನಿಂಗ್ಸ್‌ ಅನ್ನು ಮುಕ್ತ ಕಂಠದಿಂದ ಗುಣಗಾನ ಮಾಡಿದ್ದಾರೆ. ಇದರ ಜೊತೆಗೆ ತಮ್ಮ ಅನುಮೋದನೆ ನೀಡಿದ್ದಾರೆ. ಗಂಗೂಲಿ ಸಂಜು ಅವರ ಪ್ರತಿಭೆಯನ್ನು ಶ್ಲಾಘಿಸಿದ್ದಲ್ಲದೆ, ಆಯ್ಕೆದಾರರಿಗೆ ಬಲವಾದ ಸಂದೇಶವನ್ನೂ ರವಾನಿಸಿದ್ದಾರೆ.

ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ಸಂಜು ಸ್ಯಾಮ್ಸನ್ ಅವರ ಪ್ರದರ್ಶನದಿಂದ ತುಂಬಾ ಪ್ರಭಾವಿತರಾಗಿದ್ದಾರೆ. ಸ್ಯಾಮ್ಸನ್ ಒಬ್ಬ ಶ್ರೇಷ್ಠ ಆಟಗಾರ ಮತ್ತು ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಭಾರತಕ್ಕಾಗಿ ಆಡುವುದನ್ನು ಮುಂದುವರಿಸಬೇಕು ಎಂದು ಅವರು ಹೇಳಿದ್ದಾರೆ. ಸಂಜು ಸ್ಯಾಮ್ಸನ್‌ ಒಮ್ಮೆ ಕ್ರೀಸ್‌ನಲ್ಲಿ ನೆಲೆಗೊಂಡ ಬಳಿಕ ಎದುರಾಳಿ ಬೌಲರ್‌ಗಳನ್ನು ಬೆವರಿಳಿಸುವ ಸಾಮರ್ಥ್ಯವನ್ನು ಹೊಂದಿರುವ ಆಟಗಾರ. ಈ ಇನಿಂಗ್ಸ್‌ ಅನ್ನು ಅತ್ಯಂತ ನಿರ್ಣಾಯಕ ಮತ್ತು ಒತ್ತಡದ ಪರಿಸ್ಥಿತಿಯಲ್ಲಿ ಆಡುವ ಮೂಲಕ ಸಂಜು, ತಮ್ಮ ಪ್ರಬುದ್ಧತೆಯನ್ನು ಪ್ರದರ್ಶಿಸಿದ್ದಾರೆ ಎಂದು ಅವರು ಒತ್ತಿ ಹೇಳಿದರು.

T20 World Cup: ಅಭಿಷೇಕ್‌ ಶರ್ಮಾ ಔಟ್‌! ಇಂಗ್ಲೆಂಡ್‌ ವಿರುದ್ಧ ಸೆಮಿಫೈನಲ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಎಎನ್‌ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಸೌರವ್‌ ಗಂಗೂಲಿ, "ಅವರು ಅಸಾಧಾರಣ ಆಟಗಾರ. ಅವರು ತುಂಬಾ ಒಳ್ಳೆಯ ಆಟಗಾರ. ಹಾಗಾಗಿ ಸಂಜು ಸ್ಯಾಮ್ಸನ್‌ ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿ ಭಾರತ ತಂಡದ ಪರ ನಿಯಮಿತವಾಗಿ ಆಡಬೇಕು," ಎಂದು ಬಿಸಿಸಿಐಗೆ ಸಲಹೆ ನೀಡಿದ್ದಾರೆ.

ಸಂಜು ಸ್ಯಾಮ್ಸನ್‌ಗೆ ಗಂಗೂಲಿ ಮೆಚ್ಚುಗೆ

ಸಂಜು ಸ್ಯಾಮ್ಸನ್ ಅವರ ಅದ್ಭುತ ಮರಳುವಿಕೆಯ ಬಗ್ಗೆ ಮಾತನಾಡಿದ ಗಂಗೂಲಿ, ಕ್ರಿಕೆಟ್‌ನಲ್ಲಿ ಅಭಿಪ್ರಾಯಗಳು ಎಷ್ಟು ವೇಗವಾಗಿ ಬದಲಾಗುತ್ತವೆ ಎಂಬುದನ್ನು ಇದು ನಮಗೆಲ್ಲ ಕಲಿಸುತ್ತದೆ ಎಂದು ಹೇಳಿದರು.

