ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻವೈಭವ್‌ ಸೂರ್ಯವಂಶಿ ಎಲ್ಲರನ್ನೂ ಮುಜುಗರಕ್ಕೀಡು ಮಾಡುತ್ತಿದ್ದಾರೆʼ: ಆಕಾಶ್‌ ಚೋಪ್ರಾ!

ವೈಭವ್‌ ಸೂರ್ಯವಂಶಿ ಅವರು ತಮ್ಮ ಶೈಲಿಯಲ್ಲಿ ಸ್ಪೋಟಕ ಬ್ಯಾಟಿಂಗ್‌ ಮೂಲಕ ಎಲ್ಲರನ್ನೂ ಮುಜುಗರಕ್ಕೀಡು ಮಾಡುತ್ತಿದ್ದಾರೆಂದು ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಆಕಾಶ್‌ ಚೋಪ್ರಾ ಹೇಳಿದ್ದಾರೆ. ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 29 ಎಸೆತಗಳಲ್ಲಿ 94 ರನ್‌ಗಳನ್ನು ಸಿಡಿಸಿ ಭಾರತ ಎಗೆ ಗೆಲುವು ತಂದುಕೊಟ್ಟಿದ್ದರು.

ವೈಭವ್‌ ಸೂರ್ಯವಂಶಿ ಬಗ್ಗೆ ಆಕಾಶ್‌ ಚೋಪ್ರಾ ದೊಡ್ಡ ಹೇಳಿಕೆ.

ನವದೆಹಲಿ: ಭಾರತ ಎ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ (Vaibhav Sooryavanshi) ಅವರನ್ನು ಟೆಸ್ಟ್‌ ತಂಡದ ಮಾಜಿ ಆರಂಭಿಕ ಆಕಾಶ್‌ ಚೋಪ್ರಾ (Aakash chopra) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅವರು ತಮ್ಮ ಶೈಲಿಯಲ್ಲಿ ಸ್ಪೋಟಕ ಬ್ಯಾಟಿಂಗ್‌ ಮೂಲಕ ತಂಡದಲ್ಲಿ ಎಲ್ಲಾ ಆಟಗಾರರಿಗೂ ಸ್ವಲ್ಪ ಮುಜುಗರವನ್ನು ಉಂಟು ಮಾಡುತ್ತಿದ್ದಾರೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ ಫೈನಲ್‌ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 94 ರನ್‌ಗಳನ್ನು ಸಿಡಿಸುವ ಮೂಲಕ ಭಾರತ ಎ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದಾರೆ.

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ 776 ರನ್‌ಗಳ ಮೂಲಕ ಆರೆಂಜ್‌ ಕ್ಯಾಪ್‌ ಮುಡಿಗೇರಿಸಿಕೊಂಡಿದ್ದ ವೈಭವ್‌ ಸೂರ್ಯವಂಶಿ, ಭಾರತ ಎ ತಂಡದ ಪರ ತ್ರಿಕೋನ ಏಕದಿನ ಸರಣಿಯ ಆರಂಭದಲ್ಲಿ ಸಿಕ್ಕ ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಆದೆರೆ, ಶ್ರೀಲಂಕಾ ಎ ವಿರುದ್ಧದ ಫೈನಲ್‌ ಪಂದ್ಯದಲ್ಲಿ ತಮ್ಮ ನೈಜ ಆಟವನ್ನು ಪ್ರದರ್ಶಿಸಿದರು ಹಾಗೂ ಕೊನೆಯ ಪಂದ್ಯದಲ್ಲಿ ತಮಗೆ ಕಿರಿಕ್‌ ಮಾಡಿದ್ದ ಲಂಕಾ ಆಟಗಾರರಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.

ಅಂದ ಹಾಗೆ 15ರ ಪ್ರಾಯದ ವೈಭವ್‌ ಸೂರ್ಯವಂಶಿ ಅವರು 324.14ರ ಸ್ಟ್ರೈಕ್‌ ರೇಟ್‌ನಲ್ಲಿ 8 ಸಿಕ್ಸರ್‌ ಹಾಗೂ 14 ಬೌಂಡರಿಗಳೊಂದಿಗೆ 94 ರನ್‌ಗಳನ್ನು ಚಚ್ಚಿದ್ದರು. ಆಡಿದ್ದ ಕೇವಲ 29 ಎಸೆತಗಳಾದರೂ ವೈಭವ್‌ ಅವರ ಆಟದಿಂದ ಇತರೆ ಆಟಗಾರರು ಕೂಡ ನಿಬ್ಬೆರಗಾದರು. ಆದರೆ, ಅವರು ಕೂದಲೆಳ ಅಂತರದಲ್ಲಿ ವಿಶ್ವ ದಾಖಲೆ ಮುರಿಯುವ ಅವಕಾಶವನ್ನು ಕೈ ಚೆಲ್ಲಿಕೊಂಡರು. ವೈಭವ್‌ ಅವರ ಬ್ಯಾಟಿಂಗ್‌ ಶೈಲಿ ಇತರೆ ಆಟಗಾರರಿಗೆ ನಿಜಕ್ಕೂ ಸ್ವಲ್ಪ ಮುಜಗರ ತರುತ್ತಿದೆ ಎಂದು ಹೇಳಿದ್ದಾರೆ.‌

ವೈಭವ್‌ ಅಬ್ಬರದ ಬ್ಯಾಟಿಂಗ್‌, ಶ್ರೀಲಂಕಾವನ್ನು ಮಣಿಸಿದ ಭಾರತ ಎ ತಂಡಕ್ಕೆ ತ್ರಿಕೋನ ಸರಣಿ!

