ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shreyas Iyer: ಶ್ರೇಯಸ್‌ ಅಯ್ಯರ್‌ ಆರೋಗ್ಯ ಗಭೀರ! ಐಸಿಯುಗೆ ದಾಖಲಾದ ಉಪ ನಾಯಕ!

ಭಾರತ ಕ್ರಿಕೆಟ್‌ ತಂಡದ ಅನುಭವಿ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಪ್ರಸ್ತುತ ಸಿಡ್ನಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದು, ಐಸಿಯುನಲ್ಲಿ ಇರಿಸಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಬಲಗೈ ಬ್ಯಾಟ್ಸ್‌ಮನ್‌ ಗಾಯಕ್ಕೆ ತುತ್ತಾಗಿದ್ದರು.

ಐಸಿಐಗೆ ದಾಖಲಾಗಿರುವ ಶ್ರೇಯಸ್‌ ಅಯ್ಯರ್‌.

ನವದೆಹಲಿ: ಭಾರತದ (Indian Cricket Team) ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ (Shreyas Iyer) ಆರೋಗ್ಯದ ಬಗ್ಗೆ ಪ್ರಮುಖ ಮಾಹಿತಿ ಬಂದಿದೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ (IND vs AUS) ಅಯ್ಯರ್ ಪಕ್ಕೆಲುಬಿನ ಗಾಯಕ್ಕೆ ತುತ್ತಾಗಿದ್ದರು. ಅವರು ಕ್ಯಾಚ್ ಪಡೆಯುವ ವೇಳೆ ನೆಲಕ್ಕೆ ಬಿದ್ದು ಪಕ್ಕೆಲುಬಿನ ಗಾಯಕ್ಕೆ ಒಳಗಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸಿಡ್ನಿಯ ಆಸ್ಪತ್ರೆಯೊಂದರ ಐಸಿಯುಗೆ ದಾಖಲಿಸಲಾಗಿದೆ. ಅಲ್ಲದೆ ಪಕ್ಕೆಲುಬಿನ ಗಾಯದಿಂದಾಗಿ ಅವರಿಗೆ ಆಂತರಿಕ ರಕ್ತಸ್ರಾವವಾಗುತ್ತಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಶ್ರೇಯಸ್‌ ಅಯ್ಯರ್‌ ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳಲು ದೀರ್ಘಾವಧಿ ಸಮಯ ತೆಗೆದುಕೊಳ್ಳಬಹುದು.

ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಶೇಯಸ್‌ ಅಯ್ಯರ್ ಅವರನ್ನು ಭಾರತ ಏಕದಿನ ತಂಡದ ಉಪನಾಯಕರನ್ನಾಗಿ ನೇಮಿಸಲಾಗಿತ್ತು. ಎರಡನೇ ಏಕದಿನ ಪಂದ್ಯದಲ್ಲಿ ಅವರು ಅರ್ಧಶತಕ ಬಾರಿಸಿ ಉತ್ತಮ ಪ್ರದರ್ಶನವನ್ನು ತೋರಿದ್ದರು. ಆದಾಗ್ಯೂ, ಶ್ರೇಯಸ್‌ ಅಯ್ಯರ್ ಅವರ ಪ್ರಸ್ತುತ ಸ್ಥಿತಿಯನ್ನು ಗಮನಿಸಿದರೆ, ಅವರು ತಂಡಕ್ಕೆ ಮರಳಲು ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಬಹುತೇಕ ಹೊರಬಿದ್ದಿದ್ದಾರೆ.

ಕ್ಯಾಚ್‌ ಪಡೆಯುವ ವೇಳೆ ಅಯ್ಯರ್ ನೆಲಕ್ಕೆ ಬಿದ್ದಿದ್ದರು. ಇದರ ಪರಿಣಾಮ ಅವರ ಪಕ್ಕೆಲುಬಿನಲ್ಲಿ ನೋವು ಕಾಣಿಸಿಕೊಂಡು ಮೈದಾನವನ್ನು ತೊರೆದಿದ್ದರು. ಅವರ ವೈದ್ಯಕೀಯ ವರದಿಗಳ ಪ್ರಕಾರ, ಅವರು ಗಂಭೀರ್‌ ಗಾಯಕ್ಕೆ ತುತ್ತಾಗಿದ್ದು, ಅವರನ್ನು ಐಸಿಯುನಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.

