ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತದ ಪಂದ್ಯವನ್ನು ಬಾಯ್ಕಟ್‌ ಮಾಡಿರುವ ಪಾಕ್‌ ನಿಲುವಿನ ಬಗ್ಗೆ ಸೂರ್ಯಕುಮಾರ್‌ ಪ್ರತಿಕ್ರಿಯೆ!

ಫೆಬ್ರವರಿ 15 ರಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡಲು ನಾವು ಸಿದ್ದರಿದ್ದೇವೆಂದು ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ತಿಳಿಸಿದ್ದಾರೆ. ಅದಕ್ಕಾಗಿ ನಾವು ಸಿದ್ದತೆಗಳನ್ನು ನಡೆಸುತ್ತಿದ್ದೇವೆ. ಕೊಲಂಬೊಗೆ ತೆರಳಲು ವಿಮಾನದ ಟಿಕೆಟ್‌ಗಳನ್ನು ಕೂಡ ಬುಕ್‌ ಮಾಡಿದ್ದೇವೆಂದು ಹೇಳಿದ್ದಾರೆ.

ಪಾಕಿಸ್ತಾನ ತಂಡದ ಬಾಯ್ಕಟ್‌ ಬಗ್ಗೆ ಸೂರ್ಯ ಹೇಳಿದ್ದಿದು.

ನವದೆಹಲಿ: ಸಾಂಪ್ರದಾಯಿ ಎದುರಾಳಿ ಪಾಕಿಸ್ತಾನ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯಲ್ಲಿ ಭಾರತ ತಂಡದ ಪಂದ್ಯವನ್ನು (IND vs PAK) ಬಾಯ್ಕಟ್‌ ಮಾಡಿದೆ. ಆದರೂ ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar Yadav) ಅವರು, ಪಾಕ್‌ ಎದುರಿನ ಪಂದ್ಯಕ್ಕೆ ನಾವು ಸಜ್ಜಾಗುತ್ತಿದ್ದೇವೆ. ಅದಕ್ಕಾಗಿ ಕೊಲಂಬೊಗೆ ತೆರಳಲು ವಿಮಾನದ ಟಿಕೆಟ್‌ಗಳನ್ನು ಕೂಟ್ಟು ಬುಕ್‌ ಮಾಡಿದ್ದೇವೆ ಎಂದು ಹೇಳಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಫೆಬ್ರವರಿ 15 ರಂದು ಲೀಗ್‌ ಪಂದ್ಯ ಕೊಲಂಬೊದ ಆರ್‌ ಪ್ರೇಮದಾಸ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ, ಈ ಪಂದ್ಯ ನಡೆಯುವ ಬಗ್ಗೆ ಇನ್ನೂ ಖಚಿತತೆ ಇಲ್ಲ.

ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಗೂ ಮುನ್ನ ನಡೆದ ನಾಯಕರುಗಳ ಸಭೆಯಲ್ಲಿ ಮಾತನಾಡಿದ ಸೂರ್ಯಕುಮಾರ್, ಪಾಕಿಸ್ತಾನ ತಂಡ ಪಂದ್ಯಕ್ಕೆ ಇಳಿಯಲು ನಿರಾಕರಿಸಿದರೂ ಸಹ ಭಾರತ ನಿಗದಿಯಂತೆ ಕೊಲಂಬೊಗೆ ಪ್ರಯಾಣಿಸಿ ಪಂದ್ಯಕ್ಕೆ ಸಿದ್ಧವಾಗಿರುತ್ತದೆ ಎಂದು ಹೇಳಿದರು. ಈ ಪರಿಸ್ಥಿತಿಗೆ ಭಾರತ ಕಾರಣವಲ್ಲ ಎಂದು ಅವರು ಸ್ಪಷ್ಟಪಡಿಸಿದರು.

T20 World Cup: ಬಾಂಗ್ಲಾದೇಶ, ಪಾಕಿಸ್ತಾನ ತಂಡಗಳ ಬಾಯ್ಕಟ್‌ ನಿಲುವನ್ನು ಸಮರ್ಥಿಸಿಕೊಂಡ ನಾಸರ್‌ ಹುಸೇನ್‌!

