ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಇದು ನನ್ನ ನಿರ್ಧಾರವಲ್ಲʼ:IPL 2026 ಟೂರ್ನಿಯಿಂದ ಹೊರಗುಳಿಯಲು ಅಸಲಿ ಕಾರಣ ತೆರೆದಿಟ್ಟ ಯಶ್‌ ದಯಾಳ್‌!

Yash Dayal on IPL 2026: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡದೇ ಇರಲು ಕಾರಣವೇನೆಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಎಡಗೈ ವೇಗಿ ಯಶ್‌ ದಯಾಳ್‌ ಬಹಿರಂಗಪಡಿಸಿದ್ದಾರೆ. ಇದು ನನ್ನ ನಿರ್ಧಾರವಲ್ಲ, ಆಡಳಿತ ಮಂಡಳಿ ತೆಗೆದುಕೊಂಡ ನಿರ್ಧಾರ ಎಂದು ಅವರು ತಿಳಿಸಿದ್ದಾರೆ.

ಈ ಬಾರಿ ಐಪಿಎಲ್‌ ಆಡದೇ ಇರಲು ಕಾರಣ ತಿಳಿಸಿದ ಯಶ್‌ ದಯಾಳ್‌.

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ ಟೂರ್ನಿಯಿಂದ (IPL 2026) ಹೊರಗುಳಿಯಲು ಕಾರಣವೇನೆಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ವೇಗಿ ಯಶ್‌ ದಯಾಳ್‌ (Yash Dayal) ಬಹಿರಂಗಪಡಿಸಿದ್ದಾರೆ. ಈ ಬಾರಿ ಟೂರ್ನಿಯಿಂದ ಹೊರಗುಳಿವುದು ನನ್ನ ವೈಯಕ್ತಿಕ ನಿರ್ಧಾರವಲ್ಲ, ಇದು ಆರ್‌ಸಿಬಿ ಟೀಮ್‌ ಮ್ಯಾನೇಜ್‌ಮೆಂಟ್‌ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ. 19ನೇ ಆವೃತ್ತಿಗೂ ಮುನ್ನ ಮಾತನಾಡಿದ ಆರ್‌ಸಿಬಿ ಕ್ರಿಕೆಟ್‌ ಡೈರೆಕ್ಟರ್‌ ಮೊ ಬೊಬಾಟ್‌ ಅವರು ಈ ಬಾರಿ ಟೂರ್ನಿಗೆ ಯಶ್‌ ದಯಾಳ್‌ ಅಲಭ್ಯರಾಗಿದ್ದಾರೆಂದು ತಿಳಿಸಿದ್ದರು. ಆದರ, ಇದೀಗ ಸ್ವತಃ ಯಶ್‌ ದಯಾಳ್‌ ಅವರೇ ಸ್ಪಷ್ಟನೆ ನೀಡಿದ್ದಾರೆ.

ಟಾಕ್‌ ವಿಥ್‌ ಮನ್ವಿಂದರ್‌ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಯಶ್‌ ದಯಾಳ್‌, ಟೂರ್ನಿಯಿಂದ ಹೊರಗಿಳಿದು ಆರ್‌ಸಿಬಿ ತಂಡದ ಪಂದ್ಯಗಳನ್ನು ವೀಕ್ಷಿಸುವುದು ನಿಜಕ್ಕೂ ಭಾವನಾತ್ಮಕ ಸವಾಲು ಎಂದು ಒಪ್ಪಿಕೊಂಡರು. ಆರ್‌ಸಿಬಿ ತಂಡವನ್ನು ಹಾಗೂ ಡ್ರೆಸ್ಸಿಂಗ್‌ ರೂಂ ಅನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆಂದು ತಿಳಿಸಿದ್ದಾರೆ.

"ನಿಸ್ಸಂಶಯವಾಗಿ, ನೀವು ಹೊರಗಡೆ ಕುಳಿತು ಪಂದ್ಯವನ್ನು ವೀಕ್ಷಿಸುವುದು ನಿಜಕ್ಕೂ ಭಾವನಾತ್ಮಕ ಸವಾಲು ಆಗಿರುತ್ತದೆ. ಆದರೆ, ಆರ್‌ಸಿಬಿ ನನ್ನ ತಂಡ ಹಾಗೂ ಅವರು ನನ್ನನ್ನು ತೆಗದಿಲ್ಲ. ಅವರು ನನ್ನನ್ನು ಉಳಿಸಿಕೊಂಡಿದ್ದಾರೆ ಹಾಗೂ ನನ್ನ ಜಾಗಕ್ಕೆ ಯಾರನ್ನು ತೆಗೆದುಕೊಂಡಿಲ್ಲ. ಅವರು ಈಗಲೂ ನಾನು ತಂಡಕ್ಕೆ ಮುಖ್ಯ ಎಂದು ಪರಿಗಣಿಸಿದ್ದಾರೆಂದು ಭಾವಿಸುತ್ತೇನೆ," ಎಂದು ಯಶ್‌ ದಯಾಳ್‌ ಹೇಳಿದ್ದಾರೆ.

RCB vs GT: ಫಿಲ್‌ ಸಾಲ್ಟ್‌ or ವೆಂಕಟೇಶ್‌ ಅಯ್ಯರ್‌? ಮೊದಲನೇ ಕ್ವಾಲಿಫೈಯರ್‌ಗೂ ಮುನ್ನ ಆರ್‌ಸಿಬಿಗೆ ಟೆನ್ಷನ್‌!

