ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

2023ರಲ್ಲಿ ಕೊನೆಯ ಪಂದ್ಯವಾಡಿದ್ದ ಇಶಾನ್‌ ಕಿಶನ್‌ ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದೇಗೆ?

ಅಶಿಸ್ತಿನ ಕಾರಣ ಭಾರತ ತಂಡದಿಂದ ಹೊರ ಬಿದ್ದಿದ್ದ ವಿಕೆಟ್‌ ಕೀಪರ್‌ ಇಶಾನ್ ಕಿಶನ್ ದೇಶಿ ಕ್ರಿಕೆಟ್‌ಗೆ ಮರಳಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಾರ್ಖಂಡ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಅವರು ಮಹತ್ತರ ಪಾತ್ರವನ್ನು ವಹಿಸಿದ್ದರು. ಅವರು ಫೈನಲ್‌ನಲ್ಲಿ ಶತಕದ ಜೊತೆಗೆ ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ್ದರು.

ಇಶಾನ್‌ ಕಿಶನ್‌ ಭಾರತ ತಂಡಕ್ಕೆ ಆಯ್ಕೆಯಾದ ಹಾದಿ ಹೇಗಿದೆ?

ನವದೆಹಲಿ: ಎರಡು ವರ್ಷಗಳ ಹಿಂದೆ ಅಂದರೆ 2023ರ ಕೊನೆಯಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿತ್ತು. ಈ ಪ್ರವಾಸದಲ್ಲಿ ಇಶಾನ್ ಕಿಶನ್ (Ishan Kishan) ಭಾರತ ತಂಡದ ಭಾಗವಾಗಿದ್ದರು. ಟೆಸ್ಟ್ ಸರಣಿಗೂ ಮುನ್ನ ಇಶಾನ್ ಕಿಶನ್ ಅವರನ್ನು ಅಶಿಸ್ತಿನ ಕಾರಣದಿಂದ ಭಾರತ ತಂಡದಿಂದ ಕೈಬಿಡಲಾಗಿತ್ತು. ದೇಶಿ ಕ್ರಿಕೆಟ್ ಆಡಲು ಅವರಿಗೆ ಸಲಹೆ ನೀಡಲಾಗಿತ್ತು. ಆ ಸಮಯದಲ್ಲಿ, ಇಶಾನ್ ಮೂರು ಸ್ವರೂಪಗಳಲ್ಲಿ ಭಾರತ ತಂಡದ ಭಾಗವಾಗಿದ್ದರು ಮತ್ತು 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿಯೂ ಆಡಿದ್ದರು. ಉತ್ತಮ ಫಾರ್ಮ್ ಹೊರತಾಗಿಯೂ ಇಶಾನ್ ಅವರನ್ನು ಕೈಬಿಡಲಾಗಿತ್ತು. ಇದಾದ ಸ್ವಲ್ಪ ಸಮಯದ ನಂತರ, ಎಡಗೈ ಆಟಗಾರನನ್ನು ಬಿಸಿಸಿಐ ಕೇಂದ್ರ ಒಪ್ಪಂದದಿಂದಲೂ ಕೈಬಿಡಲಾಗಿತ್ತು.

ಭಾರತ ಕ್ರಿಕೆಟ್‌ ತಂಡ ಹಾಗೂ ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ ಕಳೆದುಕೊಂಡ ಬಳಿಕ ಇಶಾನ್ ಕಿಶನ್ ದೇಶಿ ಕ್ರಿಕೆಟ್‌ನತ್ತ ಗಮನಹರಿಸಿದರು ಮತ್ತು ಕಳೆದ ಎರಡು ವರ್ಷಗಳಿಂದ ಮೂರು ಸ್ವರೂಪಗಳಲ್ಲಿ ಆಡುತ್ತಿದ್ದಾರೆ, ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇತ್ತೀಚೆಗೆ, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಪ್ರತಿಷ್ಠಿತ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯನ್ನು ಆಯೋಜಿಸಿತ್ತು. ಈ ಟೂರ್ನಿಯಲ್ಲಿ ಇಶಾನ್ ಜಾರ್ಖಂಡ್ ತಂಡವನ್ನು ಮುನ್ನಡೆಸಿದರು. ಅವರ ನಾಯಕತ್ವದಲ್ಲಿ ಜಾರ್ಖಂಡ್ ತಂಡ ಮೊಟ್ಟ ಮೊದಲ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಎತ್ತಿಹಿಡಿಯಿತು. ಫೈನಲ್‌ನಲ್ಲಿ ಜಾರ್ಖಂಡ್ ತಂಡ ಹರಿಯಾಣ ತಂಡವನ್ನು 69 ರನ್‌ಗಳಿಂದ ಮಣಿಸಿತು.