"ಕಳೆದ ಆರು ತಿಂಗಳಲ್ಲಿ ತಂಡದಲ್ಲಿ ತನ್ನ ಸ್ಥಾನವನ್ನು ಸ್ಥಿರಗೊಳಿಸಿಕೊಳ್ಳಲು ಸಾಧ್ಯವಾಗದೆ ಹೋರಾಡುತ್ತಿದ್ದ ಇದೇ ಆಟಗಾರ, ಕೆಲವೊಮ್ಮೆ ಇಶಾನ್ ಕಿಶನ್ ಓಪನರ್ ಆಗಿ ಆಡಿದರೆ, ಮತ್ತೊಮ್ಮೆ ಇತರರು ಅವಕಾಶ ಪಡೆದಿದ್ದರು. ವಿಶ್ವಕಪ್‌ ಟೂರ್ನಿಗೂ ಮುನ್ನ ಮಾಧ್ಯಮಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದರು. ವಿಶ್ವಕಪ್‌ ಟೂರ್ನಿಗೂ ಮುನ್ನ ಮಾಧ್ಯಮ ಶೀರ್ಷಿಕೆಗಳಲ್ಲಿ ‘ಸ್ಯಾಮ್ಸನ್ ಮತ್ತೆ ವಿಫಲ’, ‘ಅವರಿಗೆ ತಂಡದಲ್ಲಿ ಸ್ಥಾನ ಇರಬಾರದು’, ‘ಭಾರತದ ಬಳಿ ಇಷ್ಟು ಪ್ರತಿಭೆ ಇದ್ದಾಗ ಶುಭಮನ್ ಗಿಲ್ ಯಾಕಿಲ್ಲ?’ ಎಂಬ ಪ್ರಶ್ನೆಗಳು ಕೇಳಿಬರುತ್ತಿದ್ದವು. ಆದರೆ ಅದೇ ಆಟಗಾರ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 97 ರನ್ ಗಳಿಸಿ ತಂಡವನ್ನು ಸೆಮಿಫೈನಲ್‌ಗೆ ಕೊಂಡೊಯ್ದಿದ್ದಾರೆ,” ಎಂದು ಗಂಗೂಲಿ ಶ್ಲಾಘಿಸಿದರು.

ವಿಂಡೀಸ್‌ ಎದುರು ಭಾರತ ತಡವನ್ನು ಗೆಲ್ಲಿಸಿದ ಸಂಜು ಸ್ಯಾಮ್ಸನ್‌ಗೆ ರೋಹಿತ್‌ ಶರ್ಮಾ ವಿಶೇಷ ಸಂದೇಶ!

ಸೆಮಿಫೈನಲ್‌ನಲ್ಲಿ ಭಾರತ ತಂಡಕ್ಕೆ ಇಂಗ್ಲೆಂಡ್‌ ಸವಾಲು

ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ ನಂತರ, ಟೀಮ್ ಇಂಡಿಯಾ ಮಾರ್ಚ್ 5 ರಂದು ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. 2024ರ ಸೆಮಿಫೈನಲ್‌ನಲ್ಲಿ ಭಾರತ, ಗಯಾನಾದಲ್ಲಿ ಇಂಗ್ಲೆಂಡ್ ಅನ್ನು ಸ್ಪಿನ್ ಸಹಾಯದಿಂದ ಸೋಲಿಸಿದ್ದರಿಂದ ಈ ಪಂದ್ಯವು ರೋಮಾಂಚಕ ಪಂದ್ಯವಾಗಲಿದೆ. ಆದಾಗ್ಯೂ, ಮುಂಬೈ ಪಿಚ್ ಅನ್ನು ಬ್ಯಾಟಿಂಗ್ ಸ್ನೇಹಿ ಎಂದು ಪರಿಗಣಿಸಲಾಗಿದೆ, ಇದು ಸ್ಪರ್ಧೆಯನ್ನು ಇನ್ನಷ್ಟು ತೀವ್ರಗೊಳಿಸುತ್ತದೆ. ಹ್ಯಾರಿ ಬ್ರೂಕ್ ನಾಯಕತ್ವದ ಇಂಗ್ಲಿಷ್ ತಂಡವು ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿದೆ, ಆದರೆ ಸೆಮಿಫೈನಲ್‌ನ ಒತ್ತಡವು ವಿಭಿನ್ನ ಭವಿಷ್ಯವನ್ನು ಹೇಳಬಹುದು.