ನವದೆಹಲಿ: ತವರು ನೆಲದಲ್ಲಿ ನಡೆದಿದ್ದ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನವನ್ನು ತೀರುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿ (Varun Chakravarthy) ಅವರು ಐಸಿಸಿ ಟಿ20ಐ ಬೌಲರ್‌ಗಳ (ICC T20I Bowlers Rankings) ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಅಫ್ಘಾನಿಸ್ತಾನ ತಂಡದ ಸ್ಪಿನ್ನರ್ ರಶೀದ್ ಖಾನ್ ಅವರಿಗೆ ಭಾರತದ ಸ್ಪಿನ್ನರ್ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. ಕಳೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ 14 ವಿಕೆಟ್‌ಗಳ ಮೂಲಕ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಜಂಟಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದರೂ ವರಣ್ ಶ್ರೇಯಾಂಕದಲ್ಲಿ ಭಾರಿ ಹಿನ್ನಡೆಯನ್ನು ಅನುಭವಿಸಿದ್ದಾರೆ.
2025ರ ಸೆಪ್ಟೆಂಬರ್‌ನಲ್ಲಿ ತಮ್ಮ ಅದ್ಭುತ ಫಾರ್ಮ್‌ನಿಂದ ವರುಣ್ ಚಕ್ರವರ್ತಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದರು ಹಾಗೂ ಮಾರ್ಚ್ 11ರವರೆಗೂ ಅವರು ಈ ಸ್ವರೂಪದಲ್ಲಿ ಅಗ್ರ ಬೌಲರ್ ಆಗಿ ಮುಂದುವರಿದಿದ್ದರು. ಟಿ20 ವಿಶ್ವಕಪ್ ಆರಂಭದಲ್ಲಿ ವರುಣ್ ಉತ್ತಮ ಪ್ರದರ್ಶನ ನೀಡಿದ್ದರು, ಅವರು ಮೊದಲ ನಾಲ್ಕು ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ಗಳನ್ನು ಪಡೆದಿದ್ದರು. ಆದರೆ ಸೂಪರ್-8 ಹಂತದಿಂದ ಅವರು ದುಬಾರಿಯಾಗಿದ್ದರು. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಲ್ಲೂ ಅವರು ಪರಿಣಾಮಕಾರಿಯಾಗುವಲ್ಲಿ ವಿಫಲರಾದರು.
BAN vs PAK: ಬಾಬರ್ ಆಝಮ್ ಕ್ರಿಕೆಟ್ ಭವಿಷ್ಯ ಅಂತ್ಯ? ಸ್ಪಷ್ಟನೆ ನೀಡಿದ ನಾಯಕ ಶಾಹೀನ್ ಅಫ್ರಿದಿ!
740 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ವರುಣ್ ಚಕ್ರವರ್ತಿ ಇದೀಗ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ರಶೀದ್ ಖಾನ್ 13 ಅಂಕಗಳನ್ನು ಹೆಚ್ಚಾಗಿ ಹೊಂದಿದ್ದಾರೆ. ಮತ್ತೊಂದು ಅಚ್ಚರಿ ವಿಷಯವೇನೆಂದರೆ ಅಫ್ಘಾನಿಸ್ತಾನದ ಸ್ಪಿನ್ನರ್ ಟೂರ್ನಿಯ ಸೂಪರ್-8ರ ಹಂತ ಹಾಗೂ ನಾಕೌಟ್ ಪಂದ್ಯಗಳಲ್ಲಿ ಭಾಗವಹಿಸಿರಲಿಲ್ಲ. ಆದರೂ ಅವರು ಅಗ್ರ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.
ಮುಂಬೈನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವರುಣ್ ನಾಲ್ಕು ಓವರ್‌ಗಳಲ್ಲಿ 64 ರನ್ ನೀಡಿ ಕೇವಲ ಒಂದು ವಿಕೆಟ್ ಪಡೆದಿದ್ದರು. ಅಹಮದಾಬಾದ್‌ನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಅವರು ಮೂರು ಓವರ್‌ಗಳಲ್ಲಿ 39 ರನ್ ನೀಡಿದರೂ ಟಿಮ್ ಸೈಫರ್ಟ್ ಅವರ ಮಹತ್ವದ ವಿಕೆಟ್ ಪಡೆದುಕೊಂಡಿದ್ದರು.
