ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻವೇಗ, ಬೌನ್ಸಿ ಪಿಚ್‌ಗಳಲ್ಲಿ ನಿಮ್ಮ ಆಟ ನೋಡಬೇಕುʼ: ವೈಭವ್‌ ಸೂರ್ಯವಂಶಿಗೆ ವಾರ್ನಿಂಗ್‌ ಕೊಟ್ಟ ಕಿವೀಸ್‌ ಕೋಚ್‌!

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ವಿಶ್ವದ ಶ್ರೇಷ್ಠ ಬೌಲರ್‌ಗಳ ಎದುರು ಸ್ಪೋಟಕ ಬ್ಯಾಟಿಂಗ್‌ ಮೂಲಕ ವಿಶ್ವದ ಗಮನ ಸೆಳೆದಿದ್ದ ವೈಭವ್‌ ಸೂರ್ಯವಂಶಿ, ವೇಗ ಮತ್ತು ಬೌನ್ಸಿ ಕಂಡೀಷನ್ಸ್‌ನಲ್ಲಿ ಹೇಗೆ ಆಡಲಿದ್ದಾರೆಂದು ನೋಡಲು ಎದುರು ನೋಡುತ್ತಿದ್ದೇನೆಂದು ನ್ಯೂಜಿಲೆಂಡ್‌ ಹೆಡ್‌ ಕೋಚ್‌ ರಾಬ್‌ ವಾಲ್ಟರ್‌ ಹೇಳಿದ್ದಾರೆ.

ವೈಭವ್‌ ಆಟವನ್ನು ನೋಡಲು ಎದುರು ನೋಡುತ್ತಿದ್ದೇನೆಂದ ರಾಬ್‌ ವಾಲ್ಟರ್‌.

ನವದೆಹಲಿ: ನ್ಯೂಜಿಲೆಂಡ್‌ ವಿರುದ್ಧದ ಟಿ20ಐ ಸರಣಿಯಲ್ಲಿ (IND vs NZ) ಭಾರತದ ಯುವ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ (Vaibhav Sooryavanshi) ಹೇಗೆ ಬ್ಯಾಟ್‌ ಮಾಡಲಿದ್ದಾರೆಂದು ನೋಡಲು ಎದುರು ನೋಡುತ್ತಿದ್ದೇನೆಂದು ಕಿವೀಸ್‌ ಹೆಡ್‌ ಕೋಚ್‌ ರಾಬ್‌ ವಾಲ್ಟರ್‌ (Rob Walter) ತಿಳಿಸಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ವಿಶ್ವದ ಶ್ರೇಷ್ಠ ಬೌಲರ್‌ಗಳ ಎದುರು ಸ್ಪೋಟಕ ಬ್ಯಾಟಿಂಗ್‌ ನಡೆಸಿ ರನ್‌ ಹೊಳೆ ಹರಿಸಿದ್ದ ವೈಭವ್‌, ವೇಗ ಮತ್ತು ಬೌನ್ಸ್‌ ಸೇರಿದಂತೆ ವಿಭಿನ್ನ ಕಂಡೀಷನ್ಸ್‌ನಲ್ಲಿ ಹೇಗೆ ಆಡಲಿದ್ದಾರೆಂದು ನೋಡಲು ಉತ್ಸುಕನಾಗಿ ಕಾಯುತ್ತಿದ್ದೇನೆಂದು ಅವರು ಹೇಳಿದ್ದಾರೆ.

ಪ್ರಸ್ತುತ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಭಾರತ ತಂಡ, ಸದ್ಯ ಜಪಾನ್‌ನಲ್ಲಿ ಬೀಡು ಬಿಟ್ಟಿದ್ದು, 2026ರ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದೆ. ವೈಭವ್‌ ಸೂರ್ಯವಂಶಿ ಕೂಡ ಭಾರತ ತಂಡದಲ್ಲಿದ್ದಾರೆ. ಅಕ್ಟೋಬರ್‌ 22 ರಂದು ನ್ಯೂಜಿಲೆಂಡ್‌ನಲ್ಲಿ ಭಾರತ ತಂಡ ಐದು ಪಂದ್ಯಗಳ ಟಿ20ಐ ಸರಣಿಯನ್ನು ಆಡಲಿದೆ. ಜಿಂಬಾಬ್ವೆ ಟಿ20ಐ ಸರಣಿಯಲ್ಲಿ ಮಿಂಚಿದ್ದ ವೈಭವ್‌, ಕಳೆದ ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಯಲ್ಲಿ ಬೆಂಚ್‌ ಕಾದಿದ್ದರು. ಹಾಗಾಗಿ ಕಿವೀಸ್‌ ವಿರುದ್ಧ ಅವರನ್ನು ಆಡಿಸುವ ಬಗ್ಗೆ ಖಚಿತತೆ ಇಲ್ಲ. ಆದರೂ ವೈಭವ್‌ ಸೂರ್ಯವಂಶಿ, ವೇಗ ಮತ್ತು ಬೌನ್ಸಿ ಪಿಚ್‌ಗಳಲ್ಲಿ ಹೇಗೆ ಆಡಲಿದ್ದಾರೆಂದು ನೋಡಬೇಕೆಂದು ಕಿವೀಸ್‌ ಕೋಚ್‌ ರಾಬ್‌ ವಾಲ್ಟರ್‌ ತಿಳಿಸಿದ್ದಾರೆ.

