ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2027: ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮವನ್ನು ತೆಗೆಯಬೇಕೆಂದ‌ ಸುರೇಶ್‌ ರೈನಾ!

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮವನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಟೀಕಿಸಿದ್ದಾರೆ. ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮದಿಂದ ಬ್ಯಾಟ್ಸ್‌ಮನ್‌ಗಳಿಗೆ ಲಾಭವಾಗಿದ್ದು, ಬೌಲರ್‌ಗಳ ಹೆಚ್ಚಿನ ಒತ್ತಡ ಬೀಳುತ್ತಿದೆ ಎಂದು ಹೇಳಿದ್ದಾರೆ.

ಇಂಪ್ಯಾಕ್ಟ್‌ ಪ್ಲೇಯರ್‌ ವಿರುದ್ಧ ಸುರೇಶ್‌ ರೈನಾ ಕಿಡಿ.

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2027) ಟೂರ್ನಿಯಲ್ಲಿ ಬಳಸುತ್ತಿರುವ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮವನ್ನು (Impact Player Rule) ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ ಟೀಕಿಸಿದ್ದಾರೆ. ಈ ನಿಯಮದಿಂದ ಬೌಲರ್‌ಗಳ ಮೇಲೆ ಹೆಚ್ಚುವರಿ ಒತ್ತಡ ಬೀಳಲಿದ್ದು, ಬ್ಯಾಟ್ಸ್‌ಮನ್‌ಗಳಿಗೆ ಲಾಭದಾಯಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತನ್ನ ಐಪಿಎಲ್‌ ವೃತ್ತಿ ಜೀವನದಲ್ಲಿ ಆಡಿದ 228 ಪಂದ್ಯಗಳನ್ನು ಆಡಿರುವ ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್‌ ರೈನಾ, ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮದಿಂದ ಎಲ್ಲಾ ತಂಡಗಳು 200 ರನ್‌ಗಳನ್ನು ಗಡಿಯನ್ನು ದಾಟುತ್ತಿವೆ ಹಾಗೂ 300 ರನ್‌ಗಳ ಮೊತ್ತವನ್ನು ಕಲೆ ಹಾಕುವ ಭೀತಿಯನ್ನು ಹುಟ್ಟು ಹಾಕಿದೆ.

"ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮದ ವಿರುದ್ಧ ನಾನಿದ್ದೇನೆ. ಸಂಪೂರ್ಣ ಆಟಗಾರರು ವಿಶ್ರಾಂತಿ ಪಡೆದು ಬಂದು ರನ್‌ ಸಿಡಿಸುತ್ತಾರೆ. ಆದರೆ, ಇದರಿಂದ ಬೌಲರ್‌ಗಳಿಗೆ ಯಾವುದೇ ಉಪಯೋಗವಾಗುತ್ತಿಲ್ಲ. ಇದು ಬೌಲರ್‌ಗಳ ಪಾಲಿಗೆ ತುಂಬಾ ಕಠಿಣವಾಗಿದೆ. 300 ರನ್‌ಗಳನ್ನು ಕಲೆ ಹಾಕಿದರೂ ಬೌಲರ್‌ಗಳಿಗೆ ರನ್‌ಗಳಿಗೆ ಕಡಿವಾಣ ಹಾಕುವುದು ಕಷ್ಟ. ಹೆಚ್ಚುವರಿ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ಗೆ ಬಂದು ಬೌಲರ್‌ಗಳ ಮೇಲೆ ಒತ್ತಡವನ್ನು ಹಾಕುತ್ತಾರೆ," ಎಂದು ಮಾಜಿ ಟೆಸ್ಟ್‌ ಆರಂಭಿಕ ಆಕಾಶ್‌ ಚೋಪ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಸುರೇಶ್‌ ರೈನಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ದಿನೇಶ್‌ ಕಾರ್ತಿಕ್‌ ಮುಖ್ಯ ಕೋಚ್‌?

2023ರಲ್ಲಿ ಐಪಿಎಲ್‌ ಟೂರ್ನಿಯಲ್ಲಿ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮವನ್ನು ಪರಿಚಯಿಸಲಾಗಿತ್ತು. ಈ ನಿಯಮದ ಪ್ರಕಾರ ಟಾಸ್‌ ವೇಳೆ ಐವರು ಸಬ್‌ಸ್ಟಿಟ್ಯೂಟ್‌ ಆಟಗಾರರನ್ನು ಆರಿಸಬಹುದಿತ್ತು ಹಾಗೂ ಪಂದ್ಯದ ಸಮಯದಲ್ಲಿ ಯಾವಾಗ ಬೇಕಾದರೂ ಒಬ್ಬರನ್ನು ಪ್ಲೇಯಿಂಗ್‌ XIನಲ್ಲಿ ಬದಲಿಸಬಹುದಿತ್ತು. ಪಂದ್ಯದಲ್ಲಿ ಮೊದಲನೇ ಎಸೆತದ ತಕ್ಷಣ ಬದಲಿಸಬಹುದಾಗಿತ್ತು.

ಈ ನಿಯಮವನ್ನು ಪರಿಚಯಿಸಿದ ಬಳಿಕ ಐಪಿಎಲ್‌ ಟೂರ್ನಿಯಲ್ಲಿ ಬ್ಯಾಟಿಂಗ್‌ ಗುಣಮಟ್ಟದಲ್ಲಿಯೂ ಸುಧಾರಣೆಯಾಗಿದೆ. ಟೂರ್ನಿಯಲ್ಲಿ ಹಲವು ತಂಡಗಳು ಅನೇಕ ಬಾರಿ 250ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿವೆ. ಎಷ್ಟೇ ಕಠಿಣ ಮೊತ್ತವಾಗಿದ್ದರೂ ಅದನ್ನು ಚೇಸ್‌ ಮಾಡಬಹುದಾಗಿದೆ. ಇದೇ ವೇಳೆ ಸುರೇಶ್‌ ರೈನಾ, ಭಾರತೀಯ ಕ್ರಿಕೆಟ್‌ನ ಸಕ್ರಿಯ ಆಟಗಾರರಿಗೂ ವಿದೇಶಿ ಲೀಗ್‌ ಆಡಲು ಅವಕಾಶ ನೀಡಬಾರದೆಂದು ಆಗ್ರಹಿಸಿದ್ದಾರೆ.

ಏಷ್ಯನ್ ಕ್ರೀಡಾಕೂಟಕ್ಕೆ ಬಿಸಿಸಿಐ ಸಲ್ಲಿಸಿದ್ದ ವಿಶೇಷ ವಸತಿ ಕೋರಿಕೆ ತಿರಸ್ಕರಿಸಿದ ಐಒಎ

“ಈಗ ಭಾರತೀಯ ಆಟಗಾರರಿಗೆ ಅವಕಾಶ ನೀಡಬಾರದು ಎಂದು ನನಗೆ ಅನಿಸುತ್ತದೆ. ನಮ್ಮ ಲೀಗ್ ಈಗ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಹಿಂದೆ ನಾವು ವಿದೇಶ ಪ್ರವಾಸಗಳಿಗೆ ತೆರಳುತ್ತಿದ್ದಾಗಲೂ ನಾನು ಇದೇ ಪ್ರಶ್ನೆಯನ್ನು ಕೇಳುತ್ತಿದ್ದೆ. ನಾನೂ ಕೂಡ ಆ ಲೀಗ್‌ನಲ್ಲಿ ಆಡುವುದಕ್ಕೆ ಹತ್ತಿರವಾಗಿದ್ದೆ. ಆದರೆ ಆಗ ಅವರು ‘ಇಲ್ಲ’ ಎಂದು ಹೇಳಿದ್ದರು,” ಎಂದು ಸುರೇಶ್ ರೈನಾ ಹೇಳಿದ್ದಾರೆ.

“ಈಗ ಸಾಕಷ್ಟು ವಿದೇಶಿ ಆಟಗಾರರು ನಮ್ಮ ಲೀಗ್‌ಗೆ ಬರುತ್ತಿದ್ದಾರೆ. ಅದೇ ಸಮಯದಲ್ಲಿ ವಿದೇಶಿ ಲೀಗ್‌ಗಳ ಗುಣಮಟ್ಟವೂ ಕುಸಿದಿದೆ. ಆ ಸಮಯದಲ್ಲಿ ಅವಕಾಶ ಸಿಕ್ಕಿದ್ದರೆ ನಾನು ಖಂಡಿತವಾಗಿಯೂ ‘ಹೌದು’ ಎಂದು ಹೇಳುತ್ತಿದ್ದೆ. ಆದರೆ ಈಗ ನಾವು ವಿಶ್ವ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದೇವೆ,” ಎಂದು ಅವರು ತಿಳಿಸಿದ್ದಾರೆ.

ರೈನಾ ತಮ್ಮ ಐಪಿಎಲ್ ವೃತ್ತಿಜೀವನವನ್ನು 228 ಪಂದ್ಯಗಳಲ್ಲಿ 5,528 ರನ್‌ಗಳೊಂದಿಗೆ ಮುಗಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 39 ಅರ್ಧಶತಕಗಳು ಸೇರಿವೆ. ಅವರು ಸಿಎಸ್‌ಕೆ ಪರ ಮೂರು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದ್ದು, ಲೀಗ್ ಇತಿಹಾಸದ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರಾಗಿದ್ದಾರೆ.