ಏಕದಿನ ನಂ.1 ಸ್ಥಾನ ಉಳಿಸಿಕೊಂಡ ಮಂಧಾನ; 12ನೇ ಸ್ಥಾನಕ್ಕೆ ಕುಸಿದ ಜೆಮಿಮಾ
31 ಓವರ್‌ಗಳಿಗೆ 287 ರನ್ ನೀಡಿದ್ದ ವರುಣ್
ಟಿ20 ವಿಶ್ವಕಪ್ ಟೂರ್ನಿಯಲ್ಲಿ ವರುಣ್ ಚಕ್ರವರ್ತಿ ಒಟ್ಟು 31 ಓವರ್‌ಗಳಲ್ಲಿ 287 ರನ್ ನೀಡಿದ್ದರು ಹಾಗೂ ಅವರು ಎಕಾನಮಿ ದರ 9.25 ಆಗಿದ್ದು, ಸರಾಸರಿ 20.5 ಆಗಿತ್ತು. ಫೈನಲ್‌ನಲ್ಲಿ ನಾಲ್ಕು ವಿಕೆಟ್‌ಗೆ 15 ರನ್ ನೀಡಿ ಭಾರತದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದ ಜಸ್‌ಪ್ರೀತ್ ಬುಮ್ರಾ ಒಂದು ಸ್ಥಾನವನ್ನು ಏರಿಕೆ ಕಂಡಿದ್ದಾರೆ ಹಾಗೂ ಆರನೇ ಸ್ಥಾನಕ್ಕೆ ಬಂದಿದ್ದಾರೆ. ಬುಮ್ರಾ ಕೂಡ ವರುಣ್ ಅವರಂತೆ 14 ವಿಕೆಟ್ ಪಡೆದು, 12.42ರ ಸರಾಸರಿ ಹಾಗೂ 6.21ರ ಎಕಾನಮಿ ದರದೊಂದಿಗೆ ಟೂರ್ನಿ ಮುಗಿಸಿದ್ದಾರೆ. ಏಳು ಪಂದ್ಯಗಳಲ್ಲಿ 11 ವಿಕೆಟ್ ಪಡೆದ ಅಕ್ಷರ್ ಪಟೇಲ್, ಇತ್ತೀಚಿನ ಟಿ20ಐ ಬೌಲರ್‌ಗಳ ಶ್ರೇಯಾಂಕದಲ್ಲಿ ಆರು ಸ್ಥಾನ ಏರಿ 17ನೇ ಸ್ಥಾನಕ್ಕೆ ಬಂದಿದ್ದಾರೆ.
ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ನಾಯಕತ್ವ ಹಂಚಿಕೊಂಡ ಸ್ಯಾಂಟ್ನರ್-ಲ್ಯಾಥಮ್
ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಸಿಕಂದರ್ ರಾಜಾಗೆ ಅಗ್ರ ಸ್ಥಾನ
ಟಿ20ಐ ಆಲ್‌ರೌಂಡರ್ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕಾಗಿ ಪೈಪೋಟಿ ಮುಂದುವರಿದಿದೆ. ಜಿಂಬಾಬ್ವೆ ನಾಯಕ ಸಿಕಂದರ್ ರಾಜಾ ಮತ್ತು ಭಾರತದ ಹಾರ್ದಿಕ್ ಪಾಂಡ್ಯ ಇಬ್ಬರೂ ಈ ವಾರ ತಮ್ಮ ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ ಅಂಕಗಳನ್ನು ಗಳಿಸಿದ್ದಾರೆ. ರಾಜಾ 328 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ಹಾರ್ದಿಕ್ 299 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿ ಇದ್ದಾರೆ.
ಮತ್ತೊಂದೆಡೆ ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಮೂರನೇ ಸ್ಥಾನ ಏರಿ ಒಂಬತ್ತನೇ ಸ್ಥಾನಕ್ಕೆ ಬಂದು ವೈಯಕ್ತಿಕ ಅತ್ಯುತ್ತಮ ರೇಟಿಂಗ್ ದಾಖಲಿಸಿದ್ದಾರೆ. ಇಂಗ್ಲೆಂಡ್‌ನ ವಿಲ್ ಜ್ಯಾಕ್ಸ್ ಕೂಡ ದೊಡ್ಡ ಏರಿಕೆ ಕಂಡಿದ್ದು, 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನದ ಬಳಿಕ ಐದು ಸ್ಥಾನ ಏರಿಕೆ ಕಂಡು 13ನೇ ಸ್ಥಾನಕ್ಕೇರಿದ್ದಾರೆ.