“ನಮ್ಮ ಮನಸ್ಥಿತಿ ತುಂಬಾ ಸ್ಪಷ್ಟವಾಗಿದೆ. ನಾವು ಅವರ (ಪಾಕಿಸ್ತಾನ) ವಿರುದ್ಧ ಆಡಲು ಎಂದಿಗೂ ನಿರಾಕರಿಸಿಲ್ಲ; ನಿರಾಕರಿಸಿರುವುದು ಅವರೇ. ನಮ್ಮ ವಿಮಾನ ಟಿಕೆಟ್‌ಗಳು ಬುಕ್ ಆಗಿವೆ ಮತ್ತು ನಾವು ಕೊಲಂಬೊಗೆ ಪ್ರಯಾಣಿಸುತ್ತಿದ್ದೇವೆ. ನಮ್ಮ ಪಂದ್ಯಗಳ ವೇಳಾಪಟ್ಟಿ ಸಿದ್ಧವಾಗಿದೆ — ಮೊದಲು ಯುಎಸ್‌ಎ, ನಂತರ ಕೆನಡಾ ಮತ್ತು ಬಳಿಕ ಕೊಲಂಬೊಗೆ ತೆರಳುತ್ತೇವೆ,” ಎಂದು ಸೂರ್ಯಕುಮಾರ್ ಯಾದವ್‌ ತಿಳಿಸಿದ್ದಾರೆ.

ಇಂಡಿಯಾ ವರದಿ ಪ್ರಕಟಿಸಿದ ಸುದ್ದಿಯಂತೆ ಭಾರತ ತಂಡ, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಗದಿಪಡಿಸಿರುವ ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಪ್ರಕಟಿಸಿದ ಟೂರ್ನಿ ವೇಳಾಪಟ್ಟಿಯಂತೆ ಮುಂದುವರಿಯಲಿದೆ. ಇದರಲ್ಲಿ ಪಂದ್ಯ ನಡೆಯುವ ಸ್ಥಳದಲ್ಲಿ ಹಾಜರಾಗುವುದು, ಅಭ್ಯಾಸ ಮತ್ತು ಮಾಧ್ಯಮ ಕರ್ತವ್ಯಗಳು ಸೇರಿದಂತೆ ಎಲ್ಲಾ ಪೂರ್ವಪಂದ್ಯ ಅವಶ್ಯಕತೆಗಳನ್ನು ಪೂರ್ಣಗೊಳಿಸುವುದು ಸೇರಿದೆ. ಪಾಕಿಸ್ತಾನ ತಂಡ ಮೈದಾನಕ್ಕಿಳಿಯದೇ ಇದ್ದರೆ, ಪಂದ್ಯ ರೆಫರಿಯ ಸೂಚನೆಗಳಿಗಾಗಿ ಕಾಯಲಾಗುತ್ತದೆ ಮತ್ತು ಆ ಪರಿಸ್ಥಿತಿಯಲ್ಲಿ ಪಂದ್ಯವನ್ನು ವಾಕ್ಓವರ್ ಎಂದು ಘೋಷಿಸುವ ಸಾಧ್ಯತೆಯೂ ಇದೆ.

ಭಾರತ ಪಂದ್ಯದ ಬಹಿಷ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ; ಖಚಿತಪಡಿಸಿದ ಪಾಕ್‌ ಪ್ರಧಾನಿ

ಪಾಕಿಸ್ತಾನ ಸರ್ಕಾರ, ಸಾಮಾಜಿಕ ಮಾಧ್ಯಮದಲ್ಲಿ ಒಂದು ಪ್ರಕಟಣೆಯನ್ನು ಬಿಡುಗಡೆ ಮಾಡಿತ್ತು. ಈ ಪ್ರಕಟಣೆಯ ಪ್ರಕಾರ ಪಾಕಿಸ್ತಾನ ತಂಡ ಟೂರ್ನಿಯಲ್ಲಿ ಭಾಗವಹಿಸುವುದಾಗಿ ದೃಢಪಡಿಸಿದರೂ, ಭಾರತ ವಿರುದ್ಧ ಮೈದಾನಕ್ಕೆ ಇಳಿಯುವುದಿಲ್ಲ ಎಂದು ತಿಳಿಸಿದೆ.

ಭಾರತ ತಂಡ, ಟೂರ್ನಿಯಲ್ಲಿ ನಾಲ್ಕು ಗುಂಪು ಹಂತದ ಪಂದ್ಯಗಳನ್ನು ಆಡಲು ನಿಗದಿಯಾಗಿದೆ. ಫೆಬ್ರವರಿ 7 ರಂದು ಮುಂಬೈನಲ್ಲಿ ಯುಎಸ್‌ಎ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಬಳಿಕ ಫೆಬ್ರವರಿ 12 ರಂದು ನಮಿಬಿಯಾ ವಿರುದ್ಧ ನವದೆಹಲಿಯಲ್ಲಿ ಮುಖಾಮುಖಿಯಾಗಲಿದೆ. ಬಹಳ ನಿರೀಕ್ಷೆಯಂತೆ ಭಾರತ–ಪಾಕಿಸ್ತಾನ ಪಂದ್ಯ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿದೆ, ನಂತರ ಭಾರತ ತಂಡ ಫೆಬ್ರವರಿ 18 ರಂದು ಅಹಮದಾಬಾದ್‌ನಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಪಂದ್ಯದ ಮೂಲಕ ಗುಂಪು ಹಂತವನ್ನು ಮುಗಿಸಲಿದೆ.