ಟಿ20 ವಿಶ್ವಕಪ್‌ ಟೂರ್ನಿಯಿಂದ ಶುಭಮನ್‌ ಗಿಲ್‌ರನ್ನು ತೆಗೆಯಲು ಕಾರಣ ತಿಳಿಸಿದ ಅಜಿತ್‌ ಅಗರ್ಕರ್‌!

ಡಿಸೆಂಬರ್‌ 19 ಎಂದು ಪುಣೆಯಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಇಶಾನ್‌ ಕಿಶನ್‌ 49 ಎಸೆತಗಳಲ್ಲಿ 101 ರನ್ ಸಿಡಿಸಿ ಹರಿಯಾಣ ಎದುರು ಜಾರ್ಖಂಡ್‌ ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಈ ಟೂರ್ನಿಯಲ್ಲಿ ಆಡಿದ್ದ 10 ಇನಿಂಗ್ಸ್‌ಗಳಲ್ಲಿ 517 ರನ್ ಗಳಿಸಿದ್ದರು, ಇದರಲ್ಲಿ ಎರಡು ಶತಕಗಳು ಮತ್ತು ಎರಡು ಅರ್ಧಶತಕಗಳು ಸೇರಿವೆ. ಇಶಾನ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದರು. ಅವರ ಬಲವಾದ ಪ್ರದರ್ಶನವು ಟಿ20 ವಿಶ್ವಕಪ್‌ ಭಾರತ ತಂಡದಲ್ಲಿ ಸ್ಥಾನ ಪಡೆಯುವಂತೆ ಮಾಡಿದೆ.

ಐಸಿಸಿ ಟಿ20ಐ ವಿಶ್ವಕಪ್‌ ಭಾರತ ತಂಡದಲ್ಲಿ ಇಶಾನ್‌ ಕಿಶನ್‌ಗೆ ಸ್ಥಾನ ನೀಡುವ ಬಗ್ಗೆ ಯಾರಿಗೂ ನಿರೀಕ್ಷೆ ಇರಲಿಲ್ಲ. ಬಹುಶಃ ಅವರೂ ಸಹ ಅದನ್ನು ನಿರೀಕ್ಷಿಸಿರಲಿಲ್ಲ. ಜಿತೇಶ್ ಶರ್ಮಾ ಅವರನ್ನು ಕೈಬಿಟ್ಟ ನಂತರ ಕಿಶನ್ ಅವರನ್ನು ತಂಡಕ್ಕೆ ಸೇರಿಸಲಾಯಿತು. 2023ರ ನವೆಂಬರ್ 28 ರಂದು ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟಿ20ಐ ಆಡಿದ್ದ ಇಶಾನ್ ಕಿಶನ್, 32 ಟಿ20ಐ ಪಂದ್ಯಗಳಿಂದ 796 ರನ್ ಗಳಿಸಿದ್ದಾರೆ, ಇದರಲ್ಲಿ ಆರು ಅರ್ಧಶತಕಗಳು ಸೇರಿವೆ.

India squad for T20 World Cup: 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಭಾರತ ತಂಡ ಪ್ರಕಟ!

ಗಾಯದಿಂದ ಬಳಲುತ್ತಿದ್ದ ಇಶಾನ್ ಕಿಶನ್

ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ರಿಷಭ್ ಪಂತ್ ಗಾಯಗೊಂಡಿದ್ದರು. ಅವರ ಸ್ಥಾನದಲ್ಲಿ ಇಶಾನ್ ಕಿಶನ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆದಿತ್ತು. ಇದರ ನಡುವೆ ಇಶಾನ್ ಗಾಯಗೊಂಡಿದ್ದಾರೆ ಎಂಬ ಸುದ್ದಿ ಹೊರಬಿತ್ತು. ಅವರು ಪಂದ್ಯ ಆಡುವುದರಿಂದಲ್ಲ, ಸ್ಕೂಟರ್‌ನಿಂದ ಬಿದ್ದು ಈ ಗಾಯಕ್ಕೆ ತುತ್ತಾಗಿದ್ದರು. ಅವರ ಎಡಗಾಲಿಗೆ 10 ಹೊಲಿಗೆಗಳು ಬಿದ್ದಿದ್ದವು.