"ಇನ್ನೊಂದು ಮುಖ್ಯವಾದ ಸಂಗತಿ ಏನೆಂದರೆ, ನಾನು ಈ ಬಾರಿ ಟೂರ್ನಿಯಿಂದ ಹೊರಗುಳಿದಿರುವುದು ನನ್ನ ವೈಯಕ್ತಿಕ ನಿರ್ಧಾರವಲ್ಲ. ಈ ಹೇಳಿಕೆಯಿಂದ ವಿವಾದ ಉಂಟಾಗಬಹುದು, ಆದರೆ ಈ ನಿರ್ಧಾರವನ್ನು ತೆಗೆದುಕೊಂಡಿರುವುದು ಆಡಳಿತ ಮಂಡಳಿ. ಆರ್‌ಸಿಬಿ ತಂಡದ ಈ ನಿರ್ಧಾರ ಹಿಂದಿನ ಕಾರಣ ನನಗೆ ತಿಳಿದಿಲ್ಲ. ನಾನು ಆರ್‌ಸಿಬಿ ತಂಡವನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಅವರು ನನ್ನನ್ನು ಮಿಸ್‌ ಮಾಡಿಕೊಳುತ್ತಿದ್ದಾರೆಯೇ ಎಂಬುದು ನನಗೆ ಗೊತ್ತಿಲ್ಲ. ಅಭಿಮಾನಿಗಳು ಇದನ್ನು ಹೇಳಬೇಕು," ಎಂದು ವೇಗಿ ತಿಳಿಸಿದ್ದಾರೆ.

ಯಶ್‌ ದಯಾಳ್‌ ಬಗ್ಗೆ ಆರ್‌ಸಿಬಿ ಹಿಂದೆ ಏನು ಹೇಳಿತ್ತು?

ಟೂರ್ನಿಯ ಆರಂಭಕ್ಕೂ ಮುನ್ನ ಆರ್‌ಸಿಬಿ ಕ್ರಿಕೆಟ್‌ ಡೈರೆಕ್ಟರ್‌ ಮೊ ಬೊಬಾಟ್‌ ಅವರು, ಈ ಬಾರಿ ಯಶ್‌ ದಯಾಳ್‌ ಅವರು ತಂಡವನ್ನು ಮಿಸ್‌ ಮಾಡಿಕೊಳ್ಳಲಿದ್ದಾರೆಂದು ಹೇಳಿದ್ದರು. ಈ ಎಲ್ಲ ಪರಿಸ್ಥಿತಿಗಳ ನಡುವೆಯೂ ಬೆಂಗಳೂರು ಫ್ರಾಂಚೈಸಿ ಎಡಗೈ ವೇಗಿಗೆ ನಿರಂತರ ಬೆಂಬಲ ನೀಡಿದ್ದು, ಪರಿಸ್ಥಿತಿ ಹೇಗಿದ್ದರೂ ಅವರನ್ನು ತಂಡದಲ್ಲೇ ಉಳಿಸಿಕೊಂಡಿದೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದರು.

RCB vs GT ಮೊದಲನೇ ಕ್ವಾಲಿಫೈಯರ್‌ಗೆ ಮಳೆ ಕಾಟ ಇದೆಯಾ? ಧರ್ಮಶಾಲಾ ಹವಾಮಾನ ವರದಿ ಇಲ್ಲಿದೆ!

“ಯಶ್ ತಂಡವನ್ನು ಸೇರಿಕೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ನಿಮಗೆ ತಿಳಿದಿರುವಂತೆ, ಅವರ ವೈಯಕ್ತಿಕ ಪರಿಸ್ಥಿತಿಗಳು ಸರಿಯಿಲ್ಲ. ಈವರೆಗೆ ನಾವು ಯಶ್‌ಗೆ ಸಂಪೂರ್ಣ ಬೆಂಬಲ ನೀಡಿದ್ದೇವೆ ಎಂಬುದನ್ನೂ ಸ್ಪಷ್ಟಪಡಿಸಲು ಬಯಸುತ್ತೇನೆ. ಆಟಗಾರನನ್ನು ಉಳಿಸಿಕೊಳ್ಳಬೇಕೋ ಅಥವಾ ಬಿಡುಗಡೆ ಮಾಡಬೇಕೋ ಎಂಬ ಅವಕಾಶ ಬಂದಾಗಲೂ ನಾವು ಅವರನ್ನು ಉಳಿಸಿಕೊಂಡಿದ್ದೇವೆ ಎಂಬುದೇ ಅದಕ್ಕೆ ಸಾಕ್ಷಿ. ನಾವು ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ಬಯಸಿದ್ದೇವೆ. ಅವರು ಇನ್ನೂ ನಮ್ಮ ಒಪ್ಪಂದದಡಿ ಇದ್ದಾರೆ ಮತ್ತು ಮುಂದಿನ ಅವಧಿಯಲ್ಲೂ ಅದೇ ರೀತಿಯಲ್ಲಿ ಮುಂದುವರಿಯಲಿದ್ದಾರೆ,” ಎಂದು ಮೊ ಬೊಬಾಟ್‌ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು.