ನವದೆಹಲಿ: ಡಿಜಿಟಲ್ ಮಿಮಿಕ್ರಿ, AI-ರಚಿತ ಡೀಪ್‌ಫೇಕ್‌ಗಳು ಮತ್ತು ಅವರ ಧ್ವನಿ ಮತ್ತು ಹೋಲಿಕೆಯ ಅನಧಿಕೃತ ಬಳಕೆಯನ್ನು ಒಳಗೊಂಡ ಪ್ರಕ್ರಿಯೆಗಳ ವಿರುದ್ಧ ತಮ್ಮ ವ್ಯಕ್ತಿತ್ವ ಹಕ್ಕುಗಳ ಸಮಗ್ರ ರಕ್ಷಣೆ ಕೋರಿ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ (Gautam Gambhir) ದೆಹಲಿ ಹೈಕೋರ್ಟ್‌ನಲ್ಲಿ (Delhi High court) ಸಿವಿಲ್ ಮೊಕದ್ದಮೆ ಹೂಡಿದ್ದಾರೆ. 2025ರ ಅಂತ್ಯದಿಂದ ಗೌತಮ್ ಗಂಭೀರ್ ಅವರ ಕಾನೂನು ತಂಡ, ಇನ್‌ಸ್ಟಾಗ್ರಾಮ್, ಎಕ್ಸ್, ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ನಕಲಿ ಡಿಜಿಟಲ್ ವಿಷಯವು ವೇಗವಾಗಿ ಮತ್ತು ಆತಂಕಕಾರಿಯಾಗಿ ಹೆಚ್ಚುತ್ತಿರುವುದನ್ನು ಗಮನಿಸಿದೆ. ಹಲವು ಖಾತೆಗಳು ಕೃತಕ ಬುದ್ಧಿಮತ್ತೆ, ಫೇಸ್-ಸ್ವಾಪಿಂಗ್ ಮತ್ತು ಧ್ವನಿ-ಕ್ಲೋನಿಂಗ್ ತಂತ್ರಜ್ಞಾನಗಳನ್ನು ಬಳಸಿಕೊಂಡು ನಕಲಿ ವೀಡಿಯೊಗಳನ್ನು ರಚಿಸಿದ್ದು, ಗಂಭೀರ್ ಅವರು ಎಂದಿಗೂ ಹೇಳದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಪ್ಪಾಗಿ ಚಿತ್ರಿಸಲಾಗಿದೆ.
ಇದರಲ್ಲಿ 2.9 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ ನಕಲಿ ರಾಜೀನಾಮೆ ಘೋಷಣೆಯೂ ಸೇರಿದೆ. ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಹಿರಿಯ ಕ್ರಿಕೆಟಿಗರ ಕುರಿತು ಅವರು ಕಾಮೆಂಟ್ ಮಾಡುತ್ತಿರುವ ಒಂದು ವಿಡಿಯೊ ಕ್ಲಿಪ್ ಅನ್ನು 1.7 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಸಾಮಾಜಿಕ ಮಾಧ್ಯಮಗಳನ್ನು ಮೀರಿ, ಪ್ರಮುಖ ಇ-ಕಾಮರ್ಸ್ ವೇದಿಕೆಗಳು ಅವರ ಹೆಸರು ಮತ್ತು ಮಾರುಕಟ್ಟೆ ಉತ್ಪನ್ನಗಳ ಹೋಲಿಕೆಯನ್ನು ಒಳಗೊಂಡ ಪೋಸ್ಟರ್‌ಗಳನ್ನು ಯಾವುದೇ ಪೂರ್ವಾನುಮತಿ ಪಡೆಯದೆ ಬಳಸುತ್ತಿದ್ದವು.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಳು ಗೌತಮ್ ಗಂಭೀರ್ ಕಾರಣ? ಆರ್ ಅಶ್ವಿನ್ ಶಾಕಿಂಗ್ ಹೇಳಿಕೆ!
