ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ʻಟ್ರಿಸ್ಟನ್‌ ಸ್ಟಬ್ಸ್‌ ಓವರ್‌ ರೇಟ್‌ ಆಟಗಾರʼ-ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಟೀಕಿಸಿದ ಕೆ ಶ್ರೀಕಾಂತ್‌!

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ತಂಡದ ಬ್ಯಾಟಿಂಗ್ ವೈಫಲ್ಯವನ್ನು ಬಿಸಿಸಿಐ ಮಾಜಿ ಸೆಲೆಕ್ಟರ್‌ ಕೆ ಶ್ರೀಕಾಂತ್‌ ತೀವ್ರವಾಗಿ ಟೀಕಿಸಿದ್ದಾರೆ. ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಬ್ಯಾಟಿಂಗ್ ಕುಸಿತ ಅನುಭವಿಸಿದ ಬಳಿಕ, ವಿಶೇಷವಾಗಿ ಟ್ರಿಸ್ಟನ್‌ ಸ್ಟಬ್ಸ್ ಅವರ ಪ್ರದರ್ಶನವನ್ನು ಅವರು ಪ್ರಶ್ನಿಸಿದ್ದಾರೆ. ಕೆಕೆಆರ್ ವಿರುದ್ಧದ ಸೋಲಿನ ನಂತರ ಡೆಲ್ಲಿ ತಂಡದ ಮಧ್ಯಕ್ರಮಾಂಕ ಸಂಪೂರ್ಣವಾಗಿ ದುರ್ಬಲವಾಗಿದೆ ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ಟ್ರಿಸ್ಟನ್‌ ಸ್ಟಬ್ಸ್‌ ವಿರುದ್ಧ ಕೆ ಶ್ರೀಕಾಂತ್‌ ಕಿಡಿ.

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ ಸಾಲಿನ ಟೂರ್ನಿಯಲ್ಲಿ ನಿರಂತರ ಕಳಪೆ ಫಾರ್ಮ್ ಮುಂದುವರಿಸಿರುವ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಟ್ರಿಸ್ಟನ್‌ ಸ್ಟಬ್ಸ್‌ ಅವರನ್ನು ‘ಅತಿಯಾಗಿ ಹೊಗಳಲ್ಪಟ್ಟ ಆಟಗಾರ’ ಎಂದು ಬಿಸಿಸಿಐ ಮಾಜಿ ಸೆಲೆಕ್ಟರ್‌ ಕೃಷ್ಣಮಾಚಾರಿ ಶ್ರೀಕಾಂತ್‌ ಟೀಕಿಸಿದ್ದಾರೆ. ಇತ್ತೀಚೆಗೆ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧದ ಸೋಲಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಪವರ್‌ಪ್ಲೇ ನಂತರ ಸಂಪೂರ್ಣ ಕುಸಿತ ಕಂಡಿತ್ತು.

ಸ್ಟಬ್ಸ್ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ವಿಫಲರಾದರು. ಅವರು ಕೇವಲ ನಾಲ್ಕು ಎಸೆತಗಳಲ್ಲಿ ಎರಡು ರನ್ ಗಳಿಸಿ ಅನುಕುಲ್ ರಾಯ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಆ ಮೂಲಕ ದಕ್ಷಿಣ ಆಫ್ರಿಕಾ ಆಟಗಾರನ ಕಳಪೆ ಪ್ರದರ್ಶನದ ಸರಣಿ ಮುಂದುವರಿದಿದೆ. 11 ಪಂದ್ಯಗಳಲ್ಲಿ 259 ರನ್ ಗಳಿಸಿರುವ ಸ್ಟಬ್ಸ್, ಸೀಸನ್ ಆರಂಭದಲ್ಲಿ ಉತ್ತಮ ಲಯದಲ್ಲಿದ್ದರೂ, ಕಳೆದ ನಾಲ್ಕು ಪಂದ್ಯಗಳಲ್ಲಿ 5, 18, 38 ಮತ್ತು 2 ರನ್‌ಗಳಿಗೆ ಸೀಮಿತರಾಗಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಕೆ ಶ್ರೀಕಾಂತ್‌, ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಬ್ಯಾಟಿಂಗ್ ವೈಫಲ್ಯವನ್ನು ತೀವ್ರವಾಗಿ ಖಂಡಿಸಿದರು. ವಿಶೇಷವಾಗಿ ಟ್ರಿಸಟ್ನ್‌ ಸ್ಟಬ್ಸ್‌, ಸಮೀರ್‌ ರಿಝ್ವಿ ಹಾಗೂ ನಿತೀಶ್‌ ರಾಣಾ ಅವರ ಕೊಡುಗೆ ಬಗ್ಗೆ ಪ್ರಶ್ನೆ ಮಾಡಿದರು.

‌RCB vs MI: ಬೆಥೆಲ್‌ ಔಟ್‌, ಜೋರ್ಡನ್‌ ಇನ್? ಆರ್‌ಸಿಬಿ ಪ್ಲೇಯಿಂಗ್‌ XIನಲ್ಲಿ 2 ಬದಲಾವಣೆ ಸಾಧ್ಯತೆ!