ಭಾರತದ ವಿರುದ್ಧದ ಟಿ20 ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ; ರಚಿನ್ ರವೀಂದ್ರ ಅಲಭ್ಯ

"ಹೌದು, ವೇಗ ಮತ್ತು ಬೌನ್ಸಿ ವಿಕೆಟ್‌ನಲ್ಲಿ ವೈಭವ್‌ ಸೂರ್ಯವಂಶಿಯನ್ನು ನೋಡಲು ನಾನು ಇಷ್ಟಪಡುತ್ತೇನೆ ಹಾಗೂ ಅವರು ಹೇಗೆ ವಿಭಿನ್ನವಾಗಿ ಕಾಣುತ್ತಾರೆಂದು ನೋಡಬೇಕಾಗಿದೆ. ಆದರೆ, ಅವರು ತುಂಬಾ ಉತ್ಸುಕ ಆಟಗಾರ. ಐಪಿಎಲ್‌ ಟೂರ್ನಿಯಲ್ಲಿ ವಿಶ್ವ ದರ್ಜೆಯ ಬೌಲರ್‌ ಎದುರು ಅವರು ಹೇಗೆ ಪ್ರಾಬಲ್ಯ ಸಾಧಿಸಿದ್ದರು ಎಂಬುದನ್ನು ನೀವು ನೋಡಿದ್ದೀರಿ. ನನ್ನ ಪ್ರಕಾರ, ವಿಭಿನ್ನ ಪರಿಸ್ಥಿತಿಗಳಲ್ಲಿ ಅವರ ಆಟ ಹೇಗೆ ಮುಂದುವರಿಯುತ್ತದೆ ಎಂಬುದನ್ನು ನೋಡುವುದೇ ಯಾವಾಗಲೂ ಸವಾಲಾಗಿದೆ. ಹಾಗೆಯೇ, ನಮ್ಮ ಪರಿಸ್ಥಿತಿಗಳಲ್ಲಿ ಅವರಿಗೆ ಹೇಗೆ ಬೌಲಿಂಗ್ ಮಾಡಬೇಕು ಎಂಬುದನ್ನೂ ನಾವು ನೋಡಬೇಕಾಗಿದೆ," ಎಂದು ಅವರು ಹೇಳಿದ್ದಾರೆ.

“ಮತ್ತೊಮ್ಮೆ ಹೇಳುವುದಾದರೆ, ಕೋಚ್ ಆಗಿ ನೀವು ಯಾವಾಗಲೂ ನಿಮ್ಮ ಆಟಗಾರರು ಸ್ವಲ್ಪ ಒತ್ತಡದ ಪರಿಸ್ಥಿತಿಯಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲು ಬಯಸುತ್ತೀರಿ. ಹಾಗಾಗಿ ಅಂತಹ ಪರಿಸ್ಥಿತಿ ಎದುರಾದರೆ ಅದನ್ನು ಎದುರು ನೋಡುತ್ತಿದ್ದೇನೆ. ಅವರು ಇಲ್ಲದಿದ್ದರೂ, ಅವರ ಹೊರತಾಗಿಯೂ ನಮ್ಮ ಬಳಿ ಸಾಕಷ್ಟು ಉತ್ತಮ ಆಟಗಾರರಿದ್ದಾರೆ,” ಎಂದು ವಾಲ್ಟರ್ ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

IND vs AFG ಟಿ20ಐ ಸರಣಿಯಲ್ಲಿ ವೈಭವ್‌ ಸೂರ್ಯವಂಶಿ ಆಡದೇ ಇರಲು ಕಾರಣ ತಿಳಿಸಿದ ಗೌತಮ್‌ ಗಂಭೀರ್‌!

ಇತ್ತೀಚೆಗೆ ನಡೆದ ಭಾರತ-ಜಪಾನ್ ಪಂದ್ಯ ಹಾಗೂ ವ್ಯಾಪಕ ಚರ್ಚೆಗೆ ಕಾರಣವಾದ ವೈಡ್‌ ನಿರ್ಣಯದ ವಿವಾದದ ಕುರಿತು ಕೇಳಿದಾಗ, ವಾಲ್ಟರ್ ಆ ಬೆಳವಣಿಗೆಗಳಿಂದ ತಾನು ದೂರವೇ ಉಳಿದಿದ್ದಾಗಿ ಹಾಸ್ಯಮಿಶ್ರಿತವಾಗಿ ಹೇಳಿದರು. “ನಾನು ಆ ಪಂದ್ಯವನ್ನು ಸ್ವಲ್ಪ ಸಮಯ ಮಾತ್ರ ನೋಡಿದೆ. ವೈಡ್‌ ನಿರ್ಣಯದ ಬಗ್ಗೆ ಕೆಲವು ವಿವಾದಗಳಿದ್ದವು ಎಂಬುದು ಗಮನಕ್ಕೆ ಬಂತು. ಆದರೆ ನಿಜ ಹೇಳಬೇಕೆಂದರೆ, ನಾನು ಅದನ್ನು ಹೆಚ್ಚು ನೋಡಲಿಲ್ಲ. ಎಷ್ಟು ಕಡಿಮೆ ನೋಡುತ್ತೇವೋ ಅಷ್ಟು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ,” ಎಂದು ವಾಲ್ಟರ್ ತಿಳಿಸಿದ್ದಾರೆ.

ಭಾರತ ವಿರುದ್ಧದ ಟಿ20ಐ ಸರಣಿಗೆ ನ್ಯೂಜಿಲೆಂಡ್‌ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಆಲೆನ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ, ಜೇಕಬ್‌ ಡಫಿ, ಲಾಕಿ ಫರ್ಗ್ಯೂಸನ್, ಜ್ಯಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಬೆವನ್ ಜಾಕೋಬ್ಸ್, ಕೈಲ್ ಜೇಮಿಸನ್, ಆಡಮ್ ಮಿಲ್ನೆ, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಟಿಮ್ ಸೈಫರ್ಟ್ ಮತ್ತು ನೇಥನ್ ಸ್ಮಿತ್