ಈ ಮೊಕದ್ದಮೆಯನ್ನು 16 ಆರೋಪಿಗಳ ವಿರುದ್ಧ ದಾಖಲಿಸಲಾಗಿದೆ. ಇವುಗಳಲ್ಲಿ ಜೈಂಕಿ ಫ್ರೇಮ್ಸ್, ಭೂಪೇಂದ್ರ ಪೆಂಟೋಲಾ, ಲೆಜೆಂಡ್ಸ್ ರೆವಲ್ಯೂಷನ್ ಮುಂತಾದ ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳು ಸೇರಿವೆ. ಹೆಚ್ಚುವರಿಯಾಗಿ, ಇ-ಕಾಮರ್ಸ್ ವೇದಿಕೆಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಅನ್ನು ಮೊಕದ್ದಮೆಯಲ್ಲಿ ಹೆಸರಿಸಲಾಗಿದೆ. ಇದಲ್ಲದೆ, ಮೆಟಾ ಪ್ಲಾಟ್‌ಫಾರ್ಮ್‌ಗಳು, ಎಕ್ಸ್, ಗೂಗಲ್ ಮತ್ತು ಯೂಟ್ಯೂಬ್ ಸೇರಿದಂತೆ ತಂತ್ರಜ್ಞಾನ ಕಂಪನಿಗಳನ್ನು ಪ್ರತಿವಾದಿಗಳಾಗಿ ಪಟ್ಟಿ ಮಾಡಲಾಗಿದೆ. ಐಟಿ ಸಚಿವಾಲಯ ಮತ್ತು ದೂರಸಂಪರ್ಕ ಇಲಾಖೆಯನ್ನು ಸಹ ಪ್ರೊ ಫಾರ್ಮಾ ಪಾರ್ಟಿಗಳಾಗಿ ಸೇರಿಸಲಾಗಿದೆ.
2.5 ಕೋಟಿ ರು. ಗಳಿಗೆ ಪರಿಹಾರಕ್ಕೆ ಗಂಭೀರ್ ಆಗ್ರಹ
ಗಂಭೀರ್ ₹2.5 ಕೋಟಿ ಪರಿಹಾರ, ಎಲ್ಲಾ ಖಾತೆಗಳನ್ನು ಅಳಿಸುವುದು, ಶಾಶ್ವತ ತಡೆಯಾಜ್ಞೆ ಮತ್ತು ಎಲ್ಲಾ ಉಲ್ಲಂಘನೆಯ ವಿಷಯವನ್ನು ತೆಗೆದುಹಾಕುವಂತೆ ಕೋರಿದ್ದಾರೆ. ಭವಿಷ್ಯದಲ್ಲಿ ತಮ್ಮ ಹೆಸರು, ಮುಖ ಮತ್ತು ಧ್ವನಿಯನ್ನು ಬಳಸುವುದನ್ನು ನಿಷೇಧಿಸುವಂತೆಯೂ ಅವರು ನ್ಯಾಯಾಲಯವನ್ನು ಕೋರಿದ್ದಾರೆ. ಈ ವಿಷಯದಲ್ಲಿ ತ್ವರಿತ ಕ್ರಮ ಕೈಗೊಳ್ಳುವಂತೆ ಅವರು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.
IPL 2026: ರಾಜಸ್ಥಾನ್ ರಾಯಲ್ಸ್ ತೊರೆದ ಸಂಜು ಸ್ಯಾಮ್ಸನ್ ಬಗ್ಗೆ ರಿಯಾನ್ ಪರಾಗ್ ದೊಡ್ಡ ಹೇಳಿಕೆ!
ಗೌತಮ್ ಗಂಭೀರ್ ಹೇಳಿಕೆ
ಮುಖ್ಯ ತರಬೇತುದಾರ ಗೌತಮ್ ಗಂಭೀರ್, "ನನ್ನ ಗುರುತನ್ನು - ನನ್ನ ಹೆಸರು, ನನ್ನ ಮುಖ ಮತ್ತು ನನ್ನ ಧ್ವನಿಯನ್ನು - ಅನಾಮಧೇಯ ಖಾತೆಗಳು ತಪ್ಪು ಮಾಹಿತಿಯನ್ನು ಹರಡಲು ಮತ್ತು ನನ್ನ ಹೆಸರಿನಲ್ಲಿ ಆದಾಯ ಗಳಿಸಲು ಪ್ರಯತ್ನಿಸುತ್ತೇವೆ. ಇದು ಕೇವಲ ವೈಯಕ್ತಿಕ ವಿಷಯವಲ್ಲ; ಇದು ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಪ್ರತಿಯೊಬ್ಬ ಸಾರ್ವಜನಿಕ ವ್ಯಕ್ತಿಗೆ ಅರ್ಹವಾಗಿರುವ ಕಾನೂನು, ಘನತೆ ಮತ್ತು ರಕ್ಷಣೆಯ ವಿಷಯವಾಗಿದೆ," ಎಂದು ಹೇಳಿದ್ದಾರೆ.