“ಡಿಸಿ ತಂಡದ ಈ ಬ್ಯಾಟಿಂಗ್ ಏನಿತ್ತು? ತುಂಬಾ ಭಯಾನಕ ಬ್ಯಾಟಿಂಗ್,” ಎಂದು ಶ್ರೀಕಾಂತ್ ಹೇಳಿದ ಅವರು, "ನಾನು ಯಾವಾಗಲೂ ಹೇಳುತ್ತೇನೆ. ಟ್ರಿಸ್ಟನ್ ಸ್ಟಬ್ಸ್ ಅತಿಯಾಗಿ ಹೊಗಳಲ್ಪಟ್ಟ ಆಟಗಾರ. ರಿಜ್ವಿ ಆರಂಭದಲ್ಲಿ ಚೆನ್ನಾಗಿ ಆಡಿದರು, ಆದರೆ ಇನ್ನಷ್ಟು ಕೊಡುಗೆ ನೀಡಬೇಕಾಗಿತ್ತು. ನಿತೀಶ್ ರಾಣಾಗೆ ಇದು ಅತ್ಯಂತ ಮಹತ್ವದ ಪಂದ್ಯವಾಗಿತ್ತು,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕನಿಷ್ಠ 180 ರನ್‌ ಗಳಿಸಬೇಕಿತ್ತು

ಡೆಲ್ಲಿ ಕ್ಯಾಪಿಟಲ್ಸ್‌ ತಂಡ 12 ರಿಂದ 16 ಓವರ್‌ಗಳಲ್ಲಿ ಗಳಿಸಿದ್ದು ಕೇವಲ 11 ರನ್‌ ಮಾತ್ರ. ಅಂತಿಮವಾಗಿ ಅವರು 142 ರನ್‌ಗಳಿಗೆ ತಮ್ಮ ಇನಿಂಗ್ಸ್‌ ಅನ್ನು ಮುಕ್ತಾಯಗೊಳಿಸಿದರು. ಬಳಿಕ 143 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಕೆಕೆಆರ್‌ ತಂಡ ಫಿನ್‌ ಆಲೆನ್‌ ಶತಕದ ಬಲದಿಂದ ಇನ್ನೂ 5.4 ಓವರ್‌ಗಳು ಬಾಕಿ ಇರುವಾಗಲೇ ಗೆದ್ದು ಬೀಗಿತು.

DC vs KKR: ಫಿನ್‌ ಆಲೆನ್‌ ಶತಕ, ಡೆಲ್ಲಿಗೆ ಪೆಟ್ಟು ಕೊಟ್ಟ ಕೆಕೆಆರ್‌ನ ಪ್ಲೇಆಫ್ಸ್‌ ಆಸೆ ಜೀವಂತ!

“ಇಂತಹ ತಿರುವು ಮತ್ತು ಸ್ಪಿನ್‌ಗೆ ಸಹಾಯಕವಾಗಿರುವ ಪಿಚ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್‌ ಮಾಡುವಾಗಕನಿಷ್ಠ 180 ರನ್ ಗಳಿಸಬೇಕು. ಇದು ಸುಲಭವಾಗಿ ರನ್‌ಗಳು ಬರುತ್ತವೆ ಎಂದು ನಿರ್ಲಕ್ಷ್ಯವಾಗಿ ಯೋಚಿಸಬಹುದಾದ ಮೈದಾನವಲ್ಲ,” ಎಂದು ಕೃಷ್‌ ಶ್ರೀಕಾಂತ್‌ ತಿಳಿಸಿದ್ದಾರೆ.

“ನ್ಯಾಯವಾಗಿ ಹೇಳಬೇಕಾದರೆ, ಒಬ್ಬ ಬ್ಯಾಟರ್ ಸೆಟ್ ಆದರೆ ಇಲ್ಲಿ ಅದ್ಭುತವಾಗಿ ಆಡಬಹುದು. ಆದರೆ ವಾಸ್ತವವೆಂದರೆ, ಅವರ ಮಧ್ಯಮ ಕ್ರಮಾಂಕ ಸಂಪೂರ್ಣವಾಗಿ ಕುಸಿದಿದೆ. ಕೆಎಲ್‌ ರಾಹುಲ್‌ ಆಡಿದ ಶಾಟ್ ನನಗೆ ತುಂಬಾ ಅಚ್ಚರಿ ತಂದಿದೆ. ಆ ಎಸೆತ ಸಂಪೂರ್ಣವಾಗಿ ನಿಂತಂತಾಗಿತ್ತು ಮತ್ತು ಅದು ಕೆಎಲ್ ರಾಹುಲ್‌ನಿಂದ ಬಂದ ಅತ್ಯಂತ ಕಳಪೆ ಶಾಟ್ ಆಗಿತ್ತು,” ಎಂದು ಅವರು ಟೀಕಿಸಿದ್ದಾರೆ.