IND vs AUS: ಗಾಯಾಳು ಶ್ರೇಯಸ್‌ ಅಯ್ಯರ್‌ ಮೂರು ವಾರಗಳ ಕಾಲ ಕ್ರಿಕೆಟ್‌ನಿಂದ ಔಟ್‌! ವರದಿ

"ಕಳೆದ ಎರಡು ದಿನಗಳಿಂದ ಶ್ರೇಯಸ್‌ ಅಯ್ಯರ್‌ ಐಸಿಯುನಲ್ಲಿದ್ದಾರೆ. ವೈದ್ಯಕೀಯ ವರದಿಯ ಪ್ರಕಾರ ಶ್ರೇಯಸ್‌ ಅಯ್ಯರ್‌ಗೆ ಆಂತರಿಕ ರಕ್ರಸ್ರಾವವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಐಸಿಯುಗೆ ಸೇರಿಸಲಾಗಿದೆ. ಅವರ ಆಂತರಿಕ ರಕ್ತಸ್ರಾವ ನಿಲ್ಲದಿದ್ದರೆ ಅಥವಾ ಕಡಿಮೆಯಾಗದಿದ್ದರೆ, ಅವರು ಇನ್ನೂ ಕೆಲವು ದಿನಗಳ ಕಾಲ ಐಸಿಯುನಲ್ಲಿಯೇ ಇರಬೇಕಾಗುತ್ತದೆ. ಅಂದರೆ ಮುಂದಿನ ಏಳು ದಿನಗಳಾದರೂ ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ," ಎಂದು ಬೆಳವಣಿಗೆಗಳನ್ನು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

"ಭಾರತ ತಂಡದ ವೈದ್ಯರು ಹಾಗೂ ಫಿಸಿಯೊ ಯಾವುದೇ ಅವಕಾಶವನ್ನು ತೆಗೆದುಕೊಳ್ಳದೆ, ತಕ್ಷಣ ಶ್ರೇಯಸ್‌ ಅಯ್ಯರ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗ ಪರಿಸ್ಥಿತಿ ಸ್ಥಿರವಾಗಿದೆ, ಆದರೆ ಅದು ಮಾರಕವಾಗಬಹುದಿತ್ತು. ಅವರು ಗಟ್ಟಿಮುಟ್ಟಾದ ಹುಡುಗ ಮತ್ತು ಶೀಘ್ರದಲ್ಲೇ ಗುಣಮುಖನಾಗಬೇಕು," ಎಂದು ಮೂಲಗಳು ಸೇರಿಸಿವೆ.

IND vs AUS: ಜಸ್‌ಪ್ರೀತ್‌ ಬುಮ್ರಾ ಇನ್‌, ಮೊದಲ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಶ್ರೇಯಸ್‌ ಅಯ್ಯರ್‌ ಆರಂಭದಲ್ಲಿ ಮೂರು ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬಹುದಿತ್ತು ಎಂದು ಹೇಳಲಾಗಿತ್ತು. ಆದರೆ, ಇದೀಗ ಅವರು ದೀರ್ಘಾವಧಿ ಕ್ರಿಕೆಟ್‌ನಿಂದ ದೂರ ಉಳಿಯಬಹುದು. ಈ ಹಿನ್ನೆಲೆಯಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಯಿಂದ ಹೊರಬೀಳಲಿದ್ದಾರೆ.

"ಆಂತರಿಕ ರಕ್ತಸ್ರಾವದಿಂದ ಬಳಲುತ್ತಿರುವುದರಿಂದ, ಅವರು ಚೇತರಿಸಿಕೊಳ್ಳಲು ಖಂಡಿತವಾಗಿಯೂ ಹೆಚ್ಚಿನ ಸಮಯ ಬೇಕಾಗುತ್ತದೆ ಮತ್ತು ಈ ಹಂತದಲ್ಲಿ, ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಬಗ್ಗೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸುವುದು ಕಷ್ಟ" ಎಂದು ಮೂಲಗಳು ತಿಳಿಸಿವೆ.