ಎಲ್ಲಾ ಆಟಗಾರರನ್ನು ಮುಜುಗರಕ್ಕೀಡು ಮಾಡುತ್ತಿರುವ 15ರ ಬಾಲಕ

ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಆಕಾಶ್‌ ಚೋಪ್ರಾ, "ಈ ಮಗು ಏನು ಮಾಡುತ್ತಿದೆ? ಅವರು ಪ್ರತಿಯೊಬ್ಬರನ್ನೂ ಸ್ವಲ್ಪ ಮುಜುರಗರಕ್ಕೀಡು ಮಾಡುತ್ತಿದ್ದಾನೆ. ಪಂದ್ಯದ ಆರಂಭದಲ್ಲಿ ಅವರು ತಮ್ಮ ಅಸಾಧಾರಣ ಬ್ಯಾಟಿಂಗ್‌ ಮೂಲಕ ಪ್ರತಿಯೊಬ್ಬರಿಗೆ ಅಸುರಕ್ಷಿತ ಭಾವನೆಯನ್ನು ಉಂಟು ಮಾಡಿದ್ದರು. ಹೇಗೆ ಅವರು ಈ ರೀತಿ ಬ್ಯಾಟ್‌ ಮಾಡುತ್ತಾರೆ? ಎಂದು ಎಲ್ಲರೂ ನಿಬ್ಬೆರಗಾಗಿದ್ದರು. ಪ್ರಿಯಾಂಶ್‌ ಆರ್ಯ, ಋತುರಾಜ್‌ ಗಾಯಕ್ವಾಡ್‌ ಹಾಗೂ ತಿಲಕ್‌ ವರ್ಮಾ ಕೂಡ ಇಲ್ಲೇ ಇದ್ದರು. ಇದು ಅತ್ಯಂತ ಯೋಗ್ಯವಾದ ಭಾರತ ತಂಡ," ಎಂದು ಹೇಳಿದ್ದಾರೆ.

ಲಿಸ್ಟ್‌ ಎ ದಾಖಲೆಗಳನ್ನು ಮುರಿದ ವೈಭವ್

"ಈ ಹುಡುಗ ಶಾಟ್ಸ್‌ ಆಡಲು ಆರಂಭಿಸಿದಾಗ, ಅವರು ಯಾವುದೋ ವಿಭಿನ್ನ ಹಂತದಲ್ಲಿದ್ದಾರೆಂಬ ಭಾವನೆ ಉಂಟಾಯಿತು. ಅವರು ಕೇವಲ 11 ಎಸೆತಗಳಲ್ಲಿ ಅರ್ಧಶತರಕವನ್ನು ತಲುಪಿದರು. ಮೋಜಿನಿಂದ ಅವರ ಲಿಸ್ಟ್‌ ಎ ದಾಖಲೆಗಳನ್ನು ಮುರಿದಿದ್ದಾರೆ. ಅವರು ಅಂತಿಮವಾಗಿ 94 ರನ್‌ ಸಿಡಿಸಿದರು, ಅಂಡರ್‌-19 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ 175 ರನ್‌ಗಳನ್ನು ಬಾರಿಸಿದ್ದರು. ಐಪಿಎಲ್‌ ಟೂರ್ನಿಯ ಎಲಿಮಿನೇಟರ್‌ ಹಾಗೂ ಎರಡನೇ ಕ್ವಾಲಿಫೈಯರ್‌ನಲ್ಲಿಯೂ ಮಿಂಚಿದ್ದರು," ಎಂದು ಚೋಪ್ರಾ ಶ್ಲಾಘಿಸಿದ್ದಾರೆ.

ಲಿಸ್ಟ್‌ 'ಎ' ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯ ಅರ್ಧಶತಕ ಸಿಡಿಸಿದ ಸೂರ್ಯವಂಶಿ

ಭಾರತ ಎ ತಂಡಕ್ಕೆ ತ್ರಿಕೋನ ಏಕದಿನ ಸರಣಿ

ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿ ಜೊತೆಗೆ ಅನುಕುಲ್‌ ರಾಯ್‌ ಕೂಡ 15 ಎಸೆತಗಳಲ್ಲಿ 39 ರನ್‌ಗಳ ಸ್ಟೋಟಕ ಇನಿಂಗ್ಸ್‌ ಆಡಿದರು. ಅವರು 200ಕ್ಕೂ ಅಧಿಕ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಬಾರಿಸಿದ್ದರು. ತಂಡದ ಮೊತ್ತ 260 ರನ್‌ ಇರುವಾಗ ಆಡುತ್ತಿದ್ದಾಗ ಅವರು ಅನುಕುಲ್‌ ರಾಯ್‌, 4 ಸಿಕ್ಸರ್‌ ಹಾಗೂ ಒಂದು ಬೌಂಡರಿಯನ್ನು ಬಾರಿಸಿದ್ದರು. ಬಳಿಕ ಶ್ರೀಲಂಕಾ ಎ ತಂಡವನ್ನು ಭಾರತ ಎ 311 ರನ್‌ಗಳಿಗೆ ಕಟ್ಟಿ ಹಾಕಿತ್ತು ಹಾಗೂ 66 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ, ತ್ರಿಕೋನ ಸರಣಿಯನ್ನು ಮುಡಿಗೇರಿಸಿಕೊಂಡಿತ್ತು.