ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Under 19 World Cup: ಬಾಂಗ್ಲಾ ನಾಯಕನ ಜೊತೆ ಹ್ಯಾಂಡ್‌ಶೇಕ್‌ ಮಾಡಲು ನಿರಾಕರಿಸಿದ ಆಯುಷ್‌ ಮ್ಹಾತ್ರೆ!

ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಅಂಡರ್‌-19 ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಇದೀಗ ಕಾದಾಟ ನಡೆಸುತ್ತಿವೆ. ಈ ಪಂದ್ಯದ ಟಾಸ್‌ ವೇಳೆ ಭಾರತ ತಂಡದ ನಾಯಕ ಆಯಷ್‌ ಮ್ಹಾತ್ರೆ, ಬಾಂಗ್ಲಾದ ಝವಾದ್‌ ಅಬ್ರಾರ್‌ ಅವರಿಗೆ ಹ್ಯಾಂಡ್‌ ಶೇಕ್‌ ಮಾಡಲು ನಿರಾಕರಿಸಿದರು. ಆ ಮೂಲಕ ಹಿರಿಯರ ಕ್ರಿಕೆಟ್‌ನಿಂದ ಇದೀಗ ಕಿರಿಯರ ಕ್ರಿಕೆಟ್‌ಗೂ ಕೂಡ ಹ್ಯಾಂಡ್‌ ಶೇಕ್‌ ವಿವಾದ ವಿಸ್ತಾರಗೊಂಡಿದೆ.

ಟಾಸ್‌ ವೇಳೆ ಹಸ್ತಲಾಘವ ನೀಡಲು ನಿರಾಕರಿಸಿದ ಭಾರತ-ಬಾಂಗ್ಲಾ ನಾಯಕರು.

ನವದೆಹಲಿ: ಬುಲವಾಯೊದ ಕ್ವೀನ್ಸ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2026ರ ಐಸಿಸಿ ಅಂಡರ್‌-19 ವಿಶ್ವಕಪ್‌ (U-19 World Cup 2026) ಟೂರ್ನಿಯ ಲೀಗ್‌ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ (IND vs BAN) ತಂಡಗಳು ಕಾದಾಟ ನಡೆಸುತ್ತಿವೆ. ಅಂದ ಹಾಗೆ ಭಾರತ ಹಾಗೂ ಬಾಂಗ್ಲಾ ನಡುವಣ ರಾಜಕೀಯ ಸಮಸ್ಯೆಗಳು ಇದೀಗ ಕ್ರೀಡೆಯ ಮೇಲೂ ಪರಿಣಾಮ ಬೀರಿದೆ. ಈ ಪಂದ್ಯದ ಟಾಸ್‌ ವೇಳೆ ಭಾರತ ತಂಡದ ನಾಯಕ ಆಯುಷ್‌ ಮ್ಹಾತ್ರೆ (Ayush Mhatre) ಅವರು ಬಾಂಗ್ಲಾ ಝವಾದ್‌ ಅಬ್ರಾರ್‌ ಅವರಿಗೆ ಹ್ಯಾಂಡ್‌ ಶೇಕ್‌ ಮಾಡಲು ನಿರಾಕರಿಸಿದರು. ಆ ಮೂಲಕ ಭಾರತ ಹಾಗೂ ಪಾಕ್‌ ನಡುವಣ ಈ ಹಿಂದೆ ಏರ್ಪಟ್ಟಿದ್ದ ಹ್ಯಾಂಡ್‌ ಶೇಕ್‌ ವಿವಾದ ಇದೀಗ ಭಾರತ-ಬಾಂಗ್ಲಾ ಕಿರಿಯರ ಕ್ರಿಕೆಟ್‌ಗೂ ಲಗ್ಗೆ ಇಟ್ಟಿದೆ.

ಬಾಂಗ್ಲಾದೇಶ ತಂಡದ ನಾಯಕ ಅಝಿಝ್‌ ಹಕಿಮ್‌ ತಮಿಮ್‌, ಆದರೆ ಇವರ ಅನಾರೋಗ್ಯದ ಕಾರಣ ಟಾಸ್‌ಗೆ ಬಂದಿರಲಿಲ್ಲ. ಟಾಸ್‌ ವೇಳೆ ಉಪ ನಾಯಕ ಝವಾದ್‌ ಅಬ್ರಾರ್‌ ಅವರು ಟಾಸ್‌ಗೆ ಆಗಮಿಸಿದ್ದರು. ಆದಾಗ್ಯೂ, ಇಬ್ಬರು ನಾಯಕರ ನಡುವೆ ಸ್ವಲ್ಪ ಉದ್ವಿಗ್ನತೆ ಉಂಟಾಗಿತ್ತು ಏಕೆಂದರೆ ಜೋಡಿಯು ಹಸ್ತಲಾಘವದಿಂದ ತಪ್ಪಿಸಿಕೊಂಡಿತು. ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನಂತರ ಅಬ್ರಾರ್, ಮ್ಹಾತ್ರೆ ಬಳಿಯಿಂದ ಹತ್ತಿರದಿಂದ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿತು, ಆದರೆ ಇಬ್ಬರೂ ಸಂವಹನವನ್ನು ತಪ್ಪಿಸಿಕೊಂಡರು.

3ನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ; ಆಯುಷ್ ಬದೋನಿ ಪದಾರ್ಪಣೆ ನಿರೀಕ್ಷೆ

ಭಾರತ ಹಾಗೂ ಬಾಂಗ್ಲಾದೇಶ ನಡುವೆ ರಾಜಕೀಯ ಪ್ರಕ್ಷುಬ್ಧತೆ ಉಂಟಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ದೌರ್ಜನ್ಯ ನಡೆಯುತ್ತಿದೆ ಹಾಗೂ ಸಾವುಗಳು ಸಂಭವಿಸುತ್ತಿದೆ ಭಾರತೀಯರು ನೆರೆ ರಾಷ್ಟ್ರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಇದರ ನಡುವೆ ಮುಸ್ತಾಫಿಝುರ್‌ ರೆಹಮಾನ್‌ ಅವರನ್ನು ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಬಿಡುಗಡೆ ಮಾಡಿತ್ತು. ಇದರಿಂದ ಬಾಂಗ್ಲಾದೇಶ ಕೂಡ ಅಸಮಾಧಾನವನ್ನು ವ್ಯಕ್ತಪಡಿಸಿತ್ತು. ಇದೀಗ ಅವರು ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.



ಇವಗಳ ನಡುವೆ ಇದೀಗ ಅಂಡರ್‌-19 ವಿಶ್ವಕಪ್‌ ಟೂರ್ನಿಯಲ್ಲಿಯೂ ಇದರ ಪರಿಣಾಮ ಉಂಟಾಗಿದೆ. ಭಾರತ ಹಾಗೂ ಬಾಂಗ್ಲಾ ನಾಯಕರು ಪರಸ್ಪರ ಹಸ್ತಲಾಘವ ನೀಡುವ ನಿರಾಕರಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಭಾರತ ತಂಡ, 39 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 192 ರನ್‌ಗಳನ್ನು ಕಲೆ ಹಾಕಿದೆ. ಅರ್ಧಶತಕ ಬಾರಿಸಿರುವ ಅಭಿಜ್ಞಾನ್‌ ಕುಂಡು ಬ್ಯಾಟಿಂಗ್‌ ಮುಂದುವರಿಸಿದ್ದಾರೆ. ಮತ್ತೊಂದು ತುದಿಯಲ್ಲಿ ಆರ್‌ಎಂ ಅಂಬರೀಶ್‌ ಇದ್ದಾರೆ.

ನಾಳೆ ಅಂತಿಮ ಏಕದಿನ; ಹೋಲ್ಕರ್ ಕ್ರೀಡಾಂಗಣದ ಪಿಚ್‌ ಯಾರಿಗೆ ಸಹಕಾರಿ?

ವೈಭವ್‌ ಸೂರ್ಯವಂಶಿ ಅರ್ಧಶತಕ

ಇದಕ್ಕೂ ಮುನ್ನ ಇನಿಂಗ್ಸ್‌ ಆರಂಭಿಸಿದ್ದ ವೈಭವ್‌ ಸೂರ್ಯವಂಶಿ ಅವರು ಕೂಡ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಅವರು ಆಡಿದ್ದ 67 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 72 ರನ್‌ಗಳನ್ನು ಬಾರಿಸಿದ್ದರು. ಕಾನಿಷ್ಕಾ ಚೌವ್ಹಾಣ್‌ 28 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದಾರೆ. ಆದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್‌ ವೈಫಲ್ಯವನ್ನು ಅನುಭವಿಸಿದ್ದಾರೆ.